• Home
  • »
  • News
  • »
  • lifestyle
  • »
  • Memory Games: ಈ ಗೇಮ್​ಗಳು ನಿಮ್ಮ ನೆನಪಿನ ಶಕ್ತಿ ಹೆಚ್ಚು ಮಾಡುತ್ತವೆ, ಮರೆವಿನ ಕಾಯಿಲೆ ಇದ್ರೆ ಟ್ರೈ ಮಾಡಿ

Memory Games: ಈ ಗೇಮ್​ಗಳು ನಿಮ್ಮ ನೆನಪಿನ ಶಕ್ತಿ ಹೆಚ್ಚು ಮಾಡುತ್ತವೆ, ಮರೆವಿನ ಕಾಯಿಲೆ ಇದ್ರೆ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Memory Games: ಏನನ್ನಾದರೂ ಜೋಪಾನವಾಗಿ ಎತ್ತಿಡಬೇಕು ಅಂದ್ಕೊಂಡಿರ್ತಿವಿ, ಆದ್ರೆ ಅದನ್ನು ಎಲ್ಲೋ ಇರಿಸಿ ಬೇಕಾದ ಹೊತ್ತಿನಲ್ಲಿ ಜಪ್ಪಯ್ಯ ಎಂದರೂ ಎಲ್ಲಿ ಇರಿಸಿದ್ದೇವೆ ಎಂದ್ರೂ ನೆನಪಾಗದು. ಏನನ್ನೋ ಹುಡುಕಲು ಹೋಗಿ ಮತ್ತೆ ಇನ್ನೇನೋ ಸಿಗುತ್ತೆ. ಹೀಗೆ ಮರೆವು ಅನ್ನೊದು ಎಲ್ರಿಗೂ ಸಹಜವೇ ಆಗಿದೆ.

ಮುಂದೆ ಓದಿ ...
  • Share this:

ಈ ಮರೆವು (Memory Problem) ಅನ್ನೋದು ಮಾಡೋ ಎಡವಟ್ಟುಗಳು ಅಷ್ಟಿಷ್ಟಲ್ಲ. ಇದರ ಹಾವಳಿಯಿಂದ ತಪ್ಪಿಸಿ ಕೊಂಡಿರೋರು ಯಾರಿದ್ದಾರೆ? ಪ್ರಪಂಚದಲ್ಲಿ, ಬಡವ, ಬಲ್ಲಿದ, ಮೇಲೂ, ಕೀಳು, ಹೆಂಗಸು ಗಂಡಸೆನ್ನದೆ ಎಲ್ಲರನ್ನೂ ಯಾವುದೇ ಬೇಧ ಭಾವ ತೋರದೆ ಕಾಡುವ ಅಂಶ ಈ ಮರೆವು. ಕೆಲವರು ಹಾಲು ಕಾಯಲು ಇಟ್ಟು, ಬೇರೇನೋ ಕೆಲಸಕ್ಕೆ (Work) ಹೋಗಿ, ಹಾಲನ್ನು ಮರೆತು ಸೀದು ಹೋಗಿರುವ ಪಾತ್ರೆಗಳು ಅದೆಷ್ಟೋ. ಮಾಡಿರೋ ಅಡುಗೆಗೆ (Food) ಉಪ್ಪು ಹಾಕಲು ಮರೆಯುವುದಂತೂ ಸರ್ವೇ ಸಾಮಾನ್ಯ. ಅದೇನೇ ಇರಲಿ, ಒಗ್ಗರಣೆಗೆ ಅಂತ ಎಣ್ಣೆ ಕಾಯಲು ಇಟ್ಟು, ಮರೆತು ಇನ್ನೇನೋ ಮಾಡಲು ಹೋಗಿ, ಬಾಣಲೆಯ ಎಣ್ಣೆಗೆ ಬೆಂಕಿ ಹಿಡಿದು ಅಷ್ಟೆತ್ತರಕ್ಕೆ ಹೊತ್ತಿ ಉರಿಯುವ ದಿನಾವೂ ಯಾವುದಾದರೊಂದು ಅಡುಗೆ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ ಅಂದರೂ ತಪ್ಪಾಗಲಾರದು.


ಏನನ್ನಾದರೂ ಜೋಪಾನವಾಗಿ ಎತ್ತಿಡಬೇಕು ಅಂದ್ಕೊಂಡಿರ್ತಿವಿ, ಆದ್ರೆ ಅದನ್ನು ಎಲ್ಲೋ ಇರಿಸಿ ಬೇಕಾದ ಹೊತ್ತಿನಲ್ಲಿ ಜಪ್ಪಯ್ಯ ಎಂದರೂ ಎಲ್ಲಿ ಇರಿಸಿದ್ದೇವೆ ಎಂದ್ರೂ ನೆನಪಾಗದು. ಏನನ್ನೋ ಹುಡುಕಲು ಹೋಗಿ ಮತ್ತೆ ಇನ್ನೇನೋ ಸಿಗುತ್ತೆ. ಹೀಗೆ ಮರೆವು ಅನ್ನೊದು ಎಲ್ರಿಗೂ ಸಹಜವೇ ಆಗಿದೆ.


ಈ ಮರೆವಿನ ಸಮಸ್ಯೆಯನ್ನು ಸುಧಾರಿಸಲು ಇಲ್ಲೊಂದು ವಿಶ್ವವಿದ್ಯಾಲಯವು ಸಂಶೋಧನಾ ಅಧ್ಯಯನವನ್ನು ಕೈಗೊಂಡಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.


ಸಂಶೋಧನಾ ಅಧ್ಯಯನವು ಏನ್‌ ಹೇಳ್ತಿದೆ?


ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಡ್ಯೂಕ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಸಂಶೋಧನೆಯು ಮರೆವಿನ ಕಾಯಿಲೆಯಿಂದ ಬಳಲುವ ಮತ್ತು ಮೆಮೊರಿ ನಷ್ಟ ನಿಧಾನಗೊಳಿಸಲು ಸಹಾಯ ಮಾಡುವ ಸರಳ, ಸಾಮಾನ್ಯವಾಗಿರುವ ಒಂದು ಚಟುವಟಿಕೆಯಿದೆ. ಅದನ್ನು ಮರೆವಿನ ಕಾಯಿಲೆ ಇರುವ ವ್ಯಕ್ತಿಗಳು ಅನುಸರಿಸಿದ್ರೆ ಈ ಕಾಯಿಲೆಯನ್ನು ದೂರ ಮಾಡಬಹುದು ಎಂದು ಸಂಶೋಧನಾ ಅಧ್ಯಯನವು ತಿಳಿಸಿದೆ.


ಇದನ್ನೂ ಓದಿ: ನಿಮ್ಮ ಮದುವೆ ಮೇಕಪ್ ಮಾಡಿಸುವಾಗ ಈ ತಪ್ಪುಗಳನ್ನು ಮಾಡ್ಬೇಡಿ


ತಜ್ಞರ ಅಭಿಪ್ರಾಯವೇನು?


NEJM ಎವಿಡೆನ್ಸ್, ಕೊಲಂಬಿಯಾದ ಮನೋವೈದ್ಯಶಾಸ್ತ್ರ ಮತ್ತು ವೈದ್ಯಕೀಯ ಪ್ರಾಧ್ಯಾಪಕ D.P. ದಯಾನಂದ ಮತ್ತು ಡ್ಯೂಕ್‌ನ ಮನೋವೈದ್ಯಶಾಸ್ತ್ರ ಮತ್ತು ನರವಿಜ್ಞಾನದ ಪ್ರಾಧ್ಯಾಪಕ ಮುರಳಿ ದೊರೈಸ್ವಾಮಿ ಅವರು 71 ವರ್ಷ ವಯಸ್ಸಿನ 107 ಜನರನ್ನು ಸಂಶೋಧನೆಗೆ ಒಳಪಡಿಸಿದ್ದಾರೆ ಎಂದು ಸಂಶೋಧನಾ ಜರ್ನಲ್‌ನಲ್ಲಿ ಬರೆಯಲಾಗಿದೆ. ಈ 107 ಜನರನ್ನು ಕ್ರಾಸ್‌ವರ್ಡ್‌ ಪಜಲ್ಸ್‌ ಪರಿಹರಿಸಲು ಅಥವಾ ಕಂಪ್ಯೂಟರ್ ವಿಡಿಯೋ ಗೇಮ್‌ಗಳನ್ನು ಅನೇಕ ವಾರಗಳವರೆಗೆ ನಿಯಮಿತವಾಗಿ ಆಡುವಂತೆ ಕೇಳಲಾಯಿತು.


ಸಂಶೋಧನೆಯ ಫಲಿತಾಂಶ


ಈ ಸಂಶೋಧನೆಯಲ್ಲಿ 78 ವಾರಗಳ ಅವಧಿಯಲ್ಲಿ ನೆನಪಿನ ಪರೀಕ್ಷೆಗಳು ಮತ್ತು ಮೆದುಳಿನ ಗಾತ್ರದಲ್ಲಿನ ಬದಲಾವಣೆಗಳನ್ನು ಅಳತೆ ಮಾಡಿದಾಗ ತಿಳಿದು ಬಂದ ನೈಜ ಸಂಗತಿಯೆಂದರೆ, ಈ ಕಂಪ್ಯೂಟರ್‌ ವೀಡಿಯೊ ಗೇಮ್‌ಗಳನ್ನು ಆಡುವವರಿಗೆ ಹೋಲಿಸಿದರೆ ಕ್ರಾಸ್‌ವರ್ಡ್ ಪದಬಂಧಗಳನ್ನು ಬಿಡಿಸುವ ಆಟಗಳಲ್ಲಿ ಭಾಗವಹಿಸುವವರು ಮೆಮೊರಿ ನಷ್ಟ ಅಥವಾ ಅದರ ಕೊರತೆಯ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಉತ್ತಮವಾಗಿದ್ದಾರೆ ಎಂಬುದು ಸಂಶೋಧನೆಯ ಫಲಿತಾಂಶವಾಗಿದೆ.


“ಮೆದುಳಿನ ಮುಖ್ಯ ಸಮಸ್ಯೆಗಳಲ್ಲಿ ಒಂದಾದ ಆಲ್ಝೈಮರ್ಸ್‌ ಕ್ಷೇತ್ರಕ್ಕೆ ಹೆಚ್ಚಿನ ನೆನಪಿನ ಶಕ್ತಿಯನ್ನು ನೀಡಲು ಗೃಹಾಧಾರಿತ ಡಿಜಿಟಲ್ ಚಿಕಿತ್ಸೆಗೆ ಮೆದುಳಿಗೆ ತರಬೇತಿಯನ್ನು ನೀಡುವುದು ಈ ಸಂಶೋಧನೆಯ ಉದ್ದೇಶವಾಗಿದೆ” ಎಂದು ಎಂದು ಡಾ. ದೊರೈಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಅನೇಕ ಆರೋಗ್ಯ ಸವಾಲುಗಳ ವಿಷಯಕ್ಕೆ ಬಂದಾಗ ವಯಸ್ಸಾದ ಮತ್ತು ಮೆಮೊರಿ ನಷ್ಟವನ್ನು ತಡೆಗಟ್ಟುವ ಕ್ರಮಗಳಿಗೆ ಹೆಚ್ಚಿನ ವಿಶೇಷ ಒತ್ತು ಇದೆ. ಅದಕ್ಕಾಗಿಯೇ ಈ ಸಂಶೋಧನಾ ಅಧ್ಯಯನವು ವಿಶೇಷವಾಗಿ ಆಸಕ್ತಿದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ದೊರೆಸ್ವಾಮಿ ಹೇಳಿದರು.


ಇದನ್ನೂ ಓದಿ: ನರಕೋಶದಲ್ಲಿರುವ ಈ ಒಂದು ವಸ್ತು ಆಲ್ಝೈಮರ್ ಕಾಯಿಲೆ ಬರದಂತೆ ತಡೆಯುತ್ತೆ


ಅಂತಿಮ ನಿರ್ಣಯ: ಉತ್ತಮ ನೆನಪಿನ ಶಕ್ತಿಯನ್ನು ನಮ್ಮದಾಗಿಸಿಕೊಳ್ಳಲು ನಾವು ಹೆಚ್ಚಿನ ಪದಬಂಧಗಳನ್ನು ಬಿಡಿಸಿ ನಮ್ಮ ಸ್ಮರಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಂದೇಶವನ್ನು ಈ ಸಂಶೋಧನಾ ಅಧ್ಯಯನವು ಸಮಾಜಕ್ಕೆ ನೀಡಿದೆ.

Published by:Sandhya M
First published: