ಬದಲಾಗುತ್ತಿರುವ ಜೀವನಶೈಲಿ (Lifestyle), ಕೆಟ್ಟ ಆಹಾರ ಪದ್ಧತಿ (Food Style), ವ್ಯಾಯಾಮ ರಹಿತ (Without Exercise) ಜೀವನದಿಂದಾಗಿ (Life) ಪುರುಷರ (Men’s) ಹೊಟ್ಟೆ ಬೊಜ್ಜು (Belly Fat) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕುಳಿತೇ ಕೆಲಸ ಮಾಡುವುದರಿಂದ ಸೊಂಟದ ಗಾತ್ರ ದೊಡ್ಡದಾಗುತ್ತಲೇ ಹೋಗುತ್ತದೆ. ತೂಕ ಹೆಚ್ಚುವುದು ಸಾಮಾನ್ಯ. ಆದರೆ ತೂಕ ಇಳಿಸುವುದು ಅಸಾಮಾನ್ಯ ಕೆಲಸ ಆದಂತಾಗಿದೆ. ತಪ್ಪಾದ ಜೀವನಶೈಲಿ, ತಪ್ಪು ಆಹಾರ ಪದ್ಧತಿ, ಅನಾರೋಗ್ಯಕರ ಆಹಾರ ಕ್ರಮಗಳಿಂದಾಗಿ ಹೊಟ್ಟೆ ಬೊಜ್ಜು ಹೆಚ್ಚುತ್ತದೆ. ಆದರೆ ಒಮ್ಮೆ ಹೊಟ್ಟೆಯ ಸುತ್ತಳತೆ ಹೆಚ್ಚಿದರೆ ಅದನ್ನು ಕರಗಿಸುವುದು ತುಂಬಾ ಕಷ್ಟ. ಹೊಟ್ಟೆ ಬೊಜ್ಜು ಹೆಚ್ಚುತ್ತಿರುವ ಬಗ್ಗೆ ಸರಿಯಾಗಿ ಗಮನ ಹರಿಸದಿದ್ದರೆ ಹಲವು ಕಾಯಿಲೆಗಳ ಜೊತೆ ಸ್ಥೂಲಕಾಯ ವ್ಯಕ್ತಿಯನ್ನು ಕೆಟ್ಟದಾಗಿ ಕಾಡುತ್ತದೆ.
ಪುರುಷರಲ್ಲಿ ಬೆಲ್ಲಿ ಫ್ಯಾಟ್ ಸಮಸ್ಯೆ
ವ್ಯಕ್ತಿಯ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಕರೋನಾ ಸಾಂಕ್ರಾಮಿಕ ರೋಗದ ನಂತರ ಜನರು ಹೆಚ್ಚುತ್ತಿರುವ ತೂಕದ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದಾರೆ.
ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಸೊಂಟದ ಗಾತ್ರವು ನಾಲ್ಕು ಇಂಚುಗಳಷ್ಟು ಹೆಚ್ಚಾದರೆ ಅಂತಹ ಜನರಲ್ಲಿ ಒಂದು ರೀತಿಯ ಕ್ಯಾನ್ಸರ್ ಉಂಟಾಗುವ ಅಪಾಯವಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬೆಲ್ಲಿ ಫ್ಯಾಟ್ ಕಡಿಮೆ ಮಾಡಲು ಯತ್ನಿಸಬೇಕು.
ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನ
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಸೊಂಟದ ಸುತ್ತ ಹೆಚ್ಚುವರಿ ನಾಲ್ಕು ಇಂಚುಗಳ ಕೊಬ್ಬು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ವ್ಯಕ್ತಿಯ ಮರಣದ ಅಪಾಯವನ್ನು ಶೇಕಡಾ 7 ರಷ್ಟು ಹೆಚ್ಚಿಸುತ್ತದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯ, 2.5 ಮಿಲಿಯನ್ ಪುರುಷರ ಮೇಲೆ ಸಂಶೋಧನೆ ನಡೆಸಿದೆ. ಬಿಯರ್ ಕುಡಿಯುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬೆಳವಣಿಗೆಗೆ ಉತ್ತೇಜನ ದೊರೆಯುತ್ತದೆ ಎಂದು ವಿಮರ್ಶೆ ಹೇಳಿದೆ. ನೆದರ್ಲ್ಯಾಂಡ್ಸ್ನ ಮಾಸ್ಟ್ರಿಚ್ನಲ್ಲಿರುವ ಯುರೋಪಿಯನ್ ಕಾಂಗ್ರೆಸ್ ಆನ್ ಒಬೆಸಿಟಿ (ECO) ನಲ್ಲಿ ಪ್ರಸ್ತುತಪಡಿಸಲಾದ
19 ಅಧ್ಯಯನಗಳ ವಿಮರ್ಶೆಯು ಸೊಂಟದ ಸುತ್ತಲಿನ ಕೊಬ್ಬು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಜನರು ತಮ್ಮ BMI ಅನ್ನು ಸರಾಸರಿ ಶ್ರೇಣಿಯಿಂದ ಐದು ಪಾಯಿಂಟ್ ಕಡಿಮೆ ಮಾಡಿದರೆ ಒಂದು ವರ್ಷದಲ್ಲಿ ಬಹು ಸಾವುಗಳ ಅಪಾಯ ಕಡಿಮೆ ಆಗುತ್ತದೆ ಎಂಬುದು ಸಂಶೋಧಕರ ಅಂದಾಜು.
ಪ್ರಾಸ್ಟೇಟ್ ಕ್ಯಾನ್ಸರ್ನ ಲಕ್ಷಣಗಳೆಂದರೆ
ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವಯಸ್ಸಾದಂತೆ ದೇಹದ ತುಂಬ ಆವರಿಸಿಕೊಳ್ಳುತ್ತ ಹೋಗುತ್ತದೆ. . ಪ್ರಾಸ್ಟೇಟ್ ಕ್ಯಾನ್ಸರ್ನ ಲಕ್ಷಣಗಳೆಂದರೆ ಆಗಾಗ್ಗೆ
ಮೂತ್ರ ವಿಸರ್ಜನೆ, ತ್ವರಿತ ಮೂತ್ರ ವಿಸರ್ಜನೆಯ ದೂರುಗಳು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಅತಿಯಾದ ಮೂತ್ರ ವಿಸರ್ಜನೆ, ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗುವುದು, ಮೂತ್ರ ಅಥವಾ ವೀರ್ಯದಲ್ಲಿ ರಕ್ತ, ಇತ್ಯಾದಿ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯ ನೇತೃತ್ವ ವಹಿಸಿರುವ ಡಾ.ಅರೋರಾ ಪೆರೆಜ್-ಕಾರ್ನಾಗೊ ಪ್ರಕಾರ ಕ್ಯಾನ್ಸರ್ ಅಪಾಯ ತಡೆಯಬಹುದು. ಆದರೆ ವಯಸ್ಸು, ಕುಟುಂಬದ ಇತಿಹಾಸವು ಅದರ ಅಪಾಯವನ್ನು ಹೆಚ್ಚಿಸುತ್ತದೆ.
ಡಾ. ಅರೋರಾ ಪ್ರಕಾರ, ದೇಹದ ಕೊಬ್ಬು ಮತ್ತು ಬೆಲ್ಲಿ ಫ್ಯಾಟ್ ಹೊಂದಿರುವ ಜನರು, ಆರೋಗ್ಯವಂತ ಮತ್ತು ಫಿಟ್ ಪುರುಷರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಈ ಸಂಶೋಧನೆಯ ಆರಂಭದಲ್ಲಿ, ಸ್ಥೂಲಕಾಯದ ಜನರ ಕೊಬ್ಬನ್ನು ಅಳೆಯಲಾಯಿತು. ಅದರ ಆಧಾರದ ಮೇಲೆ ಅದನ್ನು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ
25 ಲಕ್ಷ ಜನರ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ 20 ಸಾವಿರ ಜನರು ಪ್ರೊಟೆಸ್ಟ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ದೇಹದ ಕೊಬ್ಬಿನ ಶೇಕಡಾವಾರು ಐದರಷ್ಟು ಹೆಚ್ಚಳವು ಅಪಾಯವನ್ನು ಇನ್ನೂ ಮೂರು ಹೆಚ್ಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ