• Home
 • »
 • News
 • »
 • lifestyle
 • »
 • Men Health: ಪುರುಷರೇ.. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಕಡೆಗೆ ಇರಲಿ ಸ್ವಲ್ಪ ಗಮನ..!

Men Health: ಪುರುಷರೇ.. ನಿಮ್ಮ ಸಂತಾನೋತ್ಪತ್ತಿ ಆರೋಗ್ಯದ ಕಡೆಗೆ ಇರಲಿ ಸ್ವಲ್ಪ ಗಮನ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿರಾ ಐವಿಎಫ್‌ನ ಸಿಇಓ ಮತ್ತು ಸಹ ಸಂಸ್ಥಾಪಕಿಯಾದ ಡಾ. ಕ್ಷಿತಿಜ್ ಮುರ್ಡಿಯಾ ಹೇಳುವಂತೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೂ, ಉತ್ತಮ ಸಂತಾನೋತ್ಪತ್ತಿ ಆರೋಗ್ಯ ಖಚಿತಪಡಿಸಿಕೊಳ್ಳಲು ಪುರುಷರು ನೆನಪಿನಲ್ಲಿಡಬೇಕಾದ ಕೆಲವು ಅಂಶಗಳು ಇಲ್ಲಿವೆ.

 • Share this:

ಈಗಂತೂ ಪುರುಷರು(Male) ಸಹ ಅನೇಕ ಸಂತಾನೋತ್ಪತ್ತಿ ಅನಾರೋಗ್ಯ(Unhealthy)ದಿಂದ ಬಳಲುತ್ತಿದ್ದು, ಮಗು ಮಾಡಿಕೊಳ್ಳುವಲ್ಲಿ ಅವರು ಅನೇಕ ವೈದ್ಯರ(Doctor) ಬಳಿ ಹೋಗಿ ಅನೇಕ ಚಿಕಿತ್ಸೆಯ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಪುರುಷ ಬಂಜೆತನ(Male Infertility)ಕ್ಕೆ ಕಾರಣವಾಗುವ ಅಂಶಗಳು ಸೋಂಕುಗಳು, ಹಾರ್ಮೋನ್ ಅಸಮತೋಲನ (Hormonal Imbalance), ಅತಿಯಾದ ಬೊಜ್ಜು(Obesity), ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಹಿಮ್ಮುಖ ಸ್ಖಲನ ಇವೆಲ್ಲವೂ ಸೇರಿವೆ ಎಂದು ವೈದ್ಯರು ಹೇಳುತ್ತಾರೆ.ಈ ಆಧುನಿಕ ಜೀವನಶೈಲಿ ಸಹ ಮಾನಸಿಕ ಮತ್ತು ದೈಹಿಕ ಒತ್ತಡ(Mental and Physical Stress)ದಿಂದ ಕೂಡಿದ್ದು, ಪುರುಷರು ತಮ್ಮ ಸಂತಾನೋತ್ಪತ್ತಿ ಆರೋಗ್ಯದ ಕಡೆಗೆ ಗಮನ ಹರಿಸುವುದು ಮುಖ್ಯವಾಗುತ್ತದೆ.


ಇಂದಿರಾ ಐವಿಎಫ್‌ನ ಸಿಇಓ ಮತ್ತು ಸಹ ಸಂಸ್ಥಾಪಕಿಯಾದ ಡಾ. ಕ್ಷಿತಿಜ್ ಮುರ್ಡಿಯಾ ಹೇಳುವಂತೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೂ, ಉತ್ತಮ ಸಂತಾನೋತ್ಪತ್ತಿ ಆರೋಗ್ಯ ಖಚಿತಪಡಿಸಿಕೊಳ್ಳಲು ಪುರುಷರು ನೆನಪಿನಲ್ಲಿಡಬೇಕಾದ ಕೆಲವು ಅಂಶಗಳು ಇಲ್ಲಿವೆ.


 • ಮದ್ಯಪಾನ ಮತ್ತು ತಂಬಾಕು ಸೇವನೆ

 • ಜಡ ಜೀವನಶೈಲಿ

 • ಅನಾರೋಗ್ಯಕರ ಆಹಾರ ಕ್ರಮ

 • ಎಸ್‌ಟಿಡಿಗಳು ಅಥವಾ ಎಸ್‌ಟಿಐಗಳಂತಹ ಲೈಂಗಿಕ ರೋಗಗಳು

 • ರಾಸಾಯನಿಕಗಳು ಮತ್ತು ಹಾನಿಕಾರಕ ವಿಷವಸ್ತುಗಳ ಸಂಪರ್ಕಕ್ಕೆ ಬರುವುದು

 • ಒತ್ತಡ, ಭಾವನಾತ್ಮಕ ಅಥವಾ ಮಾನಸಿಕ ಸಂಕಟಗಳು

 • ಅಪಘಾತಗಳು ಅಥವಾ ದೈಹಿಕ ಗಾಯ


"ಈ ಕಾರಣಗಳು ಸಂತಾನೋತ್ಪತ್ತಿ ಆರೋಗ್ಯಕ್ಕೆ ಅಡ್ಡಿಯಾಗುವುದಲ್ಲದೆ, ಒಬ್ಬರು ಮಗು ಮಾಡಿಕೊಳ್ಳುವುದರ ಮೇಲೂ ಪರಿಣಾಮ ಬೀರಬಹುದು. ಈ ಮೇಲಿನ ಅಂಶಗಳ ಜೊತೆಗೆ ಉತ್ತಮ ಸಂತಾನೋತ್ಪತ್ತಿ ಆರೋಗ್ಯ ಹೊಂದಲು ಪುರುಷರು ನೆನಪಿನಲ್ಲಿಡಬೇಕಾದ ಇನ್ನೂ ಕೆಲವು ಮುಖ್ಯವಾದ ವಿಷಯಗಳನ್ನು ಇಲ್ಲಿ ನೀಡಲಾಗಿದೆ.


ಇದನ್ನೂ ಓದಿ: Walking Benefits: ಪ್ರತಿದಿನ ಕೇವಲ ಅರ್ಧ ಗಂಟೆ ವಾಕಿಂಗ್ ಮಾಡಿ, ಅದರಿಂದಾಗುವ ಲಾಭ ನೋಡಿ


1. ಸಂತಾನೋತ್ಪತ್ತಿ ಆರೋಗ್ಯ ಸವಾಲುಗಳು


ಕಡಿಮೆ ವೀರ್ಯಾಣುಗಳ ಸಂಖ್ಯೆ, ಕಡಿಮೆ ಟೆಸ್ಟೋಸ್ಟೆರಾನ್, ನಪುಂಸಕತ್ವ, ಎಸ್‌ಟಿಐಗಳು, ಮುಂತಾದ ಸಂತಾನೋತ್ಪತ್ತಿ ಸವಾಲುಗಳ ಬಗ್ಗೆ ಪುರುಷರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಇದು ಜೀವನದ ನಂತರದ ಹಂತಗಳಲ್ಲಿ ತೊಡಕುಗಳನ್ನು ಉಂಟು ಮಾಡಬಹುದು.


ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅಥವಾ ವೈದ್ಯಕೀಯ ಸಹಾಯ ಪಡೆಯಲು ಎಸ್‌ಟಿಐಗಳು ಮತ್ತು ಸಂತಾನೋತ್ಪತ್ತಿ ಸೋಂಕುಗಳಾದ ಹ್ಯೂಮನ್ ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ಬಿ, ಕ್ಲಮೈಡಿಯಾ, ಗೊನೊರಿಯಾ, ಹರ್ಪಿಸ್ ಮತ್ತು ಎಚ್‌ಪಿವಿ ಬಗ್ಗೆ ಜಾಗೃತಿ ಮೂಡಿಸಬೇಕು.


2. ಸಕ್ರಿಯ ಜೀವನಶೈಲಿ ನಿಮ್ಮದಾಗಿಸಿಕೊಳ್ಳಿ


ಮನೆಯಲ್ಲಿ ಒಂದೇ ಸ್ಥಳದಲ್ಲಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತುಕೊಂಡು ಮಾಡುತ್ತಿರುವ ಕೆಲಸವು ಅನೇಕ ಆರೋಗ್ಯ ತೊಡಕುಗಳನ್ನು ತಂದೊಡ್ಡಬಹುದು. ಈಗಂತೂ ದೈನಂದಿನ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಈಜು, ಜಾಗಿಂಗ್, ಸೈಕ್ಲಿಂಗ್ ಮತ್ತು ಇತರ ಕ್ರೀಡೆಗಳು ರೋಗನಿರೋಧಕ ಶಕ್ತಿ ಬಲಪಡಿಸುವಲ್ಲಿ ಸಹಾಯ ಮಾಡುತ್ತವೆ.


ನೀವು ಸಕ್ರಿಯವಾಗಿರುವುದು ಹಾರ್ಮೋನ್ ಮಟ್ಟ ಕಾಪಾಡಿಕೊಳ್ಳಲು, ವಿಶೇಷವಾಗಿ ಮಧುಮೇಹ ಮತ್ತು ಹೃದಯ ಸಂಬಂಧಿತ ರೋಗಗಳ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಈ ಸರಳ ಜೀವನಶೈಲಿ ಬದಲಾವಣೆಗಳು ಒತ್ತಡ ಮತ್ತು ವೀರ್ಯಾಣು ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಇತರ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


3. ಆರೋಗ್ಯಕರ ಆಹಾರದ ಸೇವನೆ


ನೀವು ಜಂಕ್ ಫುಡ್ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ, ಪೌಷ್ಟಿಕ ಆಹಾರವಾದ ಹಣ್ಣು, ತರಕಾರಿಗಳನ್ನು ಸೇವಿಸಿರಿ ಮತ್ತು ಸಾಕಷ್ಟು ನೀರನ್ನು ಕುಡಿಯಬೇಕು. ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರವು ದೀರ್ಘಾವಧಿಯಲ್ಲಿ ಹಾನಿಕಾರಕವೆಂದು ಸಾಬೀತಾಗಿದ್ದು, ದೇಹದಲ್ಲಿ ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಪೌಷ್ಠಿಕಾಂಶದ ಆಹಾರವು ಕೇವಲ ಬಲವಾದ ಸಂತಾನೋತ್ಪತ್ತಿ ಆರೋಗ್ಯ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ.


ಇದನ್ನೂ ಓದಿ: Green Apple Benefits: ದಿನಕ್ಕೊಂದು ಹಸಿರು ಸೇಬಿನ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ? ಇಲ್ಲಿದೆ ನೋಡಿ


4. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು


ವೀರ್ಯಾಣುಗಳ ಉತ್ಪಾದನೆಗೆ ಸಹಾಯಕವಾಗಲು ಪುರುಷ ಜನನಾಂಗಕ್ಕೆ ತಂಪಾದ ತಾಪಮಾನ ಒದಗಿಸಲು ದೇಹದ ಹೊರಗೆ ಇರುತ್ತದೆ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಉದಾಹರಣೆಗೆ ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು, ಜನನಾಂಗ ಸ್ವಚ್ಛವಾಗಿಟ್ಟುಕೊಳ್ಳುವುದು, ಸ್ವಚ್ಛವಾದ ಒಳ ಉಡುಪುಗಳನ್ನು ಧರಿಸುವುದು ಅತ್ಯಗತ್ಯ.

Published by:Latha CG
First published: