Mango Leaves: ನಿಮಗಿದು ಗೊತ್ತೇ? ಮಾವಿನ ಎಲೆಗಳಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದಂತೆ

ಮಾವಿನ ಮರದ ಎಲೆಗಳಿಗೆ ನಿಮ್ಮ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆಯಂತೆ. ಹೌದು ಮಾವಿನ ಎಲೆಗಳು ಸಕ್ಕರೆ ಕಾಯಿಲೆಯ ನಿರ್ವಹಣೆಯಲ್ಲಿ ಉತ್ತಮ ಪರಿಣಾಮವನ್ನು ತೋರಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಇದು ಹೇಗೆ ಸಾಧ್ಯ ಅಂತ ನಿಮ್ಮಲ್ಲಿ ಪ್ರಶ್ನೆಯೊಂದು ಮೂಡಿರಬೇಕಲ್ಲವೇ? ಇದನ್ನು ತಿಳಿಯಲು ಮುಂದೆ ಓದಿ.

ಮಾವಿನ ಎಲೆಗಳು

ಮಾವಿನ ಎಲೆಗಳು

  • Share this:
ಸಾಮಾನ್ಯವಾಗಿ ಈ ಮಧುಮೇಹ (Diabetes) ಕಾಯಿಲೆಯಿಂದ ಬಳಲುತ್ತಿರುವವರು ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣುಗಳನ್ನು (Mango) ಹೆಚ್ಚಾಗಿ ತಿನ್ನಬಾರದು ಎಂದು ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಆದರೆ ಇಲ್ಲೊಂದು ಹೊಸ ವಿಚಾರವನ್ನು ನಿಮಗೆ ಹೇಳುತ್ತೇವೆ ನೋಡಿ, ಅದು ಏನೆಂದರೆ ಮಾವಿನ ಮರದ ಎಲೆಗಳಿಗೆ (Mango Leaves) ನಿಮ್ಮ ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಇದೆಯಂತೆ. ಹೌದು ಮಾವಿನ ಎಲೆಗಳು ಸಕ್ಕರೆ ಕಾಯಿಲೆಯ (Sugar) ನಿರ್ವಹಣೆಯಲ್ಲಿ ಉತ್ತಮ ಪರಿಣಾಮವನ್ನು ತೋರಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ. ಇದು ಹೇಗೆ ಸಾಧ್ಯ ಅಂತ ನಿಮ್ಮಲ್ಲಿ ಪ್ರಶ್ನೆಯೊಂದು ಮೂಡಿರಬೇಕಲ್ಲವೇ? ಇದನ್ನು ತಿಳಿಯಲು ಮುಂದೆ ಓದಿ.

ಮಧುಮೇಹಕ್ಕೆ ರಾಮಬಾಣ ಮಾವಿನ ಎಲೆ
ಈಗಂತೂ ಈ ಮಧುಮೇಹ ಎಂಬ ಕಾಯಿಲೆಯು ಲಕ್ಷಾಂತರ ಜನರನ್ನು ಆವರಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಧುಮೇಹದೊಂದಿಗೆ ಸರಳ ಮತ್ತು ಸುಖಮಯವಾದ ಜೀವನವನ್ನು ನಡೆಸುವುದು ಅಷ್ಟೊಂದು ಸುಲಭದ ಮಾತಂತೂ ಅಲ್ವೇ ಅಲ್ಲ. ಇದು ಒಂದು ದೊಡ್ಡ ಸವಾಲು ಅಂತಾನೆ ಹೇಳಬಹುದು. ಮಧುಮೇಹ ಹೊಂದಿರುವ ರೋಗಿಗಳು ಅನುಸರಿಸಬೇಕಾದ ಡಯಟ್ ಅನ್ನು ಅರ್ಥಮಾಡಿಕೊಳ್ಳುವುದು ಸಹ ಬಹಳ ಮುಖ್ಯವಾಗುತ್ತದೆ.

ಆದಾಗ್ಯೂ, ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರ ಪದಾರ್ಥಗಳ ಸೇವನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಮಧುಮೇಹಕ್ಕೆ ಒಂದು ರಾಮಬಾಣ ಎಂದರೆ ಅದು ಈ ಮಾವಿನ ಎಲೆಗಳು ಎಂದು ಹೇಳಬಹುದು.

ಮಾವಿನ ಹಣ್ಣಿನ ವಿವಿಧ ಭಕ್ಷ್ಯಗಳು
ಈ ಹಣ್ಣುಗಳ ರಾಜ ಎಂದೇ ಪ್ರಸಿದ್ಧವಾದ ಮಾವಿನ ಹಣ್ಣುಗಳನ್ನು ಬರಮಾಡಿಕೊಳ್ಳಲು ಬೇಸಿಗೆಯಲ್ಲಿ ಜನರು ಕಾತುರತೆಯಿಂದ ಕಾಯುತ್ತಿರುತ್ತಾರೆ. ಮಾವಿನ ಹಣ್ಣಿನ ಸೀಸನ್ ನಲ್ಲಿ ಬಹುತೇಕರ ಆಡುಗೆ ಮನೆಯಲ್ಲಿ ಮಾವಿನಕಾಯಿ ಉಪ್ಪಿನಕಾಯಿ, ಚಟ್ನಿ, ಮಾವಿನ ಹಣ್ಣಿನ ರಸ, ಮಾವಿನ ಹಣ್ಣಿನ ಜಾಮ್ ಹೀಗೆ ಅನೇಕ ರೀತಿಯ ಭಕ್ಷ್ಯಗಳನ್ನು ನಾವು ನೋಡಬಹುದು.

ಇದನ್ನೂ ಓದಿ:  Banana Leaf Benefits: ದಿನಕ್ಕೆ ಒಂದು ಬಾರಿಯಾದರೂ ಬಾಳೆ ಎಲೆಯಲ್ಲಿ ಊಟ ಮಾಡಿ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಫ್ಲೇವನಾಯ್ಡ್ ಗಳು ಮತ್ತು ಫಿನಾಲ್ ಅಧಿಕವಾಗಿರುವ ಎಲೆಗಳು
ಈ ಮಾವಿನ ಎಲೆಗಳು ಆಗ ತಾನೇ ಬೆಳೆದಿರುವಾಗ ಅವು ಕೆಂಪು ಅಥವಾ ನೇರಳೆ ಬಣ್ಣದಲ್ಲಿರುತ್ತವೆ, ಆದರೆ ಅದೇ ಎಲೆಗಳು ತುಂಬಾ ದಿನಗಳು ಕಳೆದ ನಂತರ ಮಸುಕಾದ ಕೆಳಭಾಗದೊಂದಿಗೆ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತವೆ. ಈ ಎಲೆಗಳಲ್ಲಿ ಫ್ಲೇವನಾಯ್ಡ್ ಗಳು ಮತ್ತು ಫಿನಾಲ್ ಅಧಿಕವಾಗಿದೆ ಮತ್ತು ಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಪುಡಿ ಮಾಡಿಕೊಂಡು ಅಥವಾ ಕಷಾಯವಾಗಿ ಮಾಡಿಕೊಂಡು ತೆಗೆದು ಕೊಳ್ಳಬಹುದು.

ಅಧಿಕವಾಗಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣ
ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ತಯಾರಿಸಲಾಗುತ್ತದೆ. ಆಗ್ನೇಯ ಏಷ್ಯಾದಲ್ಲಿ ದುರ್ಬಲ ಮಾವಿನ ಎಲೆಗಳನ್ನು ಹುರಿದು ಹಸಿಯಾಗಿ ತಿನ್ನಲಾಗುತ್ತದೆ. ಅವು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿರುತ್ತವೆ ಮತ್ತು ಎಲೆಗಳನ್ನು ವಿವಿಧ ಚಿಕಿತ್ಸಕ ಉದ್ದೇಶಗಳಿಗಾಗಿಯೂ ಸಹ ಬಳಸಬಹುದು.

ಇದನ್ನೂ ಓದಿ:  Health Tips: ಬಸಳೆ ಸೊಪ್ಪಿನಲ್ಲಿ ಎಷ್ಟೆಲ್ಲಾ ಔಷಧೀಯ ಗುಣಗಳು ಇವೆ, ಇದರ ಸೇವನೆ ಆರೋಗ್ಯಕ್ಕೆ ಲಾಭ

ಮಾವಿನ ಎಲೆಗಳು ಇನ್ಸುಲಿನ್ ಸಂಶ್ಲೇಷಣೆ ಮತ್ತು ಗ್ಲುಕೋಸ್ ವಿತರಣೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅವು ಸಹಾಯ ಮಾಡುತ್ತವೆ. ಮಾವಿನ ಎಲೆಗಳಲ್ಲಿ ಪೆಕ್ಟಿನ್, ವಿಟಮಿನ್ ಸಿ ಮತ್ತು ಫೈಬರ್ ಹೇರಳವಾಗಿವೆ. ಇದು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಎರಡಕ್ಕೂ ಒಳ್ಳೆಯದು ಅಂತ ಹೇಳಲಾಗುತ್ತದೆ.

ಈ ಮಾವಿನ ಎಲೆಗಳನ್ನು ಹೇಗೆ ನೀವು ಬಳಸಬಹುದು ಮತ್ತು ಅದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮಾವಿನ ಎಲೆಗಳನ್ನು ಹೇಗೆ ಬಳಸಬಹುದು ನೋಡಿ:

  • 10 ರಿಂದ 15 ಮಾವಿನ ಎಲೆಗಳನ್ನು ಅವು ಮೃದುವಾಗುವವರೆಗೆ ನೀರಿನಲ್ಲಿ ಕುದಿಸಿ.

  • ಎಲೆಗಳನ್ನು ಸಂಪೂರ್ಣವಾಗಿ ಕುದಿಸಿದ ನಂತರ ರಾತ್ರಿಯಿಡೀ ತಣ್ಣಗಾಗಲು ಬಿಡಿ.

  • ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಅದನ್ನು ಕುಡಿಯಿರಿ.

  • ನೀವು ಕೆಲವು ತಿಂಗಳುಗಳ ಕಾಲ ಪ್ರತಿದಿನ ಬೆಳಿಗ್ಗೆ ಈ ಮಿಶ್ರಣವನ್ನು ಕುಡಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು.

  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾವಿನ ಎಲೆಗಳನ್ನು ಅಗಿಯುವುದು ಸಹ ಒಳ್ಳೆಯದು. ಆದರೆ ಹಸಿ ಎಲೆಗಳನ್ನು ಮಿತವಾಗಿ ತಿನ್ನಬೇಕು.

Published by:Ashwini Prabhu
First published: