Patrode Special: ನಿಮಗಿದು ಗೊತ್ತೇ? ಮಂಗಳೂರು ಸ್ಪೆಷಲ್ ಪತ್ರೊಡೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಗೆ ಉತ್ತಮ ಆಹಾರ!

ಕರ್ನಾಟಕದ ಕರಾವಳಿ ಭಾಗದ ಸ್ಪೆಷಲ್ ಫುಡ್ ಗಳಲ್ಲಿ ಒಂದು ಪತ್ರೊಡೆ. ಇದು ದೇಹದ ಹಿಮಗ್ಲೋಬಿನ್ ಮಟ್ಟದ ಸುಧಾರಣೆಗೆ ಉತ್ತಮ ಆಹಾರವಾಗಿದೆ. ಹೆಚ್ಚಾಗಿ ಈ ಖಾದ್ಯವನ್ನು ಮಳೆಗಾಲದಲ್ಲಿ ಸೇವಿಸುತ್ತಾರೆ.

ಪತ್ರೊಡೆ

ಪತ್ರೊಡೆ

  • Share this:
ಭಾರತವು ವೈವಿಧ್ಯಮಯ ರಾಕ್ಷ್ಟ್ರವಾಗಿದ್ದು, ಭಾಷೆ, ಉಡುಪು, ಆಚಾರ ವಿಚಾರ, ಸಂಪ್ರದಾಯ, ಸಂಸ್ಕೃತಿ ಹೀಗೆ ಪ್ರತಿಯೊಂದು ವಿಚಾರದಲ್ಲೂ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ, ಊರಿಂದ ಊರಿಗೆ ವಿಭಿನ್ನತೆಯನ್ನು ಹೊಂದಿದೆ. ಆಹಾರದ ವಿಷಯದಲ್ಲಂತು (Food Style) ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಋತುವಿಗೆ (Season) ಬಗೆ ಬಗೆಯಾದ ತಿನಿಸುಗಳನ್ನು ಮಾಡುತ್ತಾರೆ. ಕರ್ನಾಟಕದ ಕರಾವಳಿ (Coastal Karnataka)  ಭಾಗವಾದ ಮಂಗಳೂರಿನಲ್ಲಿ ( Mangalore)  ಮಳೆಗಾಲದಲ್ಲಿ (Rainy Season)  ದಿನಕ್ಕೊಂದು ಸ್ಪೇಷಲ್ ಫುಡ್ (Special Food) ಮಾಡ್ತಾರೆ. ಇಲ್ಲಿ ಮಳೆಗಾಳದಲ್ಲಿ ಆರೋಗ್ಯವನ್ನು ಸಾಂಕ್ರಾಮಿಕ ರೋಗಗಳಿಂದ ತಡೆಯಲು, ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಾಮಾನ್ಯವಾಗಿ ಪ್ರಕೃತಿಯಲ್ಲಿ ದೊರೆಯುವ ಔಷಧೀಯ (Medicine) ಅಂಶಗಳುಳ್ಳ ಪದಾರ್ಥಗಳನ್ನು ಬಳಸಿ ತಿನಸುಗಳನ್ನು ತಯಾರಿಸುತ್ತಾರೆ. ಅಂತಹ ತಿನಿಸುಗಳನ್ನು ಫೇಮಸ್ ಆದು ಓಂದು ಖಾದ್ಯ ಪತ್ರೊಡೆ (Patrode).

ಕೆಸುವಿನ ಎಲೆಯಿಂದ ಮಾಡುವ ಆಹಾರ
ಕರಾವಳಿ ಜನರ ಬಲು ಇಷ್ಟದ ಖಾದ್ಯ ಪತ್ರೊಡೆಯನ್ನು ಮರದ ಬುಡಗಳಲ್ಲಿ ಅಥವಾ ಗದ್ದೆಯ ಬದಿಗಳಲ್ಲಿ ಬೆಳೆದಿರುವ ಕೆಸುವಿನ ಎಲೆಯಿಂದ ಮಾಡುತ್ತಾರೆ. ಇಂಗ್ಲೀಷ್ ನಲ್ಲಿ ಈ ಎಲೆಯನ್ನು ಕೊಲೊಕೆಸಿಯಾ ಲೀವ್ಸ್ ಎಂದು ಕರೆಯುತ್ತಾರೆ.

ಇದನ್ನೂ ಓದಿ: Weight Loss: ತೂಕ ಇಳಿಸಲು ಬಯಸುವವರು ಅವಲಕ್ಕಿ ತಿನ್ನೋದನ್ನು ಮಿಸ್ ಮಾಡಲೇಬೇಡಿ

ಪತ್ರೊಡೆಯಲ್ಲಿನ ಔಷಧೀಯ ಗುಣಗಳು
ಕೆಸುವಿನ ಎಲೆಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಉರಿಯೂತದಂತಹ ನಿರಂತರ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗರ್ಭೀಣಿಯರಿಗೆ ಪ್ರಸವದ ಬಳಿಕ ಮೂರು ದಿನಗಳ ಹೆಚ್ಚಾಗಿ ಕೆಸುವಿನ ಎಲೆಯ ಪದಾರ್ಥವನ್ನು ನೀಡುತ್ತಾರೆ. ಇದು ಅವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಪ್ರಸವದ ಸಂದರ್ಭದಲ್ಲಿ ಹಿಮಗ್ಲೋಬಿನ್ ಮಟ್ಟದಲ್ಲಾದ ಏರಿಳಿತವನ್ನು ಸರಿದೂಗಿಸುತ್ತದೆ.

ಕರಾವಳಿಗರ ಕಷ್ಟ ಕಾಲದ ಆಹಾರ
ಕರಾವಳಿಯಲ್ಲಿ ಹಿಂದೆ ಆಷಾಡ ಮಾಸವನ್ನು ಸಂಕಷ್ಟದ ಕಾಲವೆಂದು ಪರಿಗಣಿಸಲಾಗುತ್ತಿತ್ತು, ಏಕೆಂದರೆ ಅತಿಯಾದ ಮಳೆಯಿಂದಾ ಪ್ರಮುಖವಾಗಿ ರೈತರು ಮತ್ತು ಇತರ ಜನರು ಕೆಲಸವಿಲ್ಲದೆ ಮನೆಯಲ್ಲೆ ಇರುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರು ಹೊಟ್ಟೆಯ ಹಸಿವನ್ನು ನೀಗಿಸಲು ಪ್ರಮುಖವಾಗಿ ಪ್ರಕೃತಿಯನ್ನು ಅವಲಂಭಿಸುತ್ತಿದ್ದರು. ಪ್ರಕೃತಿಯಲ್ಲಿ ದೊರೆಯುತ್ತಿದ್ದ ತರಕಾರಿಗಳು, ಬೀಜಗಳು, ಗೆಣಸುಗಳು, ಹಣ್ಣುಗಳೇ ಪ್ರಮುಖ ಭಕ್ಷಗಳಾಗಿತ್ತು.

ಪತ್ರೊಡೆ ತಯಾರಿಸುವ ವಿಧಾನ
ರುಬ್ಬಿದ ಅಕ್ಕಿಗೆ ಕೆಸುವಿನ ಎಲೆಗಳನ್ನು ಸಣ್ಣನೆ ಕತ್ತರಿಸಿ ಹಾಕಬೇಕು. ಅದನ್ನು ಒಟ್ಟಿಗೆ ಬೆರೆಸಿ ಮುಂದೆ ಬಾಳೆ ಎಲೆಯಲ್ಲಿ ಸುತ್ತಿ ಬೇಯಿಸಬೇಕು. ನಂತರದಲ್ಲಿ ಬೆಂದ ಆಹಾರವನ್ನು ತುಂಡುಗಳಾನ್ನಾಗಿ ಮಾಡಬೇಕು. ಮುಂದೆ ತೆಂಗಿನಕಾಯಿ, ಹುಳಿ, ಮೆಣಸು, ಕೊತ್ತಂಬರಿ ಮತ್ತು ಬೆಲ್ಲವನ್ನು ಒಟ್ಟಿಗೆ ರುಬ್ಬಿ ಅದನ್ನು ಕುದಿಸಬೇಕು, ಕುದಿಯುವಾಗ ತುಂಡು ಮಾಡಿಟ್ಟ ತಿಂಡಿಯನ್ನು ಮಿಕ್ಸ್ ಮಾಡಬೇಕು. ಅಲ್ಲಿಗೆ ಮಂಗಳೂರ್ ಸ್ಪೇಷಲ್ ಪತ್ರೊಡೆ ರೆಡಿ.

ಕೆಸುವಿನ ಎಲೆಯ ತುರಿಕೆಯನ್ನು ಕಡಿಮೆಮಾಡಲು ಹುಣಸೆ ಹುಳಿ, ಬೆಲ್ಲ ಮತ್ತು ತೆಂಗಿನಕಾಯಿಯನ್ನು ಪ್ರಮುಖವಾಗಿ ಈ ಖಾದ್ಯ ತಯಾರಿಸುವಾಗ ಬಳಸಲಾಗುತ್ತದೆ.

ಇದನ್ನೂ ಓದಿ: Snacks: ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದ ಬಿಸಿ ಬಿಸಿ ತಿನಿಸುಗಳಿವು! ಒಂದು ಸಲ ಟ್ರೈ ಮಾಡಿ ನೋಡಿ

ದೇಶದ ಇತರೆ ಭಾಗಗಳಲ್ಲೂ ಜನಪ್ರಿಯತೆ ಪಡೆದ ಪತ್ರೊಡೆ
ಕರಾವಳಿ ಭಾಗದಲ್ಲಿ ಪತ್ರೊಡೆ ಎಂದು ಕರೆಯಲ್ಪಡುವ ಈ ಆಹಾರವನ್ನು ಕೇರಳದಲ್ಲಿ 'ಚೆಂಬಿಲ ಅಪ್ಪಂ' ಎಂದು ಕರೆಯುತ್ತಾರೆ. ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಈಶಾನ್ಯ ರಾಜ್ಯಗಳಲ್ಲೂ ಜನಪ್ರಿಯವಾಗಿದೆ. ಮಳೆಗಾಲದಲ್ಲಿ ಕರಾವಳಿ ಮತ್ತು ಮಲೆನಾಡುಗಳಲ್ಲಿ ಪತ್ರೊಡೆಯನ್ನು ವ್ಯಾಪಕವಾಗಿ ಮಾಡುತ್ತಾರೆ.
Published by:Nalini Nalini
First published: