ದೇಹದ (Body) ಅನೇಕ ಪ್ರಮುಖ ಕಾರ್ಯಗಳಿಗೆ (Main Works) ಸಹಾಯ ಮಾಡುವ ಹಾರ್ಮೋನುಗಳನ್ನು (Hormones) ಥೈರಾಯ್ಡ್ (Thyroid) ಗ್ರಂಥಿ ಬಿಡುಗಡೆ ಮಾಡುತ್ತದೆ. ಹಾಗಾಗಿ ಥೈರಾಯ್ಡ್ ಗ್ರಂಥಿಯ ಆರೋಗ್ಯ (Health) ಕಾಪಾಡುವುದು ತುಂಬಾ ಮುಖ್ಯ. ಥೈರಾಯ್ಡ್ ಗ್ರಂಥಿ ಎಂಬುದು ಕುತ್ತಿಗೆಯಲ್ಲಿರುವ ಒಂದು ಸಣ್ಣ ಅಂಗ ಆಗಿದೆ. ಇದರಿಂದ ಬಿಡುಗಡೆಯಾಗುವ ಹಾರ್ಮೋನುಗಳು ದೇಹದ ಅನೇಕ ಕೆಲಸ ಕಾರ್ಯಗಳನ್ನು ಮಾಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಥೈರಾಯ್ಡ್ ಸರಿಯಾಗಿ ಕೆಲಸ ಮಾಡದೇ ಹೋದರೆ, ಅದು ನಿಮ್ಮ ಇಡೀ ದೇಹದ ಮೇಲೆ ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ಆದರೆ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಇರದೇ ಹೋದ್ರೆ ಹಲವು ಕಾಯಿಲೆಗಳಿಗೆ (Diseases) ಕಾರಣ ಆಗುತ್ತದೆ.
ಥೈರಾಯ್ಡ್ ಗ್ರಂಥಿಯ ಆರೋಗ್ಯ ಕಾಪಾಡುವುದು ಹೇಗೆ?
ಥೈರಾಯ್ಡ್ ಗ್ರಂಥಿಯು ಪುರುಷರು ಮತ್ತು ಮಹಿಳೆಯರಲ್ಲಿ ಅಪಾಯಕಾರಿ ಆಗಿದೆ. ಥೈರಾಯ್ಡ್ ನಲ್ಲಿ ಅಸಮತೋಲನ ಉಂಟಾದರೆ ಅಯೋಡಿನ್ ಕೊರತೆ, ಸ್ವಯಂ ನಿರೋಧಕ ಕಾಯಿಲೆ, ಆನುವಂಶಿಕ ಅಸ್ವಸ್ಥತೆ, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ಉಂಟಾಗುತ್ತವೆ.
ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಥೈರಾಯ್ಡ್ ಕಾಯಿಲೆ ಹಲವು ವಿಧಗಳನ್ನು ಹೊಂದಿದೆ. ಇದು ಮುಖ್ಯವಾಗಿ ಹೈಪರ್ ಥೈರಾಯ್ಡಿಸಮ್, ಹೈಪೋಥೈರಾಯ್ಡಿಸಮ್, ಥೈರಾಯ್ಡಿಟಿಸ್ ಮತ್ತು ಹಶಿಮೊಟೊಸ್ ಥೈರಾಯ್ಡಿಟಿಸ್ ಎಂಬ ವಿಧಗಳನ್ನು ಹೊಂದಿದೆ.
ಈ ಎಲ್ಲಾ ವಿಧದ ಥೈರಾಯ್ಡ್ ಗಳ ರೋಗ ಲಕ್ಷಣಗಳು ಪರಸ್ಪರ ಹೆಚ್ಚಿನ ರೀತಿಯಲ್ಲಿ ಭಿನ್ನತೆ ಹೊಂದಿರುವುದಿಲ್ಲ. ಹಾಗಾಗಿ ಮನೆಯಲ್ಲೇ ನೀವು ಥೈರಾಯ್ಡ್ ಸಮಸ್ಯೆ ಕಡಿಮೆ ಮಾಡಲು ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಹೊಂದುವುದು ತುಂಬಾ ಮುಖ್ಯ.
ಅದರಲ್ಲಿ ಕೆಲವು ತೈಲಗಳು ಥೈರಾಯ್ಡ್ ಸಮಸ್ಯೆ ಕಡಿಮೆ ಮಾಡುವ ಶಕ್ತಿ ಹೊಂದಿವೆ. ಈ ಎಣ್ಣೆಗಳು ಎಲ್ಲಾ ರೀತಿಯ ಥೈರಾಯ್ಡ್ ಕಾಯಿಲೆ ನಿವಾರಣೆಗೆ ಪ್ರಯೋಜನಕಾರಿ ಆಗಿದೆ.
ಥೈರಾಯ್ಡ್ ಕಾಯಿಲೆ ಲಕ್ಷಣಗಳು ಯಾವುವು?
ಥೈರಾಯ್ಡ್ ಕಾಯಿಲೆಯು ಹೆದರಿಕೆ, ಕಿರಿಕಿರಿ, ಆಯಾಸ, ನಿದ್ರೆಯ ಕೊರತೆ, ತೂಕ ನಷ್ಟ, ತೂಕ ಹೆಚ್ಚಳ, ಸ್ನಾಯು ದೌರ್ಬಲ್ಯ, ಅನಿಯಮಿತ ಅಥವಾ ಭಾರೀ ಮುಟ್ಟಿನ ಅವಧಿ, ಕಣ್ಣಿನ ಸಮಸ್ಯೆ, ಮರೆವು, ಒಣ ಮತ್ತು ಒರಟು ಕೂದಲು ಸಮಸ್ಯೆ, ಕರ್ಕಶ ಧ್ವನಿ, ಶೀತ ಅಥವಾ ಶಾಖದ ಅಸಹಿಷ್ಣುತೆ ಉಂಟು ಮಾಡುತ್ತದೆ.
ಥೈರಾಯ್ಡ್ ನಿವಾರಣೆಗೆ ಲೆಮೊನ್ಗ್ರಾಸ್ ಎಣ್ಣೆ
ಲೆಮೊನ್ಗ್ರಾಸ್ ಎಣ್ಣೆಯು ತಾಜಾ ಪರಿಮಳ ಉರಿಯೂತ ಗುಣಲಕ್ಷಣ ಹೊಂದಿದೆ. ಇದು ಥೈರಾಯ್ಡ್ ಅಸಮತೋಲನಕ್ಕೆ ಸಂಬಂಧಿಸಿದ ಅಲರ್ಜಿ ಅಥವಾ ಉರಿಯೂತದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಥೈರಾಯ್ಡ್ ಸಮಸ್ಯೆ, ಗ್ರಂಥಿ ಊತ, ಹಿಗ್ಗಿದರೆ ಲೆಮೊನ್ಗ್ರಾಸ್ ಎಣ್ಣೆಯನ್ನು ಕುತ್ತಿಗೆ ಮೇಲೆ ಅನ್ವಯಿಸಿ.
ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆಯು ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ. ಆತಂಕ ನಿವಾರಿಸುತ್ತದೆ. ಖಿನ್ನತೆ ಕಡಿಮೆ ಮಾಡುತ್ತದೆ. ಇದು ಥೈರಾಯ್ಡ್ ಅಸಮತೋಲನ ಹೊಂದಿರುವ ಜನರಲ್ಲಿ ಸಾಮಾನ್ಯ ಲಕ್ಷಣ ಆಗಿದೆ.
ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಶ್ರೀಗಂಧದ ಎಣ್ಣೆ
ಶ್ರೀಗಂಧದ ಎಣ್ಣೆ ಹಚ್ಚಿದರೆ ಆತಂಕ ವಿರೋಧಿ, ಪ್ಯಾನಿಕ್ ಅಟ್ಯಾಕ್ ಅಥವಾ ಅತಿಯಾದ ಥೈರಾಯ್ಡ್ ಸಮಸ್ಯೆಗೆ ಸಂಬಂಧಿಸಿದ ಒತ್ತಡ ಸಮಸ್ಯೆ ನಿವಾರಣೆಗೆ ಸಹಕಾರಿ. ಈ ಎಣ್ಣೆಯು ಹೈಪೋಥೈರಾಯ್ಡಿಸಮ್ನಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆ ಮಾಡುತ್ತದೆ.
ಪುದೀನಾ ಎಣ್ಣೆ
ಪುದೀನಾ ಎಣ್ಣೆಯು ಕಳಪೆ ಜೀರ್ಣಕ್ರಿಯೆ, ದುರ್ಬಲ ಚಯಾಪಚಯ, ಮೂಡ್ ಸ್ವಿಂಗ್, ನಿಷ್ಕ್ರಿಯ ಥೈರಾಯ್ಡ್ ಸಂಬಂಧಿತ ರೋಗ ಲಕ್ಷಣ ಕಡಿಮೆ ಮಾಡುತ್ತದೆ. ಎಣ್ಣೆಯನ್ನು ನೀರಿಗೆ ಹಾಕಿ ಹಬೆ ತೆಗೆದುಕೊಂಡರೆ, ಹೊಕ್ಕುಳಿಗೆ ಲೇಪಿಸಿದರೆ ಪ್ರಯೋಜನಕಾರಿ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ಕಪ್ಪು ಮೆಣಸು ಎಣ್ಣೆ
ಕರಿಮೆಣಸು ಎಣ್ಣೆ ಹೈಪೋಥೈರಾಯ್ಡಿಸಮ್ ನಿಂದ ಉಂಟಾಗುವ ಆಯಾಸ ತಡೆಯುತ್ತದೆ. ಇದು ಉರಿಯೂತ, ಆತಂಕ, ಖಿನ್ನತೆ ಮತ್ತು ದೇಹದ ವಿಷಗಳ ವಿರುದ್ಧ ಹೋರಾಡುತ್ತದೆ. ಸಾರಭೂತ ತೈಲ ಸಹ ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ