• Home
 • »
 • News
 • »
 • lifestyle
 • »
 • Heart Care: ನಿಮ್ಮ ಆಹಾರ ಕ್ರಮ ಹೀಗಿದ್ದರೆ ಹೃದಯದ ಸಮಸ್ಯೆ ಬರಲ್ಲ

Heart Care: ನಿಮ್ಮ ಆಹಾರ ಕ್ರಮ ಹೀಗಿದ್ದರೆ ಹೃದಯದ ಸಮಸ್ಯೆ ಬರಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Heart Diseases: ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

 • Share this:

ಈಗಂತೂ ನಾವು ಈ ಹೃದಯ ಸ್ತಂಭನ (Heart Attack) ಮತ್ತು ಹೃದಯಾಘಾತದಿಂದ ಜನರು ಸಾವನಪ್ಪುತ್ತಿರುವ ಘಟನೆಗಳನ್ನು ಹಿಂದೆಗಿಂತಲೂ ಸ್ವಲ್ಪ ಜಾಸ್ತಿಯೇ ನೋಡುತ್ತಿದ್ದೇವೆ ಅಂತ ಹೇಳಬಹುದು. ಹೌದು, ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ಇದು ದೇಹಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪಂಪ್ ಮಾಡಿದ ರಕ್ತವನ್ನು(Blood)  ಸಾಗಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ನಿಯಮಿತ ವ್ಯಾಯಾಮ (Exercise) ಅಥವಾ ದೈಹಿಕ ಚಟುವಟಿಕೆಯೊಂದಿಗೆ ಹೃದಯಕ್ಕೆ ಆರೋಗ್ಯಕರವಾದ ಆಹಾರವು (Food) ಹೃದ್ರೋಗ ಅಥವಾ ಪಾರ್ಶ್ವವಾಯುವನ್ನು ಅನುಭವಿಸುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.


ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹರ ತೆಗೆದುಕೊಳ್ಳುವ ಮೂಲಕ ಪರಿಧಮನಿಯ ಹೃದ್ರೋಗ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು, ಜೊತೆಗೆ ತೂಕವು ಹೆಚ್ಚಾಗದಂತೆ ನೋಡಿಕೊಳ್ಳಬಹುದು, ಆ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಉರಿಯೂತದ ಅಪಾಯಗಳೂ ಸಹ ಕಡಿಮೆಯಾಗುತ್ತವೆ.


ನ್ಯೂಟ್ರಾಬೂಟಿಯ ವೈದ್ಯಕೀಯ ಸಲಹೆಗಾರರಾದ ಡಾ.ವರುಣ್ ಗುಪ್ತಾ "ನಿಮ್ಮ ಹೃದಯವು ಅತ್ಯಂತ ಪ್ರಮುಖವಾದ ಅಂಗವಾಗಿದೆ, ಅದು ನಿಮ್ಮ ದೇಹಕ್ಕೆ ಆಮ್ಲಜನಕಯುಕ್ತ ರಕ್ತದ ನಿರಂತರ ಪೂರೈಕೆಯನ್ನು ಒದಗಿಸಲು ನಿರಂತರವಾಗಿ ಕೆಲಸ ಮಾಡುತ್ತದೆ.


ನೀವು ಹೃದ್ರೋಗಗಳಿಂದ ದೂರವಿರಲು ಬಯಸಿದರೆ, ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳ ಮೂಲಕ ನಿಮ್ಮ ಹೃದಯ ರಕ್ತನಾಳದ ವ್ಯವಸ್ಥೆಯನ್ನು ಸಂರಕ್ಷಿಸಿಕೊಳ್ಳಬೇಕು ಹಾಗೂ ಅದಕ್ಕೆ ಅನೇಕ ಸರಳ ಮಾರ್ಗಗಳಿವೆ" ಎಂದು ಹೇಳುತ್ತಾರೆ.


1. ಧೂಮಪಾನ ಮಾಡಬೇಡಿ: ಧೂಮಪಾನವು ಪರಿಧಮನಿಯ ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ನೀವು ಪ್ರಸ್ತುತ ಧೂಮಪಾನ ಮಾಡುತ್ತಿದ್ದರೆ, ಅದನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದು.


2. ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ: ನಾರಿನಂಶ ಹೆಚ್ಚಿರುವ ಆಹಾರವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಹೃದಯ ರಕ್ತನಾಳದ ಆರೋಗ್ಯವನ್ನು ನೋಡಿಕೊಳ್ಳಲು ಸಹಾಯ ಮಾಡುವ ಪೋಷಕಾಂಶಗಳನ್ನು ಒದಗಿಸುತ್ತದೆ.


ಆರೋಗ್ಯಕರ ಹೃದಯಕ್ಕಾಗಿ, ನೀವು ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಸಂಪೂರ್ಣ ಧಾನ್ಯಗಳಂತಹ ಹೆಚ್ಚಿನ ನಾರಿನಂಶದ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿರಿ.


3. ಒಂದೇ ಕಡೆ ಕುಳಿತುಕೊಳ್ಳಬೇಡಿ, ಹೆಚ್ಚು ಓಡಾಡಿ: ಜಡತ್ವದ ನಡವಳಿಕೆಯು ಹೃದಯ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ನಿಮ್ಮ ಅಪಾಯವನ್ನು ಹೆಚ್ಚಿಸಬಹುದು, ಏಕೆಂದರೆ ನಿಷ್ಕ್ರಿಯರಾಗಿರುವುದು ಕೆಲವೊಮ್ಮೆ ನಿಮ್ಮ ಅಪಧಮನಿಗಳಲ್ಲಿ ಕೊಬ್ಬಿನ ವಸ್ತು ನಿರ್ಮಿಸಲು ಕಾರಣವಾಗಬಹುದು.
ಆದ್ದರಿಂದ, ಯಾವಾಗಲೂ ಒಂದೇ ಸ್ಥಳದಲ್ಲಿ ಕುಳಿತುಕೊಂಡಿರಬೇಡಿ, ಹೆಚ್ಚು ನಡೆದಾಡಲು ಪ್ರಯತ್ನಿಸಿ. ನಿಮಗೆ ಸಾಧ್ಯವಾದರೆ, ನಿಯಮಿತವಾಗಿ ವಾಕಿಂಗ್ ಗೆ ಹೋಗುವ ಮೂಲಕ ಅಥವಾ ನಿಮ್ಮ ಆಸಕ್ತಿಯ ಹೊರಾಂಗಣ ಆಟಗಳನ್ನು ಆಡುವುದರ ಮೂಲಕ ನಿಮ್ಮನ್ನು ನೀವು ಫಿಟ್ ಆಗಿ ಇರಿಸಿಕೊಳ್ಳಬಹುದು.


4. ಆರೋಗ್ಯಕರ ಕೊಬ್ಬುಗಳಿರುವ ಆಹಾರ ಸೇವಿಸಿ: ನಿಮ್ಮ ಆಹಾರದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಬಹುದು ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡಬಹುದು.


ಸಾಲ್ಮನ್, ಟ್ರೌಟ್, ಅಥವಾ ಹೆರ್ರಿಂಗ್, ಅಥವಾ ಅಗಸೆ ಬೀಜ, ಕೇಲ್, ಪಾಲಕ್, ಅಥವಾ ವಾಲ್ನಟ್ ಗಳಂತಹ ಕೊಬ್ಬಿನ ಮೀನುಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಿರಿ.


5. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿರಿ: ದೀರ್ಘಕಾಲದವರೆಗೆ ಅನುಭವಿಸುವ ಮಾನಸಿಕ ಮತ್ತು ದೈಹಿಕ ಒತ್ತಡವು ನಮ್ಮ ದೇಹದ ಮೇಲೆ ಅನೇಕ ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹೃದಯಕ್ಕೆ ದೀರ್ಘಕಾಲೀನ ಸಮಸ್ಯೆಗಳಿಗೆ ಕಾರಣವಾಗಬಹುದು.


ಸಾಧ್ಯವಾದಾಗಲೆಲ್ಲಾ ಒತ್ತಡವನ್ನು ನಿರ್ವಹಿಸುವ ಅಥವಾ ನಿವಾರಿಸುವ ಮಾರ್ಗಗಳನ್ನು ಕಲಿಯುವುದು, ನಿಮ್ಮ ಹೃದಯ ರಕ್ತನಾಳದ ವ್ಯವಸ್ಥೆಯನ್ನು ರಕ್ಷಿಸುವ ಒಂದು ಉತ್ತಮವಾದ ಮಾರ್ಗವಾಗಿದೆ.


ವೀಕ್ಲಿನಿಕ್ ಹೋಮಿಯೋಪಥಿಯ ಡಾ. ದೀಕ್ಷಾ ಕಟಿಯಾರ್, ನಿಮ್ಮ ಹೃದಯಕ್ಕೆ ಆರೋಗ್ಯಕರವಾದ ಆಹಾರ ಯೋಜನೆಯನ್ನು ರಚಿಸಲು, ನಿಮ್ಮ ಆಹಾರದಲ್ಲಿ ಈ ಕೆಳಗಿನವುಗಳನ್ನು ಸೇರಿಸಬಹುದು ಎಂದು ಸಲಹೆ ನೀಡುತ್ತಾರೆ.


 • ಸೊಪ್ಪು, ಹಸಿರು ತರಕಾರಿಗಳು

 • ಸಂಪೂರ್ಣ ಧಾನ್ಯಗಳು

 • ಅವಕಾಡೋ

 • ಮೀನಿನ ಎಣ್ಣೆ

 • ವಾಲ್‌ನಟ್ ಗಳು

 • ಬೀನ್ಸ್

 • ಟೊಮೆಟೊ

 • ಬಾದಾಮಿ

 • ಬೆಳ್ಳುಳ್ಳಿ

 • ಆಲಿವ್ ಎಣ್ಣೆ

 • ಗ್ರೀನ್ ಟೀ


'ಹೃದಯಕ್ಕೆ ಆರೋಗ್ಯಕರವಾದ ಆಹಾರ ಯೋಜನೆ ಇಲ್ಲಿದೆ ನೋಡಿ..


ಇದನ್ನೂ ಓದಿ: ಮೂಳೆ ಗಟ್ಟಿಯಾಗಿದ್ರೆ ಆರೋಗ್ಯ ಚೆನ್ನಾಗಿರುತ್ತೆ, ಮಿಸ್ ಮಾಡದೇ ಈ ಕೆಲಸ ಮಾಡಿ ಸಾಕು


ಮುಂಜಾನೆ (ಬೆಳಗ್ಗೆ 5 ರಿಂದ 6 ರವರೆಗೆ)


ಒಂದು ಲೋಟ ಬೆಚ್ಚಗಿನ ನೀರಿನೊಂದಿಗೆ 5-6 ಬಾದಾಮಿ ವಾಲ್‌ನಟ್ ಗಳನ್ನು ತೆಗೆದುಕೊಳ್ಳಿ


ಉಪಾಹಾರ (ಬೆಳಿಗ್ಗೆ 7 ರಿಂದ 8 ರವರೆಗೆ)


ಮನೆಯಲ್ಲಿ ತಯಾರಿಸಿದ ಉಪಾಹಾರವಾದ ಅವಲಕ್ಕಿ, ಬೇಯಿಸಿದ ಹೆಸರುಕಾಳು, ಉಪ್ಮಾ, ದೋಸೆ, ಡೊಕ್ಲಾ, ಪರಾಠಾ, ಇತ್ಯಾದಿ. ಅಡುಗೆ ಮಾಡುವಾಗ ಕನಿಷ್ಠ ಎಣ್ಣೆಯನ್ನು ಬಳಸಿ.


ಒಂದು ಲೋಟ ಹಾಲು ಅಥವಾ ಮೊಸರು ಅಥವಾ ಬೇಯಿಸಿದ ಮೊಟ್ಟೆಯಂತಹ ಪ್ರೋಟೀನ್ ಭರಿತ ಆಹಾರವನ್ನು ಸಹ ತೆಗೆದುಕೊಳ್ಳಬಹುದು.


ಮಧ್ಯಾಹ್ನದ ಊಟ (ಬೆಳಿಗ್ಗೆ 10 ರಿಂದ 11 ರವರೆಗೆ)


ತುಪ್ಪವಿಲ್ಲದ ಅಥವಾ ಎಣ್ಣೆಯಿಲ್ಲದ 2-3 ಚಪಾತಿ, ಮಧ್ಯಮ ಬಟ್ಟಲು ಅನ್ನ, ಒಂದು ಕಪ್ ತರಕಾರಿ ಪಲ್ಯ, ಮಧ್ಯಮ ಬಟ್ಟಲು ಮೊಸರು ಮತ್ತು ಒಂದು ದೊಡ್ಡ ಸಲಾಡ್ ಸೇವಿಸಿ. ಮಾಂಸಹಾರಿಗಳು ಚಿಕನ್ ಅಥವಾ ಮೀನನ್ನು ತಿನ್ನಬಹುದು.


ಸಂಜೆಯ ಉಪಾಹಾರ (ಸಂಜೆ 4 ರಿಂದ 5 ರವರೆಗೆ)


ಒಂದು ಬಟ್ಟಲು ಸೂಪ್ ಅಥವಾ ಹಣ್ಣು ತಿನ್ನಬಹುದು. ನೀವು ಒಂದು ಕಪ್ ಗ್ರೀನ್ ಟೀ ಅಥವಾ ಕಾಫಿಯನ್ನು ಒಂದು ಸಣ್ಣ ಬೌಲ್ ಭೇಲ್, ಚಾಟ್, ಖಾಖ್ರಾದೊಂದಿಗೆ ತೆಗೆದುಕೊಳ್ಳಬಹುದು.


ರಾತ್ರಿ ಊಟ (ರಾತ್ರಿ 8 ರಿಂದ 9 ರವರೆಗೆ)


ಎರಡು ಧಾನ್ಯಗಳ ಚಪಾತಿ ಅಥವಾ 2 ಜೋಳ ಅಥವಾ ಸಜ್ಜೆ ರೊಟ್ಟಿ, ಒಂದು ಬಟ್ಟಲು ತರಕಾರಿ ಪಲ್ಯದೊಂದಿಗೆ ಭಕ್ರಿ, ಒಂದು ಪ್ಲೇಟ್ ಸಲಾಡ್ ಮತ್ತು ಒಂದು ಬಟ್ಟಲು ದಾಲ್ ಅಥವಾ ಮೊಸರು. ಪರ್ಯಾಯವಾಗಿ, ಒಂದು ಬಟ್ಟಲು ಕಿಚಡಿಯನ್ನು ಸಹ ಸೇವಿಸಬಹುದು.


ಇದನ್ನೂ ಓದಿ: ಮೂಗು ಕಟ್ಟಿ ಉಸಿರಾಡೋಕೆ ಕಷ್ಟ ಆಗ್ತಿದ್ರೆ, ತಜ್ಞರು​ ಹೇಳಿರೋ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ಸಾಕು


ಆರೋಗ್ಯಕರ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.


 • ನಿಯಮಿತ ವ್ಯಾಯಾಮದೊಂದಿಗೆ ಸಕ್ರಿಯವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ

 • ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು

 • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

 • ನಿಮ್ಮ ಒತ್ತಡವನ್ನು ನಿರ್ವಹಿಸಿ

 • ಪ್ರತಿದಿನ ಸಾಕಷ್ಟು ನಿದ್ರೆ ಮಾಡಿ

 • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

 • ಮಧುಮೇಹ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು