Juice ಕುಡಿತೀರಾ? ಮನೆಯಲ್ಲಿ ಜ್ಯೂಸ್​ ತಯಾರಿಸುವಾಗ ಈ ಸಂಗತಿಗಳನ್ನು ನೆನಪಿಡಿ

Health Benefits: ಮನೆಯಲ್ಲಿಯೇ ತಯಾರಿಸಿದ ಜ್ಯೂಸ್‍ಗಳು, ಹೊರಗೆ ಸಿಗುವ ಜ್ಯೂಸ್‍ಗಳಿಗಿಂತ ಎಲ್ಲಾ ರೀತಿಯಿಂದಲೂ ಉತ್ತಮ ಮತ್ತು ಆರೋಗ್ಯಕರ. ಏಕೆಂದರೆ ಹೊರಗೆ ಸಿಗುವ ಜ್ಯೂಸ್‍ಗೆ ಬಳಸುವ ಹಣ್ಣು ಮತ್ತು ನೀರಿನ ಗುಣಮಟ್ಟ ಅತ್ಯುತ್ತಮ ಆಗಿರುತ್ತದೆ ಎಂಬ ಬಗ್ಗೆ ಖಾತರಿ ಇರುವುದಿಲ್ಲ ಮತ್ತು ಅದರಲ್ಲಿ ಸಕ್ಕರೆ ಪ್ರಮಾಣವೂ ಹೆಚ್ಚಿರುತ್ತದೆ.

Juice (Photo:Google)

Juice (Photo:Google)

  • Share this:

ಒಂದು ಲೋಟ ತಾಜಾ ಜ್ಯೂಸ್, ತ್ವರಿತವಾಗಿ ಶಕ್ತಿ ಪಡೆಯಲು ಅತ್ಯುತ್ತಮ ಮಾರ್ಗ. ಏಕೆಂದರೆ ಅದು ದೇಹದೊಳಗಿನ ರಕ್ತ ಪ್ರವಾಹದಿಂದ ಅತ್ಯಂತ ವೇಗವಾಗಿ ಹೀರಿಕೊಳ್ಳಲ್ಪಡುತ್ತದೆ ಮತ್ತು ಬಹ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳು (Fruits) ಮತ್ತು ತರಕಾರಿಗಳು (vegetables) ಪೌಷ್ಟಿಕಾಂಶದ ಖಜಾನೆಗಳು. ನಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಹಣ್ಣು ತರಕಾರಿಗಳನ್ನು ಸೇರಿಸಿಕೊಳ್ಳುವುದು ಅತ್ಯಂತ ಅಗತ್ಯ ಮತ್ತು ಪ್ರಯೋಜನಕಾರಿ ಎಂಬುದನ್ನು ವೈದ್ಯರು ಸಾಮಾನ್ಯವಾಗಿ ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಮನೆಯಲ್ಲಿಯೇ ತಯಾರಿಸಿದ ಜ್ಯೂಸ್‍ಗಳು, ಹೊರಗೆ ಸಿಗುವ ಜ್ಯೂಸ್‍ಗಳಿಗಿಂತ ಎಲ್ಲಾ ರೀತಿಯಿಂದಲೂ ಉತ್ತಮ ಮತ್ತು ಆರೋಗ್ಯಕರ (Healthy). ಏಕೆಂದರೆ ಹೊರಗೆ ಸಿಗುವ ಜ್ಯೂಸ್‍ಗೆ ಬಳಸುವ ಹಣ್ಣು ಮತ್ತು ನೀರಿನ ಗುಣಮಟ್ಟ ಅತ್ಯುತ್ತಮ ಆಗಿರುತ್ತದೆ ಎಂಬ ಬಗ್ಗೆ ಖಾತರಿ ಇರುವುದಿಲ್ಲ ಮತ್ತು ಅದರಲ್ಲಿ ಸಕ್ಕರೆ ಪ್ರಮಾಣವೂ ಹೆಚ್ಚಿರುತ್ತದೆ.


ಜನರು ಸಾಮಾನ್ಯವಾಗಿ ಮನೆಯಲ್ಲಿಯೇ, ಮಿಕ್ಸರ್ ಉಯೋಗಿಸಿ ಜ್ಯೂಸ್ (Juice) ತಯಾರಿಸುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಮನೆಯಲ್ಲಿಯೇ ಜ್ಯೂಸ್ ತಯಾರಿಸುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ನಿರ್ಲಕ್ಷಿಸಿದರೆ ಅದರಿಂದ ನಿಮಗೆ ನಷ್ಟ ಖಂಡಿತ. ಏಕೆಂದರೆ ಹಾಗೆ ಮಾಡುವುದರಿಂದ ಜ್ಯೂಸ್‍ನ ರುಚಿ ಹಾಳಾಗುವುದು ಮಾತ್ರವಲ್ಲ, ಅದರ ಆರೋಗ್ಯಕರ ಅಂಶಗಳೂ ಕಡಿಮೆ ಆಗುತ್ತವೆ. ನೀವು ಬೆಳಗ್ಗಿನ ಉಪಾಹಾರದ ಜೊತೆ ಜ್ಯೂಸ್ ಸೇವಿಸುತ್ತೀರಾದರೆ, ಮನೆಯಲ್ಲಿ ಜ್ಯೂಸ್ ತಯಾರಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ.


Read Also⇒ Yoga: ನಿಮಗೆ ಎಷ್ಟೇ ವಯಸ್ಸಾದರೂ ಚಿಕ್ಕವರಂತೆ ಕಾಣಬೇಕಾ..? ಹಾಗಾದರೆ ಇದನ್ನು ಟ್ರೈ ಮಾಡಿ ನೋಡಿ

♦. ಮನೆಯಲ್ಲಿ ಮಿಕ್ಸರ್‌ನಲ್ಲಿ ಜ್ಯೂಸ್ ತೆಗೆಯುವಾಗ, ಮಿಕ್ಸರ್ ಅತೀ ಹೆಚ್ಚು ಬಿಸಿ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಜ್ಯೂಸರ್‌ನಲ್ಲಿನ ಅಧಿಕ ತಾಪಮಾನ, ಜ್ಯೂಸ್‍ನಲ್ಲಿ ಬಳಸಲಾದ ಹಣ್ಣು ಮತ್ತು ತರಕಾರಿಗಳಲ್ಲಿನ ಪೌಷ್ಟಿಕಾಂಶಗಳ ನಷ್ಟಕ್ಕೆ ಕಾರಣವಾಗಬಹುದು. ಆ ಮೂಲಕ ಜ್ಯೂಸ್‍ನಲ್ಲಿನ ಆರೋಗ್ಯಕರ ಅಂಶಗಳು ಕಡಿಮೆ ಆಗುತ್ತವೆ.


♦ ನೀವು ಕುಡಿಯುವ ಜ್ಯೂಸ್ ಸಾಧಾರಣ ತಾಪಮಾನ ಹೊಂದಿರಲಿ. ಅದು ಅತಿ ತಣ್ಣಗೂ ಇರಬಾರದು ಅಥವಾ ಅತಿ ಬಿಸಿಯೂ ಇರಬಾರದು.


♦ ನೆನಪಿಡಿ, ತಾಜಾ ಹಣ್ಣಿನ ರಸವನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ, ಅದರಿಂದ ಜ್ಯೂಸ್‍ನಲ್ಲಿರುವ ಪೌಷ್ಟಿಕಾಂಶಗಳು ಕಡಿಮೆ ಆಗಬಹುದು.


♦ ನೀವು ತಯಾರಿಸುವ ಜ್ಯೂಸ್‍ಗೆ ಸಕ್ಕರೆ ಹಾಕಬೇಡಿ, ಏಕೆಂದರೆ ಹಣ್ಣುಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ನೈಸರ್ಗಿಕ ಸಕ್ಕರೆ ಇರುತ್ತದೆ.


♦ ಅತ್ಯಂತ ಸಿಹಿ ಉಳ್ಳ ಹಣ್ಣಿನ ಜ್ಯೂಸನ್ನು ಅಧಿಕವಾಗಿ ಸೇವಿಸಲೇಬೇಡಿ. ಅದು ನಿಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡುತ್ತದೆ.


♦ ಆರೋಗ್ಯದಿಂದ ಇರಬೇಕು ಎಂದರೆ, ತರಕಾರಿಗಳ ಜ್ಯೂಸ್ ಸೇವನೆಗೆ ಮೊದಲ ಆದ್ಯತೆ ಕೊಡಿ. ಅವು ಸಪ್ಪೆಯಾಗಿರುತ್ತವೆ ನಿಜ. ಹಾಗಂತ ಅವುಗಳ ರುಚಿ ಹೆಚ್ಚಿಸಬೇಕೆಂದು ಉಪ್ಪು ಅಥವಾ ಯಾವುದೇ ರೀತಿಯ ಮಸಾಲೆಯನ್ನು ಸೇರಿಸಬೇಡಿ.


♦ ಹಣ್ಣುಗಳ ಜ್ಯೂಸ್ ತಯಾರಿಸುವ ಮೊದಲು, ಅವುಗಳಲ್ಲಿನ ಬೀಜವನ್ನು ತೆಗೆಯಲು ಮರೆಯದಿರಿ. ಏಕೆಂದರೆ ಅವುಗಳಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಲಾಭವಿಲ್ಲ, ಜೊತೆಗೆ ಅವು ನೀವು ತಯಾರಿಸಿದ ಜ್ಯೂಸ್‍ ರುಚಿಯನ್ನೂ ಹಾಳು ಮಾಡುತ್ತವೆ.


♦ ಕಹಿಯಾದ ಹಸಿರು ತರಕಾರಿಗಳನ್ನು ಜ್ಯೂಸ್‍ಗೆ ಸೇರಿಸುವುದರಿಂದ, ಅದರ ರುಚಿ ಹಾಳಾಗುತ್ತದೆ ಮತ್ತು ಅದನ್ನು ಸೇವಿಸುವುದು ಕಷ್ಟವಾಗುತ್ತದೆ.


First published: