ಕೆಲವೊಂದು ಸ್ಥಳಗಳು ಬಹಳ ವಿಶೇಷವಾಗಿರುತ್ತದೆ. ಅವುಗಳ ಇತಿಹಾಸ, (History) ಸೌಂದರ್ಯ ಎಲ್ಲರನ್ನು ಆಕರ್ಷಿಸುತ್ತದೆ. ಅಂತಹ ಒಂದು ಸ್ಥಳ ಸಕಲೇಶಪುರ (Sakaleshpura) . ನೀವು ಸಣ್ಣ ಟ್ರಿಪ್ ಹೋಗ್ಬೇಕು ಅಂದ್ರೆ ಮೊದಲು ನೆನಪಾಗೋದು ಸಕಲೇಶಪುರ. ಬೆಂಗಳೂರಿಗರ (Bengaluru) ಫೇವರೇಟ್ ಸ್ಥಳ ಇದು ಎನ್ನಬಹುದು. ನಿಮಗೆ ಈ ಊರಿನಲ್ಲಿ ನೋಡಲು ಹಲವಾರು ಜಾಗಗಳಿದೆ. ಆದರೆ ಎಲ್ಲರ ಬಾಯಲ್ಲಿ ಮೊದಲ ಬರುವುದು ಮಂಜರಾಬಾದ್ ಕೋಟೆ (manjarabad fort). ಈ ಕೋಟೆಯ ಆಕಾರವೇ ಒಂದು ವಿಶೇಷ. ಅದರಲ್ಲೂ ಈ ಕೋಟೆಯ ಮೂಲೆ ಮೂಲೆಗಳು ಒಂದೊಂದು ಕಥೆಗಳನ್ನು ಸಾರಿ ಹೇಳುತ್ತವೆ. ಈ ವಿಭಿನ್ನ ಕೋಟೆ ಇತಿಹಾಸ ಹಾಗೂ ಮಾಹಿತಿ ಇಲ್ಲಿದೆ.
ಮಾರ್ಗ ಮಧ್ಯೆ ಸಿಗುತ್ತದೆ ಈ ಸುಂದರ ಕೋಟೆ
ಸಕಲೇಶಪುರಕ್ಕೆ ಪ್ರವಾಸ ಹೊರಟಾಗ ಮಾರ್ಗ ಮಧ್ಯೆಯೇ ನಿಮಗೆ ಈ ಕೋಟೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇರುವ ಈ ಮಂಜರಾಬಾದ್ ಕೋಟೆಗೆ ನೀವು ವಿಸಿಟ್ ಮಾಡಿ, ವಿಹಂಗಮ ನೋಟವನ್ನು ಆನಂದಿಸಬಹುದು. ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪ ಶೈಲಿಯ ಈ ಕೋಟೆಯನ್ನು ನೋಡಲು ಟ್ರಕ್ಕಿಂಗ್ ಮಾಡಬೇಕು. ಟ್ರಕ್ಕಿಂಗ್ ಎಂದ ತಕ್ಷಣ ಬೆಟ್ಟ, ಗುಡ್ಡಗಳ ಆಲೊಚನೆ ತಲೆಯಲ್ಲಿ ಬರುತ್ತದೆ. ಆದರೆ, ಇದು ಆ ರೀತಿ ಅಲ್ಲ, ಸ್ವಲ್ಪ ದೂರು ಮಾತ್ರ ಇದೆ. ಕೋಟೆಯ ಆರಂಬದಲ್ಲಿ 200ಮೀ ನಡೆದರೆ ನಿಮಗೆ 250 ಮೆಟ್ಟಿಲುಗಳು ಸಿಗುತ್ತದೆ.
ಈ ಕೋಟೆ ಕಮಾನು ದ್ವಾರಗಳನ್ನು ಹೊಂದಿದೆ. ಈ ಕೋಟೆಯು ಸಮುದ್ರ ಮಟ್ಟದಿಂದ 3,240 ಅಡಿ ಎತ್ತರದಲ್ಲಿದ್ದು, ಇದನ್ನು ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ್ದ, ಎನ್ನಲಾಗುತ್ತದೆ. ಇದು ಎಂಟು ಗೋಡೆಗಳನ್ನು ಹೊಂದಿರುವ ಆಸಕ್ತಿದಾಯಕ ಅಷ್ಟಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಈ ಕೋಟೆಯ ವಿಶೇಷತೆ ಎಂದರೆ ಇದು ಎಂಟು-ಬಿಂದುಗಳ ನಕ್ಷತ್ರದ ಆಕಾರದಲ್ಲಿದೆ. ಕೋಟೆಯ ಹೊರಗಿನ ಗೋಡೆಗಳನ್ನು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳಿಂದ ನಿರ್ಮಾಣ ಮಾಡಲಾಗಿದ್ದು, ಸೈನ್ಯದ ಬ್ಯಾರಕ್ಗಳು, ಶಸ್ತ್ರಾಸ್ತ್ರ ಸಂಗ್ರಹಾಲಯಗಳು, ಮಳಿಗೆಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.
ನಕ್ಷತ್ರದಾಕಾರದ ಕೋಟೆ ಇದು
ಈ ಕೋಟೆಯನ್ನು ಭಾರತದ ಅತ್ಯಂತ ಸಂಪೂರ್ಣವಾದ ವೌಬನೆಸ್ಕ್ ನಕ್ಷತ್ರಾಕಾರದ ಕೋಟೆ ಎಂದು ಕರೆಯಲಾಗುತ್ತದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಕೋಟೆಯು ಮದ್ದುಗುಂಡುಗಳ ಸಂಗ್ರಹ ಮಾಡಲು ಬಳಸಲಾಗುತ್ತಿತ್ತು. ಅಲ್ಲದೆ ಬ್ರಿಟೀಷರ ಸೈನ್ಯವನ್ನು ಮಂಗಳೂರಿನತ್ತ ಹೋಗದಂತೆ ತಡೆಯುವ ಉದ್ದೇಶಕ್ಕಾಗಿ ಸಹ ಈ ಕೋಟೆಯನ್ನು ಬಳಸಲಾಗುತ್ತಿತ್ತು. ಈ ಮಂಜರಾಬಾದ್ ಕೋಟೆಯು ಒಂದು ಸಣ್ಣ ಗುಡ್ದದ ಮೇಲೆ ಕಟ್ಟಲಾಗಿದೆ. ಈ ಕೋಟೆಯು ಪಶ್ಚಿಮ ಘಟ್ಟದ ಭವ್ಯ ನೋಟವನ್ನು ನಿಮಗೆ ತೋರಿಸುತ್ತಿದೆ.
ಇದನ್ನೂ ಓದಿ: ಗಟ್ಟೆ ಕಿ ಸಬ್ಜಿಯಿಂದ ಮಿರ್ಚಿ ವಡಾವರೆಗೆ ಬೆಸ್ಟ್ ರಾಜಸ್ಥಾನಿ ಥಾಲಿ ಸಿಗುವ ಬೆಂಗಳೂರಿನ ರೆಸ್ಟೊರೆಂಟ್ಗಳಿವು
ಇಲ್ಲೊಂದು ಆಳವಾದ ಬಾವಿ ಇದ್ದು, ಅದರ ಪಕ್ಕದಲ್ಲಿ ಎರಡು ನೆಲಮಾಳಿಗೆಗಳನ್ನು ನಿರ್ಮಿಸಲಾಗಿದೆ, ಅವುಗಳಲ್ಲಿ ಗನ್ಪೌಡರ್ ಸಂಗ್ರಹಿಸಲಾಗುತ್ತಿತ್ತಂತೆ. ಅಲ್ಲದೇ, ಇವುಗಳನ್ನು ಬಹಳ ಸೀಕ್ರೇಟ್ ಆಗಿ ರಚನೆ ಮಾಡಲಾಗಿದ್ದು, ಇದರ ವಿಶೇಷತೆ ಎಂದರೆ, ಬೇಸಿಗೆಯ ತಿಂಗಳುಗಳಲ್ಲಿಯೂ ಈ ಕೊಠಡಿಗಳು ತಂಪಾಗಿರುತ್ತವೆ. ಈ ನಕ್ಷತ್ರಾಕಾರದ ಕೋಟೆಯನ್ನು1785ರಲ್ಲಿ ನಿರ್ಮಾಣ ಮಾಡಲು ಆರಂಭಿಸಿದ್ದರಂತೆ, ಇದರ ನಿರ್ಮಾಣ ಕಾರ್ಯ 1792ರಲ್ಲಿ ಮುಗಿಯಿತು ಎನ್ನಲಾಗುತ್ತದೆ.
ರಹಸ್ಯ ಸುರಂಗ ಹೊಂದಿದೆ ಈ ಸ್ಥಳ
ಈ ಕೋಟೆಯಲ್ಲಿ ಹಲವಾರು ಕೊಠಡಿಗಳು ಸಹ ಇದ್ದು, ಅವುಗಳಲ್ಲಿ ಕೆಲವೊಂದನ್ನು ಕುದುರೆಗಳನ್ನು ಕಟ್ಟುವ ಲಾಯವನ್ನಾಗಿ ಬಳಸಿದರೆ, ಇನ್ನೂ ಕೆಲವೊಂದು ರೂಂಗಳನ್ನು ಅಡಿಗೆ ಮನೆಯಾಗಿ ಮತ್ತು ಸೈನಿಕರ ಶೌಚಾಲಯವಾಗಿ ಬಳಸಲಾಗುತ್ತಿತ್ತು. ನಿಮಗೆ ಈ ಕೋಟೆಯಲ್ಲಿ ಒಂದು ಸುರಂಗ ಮಾರ್ಗ ಕಾಣಿಸುತ್ತದೆ. ಅದು ಶ್ರೀರಂಗ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆಯಂತೆ. ಟಿಪ್ಪು ಕಾಲದಲ್ಲಿ ಈ ಸುರಂಗವನ್ನು ಸೀಕ್ರೇಟ್ ಕೆಲಸಗಳಿಗೆ ಬಳಸಲಾಗುತ್ತಿದ್ದರೂ ಸಹ, ನಂತರ ಇದು ಶವಗಳನ್ನು ಬಿಸಾಡುವುದಕ್ಕೆ ಬಳಕೆ ಮಾಡಲಾಗಿತ್ತು.
ಇದನ್ನೂ ಓದಿ: ಶಿಲೆಯಲ್ಲ ಇದು ಕಲೆಯ ಬಲೆಯೋ! ಶಿಲಾಬಾಲಿಕೆಯರ ಬೇಲೂರಿನ ಇತಿಹಾಸ ಬಲು ರೋಚಕ
ಈ ಕೋಟೆ ಸಕಲೇಶಪುರ ಪಟ್ಟಣದಿಂದ 10 ಕಿಲೋಮೀಟರ್ (6.2 ಮೈಲಿ) ದೂರದಲ್ಲಿದೆ, ಇದು ಹೇಮಾವತಿ ನದಿಯ ದಂಡೆಯಲ್ಲಿದ್ದು, ಹಾಸನದಿಂದ ಸುಮಾರು 37 ಕಿ.ಮೀ ದೂರದಲ್ಲಿ.ಇದು ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಮಾರ್ಗದಲ್ಲಿದ್ದು, ಸುಲಭವಾಗಿ ಈ ಕೋಟೆಯನ್ನು ತಲುಪಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ