• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • ಮೂತ್ರ ವಿಸರ್ಜನೆ ಮಾಡುವಾಗ ಕುಳಿತುಕೊಳ್ಳಬೇಕಾ? ನಿಂತುಕೊಳ್ಳಬೇಕಾ? ಪುರುಷರೇ ಸರಿಯಾದ ವಿಧಾನದ ಬಗ್ಗೆ ತಿಳ್ಕೊಳ್ಳಿ!

ಮೂತ್ರ ವಿಸರ್ಜನೆ ಮಾಡುವಾಗ ಕುಳಿತುಕೊಳ್ಳಬೇಕಾ? ನಿಂತುಕೊಳ್ಳಬೇಕಾ? ಪುರುಷರೇ ಸರಿಯಾದ ವಿಧಾನದ ಬಗ್ಗೆ ತಿಳ್ಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪುರುಷರು ಹೆಚ್ಚಾಗಿ ನಿಂತುಕೊಂಡು ಮೂತ್ರ ವಿಸರ್ಜಿಸುತ್ತಾರೆ. ಸಾರ್ವಜನಿಕ ಶೌಚಾಲಯಗಳಲ್ಲಿ ನಿಂತುಕೊಂಡು ಮೂತ್ರ ವಿಸರ್ಜಿಸಲು ಪುರುಷರಿಗೆ ಅವಕಾಶವಿದೆ. ಆದರೆ ಬಹಳ ಹಿಂದೆಯೇ, ನಿಂತುಕೊಂಡು ಪುರುಷರು ಮೂತ್ರ ವಿಸರ್ಜನೆ ಮಾಡುವ ವಿರುದ್ಧ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • Share this:

ಪುರುಷರು (Man) ಕುಳಿತುಕೊಳ್ಳುವ ಬದಲು ನಿಂತುಕೊಂಡು ಮೂತ್ರ ವಿಸರ್ಜನೆ (Urinate) ಮಾಡುವ ಬದಲು ಸಾಮಾನ್ಯವಾಗಿ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ಪುರುಷರು ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಬೇಕೋ ಅಥವಾ ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುವುದೋ ಉತ್ತಮವೋ? ಇಂತಹ ಪ್ರಶ್ನೆಗಳು ಆಗಾಗ್ಗೆ ಉದ್ಭವಿಸುತ್ತದೆ. ಈ ಬಗ್ಗೆ ನಾವು ನಿಮಗಿಂದು ತಿಳಿಸುತ್ತೇವೆ. ಇದು ತಕ್ಷಣವೇ ನಿಮಗೆ ಮನವರಿಕೆಯಾಗದಿರಬಹುದು. ಆದರೆ ಪುರುಷರು ಎದ್ದುನಿಂತು ಮೂತ್ರ ವಿಸರ್ಜನೆ ಮಾಡುವುದಕ್ಕಿಂತ ಕುಳಿತು ಮೂತ್ರ ವಿಸರ್ಜಿಸುವುದು ಒಳ್ಳೆಯದು ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ? ಹೌದು, ಈ ಬಗ್ಗೆ 'ಆಜ್ ತಕ್' ವರದಿ ಮಾಡಿದ್ದು, ಪುರುಷರು ಹೆಚ್ಚಾಗಿ ನಿಂತುಕೊಂಡು ಮೂತ್ರ ವಿಸರ್ಜಿಸುತ್ತಾರೆ. ಸಾರ್ವಜನಿಕ ಶೌಚಾಲಯಗಳಲ್ಲಿ (Public Toilet) ನಿಂತುಕೊಂಡು ಮೂತ್ರ ವಿಸರ್ಜಿಸಲು ಪುರುಷರಿಗೆ ಅವಕಾಶವಿದೆ. ಆದರೆ ಬಹಳ ಹಿಂದೆಯೇ, ನಿಂತುಕೊಂಡು ಪುರುಷರು ಮೂತ್ರ ವಿಸರ್ಜನೆ ಮಾಡುವ ವಿರುದ್ಧ ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಸಾಂದರ್ಭಿಕ ಚಿತ್ರ


ತಜ್ಞರ ಪ್ರಕಾರ, ಪುರುಷರು ನಿಂತುಕೊಳ್ಳುವ ಬದಲು ಕುಳಿತುಕೊಂಡು ಮೂತ್ರ ವಿಸರ್ಜಿಸಬೇಕು. ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ನೆದರ್​ಲ್ಯಾಂಡ್ಸ್‌ನ ವೈದ್ಯರು ಮೂತ್ರ ವಿಸರ್ಜನೆ ಕುಳಿತುಕೊಂಡು ಮಾಡುವುದರಿಂದ ಪುರುಷರಿಗೆ, ವಿಶೇಷವಾಗಿ ಪ್ರಾಸ್ಟೇಟ್ ಸಮಸ್ಯೆಗಳಿರುವವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮೂತ್ರವನ್ನು ನಿಂತುಕೊಂಡು ಮಾಡುವ ಬದಲು ಹೆಚ್ಚಾಗಿ ಕುಳಿತುಕೊಂಡು ಮಾಡಬೇಕು ಇದರಿಂದ ಬಲ ಹೆಚ್ಚಾಗುತ್ತದೆ. ಭಾರತದಲ್ಲಿ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಈ ಪದ್ಧತಿ ಬದಲಾಯಿತು.


ಮೂತ್ರಕೋಶದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ


NHS ಪ್ರಕಾರ, ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗದಿದ್ದರೆ ಮೂತ್ರಕೋಶದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಮೂತ್ರಪಿಂಡಗಳು ನಿಮ್ಮ ರಕ್ತದಿಂದ ಬೇರ್ಪಡಿಸಿದ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಮಾಡಲ್ಪಟ್ಟ ಮೂತ್ರವನ್ನು ಉತ್ಪತ್ತಿ ಮಾಡುತ್ತವೆ. ತ್ಯಾಜ್ಯ ಉತ್ಪನ್ನಗಳಲ್ಲಿ ಒಂದು ಯೂರಿಯಾ, ಇದು ಸಾರಜನಕ ಮತ್ತು ಇಂಗಾಲದಿಂದ ರೂಪುಗೊಳ್ಳುತ್ತದೆ. ನಿಮ್ಮ ಮೂತ್ರಕೋಶದಲ್ಲಿ ಸ್ವಲ್ಪ ಮೂತ್ರ ಉಳಿದಿದ್ದರೆ, ಯೂರಿಯಾದಲ್ಲಿನ ರಾಸಾಯನಿಕಗಳು ಕಲ್ಲುಗಳನ್ನು ರೂಪಿಸಲು ಒಟ್ಟಿಗೆ ಅಂಟಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಈ ಕಲ್ಲುಗಳು ಗಟ್ಟಿಯಾಗುತ್ತವೆ, ಮೂತ್ರಕೋಶದ ಕಲ್ಲುಗಳನ್ನು ಸೃಷ್ಟಿಸುತ್ತವೆ.


ಕುಳಿತು ಮೂತ್ರ ವಿಸರ್ಜನೆ ಮಾಡುವುದರ ಪ್ರಯೋಜನ


ವೈದ್ಯರ ಪ್ರಕಾರ, 'ನೀವು ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದರೆ, ಅದು ನಿಮ್ಮ ಹೊಟ್ಟೆ ಮತ್ತು ಬೆನ್ನುಮೂಳೆಯ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ.' 2014 ರ ಅಧ್ಯಯನವೊಂದರಲ್ಲಿ ಅನೇಕ ವರ್ಷಗಳಿಂದ ಜನರು ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಜನರು ಕುಳಿತಾಗ ಸೊಂಟ ಮತ್ತು ಸೊಂಟದ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಜೊತೆಗೆ ಮೂತ್ರ ವಿಸರ್ಜಿಸಲು ಸುಲಭವಾಗುತ್ತದೆ.


ತಜ್ಞರು ಏನು ಹೇಳುತ್ತಾರೆ?


ಯುಸಿಎಲ್‌ಎ ಮೂತ್ರಶಾಸ್ತ್ರ ವಿಭಾಗದ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಡಾ. ಜೆಸ್ಸಿ ಎನ್. 'ದೀರ್ಘಕಾಲ ನಿಲ್ಲಲು ತೊಂದರೆ ಇರುವವರಿಗೆ ಕುಳಿತು ಮೂತ್ರ ವಿಸರ್ಜನೆ ಮಾಡುವುದು ಉತ್ತಮ ಆಯ್ಕೆಯಾಗಿದೆ' ಎಂದು ಮಿಲ್ಸ್ ಹೇಳಿದ್ದಾರೆ. ನಿಂತುಕೊಂಡು ಮೂತ್ರ ವಿಸರ್ಜನೆ ಮಾಡಿದ ನಂತರ ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗುವುದಿಲ್ಲ ಎಂದು ಭಾವಿಸುವವರು ಅನೇಕ ಮಂದಿ ಇದ್ದಾರೆ. ಹೀಗಾಗಿ ಕುಳಿತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ.


ಸಾಂದರ್ಭಿಕ ಚಿತ್ರ


ವೆಬ್‌ಸೈಟ್‌ನೊಂದಿಗೆ ಮಾತನಾಡಿದ ಡಾ.ಮಿಲ್ಸ್, 'ನೀವು ಕುಳಿತುಕೊಳ್ಳುವಾಗ, ನಿಮ್ಮ ಹೊಟ್ಟೆಯ ಸ್ನಾಯುಗಳನ್ನು ನೀವು ಹೆಚ್ಚು ಬಳಸುತ್ತೀರಿ. ಆದ್ದರಿಂದ, ಕುಳಿತು ಮೂತ್ರ ವಿಸರ್ಜನೆಯು ನಿಮ್ಮ ಮೂತ್ರಕೋಶವನ್ನು ಸಂಪೂರ್ಣವಾಗಿ ಖಾಲಿ ಮಾಡುತ್ತದೆ. ಆದರೆ ಈ ಸಂಶೋಧನೆಯ ಪ್ರಕಾರ ಎಲ್ಲರೂ ಮೂತ್ರ ವಿಸರ್ಜಿಸುವಾಗ ಕುಳಿತುಕೊಳ್ಳಬೇಕು ಎಂದರ್ಥವಲ್ಲ.


ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುವುದರಿಂದ ನಿಮ್ಮ ಮೂತ್ರಕೋಶ ಸಂಪೂರ್ಣವಾಗಿ ಖಾಲಿಯಾಗುತ್ತದೆ ಎಂದು ನೀವು ಭಾವಿಸಿದರೆ, ನೀವು ನಿಂತುಕೊಂಡೇ ಮಾತ್ರ ವಿಸರ್ಜಿಸಬಹುದು. ಆದರೆ ಮೂತ್ರ ವಿಸರ್ಜನೆಯ ನಂತರವೂ ನಿಮ್ಮ ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗಿಲ್ಲ ಎಂದು ಅನಿಸಿದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಇನ್ನೂ ಈ ಬಗ್ಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಪ್ರೊ. ಸ್ಟೆ ರಾಗಿಯೋಸ್ ಸ್ಟೆಲಿಯೊಸ್ ಡೌಮೊಚಿಸ್, 'ನಿಮ್ಮ ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗದಿದ್ದರೆ, ಅದರ ಹಿಂದೆ ಹಲವು ಕಾರಣಗಳಿರಬಹುದು ಎಂದು ಹೇಳಿದ್ದಾರೆ.




ಇದನ್ನೂ ಓದಿ: Urinary Disease: ಮೂತ್ರ ವಿಸರ್ಜನೆ ನಿಯಂತ್ರಿಸಬೇಡಿ- ಗಂಭೀರ ಕಾಯಿಲೆ ಬರಬಹುದು!


ಮೂತ್ರಕೋಶದಲ್ಲಿ ಮೂತ್ರವು ಉಳಿದಿದ್ದರೆ, ಸೋಂಕು ಸೆಪ್ಟಿಕ್ ಅಥವಾ ಮೂತ್ರಪಿಂಡದ ಸೋಂಕಿಗೆ ಕಾರಣವಾಗಬಹುದು. ಆಗಾಗ್ಗೆ ನೀವು ಮೂತ್ರಕೋಶವನ್ನು ಖಾಲಿ ಮಾಡಲು ಅಸಮರ್ಥತೆಯ ಲಕ್ಷಣಗಳನ್ನು ಸಹ ಹೊಂದಿರುತ್ತೀರಿ. ಅಂತಹ ಸಂದರ್ಭಗಳಲ್ಲಿ ನೀವು ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಮೂತ್ರ ವಿಸರ್ಜನೆಯ ವೇಗ ಕಡಿಮೆಯಾಗುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ಆಯಾಸವಾಗುವುದು, ಮಧ್ಯಂತರ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ವಿವಿಧ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

First published: