ಇಂದು ಕೈನಲ್ಲಿ ಸ್ಮಾರ್ಟ್ ಪೋನ್ ಇದ್ದರೇ ಸಾಕು ಎಲ್ಲಾವು ಡಿಟಿಟಲ್ಮಯವಾಗಿದೆ. ತಿನ್ನುವ ಆಹಾರದಿಂದ ಹಿಡಿದು ದೊಡ್ಡ ದೊಡ್ಡ ವ್ಯವಹಾರಗಳನ್ನು ಡಿಜಿಟಲ್ ಸಹಾಯದಿಂದ ಕ್ಷಣರ್ಧದಲ್ಲಿ ಮಾಡಿಮುಗಿಸಬಹುದು. ಆದರೆ ಸ್ಮಾರ್ಟ್ ಫೋನ್ಗಳ (Smart phones) ಯಥೇಚ್ಛ ಬಳಕೆಯು ಹೊಸ ವಿಚಾರಗಳನ್ನು ಅರಿತುಕೊಳ್ಳಲು ಮತ್ತು ಹೊಸ ನೆನಪುಗಳನ್ನು (Memories) ರೂಪಿಸುವ ಮೆದುಳಿನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದು ‘ಡಿಜಿಟಲ್ (Digital amnesia) ಅಮ್ನೇಶಿಯಾ’ಗೆ ಕಾರಣವಾಗುತ್ತದೆ ಎಂದು ತಜ್ಞರು (Experts) ಹೇಳುತ್ತಾರೆ.
ಡಿಜಿಟಲ್ ಅಮ್ನೇಶಿಯಾ ಎಂದರೇನು?
ಜನರು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುತ್ತಿರುವುದರಿಂದ ಮಿದುಳುಗಳು ತ್ವರಿತವಾಗಿ ನೆನಪಿಟ್ಟುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಳ್ಳುವ ಒಂದು ವಿದ್ಯಮಾನವಾಗಿದೆ. ಸ್ಮಾರ್ಟ್ಫೋನ್ ಚಟವು ಹೊಸ ಮಾಹಿತಿಯನ್ನು ಉಳಿಸಿಕೊಳ್ಳುವ ಮತ್ತು ಹೊಸ ನೆನಪುಗಳನ್ನು ರೂಪಿಸುವ ಮೆದುಳಿನ ಸಾಮರ್ಥ್ಯ ಕುಂಠಿತಗೊಳಿಸುತ್ತದೆ ಎಂದು ಮಾಹಿಮ್ನ ಫೋಟೀಸ್ ಎಸ್ಎಲ್ ರಹೇಜಾ ಆಸ್ಪತ್ರೆಯ ಸಲಹೆಗಾರ ನರವಿಜ್ಞಾನಿ ಡಾ.ಕೌಸ್ತುಭ್ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗಿನ ಮಾತುಕತೆಯಲ್ಲಿ, ಸ್ಮಾರ್ಟ್ಫೋನ್ ಬಳಕೆಯು ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಹಾಜನ್ ವಿವರಿಸಿದರು.
ನಿದ್ರೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಆಳವಾದ ನಿದ್ರೆಯು ನಮ್ಮ ಮೆದುಳನ್ನು ನಿರ್ವಿಷಗೊಳಿಸುತ್ತದೆ ಮತ್ತು ಮೆದುಳು ಸಿನಾಪ್ಟಿಕ್ ಸಮರುವಿಕೆಯನ್ನು ನಡೆಸುತ್ತದೆ, ಇದು ಹಳೆಯ ಮಾಹಿತಿಯನ್ನು ಕತ್ತರಿಸುವ ಮತ್ತು ಹೊಸದನ್ನು ನೋಂದಾಯಿಸಲು ಸ್ಥಳಾವಕಾಶ ಮಾಡುವ ಪ್ರಕ್ರಿಯೆಯಾಗಿದೆ. ನಿದ್ರೆಯ ಚಕ್ರಗಳು ತೊಂದರೆಗೊಳಗಾಗುವುದರಿಂದ, ಸಿನಾಪ್ಟಿಕ್ ಪ್ರನ್ನಿಂಗ್ ಸರಿಯಾಗಿ ನಡೆಯುವುದಿಲ್ಲ. ಆದ್ದರಿಂದ, ಹೊಸ ಮಾಹಿತಿ ಉಳಿಸಿಕೊಳ್ಳುವ ಮತ್ತು ಹೊಸ ನೆನಪುಗಳನ್ನು ರೂಪಿಸುವ ನಮ್ಮ ಸಾಮರ್ಥ್ಯವು ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದರು.
ಸಾಂಕ್ರಾಮಿಕ ಕೊರೋನಾ ಸಹ ಡಿಜಿಟಲ್ ವಿಸ್ಮೃತಿಯ ಮೇಲೂ ಪರಿಣಾಮ ಬೀರಿದೆ. ಏಕೆಂದರೆ ಜನರು ಸಾಮಾಜಿಕ ಸಂವಹನದಿಂದ ದೂರ ಉಳಿದಿದ್ದಾರೆ. ಜನರು ಒಟ್ಟಾಗಿ ಓಡಾಡುವ, ಕುಣಿದಾಡುವ, ಮುಖಾಮುಖಿ ಮಾತನಾಡುವ ಬದಲು ಎಲ್ಲರೂ ಒಂದೇ ಕೋಣೆಗೆ ಸೀಮಿತವಾಗಿದ್ದಾರೆ. ನಿರಂತರವಾದ ಆನ್ಲೈನ್ ಮೀಟಿಂಗ್ಗಗಳಿಂದಾಗಿ ಸದಾ ಕಂಪ್ಯೂಟರ್ ಕೆಲಸವನ್ನೇ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದರು.
ಕೆಲಸದ ಒತ್ತಡದಿಂದ ದೂರ ಉಳಿಯಲು ಔಷಧಿಗಳು ಸಹ ಹಸ್ತಕ್ಷೇಪ ಮಾಡಬಹುದು. ಇದು ಕೂಡ ಮೆಮೋರಿ ನಷ್ಟವನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಖಿನ್ನತೆ-ಶಮನಕಾರಿಗಳು, ಆತಂಕ-ವಿರೋಧಿ ಔಷಧಿಗಳು, ಆ್ಯಂಟಿಹಿಸ್ಟಮೈನ್ಗಳು, ಮಲಗುವ ಮಾತ್ರೆಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ನೀಡಲಾಗುವ ನೋವು ಔಷಧಿಗಳು ಸಹ ಸ್ಮರಣಶಕ್ತಿಯ ನಷ್ಟದ ಮೇಲೆ ಪರಿಣಾಮ ಬೀರುತ್ತದೆ. ಆಲ್ಕೋಹಾಲ್, ತಂಬಾಕು ಅಥವಾ ಮಾದಕ ದ್ರವ್ಯಗಳ ಅತಿಯಾದ ಸೇವನೆಯು ವ್ಯಕ್ತಿಯ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.
ಡಿಜಿಟಲ್ ವಿಸ್ಮೃತಿಯನ್ನು ಹೇಗೆ ನಿರ್ವಹಿಸುವುದು?
1. ರಾತ್ರಿ ಮಲಗಲು ಹೋಗುವಾಗ ನಿಮ್ಮ ಮೊಬೈಲ್ ಫೋನ್ ಅನ್ನು ಬಳಸಬೇಡಿ.
2. ನೋಟಿಫಿಕೇಶನ್ಗಳನ್ನು ಆಫ್ ಮಾಡಿ
3. ಎಲ್ಲಾ ಅಗತ್ಯವಲ್ಲದ ಅಪ್ಲಿಕೇಶನ್ಗಳನ್ನು ತೆಗೆದುಹಾಕಿ.
4. ವಾರದಲ್ಲಿ ಒಂದು ದಿನವನ್ನು ಸ್ಕ್ರೀನ್-ಫ್ರೀಗಾಗಿ ನಿಗದಿಪಡಿಸಿ
5. ಕರೆ ಮಾಡುವಾಗ ಹೆಡ್ಫೋನ್ಗಳು ಅಥವಾ ಧ್ವನಿವರ್ಧಕಗಳನ್ನು ಬಳಸಿದರೆ, ವಿಶೇಷವಾಗಿ ಕಡಿಮೆ ನೆಟ್ವರ್ಕ್ ಗುಣಮಟ್ಟ ಮತ್ತು ಮೊಬೈಲ್ ಫೋನ್ ಗರಿಷ್ಠ ಸಾಮರ್ಥ್ಯಕ್ಕೆ ಕಾರ್ಯನಿರ್ವಹಿಸುತ್ತಿದ್ದರೆ ಮೆದುಳಿನ ಮೇಲೆ ಡಿಜಿಟಲ್ ಅಮ್ನೇಶಿಯಾ ಪರಿಣಾಮವನ್ನು ಕಡಿಮೆ ಮಾಡಬಹುದು.
ಆರೋಗ್ಯಕರ ಆಹಾರ ಸೇವನೆ
ಉತ್ತಮ ಗುಣಮಟ್ಟದ ಪ್ರೋಟೀನ್ಗಳು ಮತ್ತು ಕೊಬ್ಬಿನಂತಹ ಉತ್ತಮ ಪೋಷಣೆಯು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಬಹಳ ಮುಖ್ಯವಾಗಿದೆ. ವಿಟಮಿನ್ ಬಿ 1 ಮತ್ತು ಬಿ 12 (Vitamin B1 and B12) ಕೊರತೆಯು ವ್ಯಕ್ತಿಯ ಸ್ಮರಣೆಯ ಮೇಲೆ ಪರಿಣಾಮ ಬೀರಬಹುದು.
- ಸಮತೋಲಿತ ಆಹಾರ ಸೇವಿಸಿ
- ಹೊಸ ಕೌಶಲ್ಯ ಅಥವಾ ಹೊಸ ಭಾಷೆಯನ್ನು ಕಲಿಯಿರಿ
– ವ್ಯಾಯಾಮ - ವಾಕಿಂಗ್, ಏರೋಬಿಕ್ಸ್, ಓಟದಂತಹ ಅಭ್ಯಾಸ ಬೆಳೆಸಿಕೊಳ್ಳಿ
- ಸರಿಯಾಗಿ ನಿದ್ರೆ ಮಾಡಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ