• Home
  • »
  • News
  • »
  • lifestyle
  • »
  • Mango Season: 'ಮರದ ಆ ಕಡೆಯ ಹಣ್ಣುಗಳು ಶಾಲಾ ಮಕ್ಕಳಿಗೆ ಮಾತ್ರ' ಮನೆ ಮುಂದೆ ಬೋರ್ಡ್ ಹಾಕಿದ ದಂಪತಿ, ಎಲ್ಲಿ ಇದು?

Mango Season: 'ಮರದ ಆ ಕಡೆಯ ಹಣ್ಣುಗಳು ಶಾಲಾ ಮಕ್ಕಳಿಗೆ ಮಾತ್ರ' ಮನೆ ಮುಂದೆ ಬೋರ್ಡ್ ಹಾಕಿದ ದಂಪತಿ, ಎಲ್ಲಿ ಇದು?

ಮಾವು

ಮಾವು

'ಈ ಮನೆಯಲ್ಲಿ ಕೆಲವೇ ಜನರಿದ್ದಾರೆ, ನಮಗೆ ಏಕೆ ಅಷ್ಟೊಂದು ಮಾವಿನ ಹಣ್ಣುಗಳು ಬೇಕು ಹೇಳಿ..? ತುಂಟ ಮಕ್ಕಳು ಅವೆಲ್ಲವನ್ನು ತೆಗೆದುಕೊಳ್ಳಲಿ’ ಎಂದು ಉಮ್ಮರ್ ಹೇಳುತ್ತಾರೆ. ಇವರ ಮಾವಿನ ಮರದ ತುಂಬ ಇನ್ನಷ್ಟು ಹಣ್ಣುಗಳಾಗಲಿ.

  • Share this:

ನಾವು ನಮ್ಮ ಹಳ್ಳಿಗಳಲ್ಲಿರುವ ಮಾವಿನ ಹಣ್ಣುಗಳ (Mango) ಮರಗಳ ತೋಟವನ್ನು (Mango Farm) ನೋಡಿರುತ್ತೇವೆ. ಸಾಮಾನ್ಯವಾಗಿ ಅದಕ್ಕೆ ಒಂದು ಚಪ್ಪಲಿಯಲ್ಲಿ ನೇತಾಕಿರುತ್ತಾರೆ. ಏಕೆಂದರೆ ಯಾರಾದರೂ ಮಾವಿನ ತೋಟಕ್ಕೆ ಬಂದು ಹಣ್ಣುಗಳನ್ನು ಕದ್ದು ತಿಂದರೆ ಅವರಿಗೆ ಇದೆ ತಕ್ಕ ಶಾಸ್ತಿ ಎಂದು ಅದರರ್ಥ. ಕೆಲವೊಮ್ಮೆ ಅಂತೂ ಈ ಬೇಸಿಗೆ ರಜೆಗಳಲ್ಲಿ ಮಕ್ಕಳು ಹಳ್ಳಿಗಳಿಗೆ ಬಂದರೆ, ಮಾವಿನ ಹಣ್ಣನ್ನು ತಿನ್ನಬೇಕು ಎಂಬ ಆಸೆಗೆ ಯಾರದ್ದೋ ತೋಟಕ್ಕೆ ನುಗ್ಗಿ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತಮ್ಮ ಬ್ಯಾಗ್ ತುಂಬಿಸಿಕೊಂಡು ಅಲ್ಲಿಂದ ಪರಾರಿಯಾಗುವುದನ್ನು ನಾವು ನೋಡಿರುತ್ತೇವೆ. ಹೀಗೆ ಅನೇಕ ತೋಟದ ಮಾಲೀಕರು ಸಹ ತಮ್ಮ ತೋಟದಲ್ಲಿರುವ ಮಾವಿನ ಮರದ ಹಣ್ಣುಗಳನ್ನು ಯಾರು ಕೀಳಬಾರದು ಮತ್ತು ಅವುಗಳನ್ನು ತಿನ್ನಬಾರದು ಎಂದು ದಿನರಾತ್ರಿ ಕಾಯುತ್ತಾ ತೋಟದಲ್ಲಿಯೇ ಇರುವುದನ್ನು ಸಹ ನಾವು ನೋಡಿರುತ್ತೇವೆ.


ಆದರೆ ಏನೇ ಹೇಳಿ ಈ ದುಡ್ಡು ಕೊಟ್ಟು ಖರೀದಿ ಮಾಡಿದ ಮಾವಿನ ಹಣ್ಣಿಗಿಂತಲೂ ಕದ್ದು ಮುಚ್ಚಿ ತಂದು ತಿಂದರೇನೆ ಮಜಾ ಎಂದು ಹೇಳಬಹುದು. ಅದರಲ್ಲೂ ನಾವು ಶಾಲೆಗೆ ಹೋಗುವ ದಾರಿಯಲ್ಲಿ ಯಾವುದಾದರೂ ಮನೆಯಲ್ಲಿ ಮಾವಿನ ಮರವಿದ್ದರೆ ಸಾಕು, ಗೋಡೆಯನ್ನು ಇಣುಕಿ ಇಣುಕಿ ನೋಡುತ್ತಾ ಹೇಗಾದರೂ ಮಾಡಿ ಆ ಕಾಂಪೌಂಡ್ ಒಳಕ್ಕೆ ನುಗ್ಗಿ ಆ ಮಾವಿನ ಹಣ್ಣನ್ನು ತಿನ್ನಬೇಕು ಎಂಬ ಹಂಬಲ ಯಾರಿಗೆ ತಾನೇ ಇರಲ್ಲ ಹೇಳಿ..?


ಆದರೆ ಎಷ್ಟು ಜನರು ತಮ್ಮ ಮಾವಿನ ಮರದಲ್ಲಿ ಬಿಟ್ಟ ಹಣ್ಣುಗಳನ್ನು ಬೇರೆವರಿಗೆ ಕೊಡಲು ಇಷ್ಟ ಪಡುತ್ತಾರೆ. ಅದರಲ್ಲೂ ಮಾವಿನ ಹಣ್ಣುಗಳನ್ನು ಯಾರು ಯಾರಿಗೆ ಹಾಗೆ ಸುಮ್ಮನೆ ನೀಡುವುದೇ ಇಲ್ಲ.


ಇಲ್ಲೊಬ್ಬ ವಿಶೇಷ ವ್ಯಕ್ತಿ


ಆದರೆ ಇಲ್ಲೊಬ್ಬ ವ್ಯಕ್ತಿಗೆ ಮಾವಿನ ಹಣ್ಣು ಎಂದರೆ ಎಲ್ಲರಿಗೂ ಎಷ್ಟು ಇಷ್ಟ ಎನ್ನುವುದರ ಬಗ್ಗೆ ತುಂಬಾ ಚೆನ್ನಾಗಿಯೇ ಅರಿವಿದೆ ಎಂದು ಹೇಳಬಹುದು. ಅದರಲ್ಲೂ ಈ ಶಾಲಾ ವಿದ್ಯಾರ್ಥಿಗಳಿಗೆ ಎಂದರೆ ತಪ್ಪಾಗುವುದಿಲ್ಲ.


ಶಾಲಾ ಮಕ್ಕಳಿಗಾಗಿ ಮಾವಿನ ಮರ ಬಿಟ್ಟುಕೊಟ್ಟ


ತನ್ನ ಮನೆಯ ಕಾಂಪೌಂಡ್‌ನಲ್ಲಿ ಬೆಳೆದು ನಿಂತ ಮಾವಿನ ಮರದ ಮಾವಿನ ಹಣ್ಣುಗಳನ್ನು ಹತ್ತಿರದ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತಿನ್ನಲು ಬಿಟ್ಟು ಕೊಟ್ಟಿರುವುದು ತುಂಬಾನೇ ವಿಶೇಷ ಎಂದು ಹೇಳಬಹುದು. ಹೌದು.. ಕೇರಳದ (Kerala) ಮಲಪ್ಪುರಮ್ ಊರಿನ ನಿವಾಸಿ ವಿಶ್ವವಿದ್ಯಾಲಯ-ಕಡಕ್ಕಟ್ಟು ಪಾರಾ ರಸ್ತೆಯಲ್ಲಿಇರುವ ಅವರ 'ಬ್ರೀಜ್' ಎಂಬ ಹೆಸರಿನ ಮನೆಯ ಕಾಂಪೌಂಡ್ ಮೇಲೆ ಒಂದು ಟಿಪ್ಪಣಿಯನ್ನು ಬರೆದು ಅಂಟಿಸಿಕೊಂಡಿದ್ದಾರೆ.


ಮನಮುಟ್ಟುವ ಟಿಪ್ಪಣಿ


ಆ ಟಿಪ್ಪಣಿಯಲ್ಲಿ “ರಸ್ತೆಯ ಕಡೆಗೆ ವಾಲುತ್ತಿರುವ ಕೊಂಬೆಗಳಲ್ಲಿರುವ ಮಾವಿನ ಹಣ್ಣುಗಳು ಶಾಲಾ ವಿದ್ಯಾರ್ಥಿಗಳಿಗೆ, ಏಕೆಂದರೆ ಅವರು ನಮ್ಮ ದೇಶದ ನಾಳಿನ ನಾಗರಿಕರು. ಪ್ರತಿದಿನ ಒಂದು ಮಾವಿನ ಹಣ್ಣನ್ನು ಕೀಳಲು ಗೇಟ್ ಪಕ್ಕದಲ್ಲಿ ಇರಿಸಲಾದ ಚೂಪಾದ ಕೊಕ್ಕೆಯನ್ನು ಬಳಸಿರಿ 'ಉಮ್ಮರ್ ಸರ್ ಮತ್ತು ಖದೀಜಾ ಮೇಡಂ ಅವರ ಹೆಸರುಗಳನ್ನು ಅದರಲ್ಲಿ ಉಲ್ಲೇಖಿಸಿವುದರೊಂದಿಗೆ ಟಿಪ್ಪಣಿ ಕೊನೆಗೊಳ್ಳುತ್ತದೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ನಿವೃತ್ತ ಡೆಪ್ಯುಟಿ ರಿಜಿಸ್ಟ್ರಾರ್ ಉಮ್ಮರ್ ಅವತ್ಕಟ್ಟಿಲ್ ಅವರ ನಿವಾಸದ ಮುಂದೆ ಈ ನೋಟ್ ಅಂಟಿಸಲಾಗಿದೆ.


ಇದನ್ನೂ ಓದಿ: Mango Season: ಒಂದು ಬಾಕ್ಸ್ ಮಾವಿನ ಹಣ್ಣಿಗೆ 31 ಸಾವಿರ! 50 ವರ್ಷದಲ್ಲೇ ಗರಿಷ್ಠ ಮೊತ್ತ


ಮನೆಯಲ್ಲಿರೋದು ಸ್ವಲ್ಪ ಜನ, ನಮಗ್ಯಾಕೆ ಅಷ್ಟು ಹಣ್ಣು?


'ಈ ಮನೆಯಲ್ಲಿ ಕೆಲವೇ ಜನರಿದ್ದಾರೆ, ನಮಗೆ ಏಕೆ ಅಷ್ಟೊಂದು ಮಾವಿನ ಹಣ್ಣುಗಳು ಬೇಕು ಹೇಳಿ..? ತುಂಟ ಮಕ್ಕಳು ಅವೆಲ್ಲವನ್ನು ತೆಗೆದುಕೊಳ್ಳಲಿ’ ಎಂದು ಉಮ್ಮರ್ ಹೇಳುತ್ತಾರೆ. ಅವರು ಯಾವುದೇ ಮುಚ್ಚು ಮರೆಯಿಲ್ಲದೆಯೇ ಮುಕ್ತವಾಗಿ ಮಾವಿನ ಹಣ್ಣುಗಳನ್ನು ಕೀಳಲು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಾರೆ.


ಇದನ್ನೂ ಓದಿ: ಹಣ್ಣುಗಳ ರಾಜ ಮಾವಿನ ಹಣ್ಣಿನಿಂದ ಸಿಗುವ ಪ್ರಯೋಜನಗಳು


ರುಚಿ ರುಚಿ ಹಣ್ಣು ತಿಂತಾರೆ ಮಕ್ಕಳು


ಅವರ ಮನೆ ಕ್ಯಾಂಪಸ್ ಮಾಡೆಲ್ ಹೈಯರ್ ಸೆಕೆಂಡರಿ ಶಾಲೆಗೆ ಹೋಗುವ ದಾರಿಯಲ್ಲಿದೆ. ಉಮ್ಮರ್ ಕಳೆದ ವರ್ಷವೂ ಈ ರೀತಿಯ ಟಿಪ್ಪಣಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ವರ್ಷ ಇಳುವರಿ ತುಂಬಾ ಹೆಚ್ಚಾಗಿದೆ. ಅನೇಕ ವಿದ್ಯಾರ್ಥಿಗಳು ಅವರ ಮಾವಿನ ಮರದಲ್ಲಿ ಬೆಳೆಯುವ ರುಚಿಕರವಾದ ಮಾವಿನ ಹಣ್ಣುಗಳನ್ನು ತಿಂದಿದ್ದಾರೆ ಎಂದು ಹೇಳಲಾಗುತ್ತಿದೆ.

Published by:Divya D
First published: