Benefits Of Pumpkin Leaves: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾ? ಹಾಗಾದ್ರೆ ಕುಂಬಳಕಾಯಿ ಸೊಪ್ಪು ಬಳಸಿ

Pumpkin Seeds: ವಿಟಮಿನ್ ಗಳು ಮತ್ತು ಖನಿಜಗಳು ಕುಂಬಳಕಾಯಿ ಹಾಗೂ ಅದರ ಸೊಪ್ಪಿನಲ್ಲಿ ಲಭ್ಯವಿದೆ.   ಕುಂಬಳಕಾಯಿಯಲ್ಲಿ ನೀರು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ಮೆಗ್ನೀಸಿಯಮ್, ವಿಟಮಿನ್ ಎ, ಕೆ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ.

ಕುಂಬಳಕಾಯಿ ಎಲೆಗಳು

ಕುಂಬಳಕಾಯಿ ಎಲೆಗಳು

  • Share this:
ಕುಂಬಳಕಾಯಿಯನ್ನು(Pumpkin) ವೈಜ್ಞಾನಿಕವಾಗಿ ಕುಕುರ್ಬಿಟಾ ಮೊಸ್ಚಾಟಾ ಡಾಚೆಸ್ಸನ್(Cucurbita moschata DOCHESON) ಎಂದು ಕರೆಯಲಾಗುತ್ತದೆ. ಹಲವಾರು ಜನರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ಹಲವಾರು ಆರೋಗ್ಯ(Health Benefits0 ಪ್ರಯೋಜನಗಳಿವೆ. ಕೇವಲ ಕುಂಬಳಕಾಯಿ ಮಾತ್ರವಲ್ಲದೇ ಇದರ ಸೊಪ್ಪಿನಲ್ಲಿ ಹಾಗೂ ಬೀಜಗಳಲ್ಲಿ ಸಹ ಆರೋಗ್ಯಕರ ಪ್ರಯೋಜನಗಳಿದ್ದು. ಸೊಪ್ಪು ಮತ್ತು ಬೀಜದಿಂದ  ಏನೆಲ್ಲ ಪ್ರಯೋಜನವಾಗುತ್ತದೆ ಎಂಬುದು ಇಲ್ಲಿದೆ.

ವಿಟಮಿನ್ ಗಳು ಮತ್ತು ಖನಿಜಗಳು ಕುಂಬಳಕಾಯಿ ಹಾಗೂ ಅದರ ಸೊಪ್ಪಿನಲ್ಲಿ ಲಭ್ಯವಿದೆ.   ಕುಂಬಳಕಾಯಿಯಲ್ಲಿ ನೀರು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಕಬ್ಬಿಣ ಮತ್ತು ಮೆಗ್ನೀಸಿಯಮ್, ವಿಟಮಿನ್ ಎ, ಕೆ ಮತ್ತು ಫೋಲೇಟ್ ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ನಮ್ಮ ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕುಂಬಳಕಾಯಿ ಸೊಪ್ಪುಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳಿವೆ. ಇದು ಮೂಳೆಯ ಮತ್ತು ಹಲ್ಲಿನ ಆರೋಗ್ಯಕ್ಕೆ ಬಹಳ ಪ್ರಮುಖವಾದ ಅಂಶ.  ಶಕ್ತಿಯುತವಾದ ಮೂಳೆಗಳಿಗೆ ಹಾಗೂ ಮೂಳೆಗಳ  ಸರಿಯಾದ ಬೆಳವಣಿಗೆ ಮತ್ತು ಹಲ್ಲುಗಳ ಆರೊಗ್ಯ ಕಾಪಾಡಿಕೊಳ್ಳಲು ಕುಂಬಳಕಾಯಿ ಸೊಪ್ಪು ಸಹಕಾರಿಯಾಗುತ್ತದೆ.

ಕುಂಬಳಕಾಯಿ ಸೊಪ್ಪಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ. ಹಾಗೆಯೇ ಸೋಡಿಯಂ ಅಂಶಗಳು ಸಹ ಕಡಿಮೆ ಇರುತ್ತದೆ. ಹಾಗಾಗಿ ಇದನ್ನು ಎಲ್ಲ ವಯಸ್ಸಿನವರ ಸೇವನೆ ಮಾಡಬಹುದು. ಯಾವುದೇ ರೀತಿಯ ಅಡ್ಡಪರಿಣಾಮಗಳು ಈ ಸೊಪ್ಪಿನಿಂದ ಉಂಟಾಗುವುದಿಲ್ಲ.

ಕುಂಬಳಕಾಯಿ ಸೊಪ್ಪಿನಲ್ಲಿ ಸಹ ಫೈಬರ್ ಅಂಶಗಳು ಸಮೃದ್ಧವಾಗಿರುವುದರಿಂದ ಇದು ಕರುಳಿನ ಕ್ಯಾನ್ಸರ್​ ಅಪಾಯದಿಂದ ಕಾಪಾಡುತ್ತದೆ ಎಂದು ಹೇಳಲಾಗುತ್ತದೆ. ಹಲವಾರು ಸಂಶೋಧನೆಗಳ ಪ್ರಕಾರ ಹೆಚ್ಚು ಫೈಬರ್ ಸೇವನೆ ಕರುಳಿನ ಕ್ಯಾನ್ಸರ್​ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಕುಂಬಳಕಾಯಿ ಸೊಪ್ಪಿನ ಸೇವನೆ ಬಹಳ ಉತ್ತಮ.

ಇದನ್ನೂ ಓದಿ: ಉಪವಾಸ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

ನಿರಂತರ ಸ್ನಾಯು ನೋವು ಮತ್ತು ಕೀಲು ನೋವನ್ನು ಹೊಂದಿರುವ ಜನರಿಗೆ ಕುಂಬಳಕಾಯಿ ಬೀಜ ಹೇಳಿ ಮಾಡಿಸಿದ ಮದ್ದು. ಇದರಲ್ಲಿರುವ ಇರುವ ವಿಟಮಿನ್ ಬಿ6 ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಹಾಗೂ ಸಂಧಿವಾತವನ್ನು ನಿವಾರಿಸುತ್ತದೆ.

ಕುಂಬಳಕಾಯಿ ಸೊಪ್ಪಿನಲ್ಲಿ  38 ಮೈಕ್ರೊಗ್ರಾಂ ವಿಟಮಿನ್ ಎ ಇದೆ,  ಇದು ದೇಹಕ್ಕೆ ಉಚಿತ ರಾಡಿಕಲ್ ಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ, ಹಾಗೂ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿದಂತೆ ಹಲವಾರು ಆರೊಗ್ಯ ತೊಂದರೆಗಳು ಉಂಟಾಗುತ್ತದೆ. ಹಾಗಾಗಿ ನಿಯಮಿತವಾಗಿ ಕುಂಬಳಕಾಯಿ ಸೇವನೆ ಉತ್ತಮ ಪರಿಹಾರ.

ಕುಂಬಳಕಾಯಿ ಬೀಜಗಳು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಶುಷ್ಕತೆ, ಕೆರಾಟಿನೈಸೇಶನ್ ಮತ್ತು ಸೋರಿಯಾಸಿಸ್ ನಂತಹ ಚರ್ಮದ  ಸಮಸ್ಯೆಗಳಿಗೆ ಇದು ಮುಕ್ತಿ ನೀಡುತ್ತದೆ. ಕುಂಬಳಕಾಯಿ ಬೀಜಗಳನ್ನು ಆಗಾಗ ಸೇವನೆ ಮಾಡುವುದು ಉತ್ತಮ.

ಕುಂಬಳಕಾಯಿ ಸೊಪ್ಪಿನ ಮತ್ತೊಂದು ವಿಶೇಷತೆ ಎಂದರೆ ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಹೆಚ್ಚಾದರೆ ಸಹಜವಾಗಿ ಆಮ್ಲಜನಕ ಕೂಡ ಹೆಚ್ಚಾಗುತ್ತದೆ. ದೇಹಕ್ಕೆ ಆಮ್ಲಜನಕ ಅತಿ ಅವಶ್ಯಕ.

ಇದನ್ನೂ ಓದಿ: ಋತುಸ್ರಾವದ ಹೊಟ್ಟೆ ನೋವಿಗೆ ಈ ಯೋಗ ಭಂಗಿಗಳನ್ನು ಟ್ರೈ ಮಾಡಿ

ಈ ಸೊಪ್ಪಿನಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದಲ್ಲಿ ಕುಂಬಳಕಾಯಿ ಸೊಪ್ಪಿನ ಆಹಾರ ಪದಾರ್ಥವನ್ನು ಸೇವನೆ ಮಾಡುವುದರಿಂದ ಪರಿಹಾರ ಸಿಗುತ್ತದೆ.  ಕೇವಲ ಸೊಪ್ಪು ಮಾತ್ರವಲ್ಲದೇ ಇದರ ಬೀಜವನ್ನು ಕೂಡ ಸೇವನೆ ಮಾಡಬಹುದು.

ಇನ್ನು ಇದರ ಪ್ರಮುಖ ಅಂಶವೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊರೊನಾದಂಥಹ ಸಮಯದಲ್ಲಿ ರೋಗನಿರೋಧಕ ಶಕ್ತಿ ಅತಿ ಮುಖ್ಯವಾಗಿದೆ. ಹಾಗಾಗಿ ಕುಂಬಳಕಾಯಿ ಹಾಗೂ ಅದರ ಸೊಪ್ಪು ಮತ್ತು ಎಲೆಗಳನ್ನು ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.
Published by:Sandhya M
First published: