Betel Leaves Benefits: ಬಾಯಿ ಕೆಂಪು ಮಾಡುವ ವೀಳ್ಯದೆಲೆಯಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆಯೇ?

ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ (Betel Leaves) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು (South India) ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಆರನೇ ಶತಮಾನದಷ್ಟು ಹಿಂದೆಯಿದ್ದ ಸ್ಕಂದ ಪುರಾಣದಲ್ಲಿ ಹೃದಯದ ಆಕಾರದಲ್ಲಿದ್ದ ವೀಳ್ಯದೆಲೆ ಉಲ್ಲೇಖವನ್ನು ಕಾಣಬಹುದು. ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರಿಂದ ಸಾಗರಗಳ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ವೀಳ್ಯದೆಲೆ ಒಂದು ಎಂದು ಹೇಳಲಾಗುತ್ತದೆ. ಹೀಗಾಗಿಯೇ ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ (Areca Nut) ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು (Digestion) ಸರಾಗವಾಗಿ ಆಗುವುದು ಎನ್ನುವ ನಂಬಿಕೆ.

  ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ

  ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಕರುಳಿನಲ್ಲಿ ಗ್ಲೂಕೋಸ್ ಹೀರುವಿಕೆಯನ್ನು ಪ್ರತಿಬಂಧಿಸುವ ಮೂಲಕ ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍‌ನಿಂದ ಹಾನಿಯಾಗದಂತೆ ತಡೆಯುವುದು.

  ಭಾರತೀಯರು ಹೆಚ್ಚಾಗಿ ಊಟವಾದ ಬಳಿಕ ವೀಳ್ಯದೆಲೆ ಸೇವಿಸುತ್ತಿದ್ದರು. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಮಧುಮೇಹ ಇರುವವರಲ್ಲಿ ಇದು ತೂಕ ಇಳಿಯುವುದನ್ನು ತಡೆಯುವುದು. ಈ ಕಾರಣದಿಂದಾಗಿ ವೀಳ್ಯದೆಲೆಯು ಚಯಾಪಚಯ ಮತ್ತು ಮಧುಮೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.

  ಇದನ್ನೂ ಓದಿ: Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ? ಆರೋಗ್ಯ ಸಮಸ್ಯೆ ಒಂದೆರಡಲ್ಲ

  ವೀಳ್ಯದೆಲೆ ಗಾಯ ಬೇಗನೆ ಒಣಗಲು ನೆರವಾಗುವುದು

  ವೀಳ್ಯದೆಲೆಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಆಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು ಮತ್ತು ಇದು ಗಾಯವು ಬೇಗನೆ ಒಣಗಲು ನೆರವಾಗುವುದು. ವೀಳ್ಯದೆಲೆಯ ರಸವನ್ನು ನೀವು ಗಾಯಕ್ಕೆ ಹಾಕಿದರೆ ಆಗ ಅದು ಬೇಗನೆ ಒಣಗುವುದು. ಇದು ಕಾಲಜನ್ ಬಿಡುಗಡೆ ಮಾಡಿ ಗಾಯವು ಬೇಗನೆ ಒಣಗಲು ಮತ್ತು ಪುನರುಜ್ಜೀವನಗೊಳ್ಳಲು ಸಾಧ್ಯವಾಗುವುದು.

  ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ

  ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದರ ಎಲೆಗಳನ್ನು ಜಗಿದು ತಯಾರಿಸಿದ ರಸವು ಬಾಯಿಯಲ್ಲಿ ಅಡಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದರಿಂದ ನೀವು ವಾಸನೆಯ ಬಗ್ಗೆ ಚಿಂತಿಸದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬಹುದು. ವೀಳ್ಯದೆಲೆಯು ಒಸಡುಗಳಲ್ಲಿನ ನೋವು ಅಥವಾ ಊತವನ್ನು ಕಡಿಮೆಮಾಡಲು ಕೂಡ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

  ವೀಳ್ಯದೆಲೆ ಹೆಚ್ಚು ಪ್ರೋಟೀನ್ ಹೊಂದಿದೆ

  ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ. ಮತ್ತು ಈ ಎಲೆಗಳು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳಿಂದ ತುಂಬಿವೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

  ಕೆಮ್ಮು ಮತ್ತು ಕಫಗಟ್ಟುವಿಕೆ ನಿವಾರಿಸುವುದು

  ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಪ್ರಕಾರ ವೀಳ್ಯದೆಲೆಯು ಕೆಮ್ಮು ನಿವಾರಣೆ ಮಾಡುವುದು. ಈ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನಸಬೇಕು. ಇದರ ಬಳಿಕ ಬಿಸಿ ಮಾಡಿ ಎದೆ ಮೇಲಿಟ್ಟರೆ ಆಗ ಕಫಗಟ್ಟುವುದು ನಿಲ್ಲುವುದು. ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು. ಬ್ರಾಂಕಟೈಸ್ಕ್ಯಾನ್ಸರ್ ತಡೆಯುವುದು.

  ಇದನ್ನೂ ಓದಿ: Acidic Burping remedies: ನೀವು ಹುಳಿ ತೇಗಿನ ಸಮಸ್ಯೆಯಿಂದ‌‌ ಬಳಲುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಸರಳ ಪರಿಹಾರ

  ವೀಳ್ಯದೆಲೆಯಲ್ಲಿ ಕ್ಯಾನ್ಸರ್ ವಿರೋಧಿ ಅಂಶಗಳು ಇವೆ

  ವೀಳ್ಯದೆಲೆಯಲ್ಲಿ ಉನ್ನತ ಮಟ್ಟದ ಸಫ್ರೋಲ್ ಎನ್ನುವ ಅಂಶವಿದೆ. ವೀಳ್ಯದೆಲೆಯಲ್ಲಿ ಆಂಟಿಆಕ್ಸಿಡೆಂಟ್, ಆಂಟಿಮುಟಜೆನಿಕ್ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ವೀಳ್ಯದೆಲೆಯಲ್ಲಿ ಇರುವ ಫೈಥೋಕೆಮಿಕಲ್ ಗಳು ಇದಕ್ಕೆ ಕಾರಣ. ತಂಬಾಕು ಜತೆಗೆ ಸೇವಿಸದೆ ಇದ್ದರೆ ಇದು ಕ್ಯಾನ್ಸರ್ ಉಂಟು ಮಾಡುವುದಿಲ್ಲ. ಡೈಹೈಡ್ರಾಕ್ಸಿಚಾವಿಕೋಲ್ ಮತ್ತು ಯುಜೆನಾಲ್ ಅಂಶವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಇದರಿಂದ ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವುದು.
  Published by:Swathi Nayak
  First published: