Arranged Marriage: ಮದುವೆಯಾದವರು ಈ ಟಿಪ್ಸ್​​ ಫಾಲೋ ಮಾಡಿದ್ರೆ ಸಾಕು, ನಿಮ್ಮ ಬದುಕು ಬಂಗಾರವಾಗುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮದುವೆ ಎಂದರೆ ನಿಮ್ಮ ಅಸ್ತಿತ್ವದ ಅಂತ್ಯ ಎಂದರ್ಥವಲ್ಲ. ಇದು ನಿಮ್ಮ ಜೀವನದಲ್ಲಿ ಹೊಚ್ಚ ಹೊಸ ಹಂತದ ಆರಂಭವನ್ನು ಸೂಚಿಸುತ್ತದೆ. ನೀವು ಇಲ್ಲಿಯವರೆಗೆ ಸಾಧಿಸಿದ ಎಲ್ಲವನ್ನೂ ಬಿಟ್ಟುಕೊಡಬೇಡಿ.

  • Share this:

ಮದುವೆಗಳು (Marriage) ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತವೆ ಅಂತ ಹೇಳುವುದನ್ನು ನಾವು ಅನೇಕ ಬಾರಿ ಹಿರಿಯರ ಬಾಯಲ್ಲಿ ಕೇಳಿರುತ್ತೇವೆ. ಹೌದು ಯಾರಿಗೆ ಯಾರು ಜೋಡಿ (Couple) ಅಂತ ಮೊದಲೇ ನಿಶ್ಚಯವಾಗಿರುತ್ತದೆ ಅಂತ ಅನೇಕರು ನಂಬುತ್ತಾರೆ ಮತ್ತು ಹಿರಿಯರು ನೋಡಿ ಮಾಡಿದ ಮದುವೆಗಳು ಅದಕ್ಕೆ ಸಾಕ್ಷಿ ಅಂತ ಹೇಳುತ್ತಾರೆ. ತುಂಬಾ ಹಿಂದೆಯಿಂದಲೂ ಪ್ರೇಮ (Love) ವಿವಾಹ ಮತ್ತು ನಿಶ್ಚಯ ಮಾಡಿ ಮಾಡಿದ ವಿವಾಹದಲ್ಲಿ ಯಾವುದು ಉತ್ತಮ ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ ಉತ್ತಮವಾದುದ್ದು ಯಾವ ಜೋಡಿಗಳಲ್ಲಿ ಪ್ರೀತಿ, ಪ್ರೇಮ, ನಂಬಿಕೆ ಮತ್ತು ಗೌರವ ಇರುತ್ತದೆಯೋ ಆ ಜೋಡಿ ಬೆಸ್ಟ್ ಅಂತ ಹೇಳಬಹುದು.


ಮದುವೆ ಯಾವುದೇ ಆಗಿರಲಿ, ಗಂಡ-ಹೆಂಡತಿ ಇಬ್ಬರಲ್ಲೂ ಪರಸ್ಪರ ಒಳ್ಳೆಯ ಬಾಂಧವ್ಯ ಇದ್ದರೆ ಮಾತ್ರ ಅದು ಒಳ್ಳೆಯ ಸಂಸಾರ ಅಂತ ಅನ್ನಿಸಿಕೊಳ್ಳುತ್ತದೆ. ಇಂತಹ ಜೋಡಿಗಳು ಧೀರ್ಘಕಾಲದವರೆಗೂ ಬಾಂಧವ್ಯದಲ್ಲಿ ಇರುತ್ತವೆ ಅಂತ ಹೇಳಬಹುದು.


ಗಂಡ ಮತ್ತು ಹೆಂಡತಿಯರ ಮಧ್ಯೆ ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಮತ್ತು ನಂಬಿಕೆ ಇದ್ದರೆ ಮಾತ್ರವೇ ಸಂಬಂಧ ಗಟ್ಟಿಯಾಗಿರುತ್ತದೆ ಅಂತ ಹೇಳಬಹುದು. ಅದಕ್ಕಾಗಿಯೇ ಇಬ್ಬರು ತಮ್ಮ ತಮ್ಮ ಸಂಗಾತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸ್ವಲ್ಪ ಹೆಚ್ಚುವರಿ ಪ್ರಯತ್ನದ ಅಗತ್ಯವಿದೆ. ನಿಮ್ಮ ಸಂಗಾತಿಯೊಂದಿಗೆ ಸುಂದರವಾದ ಬಂಧವನ್ನು ರೂಪಿಸಲು ನಿಮಗೆ ಮಾರ್ಗದರ್ಶನ ನೀಡಲು ನಾವು 5 ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ ನೋಡಿ.


ಇದನ್ನೂ ಓದಿ: Raja Yoga: ಬರೋಬ್ಬರಿ 617 ವರ್ಷಗಳ ನಂತರ ಅಪರೂಪದ ಸಂಯೋಗ, ಹಣ, ಐಶ್ವರ್ಯ ಹುಡುಕಿ ಬರುತ್ತೆ


ಸೀಕ್ರೆಟ್‌ಗಳನ್ನು ಹಂಚಿಕೊಳ್ಳಿ


ನಿಮ್ಮ ಸಂಗಾತಿಯೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದು ನಂಬಿಕೆ ಮತ್ತು ಪರಸ್ಪರ ಹೊಂದಾಣಿಕೆಯನ್ನು ಬೆಳೆಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು ಮತ್ತು ನಿಮ್ಮ ಸಂಗಾತಿಗೆ ಅವರದ್ದೇ ಆದ ಒಂದು ಸ್ಥಳಾವಕಾಶ ನೀಡುವುದು ಯಾವುದೇ ಯಶಸ್ವಿ ಸಂಬಂಧದ ಮೆಟ್ಟಿಲು ಆಗುತ್ತದೆ. ನಿಮ್ಮ ಸಂಬಂಧವು ತಿಳುವಳಿಕೆಯ ಕೊರತೆಯನ್ನು ಹೊಂದಿದೆ ಎಂದು ನೀವು ಭಾವಿಸಿದರೆ ಪರಸ್ಪರ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಿರಿ. ಈ ರೀತಿಯಾಗಿ, ನೀವಿಬ್ಬರೂ ಪರಸ್ಪರ ಇನ್ನಷ್ಟು ಹತ್ತಿರವಾಗುತ್ತೀರಿ.


ಸಂಗಾತಿಯ ಜೊತೆಗೆ ಹೊರಗೆ ಹೋಗಿ


ನಿಮ್ಮ ಮನೆಯಲ್ಲಿ ನೀವಿಬ್ಬರೂ ಹೇಗೆ ಮಾತಾಡುತ್ತೀರಿ ಎಂಬುದನ್ನು ನಿಮ್ಮ ಪೋಷಕರು ಯಾವಾಗಲೂ ನೋಡುತ್ತಿರಬಹುದು. ಆದ್ದರಿಂದ, ಬಲವಾದ ಬಂಧವನ್ನು ಬೆಳೆಸಿಕೊಳ್ಳಲು, ನೀವಿಬ್ಬರೂ ಸ್ವಲ್ಪ ಏಕಾಂಗಿ ಸಮಯವನ್ನು ಹಂಚಿಕೊಳ್ಳಬೇಕು. ನಿಮ್ಮ ಮನೆಯಿಂದ ದೂರ ಹೋಗಿ ನಿಮ್ಮ ಸಂಗಾತಿಯೊಂದಿಗೆ ಸಮಾಯ ಕಳೆಯಿರಿ. ಇದು ಥಿಯೇಟರ್, ಮನರಂಜನಾ ಪಾರ್ಕ್ ಅಥವಾ ಕಾಫಿ ಶಾಪ್ ನಲ್ಲಿಯೂ ಇರಬಹುದು. ಇದು ನಿಮ್ಮಿಬ್ಬರಿಗೂ ಪರಸ್ಪರರ ಆದ್ಯತೆಗಳು, ಆಯ್ಕೆಗಳು ಮತ್ತು ಹೆಚ್ಚಿನದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.




ಗಂಡ-ಹೆಂಡತಿ ಒಳ್ಳೆಯ ಸಮಯವನ್ನು ಕಳೆಯಿರಿ


ಡೇಟಿಂಗ್ ಗೆ ಹೋಗುವುದು ಸಾಮಾನ್ಯವಾಗಿ ವಿನೋದಮಯವಾಗಿದ್ದರೂ, ಮನೆಯಲ್ಲಿ ಕೂತು ಇಬ್ಬರು ಆಟಗಳನ್ನು ಆಡುವುದು, ರೊಮ್ಯಾಂಟಿಕ್ ಸ್ಕ್ರ್ಯಾಬಲ್ ನಂತಹ ಆಟಗಳು ನಿಮಗೆ ಮತ್ತು ನಿಮ್ಮ ಸಂಗಾತಿಯನ್ನು ಇನ್ನಷ್ಟು ಹತ್ತಿರಕ್ಕೆ ತರಲು ಸಹಾಯ ಮಾಡುತ್ತದೆ. ಪ್ರತಿಯೊಂದು ಸಣ್ಣ ಕಾರ್ಯಕ್ಕಾಗಿ ಒಬ್ಬರಿಗೊಬ್ಬರು "ಧನ್ಯವಾದಗಳು" ಹೇಳಲು ಎಂದಿಗೂ ಮರೆಯಬೇಡಿ. ನಮ್ರತೆ ಮತ್ತು ಸಹಾನುಭೂತಿ ಪ್ರೀತಿಯ ನಿರ್ಣಾಯಕ ಅಂಶಗಳಾಗಿದ್ದರೂ, ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರಿ ಎಂದು ನೀವು ಭಾವಿಸಿದರೆ ನೀವು ತಕ್ಷಣ ಕ್ಷಮೆಯಾಚಿಸಬೇಕು.


ಸಂಬಂಧದಲ್ಲಿ ನೀವು ನೀವಾಗಿರಿ


ನಿಮ್ಮ ಸಂಗಾತಿಯ ಮನಸ್ಸನ್ನು ನೀವು ಗೆಲ್ಲಲು, ಬೇರೊಬ್ಬರಂತೆ ನಟಿಸುವ ಅವಶ್ಯಕತೆ ಇಲ್ಲ. ವಾಸ್ತವದಲ್ಲಿ ನೀವು ಹೇಗಿದ್ದಿರೋ, ಹಾಗೆ ಇರುವುದು ಒಳ್ಳೆಯದು. ನೀವು ಬೇರೆಯವರ ಮಾತನ್ನು ಕೇಳಿಕೊಂಡು ಅಥವಾ ಬೇರೆಯವರ ರೀತಿಯಲ್ಲಿ ವರ್ತಿಸುವುದರಿಂದ ನೀವು ನಿಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಬಹುದು. ನೀವು ನಿಮಗೆ ನಿಷ್ಠರಾಗಿದ್ದರೆ, ಎದುರಿಗಿರುವ ವ್ಯಕ್ತಿಯು ನೀವು ಹೇಗೆ ಅಂತ ಅರ್ಥ ಮಾಡಿಕೊಂಡು ನಿಮ್ಮನ್ನು ಸ್ವೀಕರಿಸುತ್ತಾರೆ.


ನಿಮ್ಮ ಸಂಗಾತಿಯ ಗುರಿಗಳಿಗೆ ಆದ್ಯತೆ ನೀಡಿ


ಮದುವೆ ಎಂದರೆ ನಿಮ್ಮ ಅಸ್ತಿತ್ವದ ಅಂತ್ಯ ಎಂದರ್ಥವಲ್ಲ. ಇದು ನಿಮ್ಮ ಜೀವನದಲ್ಲಿ ಹೊಚ್ಚ ಹೊಸ ಹಂತದ ಆರಂಭವನ್ನು ಸೂಚಿಸುತ್ತದೆ. ನೀವು ಇಲ್ಲಿಯವರೆಗೆ ಸಾಧಿಸಿದ ಎಲ್ಲವನ್ನೂ ಬಿಟ್ಟುಕೊಡಬೇಡಿ. ಆ ಕಾರಣದಿಂದಾಗಿ, ನಿಮ್ಮ ಸಂಗಾತಿಯೂ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ. ಇದನ್ನು ಅನುಸರಿಸಲು ನಿಮ್ಮ ಸಂಗಾತಿಯನ್ನು ಪ್ರೋತ್ಸಾಹಿಸಿ. ನಿಮ್ಮ ಪ್ರೇರಣೆ ಮತ್ತು ಪ್ರೋತ್ಸಾಹವು ನೀವಿಬ್ಬರೂ ಹತ್ತಿರವಾಗಲು ಸಹಾಯ ಮಾಡಬಹುದು.

First published: