Seema.RSeema.R
|
news18-kannada Updated:November 21, 2020, 4:50 PM IST
ಸಾಂದರ್ಭಿಕ ಚಿತ್ರ
ಪುರುಷ ಪ್ರಧಾನ ವ್ಯವಸ್ಥೆಯ ನಮ್ಮ ಸಮಾಜದಲ್ಲಿ ಹುಡುಗರ ಕೆಲವು ಭಾವನೆಗಳಿಗೆ ಬೆಲೆಯೇ ಇಲ್ಲವೇನೋ ಎಂಬಂತೆ ಆಗುತ್ತದೆ. ಮಹಿಳೆಯರಿಗೆ ಇರುವಂತೆ ಹುಡುಗರಿಗೂ ಕಟ್ಟುಪಾಡುಗಳಿರುವುದು ಸಹಜ. ಆದರೆ, ಇದನ್ನು ಕಟ್ಟುಪಾಡಿಗಿಂತ ಪ್ರತಿಷ್ಟೆ ಎಂಬಂತೆ ಬಿಂಬಿಸಿರುವುದರಿಂದ ಅವರ ಈ ಸಮಸ್ಯೆಯನ್ನು ಹೇಳುವಂತೆಯೂ ಇಲ್ಲ. ಇತ್ತ ಬಿಡುಂತೆಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಕಾರಣಕ್ಕೆ ಹುಡುಗರು ತಮಗೆ ಹಿಂಸೆಯಾದರೂ ಕೆಲವೊಮ್ಮೆ ಅವುಗಳನ್ನು ಸಹಿಸಿಕೊಳ್ಳಲೇ ಬೇಕಾದ ಅನಿವಾರ್ಯ ಎದುರಾಗುತ್ತದೆ. ಅಯ್ಯೋ ಪುರಷರ ಪಾರುಪತ್ಯದಲ್ಲಿ ಎಂತ ಸಮಸ್ಯೆ ಎಂಬ ಉದ್ಘಾರ ಹಲವರಲ್ಲಿದೆ. ಆದರೆ, ಎಲ್ಲದರಲ್ಲೂ ತಾವೇ ಪ್ರಧಾನ ಎಂಬ ಅಧಿಪತ್ಯ ಸ್ಥಾಪಿಸಲು ಮುಂದಾಗುವುದೇ ಹುಡುಗರ ದೊಡ್ಡ ಸಮಸ್ಯೆಯಾಗುತ್ತದೆ. ಪುರುಷ ಪ್ರಧಾನ ಸಮಾಜದ ಕೆಲವು ಅಂಶಗಳೇ ಅವರಿಗೆ ಕೆಲವೊಮ್ಮೆ ಉಸಿರುಗಟ್ಟಿ ಸುವ ವಾತಾವರಣ ನಿರ್ಮಿಸುವಂತೆ ಮಾಡಿ, ಕೆಲವೊಮ್ಮೆ ಸಂದಿಗ್ಧತೆಗೂ ತಳ್ಳುವುದು ಸುಳ್ಳಲ್ಲ.
ಹುಡುಗರಿಗೆ ನೋವು ಆಗುವುದಿಲ್ಲ:ನೋವು ಎಲ್ಲರಿಗೂ ಒಂದೇ. ಅದಕ್ಕೆ ಬೇಧ-ಭಾವ ಇರುವುದಿಲ್ಲ. ಆದರೆ, ಈ ಪುರುಷ ಪ್ರಧಾನ ಸಮಾಜದಲ್ಲಿ ಹುಡುಗರು ತಮಗಾದ ನೋವು ವ್ಯಕ್ತಪಡಿಸಿದರೆ, ಆತ ದುರ್ಬಲ ಎಂಬ ಮನೋಭಾವವಿದೆ. ದೈಹಿಕವಾಗಲಿ ಅಥವಾ ಮಾನಸಿಕವಾಗಲಿ ಅವರು ನೋವನ್ನು ತೋರ್ಪಡಿಸಬಾರದು ಎಂಬ ಅಲಿಖಿತ ನಿಯಮವನ್ನು ರೂಪಿಸಲಾಗಿದೆ. ಇದೇ ಕಾರಣಕ್ಕೆ ಬಾಹ್ಯ ಜಗತ್ತಿಗೆ ತಮ್ಮ ನೋವು ತಿಳಿಸಲಾಗದೇ ಅನೇಕರು ಒದ್ದಾಡುವುದು ಇದೆ. ಒಂದು ವೇಳೆ ಅವರು ನಿಜವಾಗಿಯೂ ನೋವನ್ನು ಹೊರಹಾಕಿದರೂ ಅದಕ್ಕೆ ಅನುಭೂತಿ ಸಿಗದಂತಹ ವಾತಾವರಣ ನಿರ್ಮಾಣವಾಗುತ್ತದೆ.
ಹುಡುಗರು ಅಳಬಾರದು
ಅತ್ತು ಹಗುರಾಗು ಎಂಬ ಮಾತಿದೆ. ಆದರೆ, ಈ ಮಾತು ಹುಡುಗರಿಗೆ ಅನ್ವಯಿಸದು. ಆಟವಾಡುವ ಎಳೆ ಹುಡುಗನಿಗೆ ಏನಾದರೂ ಪೆಟ್ಟಾಗಿ ಅಳಲು ಶುರಮಾಡುತ್ತಿದ್ದಂತೆ ಅಳುವುದು ಹುಡುಗರ ಲಕ್ಷಣವಲ್ಲ ಎಂಬ ಪಾಠ ಶುರುವಾಗುತ್ತದೆ. ಈ ಪಾಠ ಯಾವ ಮಟ್ಟಿಗೆ ಹುಡುಗರ ಮನಸ್ಸಿನಲ್ಲಿ ತಳವೂರುತ್ತದೆ ಎಂದರೆ, ವಯಸ್ಸಿಗೆ ಬಂದಾಗ ತಮ್ಮ ಪ್ರೀತಿಪಾತ್ರೂ ನಿಧನರಾದರೂ ಕಣ್ಣೀರು ಹಾಕದಂತಹ ಸ್ಥಿತಿ ಉದ್ಭವಿಸುತ್ತದೆ. ತಮ್ಮ ಅಳು, ಪ್ರೀತಿ, ಹತಾಶೆ, ಭಯದಂತಹ ಭಾವನೆಗಳನ್ನು ಹೊರಹಾಕದ ಪರಿಣಾಮ ಆಕ್ರಮಣಕಾರಿ ಗುಣ ಸ್ವಭಾವ ರೂಪಗೊಳ್ಳುತ್ತದೆ ಎಂದು ಮನಶಾಸ್ತ್ರ ತಿಳಿಸುತ್ತದೆ. ಅಲ್ಲದೇ ಈ ಎಲ್ಲಾ ಗುಣಗಳು ಅವರಲ್ಲಿ ವ್ಯಕ್ತವಾದರೂ ಅವರಿಗೆ ಸಿಗುವುದು ಸಾಂತ್ವಾನಕ್ಕಿಂತ ಹೆಚ್ಚಾಗಿ ಅವಮಾನ, ಅನುಮಾನ ಎದುರಾಗುತ್ತದೆ. ಇದು ಒಳಗಿನಿಂದಲೇ ಪುರುಷನ ಕುಗ್ಗುವಿಕೆಗೆ ಕಾರಣವಾಗುತ್ತದೆ.
ಇದನ್ನು ಓದಿ: ಮೊದಲ ಪಿರಿಯಡ್ಸ್ : ಮಗಳು ದೊಡ್ಡವಳಾಗುತ್ತಿದ್ದಾಳೆ ಎಂಬ ಸೂಚನೆಗಳಿವು
ಮಹಿಳೆಗಿಂತ ಹೆಚ್ಚು ಸಂಪಾದನೆ ಹುಡುಗರು ಎಂದರೆ ಆದ ಹುಡುಗಿಯರಿಗಿಂತ ಹೆಚ್ಚು ಸಂಪಾದನೆ ಮಾಡಬೇಕು. ಮಹಿಳೆ ಅಥವಾ ಹೆಂಡತಿಗಿಂತ ಕಡಿಮೆ ಸಂಪಾದನೆ ಮಾಡಿದರೆ, ಆತ ಗೌರವಕ್ಕೆ ಅರ್ಹನಲ್ಲ ಎಂಬ ಅಲಿಖಿತ ಕಾನೂನು ರೂಪು ಗೊಂಡಿದೆ. ಹುಡುಗರು ಎಂದರೆ ಮನೆಯ ಜವಾಬ್ದಾರಿ ಹೊರುವವರು ಎಂಬ ಭಾವನೆ ಗಂಡು ಹುಟ್ಟಿದಾಗಲೇ ಮೂಡುತ್ತದೆ. ಹುಡುಗ ಎಂದರೆ ಆತ ಸಂಪಾದನೆ ಮಾಡಲೇಬೇಕು ಎಂಬ ನಿಯಮಗಳಿಂದ ಆತ ಬೆಳೆಯುತ್ತಾನೆ. ಅನಿವಾರ್ಯವಾಗಿ ದುಡ್ಡಿನ ಸಂಪಾದನೆ ಮೊರೆ ಹೋಗಿ ತನಗಿಷ್ಟ ಬಂದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.
ದೌರ್ಜನ್ಯಕ್ಕೆ ಒಳಗಾಗುವುದಿಲ್ಲ
ಹುಡುಗರು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ ಎಂಬುದು ಸುಳ್ಳು ಪರಿಕಲ್ಪನೆ. ಅನೇಕ ಪುರುಷರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತದೆ. ಕೆಲಸ ಸ್ಥಳ ಸೇರಿದಂತೆ ಅನೇಕ ಕಡೆ ದೌರ್ಜನ್ಯಕ್ಕೆ ಒಳಗಾದರೂ ಅದನ್ನು ಬಾಯಿಬಿಟ್ಟು ಹೇಳುವ ಸ್ಥಿತಿ ನಿರ್ಮಾಣವಾಗುವುದಿಲ್ಲ.
Published by:
Seema R
First published:
November 21, 2020, 4:50 PM IST