• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Relationship Tips: ಸುಖ ಸಂಸಾರಕ್ಕೆ ಸೂತ್ರಗಳೇನು? 21 ವರ್ಷಕ್ಕೆ ಮದುವೆಯಾದ ಯುವಜೋಡಿ ಟಿಪ್ಸ್ ಕೊಟ್ಟಿದ್ದಾರೆ ನೋಡಿ

Relationship Tips: ಸುಖ ಸಂಸಾರಕ್ಕೆ ಸೂತ್ರಗಳೇನು? 21 ವರ್ಷಕ್ಕೆ ಮದುವೆಯಾದ ಯುವಜೋಡಿ ಟಿಪ್ಸ್ ಕೊಟ್ಟಿದ್ದಾರೆ ನೋಡಿ

ಲೊರೈನ್ ಫೆರ್ನಾಂಡೀಸ್ , ಪತಿ ಜೋಲಾನ್‌

ಲೊರೈನ್ ಫೆರ್ನಾಂಡೀಸ್ , ಪತಿ ಜೋಲಾನ್‌

21 ರ ಹರೆಯದಲ್ಲೇ ವಿವಾಹವಾಗಿ ದಾಂಪತ್ಯವೆಂಬ ಸರಿಗಮದಲ್ಲಿ ತಾಳ ತಪ್ಪದೇ ಅನುರೂಪವಾಗಿ ಸಂಸಾರ ನಡೆಸುತ್ತಿರುವ ಅನೇಕ ಜೋಡಿಗಳು ಈ ಸಮಾಜದಲ್ಲಿದ್ದಾರೆ. ಈ ಜೋಡಿಗಳು ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವಲ್ಲಿ ವಿಷಾದ ಹೊಂದಿದವರಲ್ಲ ಬದಲಿಗೆ ತಮ್ಮ ಜೀವನದಲ್ಲಿ ದೊರೆತ ಸಂಪತ್ತು ಎಂದೇ ಪತಿ ಹಾಗೂ ಪತ್ನಿ ಪರಸ್ಪರರನ್ನು ಕರೆದುಕೊಳ್ಳುತ್ತಾರೆ.

ಮುಂದೆ ಓದಿ ...
 • Share this:

ವಿವಾಹವೆಂಬುದು (Marriage) ಸ್ವರ್ಗದಲ್ಲೇ ನಿಶ್ಚಯಿಸಿದ ನಂಟು ಎಂಬ ಮಾತಿದೆ. ಆದರೆ ವಿವಾಹವನ್ನು ಜೀವನ ಪರ್ಯಂತದ ಸುಂದರ ಅನುಭವವಾಗಿಸುವುದು ಪತಿ, ಪತ್ನಿ (Husband And Wife) ನಿರ್ಧರಿಸುವ ಅಂಶವಾಗಿದೆ. ಹುಡುಗ ಹಾಗೂ ಹುಡುಗಿ ಪ್ರಾಪ್ತ ವಯಸ್ಕಾರಾದ ಮೇಲೆ ವಿವಾಹ ಸಂಪನ್ನಗೊಳಿಸುವುದು ಸಾಮಾನ್ಯವಾಗಿ ನಡೆಯುವ ಪದ್ಧತಿಯಾಗಿದೆ. ಸಂಸಾರವೆಂಬ (Family) ಬಾಳ ಬಂಡಿಯಲ್ಲಿ ಪತಿ ಪತ್ನಿ ಒಬ್ಬರನ್ನೊಬ್ಬರು ಅರಿತುಕೊಂಡು ಸಾಗಬೇಕು ಎಂಬ ಕಾರಣಕ್ಕಾಗಿಯೇ ವಯಸ್ಸಿನ ನಿರ್ಬಂಧವನ್ನು ನಿಗದಿಪಡಿಸಿರುತ್ತಾರೆ ಎಂಬುದು ಹಿರಿಯರ ಮಾತಾಗಿದೆ.


ಹದಿ ಹರೆಯದಲ್ಲೇ ವಿವಾಹಿತರಾಗುವುದು ಸೂಕ್ತವೇ?


ಆದರೆ ತಮ್ಮ 21 ರ ಹರೆಯದಲ್ಲೇ ವಿವಾಹವಾಗಿ ದಾಂಪತ್ಯವೆಂಬ ಸರಿಗಮದಲ್ಲಿ ತಾಳ ತಪ್ಪದೇ ಅನುರೂಪವಾಗಿ ಸಂಸಾರ ನಡೆಸುತ್ತಿರುವ ಅನೇಕ ಜೋಡಿಗಳು ಈ ಸಮಾಜದಲ್ಲಿದ್ದಾರೆ. ಈ ಜೋಡಿಗಳು ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವಲ್ಲಿ ವಿಷಾದ ಹೊಂದಿದವರಲ್ಲ ಬದಲಿಗೆ ತಮ್ಮ ಜೀವನದಲ್ಲಿ ದೊರೆತ ಸಂಪತ್ತು ಎಂದೇ ಪತಿ ಹಾಗೂ ಪತ್ನಿ ಪರಸ್ಪರರನ್ನು ಕರೆದುಕೊಳ್ಳುತ್ತಾರೆ.


ಲೊರೈನ್ ಫೆರ್ನಾಂಡೀಸ್ , ಪತಿ ಜೋಲಾನ್‌


ವಿವಾಹದಲ್ಲಿ ಮುಖ್ಯವಾಗಿ ಬೇಕಾಗಿರುವುದು ಒಬ್ಬರನ್ನೊಬ್ಬರು ಅರಿತುಕೊಂಡು ಸಾಗಬೇಕಾಗಿರುವುದು ಎಂದು ತಿಳಿಸಿರುವ ದಂಪತಿಗಳು ಐಷಾರಾಮಿ ರೆಸಾರ್ಟ್ ಇಲ್ಲವೇ ಹೋಟೆಲ್‌ಗೆ ಹೋಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವುದೇ ನಿಜವಾದ ಪ್ರೀತಿಯಲ್ಲ ಬದಲಿಗೆ ಜೀವನ ಪೂರ್ತಿ ಜೊತೆಯಾಗಿರುವ ವಾಗ್ಧಾನ ನೀಡುವುದೇ ದಾಂಪತ್ಯದ ಗುಟ್ಟು ಎಂಬ ಸಂದೇಶ ಸಾರಿದ್ದಾರೆ.


ಪತಿಯೇ ನನ್ನ ಬೆಸ್ಟ್ ಫ್ರೆಂಡ್ ಲೊರೈನ್ ಫೆರ್ನಾಂಡೀಸ್


35 ರ ಹರೆಯದ ಲೊರೈನ್ ಫೆರ್ನಾಂಡೀಸ್ ತಮ್ಮ ಪತಿ ಜೋಲಾನ್‌ರೊಂದಿಗೆ ವಿವಾಹ ಬಂಧನಕ್ಕೆ ಒಳಪಟ್ಟು ಬರೋಬ್ಬರು 15 ವರ್ಷಗಳಾಗಿದೆ. ಇವರಿಬ್ಬರೂ ತಮ್ಮ 5 ರ ಹರೆಯದಿಂದಲೇ ಪರಿಚಿತರು. ಆದರೆ ಅಷ್ಟೊಂದು ನಿಕಟ ಸ್ನೇಹಿತರಾಗಿರಲಿಲ್ಲ. ಆದರೆ ಸಮಯ ಹಾಗೂ ಸಂದರ್ಭ ಇವರಿಬ್ಬರನ್ನೂ ಹತ್ತಿರಗೊಳಿಸಿತ್ತು. ಇಬ್ಬರೂ ತಮ್ಮ ಇಷ್ಟವನ್ನು ಪರಸ್ಪರ ತಿಳಿಸಲು ಆತುರಪಡಲಿಲ್ಲ. ಬದಲಿಗೆ ಸ್ನೇಹಿತರಾಗಿಯೇ ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳಲು ಆರಂಭಿಸಿದರು.


ಲೊರೈನ್ ಫೆರ್ನಾಂಡೀಸ್ , ಪತಿ ಜೋಲಾನ್‌


ಪರಸ್ಪರ ಚೆನ್ನಾಗಿ ಅರಿತ ನಂತರವೇ ನಾವಿಬ್ಬರು ವಿವಾಹ ಬಂಧನಕ್ಕೆ ಒಳಗಾಗಿದ್ದು ಎಂದು ತಿಳಿಸಿರುವ ಲೊರೈನ್ 21 ರ ಹರೆಯದಲ್ಲೇ ವಿವಾಹಿತರಾದರು. ನಾವಿಬ್ಬರೂ ಆನಂದದಿಂದಲೇ ನಮ್ಮ ದಾಂಪತ್ಯ ಜೀವನವನ್ನು ಮುನ್ನಡೆಸುತ್ತಿದ್ದೇವೆ ಎಂದು ತಿಳಿಸುವ ಲೊರೈನ್ ದಂಪತಿಗಳು ಬೆಟ್ಟದಷ್ಟು ಪ್ರೀತಿ ಪರಸ್ಪರರ ಬಗೆಗೆ ಕಾಳಜಿಯೇ ದಾಂಪತ್ಯದ ಅಡಿಪಾಯ ಎಂದು ತಿಳಿಸಿದ್ದಾರೆ.


ಜೀವನದಲ್ಲಿ ಬಂದ್ದನ್ನು ಬಂದ ಹಾಗೆಯೇ ಸ್ವೀಕರಿಸುವುದು ನಮ್ಮ ಸಂತೋಷದ ಗುಟ್ಟು ಎಂದು ಲೊರೈನ್ ತಿಳಿಸಿದ್ದು, ನಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲ ತೋರಿಕೆಯ ಪ್ರೀತಿಗೆ ಆಸ್ಪದವೇ ಇಲ್ಲ ಎಂದು ಹೇಳುತ್ತಾರೆ.


ಲೊರೈನ್ ಫೆರ್ನಾಂಡೀಸ್ , ಪತಿ ಜೋಲಾನ್‌


ದಂಪತಿಗಳು ಪರಸ್ಪರರನ್ನು ಅರಿತುಕೊಳ್ಳಬೇಕು


27 ರ ಹರೆಯದ ತಸ್ನೀಮ್ ಅಯಾಜ್ ಕೂಡ ಹಿರಿಯರು ನಿಶ್ಚಯಿಸಿದ ವರನನ್ನು ಮೆಚ್ಚಿ ಅರಿತುಕೊಂಡು ವಿವಾಹಿತರಾದವರು. ಏಳು ವರ್ಷಗಳ ಅನುರೂಪ ದಾಂಪತ್ಯದಲ್ಲಿ ನಾನು ಯಾಕಾದರೂ ಇಷ್ಟು ಬೇಗ ವಿವಾಹವಾದೆ ಎಂದು ಅನ್ನಿಸಿದ್ದೇ ಇಲ್ಲ ಎಂದು ತಸ್ನೀಮ್ ತಿಳಿಸುತ್ತಾರೆ. ತಸ್ನೀಮ್‌ಗೆ ಉದ್ಯೋಗ ಹಾಗೂ ವೈವಾಹಿಕ ಜೀವನ ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕೆಂಬ ಬಯಕೆ ಇತ್ತು. ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂಬ ಆಸೆ ಇತ್ತು. ಇದನ್ನೇ ತಮ್ಮ ಭಾವೀ ಪತಿಗೆ ಅವರು ತಿಳಿಸಿದ್ದಾರೆ.


ತಾವು ಹದಿ ಹರೆಯದಲ್ಲಿಯೇ ವಿವಾಹಿತರಾಗಿದ್ದು ತಮಗೆ ಈ ಬೇಸರ ಎಂಬುದು ಜೀವನದಲ್ಲಿ ಒಂದು ಬಾರಿಯೂ ಉಂಟಾಗಿದ್ದಿಲ್ಲ ಎಂಬುದು ತಸ್ನೀಮ್ ಮಾತಾಗಿದೆ. ತಮ್ಮ ಪತಿ ನೀಡುವ ಸಹಕಾರವೇ ಇದಕ್ಕೆ ಕಾರಣ ಎಂದು ತಸ್ನೀಮ್ ಹೇಳುತ್ತಾರೆ. ನಾವಿಬ್ಬರೂ ಗಂಡ ಹೆಂಡತಿಗಿಂತ ಸ್ನೇಹಿತರಾಗಿಯೇ ಒಡನಾಟ ಹೆಚ್ಚು ಎಂದು ತಸ್ನೀಮ್ ಹೇಳಿದ್ದಾರೆ.
ಇದನ್ನೂ ಓದಿ:  Feng Shui Tips: ಸುಖ ಸಂಸಾರಕ್ಕೆ ಎಂಟು ಸೂತ್ರಗಳು; ಹೀಗೆ ಮಾಡಿದ್ರೆ ಗಂಡ-ಹೆಂಡ್ತಿ ಮಧ್ಯೆ ಜಗಳ ಆಗಲ್ಲವಂತೆ!


ವಿವಾಹಕ್ಕೆ ವಯಸ್ಸಿನ ಹಂಗಿಲ್ಲ

top videos


  ವಿವಾಹಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ ಎಂಬುದನ್ನು ತಿಳಿಸಿರುವ ಈ ದಂಪತಿಗಳು ಮದುವೆಯಾಗಲು ವಯಸ್ಸಿನ ಸಮ್ಮತಿ ಬೇಡ ನಿಮ್ಮ ಮನಸ್ಸಿನ ಸಮ್ಮತಿ ಕೇಳಿ ಎಂಬ ಸಲಹೆ ನೀಡುತ್ತಾರೆ. ಈ ಸಂಗಾತಿ ನಿಮಗೆ ಸೂಕ್ತ ಎಂಬುದು ಮನಸ್ಸಿಗೆ ಬಂದೊಡನೆ ಹಾಗೂ ಇವರೊಂದಿಗೆ ಮುಂದಿನ ಜೀವನ ಸಾಧ್ಯ ಎಂಬುದು ಫಿಕ್ಸ್ ಆದ ಕೂಡಲೇ ತಡಮಾಡಬೇಡಿ ಎಂಬ ಕಿವಿಮಾತು ನೀಡುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ತಪ್ಪಲ್ಲ ಎಂಬುದು ಜೋಡಿಗಳ ಮಾತಾಗಿದೆ.

  First published: