Ajwain Benefits: ಓಮ‌ ಕಾಳುಗಳನ್ನು ಸೇವಿಸಿದರೆ ಇಷ್ಟೆಲ್ಲಾ ಸಮಸ್ಯೆ ಪರಿಹಾರವಾಗುತ್ತಾ!

ಓಮದಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣಾಂಶಗಳೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ.

ಓಮ ಕಾಳು

ಓಮ ಕಾಳು

  • Share this:
    ಓಮ ಕಾಳನ್ನು (Ajwain) ಸಾಮಾನ್ಯವಾಗಿ ಕರಿದ ಪದಾರ್ಥಗಳಿಗೆ ಸುವಾಸನೆಗೆಂದು ಬಳಸುತ್ತಾರೆ. ಆದರೆ ಕೇವಲ ಸುವಾಸನೆ ಮಾತ್ರವಲ್ಲದೆ ಓಮ ಕಾಳಿನಲ್ಲಿ ಔಷಧೀಯ ಗುಣ ಕೂಡ ಅಡಗಿದೆ. ಹೌದು ಇದು ಹಲವಾರು ಅನಾರೋಗ್ಯಕ್ಕೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆ ಆದಾಗ ಓಮ ಕಾಳನ್ನು ಅಥವಾ ಓಮ ವಾಟರ್ (Ajwain Water) ಅನ್ನು ಸೇವಿಸುತ್ತಾರೆ. ಆದರೆ ಇದು ಕೇವಲ ಜೀರ್ಣಕ್ರಿಯೆಗೆ ಸುಧಾರಿಸುವುದಿಲ್ಲದೇ ಇತರ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಓಮದಲ್ಲಿ ಪ್ರೋಟೀನ್ (Protein), ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ (Calcium) ಫಾಸ್ಫರಸ್, ಕಬ್ಬಿಣಾಂಶಗಳೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ.

    ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

    ಓಮ ಕಾಳಿನಲ್ಲಿ ಅಡಕವಾಗಿರುವ ಆಸಿಡ್ ನಿರೋಧಕ ಗುಣವು ಜೀರ್ಣಕ್ರಿಯೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಸ್ವಲ್ಪ ಓಮ ಕಾಳನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು.

    2 ಟೀ ಚಮಚ ಹುರಿದ ಓಂ ಬೀಜಗಳನ್ನು ನೀರಿನಲ್ಲಿ ನೆನೆಸಿ, ಕಷಾಯವನ್ನು ಸೋಸಿಕೊಂಡು ಕುಡಿಯಿರಿ. ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಕೊಬ್ಬನ್ನು ಸುಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: Snoring Problem: ಮಲಗಿದಾಗ ಅತಿಯಾಗಿ ಗೊರಕೆ ಹೊಡೆಯುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ!

    ಚರ್ಮದ ಕಲೆಗಳನ್ನು ತೆಗೆದುಹಾಕಲು ಸಹಕಾರಿ

    ಓಮ ಕಾಳಿನಲ್ಲಿ ಥೈಮೋಲ್ ಅಡಕವಾಗಿದೆ. ಇದು ದೇಹದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಚರ್ಮದ ಸಣ್ಣಸಣ್ಣ ಕಿರಿಕಿರಿಗೆ ಓಮ ಕಾಳನ್ನು ಬಳಸಬಹುದು. ಅದೇ ರೀತಿ ಓಮ ಕಾಳಿನ ಪೇಸ್ಟ್ ತಯಾರಿಸಿ ಮೊಡವೆ ಕಲೆಗಳು ಮೇಲೆ ಸುಮಾರು 15 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆದರೆ ಮೊಡವೆ ಕಲೆಗಳು ಮಾಯವಾಗುತ್ತದೆ.

    ಕೂದಲಿನ ಬೆಳವಣಿಗೆಗೆ ಸಹಕಾರಿ

    ಹದಿಹರೆಯದ ಮಕ್ಕಳಲ್ಲಿ ಕಂಡುಬರುವ ಬಿಳಿಕೂದಲು ಸಮಸ್ಯೆಯನ್ನು ಓಮ ತಡೆಯಲು ಸಹಾಯ ಮಾಡುತ್ತದೆ. ಅದೇ ರೀತಿ ಕೂದಲು ಉದುರುವಿಕೆಯನ್ನು ಸಹ ಇದು ನಿಯಂತ್ರಿಸುತ್ತದೆ. ಆದ್ದರಿಂದ ರಾತ್ರಿ ಇಡೀ ಓಮ ಕಾಳುಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

    ತೆಂಗಿನ ಎಣ್ಣೆಯಲ್ಲಿ ಈರುಳ್ಳಿ ಓಮ ಕಾಳುಗಳನ್ನು ಕುದಿಸಿ. ತಣಿಸಿ ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹಚ್ಚಿ ಹಾಗೆಯೇ ಬಿಡಿ. ಮರುದಿನ ಕೂದಲು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. ಕೂದಲಿನ ಆರೋಗ್ಯ ಪ್ರಯೋಜನಕ್ಕೆ ವಾರಕ್ಕೆ ಎರಡರಿಂದ ಮೂರು ಬಾರಿ ಪ್ರಯತ್ನಿಸಿ ಇದರಿಂದ ಕೂದಲು ದಟ್ಟವಾಗಿ ಬೆಳೆಯುವುದು.

    ಶೀತ ಮತ್ತು ಕೆಮ್ಮು ನಿವಾರಿಸಲು ಬೆಸ್ಟ್ ಮೆಡಿಸಿನ್

    ಓಮ ಕಾಳುಗಳು ಶೀತ ಮತ್ತು ಕೆಮ್ಮು ನಿವಾರಣೆ ಮಾಡಲು ಬಹಳ ಸಹಕಾರಿಯಾಗಿದೆ. ಅಧ್ಯಯನ ಪ್ರಕಾರ ಇದು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಹೆಚ್ಚಿಸುವ ಮೂಲಕ ಕೆಮ್ಮಿನ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುತ್ತದೆ. ಅದೇ ರೀತಿ ಅಸ್ತಮಾದಂತಹ ಸಮಸ್ಯೆ ಇರುವವರು ಬೆಲ್ಲದೊಂದಿಗೆ ಓಮ ಕಾಳುಗಳನ್ನು ಹುಡಿ ಮಾಡಿ ದಿನಕ್ಕೆರಡು ಬಾರಿ ಸೇವಿಸಿದರೆ ಒಳ್ಳೆಯದು.

    ಇದನ್ನೂ ಓದಿ: Sesame Seeds Benefits: ಎಳ್ಳನ್ನು ಪ್ರತಿದಿನ ತಿಂದ್ರೆ ಈ ಎಲ್ಲಾ ಸಮಸ್ಯೆಗಳು ಮಾಯವಾಗುತ್ತಂತೆ

    ಮುಟ್ಟಿನ ನೋವು ಇದ್ದಾಗ ಈ ಕಷಾಯ ಸೇವನೆ ಮಾಡುವುದು ಉತ್ತಮ

    ಗ್ಯಾಸ್ಟ್ರಿಕ್‌ ಸಮಸ್ಯೆಗೆ ಕೂಡ ಓಮ ರಾಮಬಾಣವಿದ್ದಂತೆ. ಊಟಕ್ಕೂ ಅರ್ಧಗಂಟೆ ಮೊದಲು ಓಮದ ಕಷಾಯ ಸೇವಿಸಿದರೆ ಗ್ಯಾಸ್‌ ನಿವಾರಣೆಯಾಗುತ್ತದೆ. ಹೆಣ್ಣು ಮಕ್ಕಳಿಗೂ ಓಮದ ಕಷಾಯ ತುಂಬಾ ಪ್ರಯೋಜನಕಾರಿ. ಮುಟ್ಟಿನ ನೋವು ಇದ್ದಾಗ ಈ ಕಷಾಯ ಸೇವನೆ ಮಾಡುವುದು ಉತ್ತಮ.

    ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ

    ಓಮ ಕಾಳುಗಳು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಒಂದೆರಡು ಓಮ ಕಾಳುಗಳನ್ನು ಹಾಗೆಯೇ ಜಗಿದರೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಅದೇ ರೀತಿ ಹಲ್ಲು ನೋವಿನ ಸಮಸ್ಯೆ ಇದ್ದರೆ ಓಮ ಕಾಳುಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಬಾಯಿ ಮುಕ್ಕಳಿಸಿದರೆ ಶೀಘ್ರದಲ್ಲಿ ಹಲ್ಲು ನೋವು ಮಾಯವಾಗುತ್ತದೆ.
    Published by:Swathi Nayak
    First published: