Diabetes: ಮಾವಿನ ಎಲೆಯ ಕಷಾಯದಿಂದ ಮಧುಮೇಹ ಮಾಯ..!

ಮಾವಿನ ಎಲೆಗಳ ಸಾರ ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಅದರ ಹೊರತಾಗಿ ಅದು ಗ್ಲೂಕೋಸ್ ವಿತರಣೆಯನ್ನು ಕೂಡ ಹೆಚ್ಚಿಸುತ್ತದೆ. ಅದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶತಮಾನಗಳಿಂದ ಮಾವಿನ ಎಲೆಗಳ ಸಾರವನ್ನು ಮಧುಮೇಹ ಮತ್ತು ಅಸ್ತಮಾ ರೋಗವನ್ನು ಗುಣಪಡಿಸಲು ಬಳಸಲಾಗುತ್ತಿದೆ. ಈ ಎಲೆಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಇರುವುದೇ ಅದಕ್ಕೆ ಕಾರಣ. ನೀವು ಮಧುಮೇಹಿಗಳೇ? ಹಾಗಾದರೆ ಆ ರೋಗವನ್ನು ನಿಯಂತ್ರಣದಲ್ಲಿಡಲು ಎಷ್ಟೆಲ್ಲ ಹೆಣಗಾಡಬೇಕು ಎಂಬುವುದು ನಿಮಗೆ ಗೊತ್ತೇ ಇರುತ್ತದೆ. ಮಧುಮೇಹಕ್ಕೆ ಔಷಧಿ ಮತ್ತು ಮುನ್ನೆಚ್ಚರಿಕೆಗಳು ಬಹಳ ಅಗತ್ಯ. ಹೆಜ್ಜೆ ಹೆಜ್ಜೆಗೂ ಮಧುಮೇಹಿಗಳು ತಮ್ಮ ಆಹಾರಕ್ರಮ ಮತ್ತು ಜೀವನಶೈಲಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮಧುಮೇಹದಿಂದ ಚಿಂತಿತರಾಗಿರುವವರಿಗೆ ಚೈನೀಸ್ ಪರಿಹಾರವೊಂದು ನಿಮಗೆ ಸಹಾಯಕ ಆಗಬಹುದು. ಚೀನೀಯರ ಪ್ರಕಾರ, ಮಾವಿನ ಎಲೆಗಳು ಮಧುಮೇಹವನ್ನು ಗುಣಪಡಿಸುತ್ತವೆ. ಶತಮಾನಗಳಿಂದ ಮಾವಿನ ಎಲೆಗಳ ಸಾರವನ್ನು ಮಧುಮೇಹ ಮತ್ತು ಅಸ್ತಮ ರೋಗವನ್ನು ಗುಣಪಡಿಸಲು ಬಳಸಲಾಗುತ್ತಿದೆ. ಈ ಎಲೆಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಇರುವುದೇ ಅದಕ್ಕೆ ಕಾರಣ.

Diabetes Symptoms: if you eat more Sugar diabetics lose muscle mass faster New studies Reveals.
ಸಕ್ಕರೆ


ಈ ಸಿದ್ಧಾಂತವನ್ನು ವಿಜ್ಞಾನವು ಕೂಡ ಪುಷ್ಟೀಕರಿಸಿದೆ. 2010ರಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ, ಮಾವಿನ ಎಲೆಗಳ ಸಾರವನ್ನು ಸೇವಿಸದ ಇಲಿಗಳಿಗೆ ಹೋಲಿಸಿದಾಗ, ಮಾವಿನ ಎಲೆಗಳ ಸಾರವನ್ನು ಸೇವಿಸಿದ ಇಲಿಗಳು,  ಕಡಿಮೆ ಗ್ಲೂಕೋಸನ್ನು ಹೀರಿಕೊಂಡವು, ಅದು ಅವುಗಳ ರಕ್ತದಲ್ಲಿನ ಸಕ್ಕರೆ ಕಡಿಮೆ ಆಗಲು ಕಾರಣವಾಯಿತು.

ಇದು ಹೇಗೆ ಸಾಧ್ಯವಾಯಿತು?

ಮೊದಲನೆಯದಾಗಿ ಮಾವಿನ ಎಲೆಗಳ ಸಾರ ನಿಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಅದರ ಹೊರತಾಗಿ ಅದು ಗ್ಲೂಕೋಸ್ ವಿತರಣೆಯನ್ನು ಕೂಡ ಹೆಚ್ಚಿಸುತ್ತದೆ. ಅದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.

ಎರಡನೆಯದಾಗಿ ಈ ಎಲೆಗಳು, ಅತ್ಯಧಿಕ ಪೋಷಕಾಂಶಗಳನ್ನು ಹೊಂದಿವೆ. ಅವು ಯಾವುವೆಂದರೆ ಪೆಕ್ಟಿನ್, ಫೈಬರ್ ಮತ್ತು ವಿಟಮಿನ್ ಸಿ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂರನೆಯದಾಗಿ , ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ದೃಷ್ಟಿ ಮಂದವಾಗುವುದು ಮತ್ತು ಅತಿಯಾದ ತೂಕ ಇಳಿಕೆ ಮುಂತಾದ ಮಧುಮೇಹದ ಲಕ್ಷಣಗಳನ್ನು ನಿವಾರಿಸಲು ಈ ಎಲೆಗಳ ಸಾರ ಸಹಕಾರಿಯಾಗಿದೆ. ಇನ್ನೂ ಒಳ್ಳೆಯ ವಿಷಯವೇನೆಂದರೆ, ಈ ಎಲೆಗಳಲ್ಲಿ ಅತ್ಯಧಿಕ ಆ್ಯಂಟಿ ಆಕ್ಸಿಡೆಂಟ್‍ಗಳು ಇವೆ. ಹಾಗಾಗಿ ಅದನ್ನು ಕೇವಲ ಮಧುಮೇಹಿಗಳೇ ಸೇವಿಸಿ ಆರೋಗ್ಯ ಹೊಂದಬೇಕು ಎಂದಿಲ್ಲ, ಯಾರು ಬೇಕಾದರೂ ಮಾವಿನ ಎಲೆಗಳನ್ನು ಸೇವಿಸಿ, ಅದರ ಪ್ರಯೋಜನಗಳನ್ನು ಪಡೆಯಬಹುದು.

ಮಾವಿನ ಎಲೆಗಳನ್ನು ಸೇವಿಸುವುದು ಹೇಗೆ? 

ಮಾವಿನ ಎಲೆಗಳಲ್ಲಿ ಹೇರಳವಾದ ಪೋಷಕಾಂಶಗಳು ಇವೆ. ಆ್ಯಂಟಿ ಆಕ್ಸಿಡೆಂಟ್‍ಗಳು ಇವೆ ಮತ್ತು ಅದನ್ನು ಯಾರು ಬೇಕಾದರೂ ಸೇವಿಸಬಹುದು ಎಂಬುದೆಲ್ಲವೂ ಸರಿ. ಆದರೆ ಅದನ್ನು ಸೇವಿಸುವ ಬಗೆ ಹೇಗೆ? ಹಾಗೆಯೇ ಮರದಿಂದ ಕಿತ್ತು ತಿನ್ನಿ ಎನ್ನಲಾಗದು, ಎಲ್ಲದಕ್ಕೂ ಒಂದು ವಿಧಾನವಿದೆ. ಮಾವಿನ ಎಲೆಯ ಸಾರವನ್ನು ಸೇವಿಸುವ ವಿಧಾನ ಹೀಗಿದೆ. ಕಷಾಯ ಮಾಡಿ ಕುಡಿದರಾಯಿತು. 15 ತಾಜಾ ಮಾವಿನ ಎಲೆಗಳನ್ನು 100 ರಿಂದ 150 ಮಿಲಿ ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಆ ಕಷಾಯವನ್ನು ರಾತ್ರಿಯೆಲ್ಲಾ ಹಾಗೆಯೇ ಇಡಿ. ಮುಂಜಾನೆ ಎದ್ದು, ಬೆಳಗಿನ ಉಪಾಹಾರ ಸೇವಿಸುವ ಮೊದಲು ಆ ಕಷಾಯವನ್ನು ಕುಡಿಯಿರಿ. ಉತ್ತಮ ಫಲಿತಾಂಶವನ್ನು ಪಡೆಯಲು, ಸುಮಾರು ಮೂರು ತಿಂಗಳವರೆಗೆ ನಿತ್ಯವೂ ಈ ಕಷಾಯ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: