HOME » NEWS » Lifestyle » MARCH 2 ZODIAC SIGN ASTROLOGY SESR

Astrology: ಮಂಗಳವಾರದ ಈ ದಿನ ಯಾವ ರಾಶಿ ಫಲ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಮಾಘ ಮಾಸದ ಕೃಷ್ಣ ಪಕ್ಷ ಬಿದಿಗೆಯ ಈ ದಿನದಂದು ಯಾವ ರಾಶಿಗೆ ಯಾವ ಶುಭ ಫಲ ಇಲ್ಲಿದೆ ಮಾಹಿತಿ

news18-kannada
Updated:March 2, 2021, 7:05 AM IST
Astrology: ಮಂಗಳವಾರದ ಈ ದಿನ ಯಾವ ರಾಶಿ ಫಲ ಹೇಗಿದೆ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ
ಮಾಘ ಮಾಸದ ಕೃಷ್ಣ ಪಕ್ಷ ಬಿದಿಗೆಯ ಈ ದಿನದಂದು ಯಾವ ರಾಶಿಗೆ ಯಾವ ಶುಭ ಫಲ ಇಲ್ಲಿದೆ ಮಾಹಿತಿ
  • Share this:
ಭೂಮಿಯ ವಿಚಾರದಲ್ಲಿ ಲಾಭಾವಾಗಲಿದೆ. ರಿಯಲ್​ ಎಸ್ಟೇಟ್​ ಉದ್ಯಮಿಗಳಿಗೆ ಇಂದು ಉತ್ತಮ ದಿನ. ಭೂಮಿಯನ್ನು ಕೊಳ್ಳುವ, ಮಾರುವ ಬಗ್ಗೆ ಹಲವು ದಿನಗಳಿಂದ ಯೋಚಿಸುತ್ತಿದ್ದರೆ ಇಂದು ಉತ್ತಮ ದಿನ. ಇಂದು ಭೂ ವರಹಾ ಸ್ವಾಮಿ ಪೂಜಿಸಿದರೆ ಒಳಿತು


ಹೊಸ ವ್ಯಾಪಾರ ವ್ಯವಹಾರ ಮಾಡಲು ಇದು ಸಕಾಲ. ಇಂದಿನ ವ್ಯವಹಾರ ಹೆಚ್ಚಿನ ಲಾಭಾ ತರಲಿದೆ. ನಿಮ್ಮ ವ್ಯವಹಾರ ಆರಂಭ ಕಾಲದಲ್ಲಿ ಲಲಿತಾ ಪಾರಾಣಯ ಅಥವಾ ದುರ್ಗಾ ಪರಾಯಣ ಮಾಡಿದರೆ ಹೆಚ್ಚಿನ ಲಾಭಾ ಪಡೆಯಬಹುದು


ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸಣ್ಣ ಪುಟ್ಟ ಶಶ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಈ ಆರೋಗ್ಯ ಸಮಸ್ಯೆಗಳಿಂದ ಪಾರಾಗಲು ಧನ್ವಂತರಿ ನಾರಾಯಣ ಜಪಿಸಿ ಇದರಿಂದ ಹಣ, ಆರೋಗ್ಯ ಎರಡು ವೃದ್ಧಿಯಾಗಲಿದೆ


ಹಣಕಾಸ ವಿಚಾರದಲ್ಲಿ ಸುಧಾರಣೆಯಾಗಲಿದೆ. ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ಹಣ ಬರಲಿದೆ. ಹಣದ ಚೇತರಿಕೆ ಕಾಣಿಸುತ್ತದೆ. ಇಂದು ಲಕ್ಷ್ಮೀ ನಾರಾಯಣ ಪರಾಯಣ ಮಾಡಿದರೆ ಮತ್ತಷ್ಟು ಒಳಿತಾಗಲಿದೆ.


ಪಾಲುದಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಅಶುಭಗಳಾಗಲಿದೆ. ಈ ಹಿನ್ನಲೆ ಯಾವುದೇ ಮುಖ್ಯ ಮಾತುಕತೆ ಇದ್ದರೆ ಅವುಗಳನ್ನು ಮುಂದೂಡುವುದು ಒಳಿತು. ಈ ಸಮಸ್ಯೆ ಪರಿಹಾರಕ್ಕೆ ಅಶ್ವತ್ಥ ಕಟ್ಟೆಯಲ್ಲಿ 12 ಸುತ್ತು ಪ್ರದಕ್ಷಿಣೆ ಹಾಕಿ


ಇಂದು ನೀವು ಮಾಡುವ ಕಾರ್ಯ ವಿಕಲ್ಪವಾಗುವ ಸಾಧ್ಯತೆ ಇದೆ. ಚಂಚಲತೆ, ದ್ವಂದ್ವ ನಿಲುವುಗಳಿಂದ ಕೆಲಸ ಕಾರ್ಯ ಹಾಳಾಗುತ್ತದೆ. ಇದರಿಂದ ಯಾವುದೇ ಮುಖ್ಯ ಕೆಲಸವಾದರೂ ನಾಳೆಗೆ ಮುಂದೂಡಿ, ಹನುಮಾನ್ ಚಾಲೀಸಾ, ಆಂಜನೇಯ ಸ್ವಾಮಿ ದರ್ಶನದಿಂದ ಹೆಚ್ಚಿನ ಲಾಭಾ ಪಡೆಯಬಹುದು


ಕೆಲಸದ ವಿಚಾರದಲ್ಲಿ ವೈಮನಸ್ಸು ಉಂಟಾಗಲಿದೆ. ಉದ್ಯೋಗದಲ್ಲಿ ಜಾಗರುಕತೆವಹಿಸುವುದು ಅವಶ್ಯ. ಯಾವುದೇ ತೊಂದರೆ ನಿವಾರಣೆಗೆ ಗುರುವನ್ನು ಪ್ರಾರ್ಥನೆ ಮಾಡಿ ಈ ದಿನಾರಂಭಿಸಿದರೆ ಯಶ ಕಾಣಲಿದೆ
ಈ ದಿನ ವೃತ್ತ ಕಲಹ ಉಂಟಾಗಬಹುದು. ಅಥವಾ ಬೇರೆ ಜವಾಬ್ದಾರಿಗಳನ್ನು ನೀವು ಹೆಗಲ ಮೇಲೆ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಈ ಹಿನ್ನಲೆ ಯಾವುದೇ ತೊಂದರೆಯಾಗದಂತೆ ಬನ್ನಿ ಮರವನ್ನು 9 ಸುತ್ತು ಪ್ರದಕ್ಷಿಣೆ ಹಾಕಿ.


ಆಲಸ್ಯ, ನಿರಾಸಕ್ತಿಯಿಂದ ಈ ದಿನ ಕೂಡಿರುತ್ತದೆ. ಯಾವ ಕೆಲಸವು ಸರಿಯಾಗಿ ಆಗುವುದಿಲ್ಲ. ಇದರಿಂದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಪ್ಪು ಬಣ್ಣದ ಬಟ್ಟೆ ದಾನ ಮಾಡಿ. ಸ್ನಾನ ಮಾಡುವಾಗ ಅರಿಶಿಣ, ಉಪ್ಪು ಬೆರಸಿ ಮಾಡಿದರೆ ಆಲಸ್ಯ ದೂರಾಗಬಹುದು


ಕ್ಷೇತ್ರ ದರ್ಶನವಾಗುವ ಲಾಭಾವಾಗಲಿದೆ. ಈ ವೇಳೆ ಖರ್ಚಿನ ಮೇಲೆ ಹಿಡಿತವಿರಲಿ. ಪುಣ್ಯ ಕಾರ್ಯ, ದೇವರ ದರ್ಶನ ದಿಂದ ಉತ್ತಮ ಫಲ ಸಿಗಲಿದೆ. ಸಾಧ್ಯವಾದರೆ ಕುಲದೇವರ ದರ್ಶನ ಮಾಡಿ


ಮಿತ್ರರ ಆಗಮನದಿಂದ ಸಂತಸ ಹೆಚ್ಚಲಿದೆ. ಸ್ನೇಹಿತರಿಂದ ನಿಮ್ಮ ಜೀವನದಲ್ಲಿ ಹೆಚ್ಚಿನ ಲಾಭಾವಾಗಿ ಶುಭವಾಗಲಿದೆ


ಅಲಂಕಾರಿಕ ವಸ್ತುಗಳು ಹೆಚ್ಚು ಹಣ ವಿನಿಯೋಗವಾಗಲಿದೆ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹೆಚ್ಚಿನ ಖರ್ಚು ಆಗಲಿದ್ದು, ಮೋಸದಿಂದ ತೊಂದರೆಯಾಗಲಿದೆ. ಇದರ ನಿವಾರಣೆಗೆ ಲಕ್ಷ್ಮೀ ಸ್ತೋತ್ರ ಪರಾಯಣ ಮಾಡಿ
Published by: Seema R
First published: March 2, 2021, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories