• Home
  • »
  • News
  • »
  • lifestyle
  • »
  • Skin Tone: ಪುರುಷರೇ, ನಿಮ್ಮ ಸ್ಕಿನ್ ಟೋನ್‌ಗೆ ಸೂಟ್ ಆಗುವ ಡ್ರೆಸ್ ಕಲೆಕ್ಷನ್ ಹೀಗಿರಲಿ

Skin Tone: ಪುರುಷರೇ, ನಿಮ್ಮ ಸ್ಕಿನ್ ಟೋನ್‌ಗೆ ಸೂಟ್ ಆಗುವ ಡ್ರೆಸ್ ಕಲೆಕ್ಷನ್ ಹೀಗಿರಲಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ವಾರ್ಡ್‌ನಲ್ಲಿ ಸರಿಯಾದ ಬಟ್ಟೆಗಳ ಸಂಗ್ರಹ ಮಾಡಲು ಸಹ ಇದೇ ಮುಖ್ಯ ಅಂಶವಾಗಿದೆ. ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಬಟ್ಟೆ ಆರಿಸಿಕೊಳ್ಳುವುದು ನಿಮ್ಮನ್ನು ಮತ್ತಷ್ಟು ಅಂದಗೊಳಿಸುತ್ತದೆ. ನೀವು ಧರಿಸುವ ಉಡುಪುಗಳ ಮೇಲೆ ನಿಮ್ಮ ಚರ್ಮದ ಟೋನ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಮೊದಲು ಅರ್ಥಮಾಡಿಕೊಳ್ಳಬೇಕು.

ಮುಂದೆ ಓದಿ ...
  • Share this:

ಪುರುಷರು ಹೆಣ್ಣು ಮಕ್ಕಳಷ್ಟು ವಾರ್ಡ್ರೋಬ್ (Wardrobe) ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ ಒಂದು ಸರಿಯಾದ, ಅವರಿಗೊಪ್ಪುವ ಬಟ್ಟೆಗಳನ್ನು ಹೊಂದಲು ಬಯಸುತ್ತಾರೆ. ಕಾಲೇಜ್, ಆಫೀಸ್, ಪಾರ್ಟಿ, ಸಮಾರಂಭ ಹೀಗೆ ಎಲ್ಲಾ ಕಡೆ ಹೋಗುವಾಗ ನಮಗೆ ಒಪ್ಪದ ಯಾವ್ ಯಾವುದೋ ಬಣ್ಣದ ಬಟ್ಟೆ (Dress) ಹಾಕಿಕೊಂಡು ಹೋಗುವುದು ನಿಮಗೆ ಸರಿಯಾದ ಅನುಭವ ನೀಡದೆ ಇರಬಹುದು. ಉತ್ತಮವಾಗಿ ಸಿದ್ಧವಾಗುವುದು ಅಂದ ಹೆಚ್ಚಿಸುತ್ತದೆ ಎನ್ನುವುದಕ್ಕಿಂತ ನಮ್ಮ ಆತ್ಮವಿಶ್ವಾಸವನ್ನು (Confidence) ಹೆಚ್ಚಿಸುತ್ತದೆ. ಇದು ಸರಿ ಇಲ್ವೇನೋ, ಅದು ಹಾಗಿರಬೇಕಿತ್ತೇನೋ ಈ ಇರಿಸುಮುರಿಸುಗಳನ್ನು ದೂರ ಮಾಡಿ ನಮ್ಮನ್ನು ಶಾಂತವಾಗಿರಿಸುತ್ತದೆ. ಆದರೆ ಕೆಲವರಿಗೆ ಅವರಿಗೆ ಯಾವ ಬಣ್ಣ (Color) ಒಪ್ಪುತ್ತದೆ, ಅದರಲ್ಲಿ ನಾನು ಹೇಗೆ ಕಾಣಬಹುದು ಹೀಗೆ ನಾನಾ ಗೊಂದಲಗಳಿರುತ್ತವೆ ಮತ್ತು ವಾರ್ಡ್ರೋಬ್ ಕಲೆಕ್ಷನ್ ಕೂಡ ಹೇಗೇಗೋ ಇರುತ್ತದೆ.


ಪುರುಷರು ಮೊದಲು ಅವರ ಚರ್ಮದ ಬಣ್ಣಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಆಯ್ಕೆ ಮಾಡುವುದು ಮೊದಲ ಮತ್ತು ಅಗತ್ಯ ಹಂತವಾಗಿದೆ. ನಿಮ್ಮ ವಾರ್ಡ್ರೋಬ್ ನಲ್ಲಿ ಸರಿಯಾದ ಬಟ್ಟೆಗಳ ಸಂಗ್ರಹ ಮಾಡಲು ಸಹ ಇದೇ ಮುಖ್ಯ ಅಂಶವಾಗಿದೆ. ನಿಮ್ಮ ಸ್ಕಿನ್ ಟೋನ್ ಗೆ ತಕ್ಕಂತೆ ಬಟ್ಟೆ ಆರಿಸಿಕೊಳ್ಳುವುದು ನಿಮ್ಮನ್ನು ಮತ್ತಷ್ಟು ಅಂದಗೊಳಿಸುತ್ತದೆ. ನೀವು ಧರಿಸುವ ಉಡುಪುಗಳ ಮೇಲೆ ನಿಮ್ಮ ಚರ್ಮದ ಟೋನ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಮೊದಲು ಅರ್ಥಮಾಡಿಕೊಳ್ಳಬೇಕು. ನಿಮ್ಮ ಚರ್ಮದ ಟೋನ್ ಅನ್ನು ತಿಳಿದುಕೊಳ್ಳುವುದು ನಿಮ್ಮ ನೈಸರ್ಗಿಕ ಚರ್ಮದ ಬಣ್ಣವನ್ನು ಹೆಚ್ಚಿಸುವ ಬಣ್ಣಗಳನ್ನು ಆಯ್ಕೆಮಾಡಲು ಸಹಾಯ ಮಾಡುತ್ತದೆ.


ಚರ್ಮದ ಟೋನ್ ಅನ್ನು ಹೇಗೆ ನಿರ್ಧರಿಸುವುದು?
ನೀವು ಉತ್ತಮ ವಾರ್ಡ್ರೋಬ್ ಸಂಗ್ರಹ ಮಾಡುವಾಗ ನಿಮ್ಮ ಚರ್ಮದ ಟೋನಿಗೆ ಪೂರಕವಾದ ಬಟ್ಟೆಗಳನ್ನು ಸಂಗ್ರಹಿಸಬೇಕು. ನಿಮ್ಮ ಚರ್ಮದ ಟೋನ್‌ಗೆ ಹೊಂದಿಕೆಯಾಗುವ ಬಟ್ಟೆಗಳನ್ನು ಖರೀದಿಸುವಾಗ, ಮೇಲ್ಮೈ ಟೋನ್‌ಗಿಂತ ನಿಮ್ಮ ಚರ್ಮದ ಒಳಭಾಗಕ್ಕೆ ಸರಿಹೊಂದುವ ಉಡುಪುಗಳನ್ನು ನೀವು ಆರಿಸಿಕೊಳ್ಳಬೇಕು.


ಇದನ್ನೂ ಓದಿ: Slim People: ಸದಾ ತೆಳ್ಳಗೆ ಇರೋರು ಜನರು ಹೆಚ್ಚು ಕೆಲಸ ಮಾಡ್ತಾರಾ? ಅಧ್ಯಯನ ಏನು ಹೇಳುತ್ತದೆ?


ಜನರ ಚರ್ಮದ ಬಣ್ಣಗಳು ಬದಲಾಗುತ್ತವೆ ಎಂಬ ವಾಸ್ತವದ ಹೊರತಾಗಿಯೂ, ಬೆಚ್ಚಗಿನ, ತಂಪಾದ ಮತ್ತು ತಟಸ್ಥ ಎಂಬ ಮೂರು ವಿಧದ ಒಳಚರ್ಮಗಳಿವೆ. ಬೆಚ್ಚಗಿನ ಮೈಬಣ್ಣಗಳು ಹಳದಿ ಬಣ್ಣ ಹೊಂದಿದ್ದರೆ, ಶೀತ ಮೈಬಣ್ಣಗಳು ಗುಲಾಬಿ ಬಣ್ಣದ ಛಾಯೆಯನ್ನು ಹೊಂದಿರುತ್ತವೆ ಮತ್ತು ತಟಸ್ಥ ಮೈಬಣ್ಣವು ಬೆಚ್ಚಗಿನ ಮತ್ತು ತಣ್ಣನೆಯ ಅಂಡರ್ಟೋನುಗಳ ಮಿಶ್ರಣವಾಗಿರುತ್ತದೆ.


ಬಣ್ಣದ ಆಯ್ಕೆ
ನಿಮ್ಮ ಚರ್ಮದ ಟೋನ್ ಅನ್ನು ನೀವು ಕಂಡುಕೊಂಡ ನಂತರ, ಬಣ್ಣಗಳ ಬಗ್ಗೆ ತಿಳಿದುಕೊಳ್ಳಬೇಕು. ಕೆಲವು ಎದ್ದು ಕಾಣುವ ಬಣ್ಣಗಳು ನಿಮ್ಮನ್ನು ಅದ್ಭುತವಾಗಿ ಕಾಣುವಂತೆ ಮಾಡುತ್ತದೆ.


ಹಳದಿ, ಜೇನು ಚಿನ್ನದ ಬಣ್ಣ, ಕಿತ್ತಳೆ-ಕೆಂಪು ಮುಂತಾದ ಡಾರ್ಕ್ ಬಣ್ಣಗಳು ಬೆಚ್ಚಗಿನ ಚರ್ಮದ ಟೋನ್ ಹೊಂದಿರುವ ಯಾರಿಗಾದರೂ ಸುಂದರವಾಗಿ ಕಾಣುತ್ತವೆ. ಆಲಿವ್, ಪಾಚಿ, ಮತ್ತು ಇತರ ಗಾಢವಾದ ಹಸಿರು ಮತ್ತು ನೀಲಿಗಳು ಸಹ ಉತ್ತಮವಾಗಿ ಕಾಣುತ್ತವೆ. ಆದರೆ ಬೆಚ್ಚಗಿನ ಚರ್ಮದ ಟೋನ್ ಹೊಂದಿರುವ ನೀಲಮಣಿ ಅಥವಾ ಮಾಣಿಕ್ಯದಂತಹ ಆಭರಣ ಧರಿಸಲು ಬಯಸಿದರೆ ಅವು ಅಷ್ಟೊಂದು ಚೆನ್ನಾಗಿ ಅವರಿಗೆ ಒಪ್ಪುವುದಿಲ್ಲ. ಹೀಗಾಗಿ ಈ ಬಣ್ಣಗಳಲ್ಲಿ ಬಟ್ಟೆಗಳನ್ನು ಮಾತ್ರ ಆಯ್ಕೆ ಮಾಡುವುದು ಉತ್ತಮ.


ಇದನ್ನೂ ಓದಿ:  Stress Problem: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ


ಇನ್ನು ತಂಪಾದ ಚರ್ಮದ ಟೋನ್ ಹೊಂದಿರುವವರು ಬ್ರೈಟ್ ಬ್ಲೂಸ್, ಜ್ಯುವೆಲ್ ಟೋನ್‌ಗಳು, ಡೀಪ್ ಪರ್ಪಲ್‌ಗಳು ಮತ್ತು ಲ್ಯಾವೆಂಡರ್‌ ಬಣ್ಣದಂತಹ ಬಟ್ಟೆಗಳನ್ನು ತಮ್ಮ ವಾರ್ಡ್ರೋಬ್ ನಲ್ಲಿ ಹೊಂದಬಹುದು. ಈ ಬಣ್ಣಗಳು ಅವರ ಚರ್ಮಕ್ಕೆ ಸರಿಯಾಗಿ ಹೊಂದುತ್ತದೆ. ತಟಸ್ಥ ಚರ್ಮಕ್ಕೆ ಬಂದರೆ ನೇವಿ ಬ್ಲೂ, ಮತ್ತು ಬೂದು ಬಣ್ಣವು ಎದ್ದು ಕಾಣುತ್ತದೆ. ತಟಸ್ಥ ಚರ್ಮ ಹೊಂದಿರುವವರು ಅದೃಷ್ಟವಶಾತ್ ಬೇರೆ ಬೇರೆ ಬಣ್ಣಗಳನ್ನು ಸಹ ಧರಿಸಬಹುದು. ತಿಳಿ ಗುಲಾಬಿ, ಹಸಿರು ಈ ರೀತಿಯ ಬಣ್ಣಗಳು ಸಹ ತಟಸ್ಥ ಚರ್ಮದ ಪ್ರಕಾರದವರಿಗೆ ಒಪ್ಪುವಂತವು.

Published by:Ashwini Prabhu
First published: