• Home
  • »
  • News
  • »
  • lifestyle
  • »
  • New Idea: ನೀವು ಹೊರಗಿದ್ದಾಗ ಮನೆಯಲ್ಲಿರುವ ಗಿಡ ಬಾಡುತ್ತೆ ಎನ್ನುವ ಟೆನ್ಶನ್ನಾ? ಇದಕ್ಕೊಂದು ಉಪಾಯ ಹುಡುಕಿದ್ದಾರೆ ಮಂಗಳೂರು ದಂಪತಿ!

New Idea: ನೀವು ಹೊರಗಿದ್ದಾಗ ಮನೆಯಲ್ಲಿರುವ ಗಿಡ ಬಾಡುತ್ತೆ ಎನ್ನುವ ಟೆನ್ಶನ್ನಾ? ಇದಕ್ಕೊಂದು ಉಪಾಯ ಹುಡುಕಿದ್ದಾರೆ ಮಂಗಳೂರು ದಂಪತಿ!

ಗಿಡಗಳಿಗೆ ನೀರುಣಿಸುವ ಸಾಧನ

ಗಿಡಗಳಿಗೆ ನೀರುಣಿಸುವ ಸಾಧನ

"ಬಳಕೆದಾರರು ತಮ್ಮ ಮನೆಯಲ್ಲಿನ ಸಸ್ಯಗಳಿಗೆ ನೀರುಣಿಸುವ ಸಮಯವನ್ನು ವೆಬ್‌ಸೈಟ್ ನಲ್ಲಿ ಸಂಗ್ರಹಿಸಬಹುದು ಮತ್ತು ಸಾಧನವನ್ನು ಆನ್ ಅಥವಾ ಆಫ್ ಮಾಡಬಹುದು" ಎಂದು ಅವರು ಹೇಳುತ್ತಾರೆ.

  • Trending Desk
  • Last Updated :
  • Karnataka, India
  • Share this:

ಈಗಂತೂ ನಗರ(City) ಪ್ರದೇಶದಲ್ಲಿ ಮನೆಯ ಮುಂದೆ ಅಥವಾ ಹಿಂದೆ ಸ್ವಲ್ಪ ಜಾಗ ಸಿಕ್ಕರೂ ಸಾಕು ಅಲ್ಲಿ ಮನೆಯವರು ತಮ್ಮ ಕೈಲಾದಷ್ಟು ಗಿಡಗಳನ್ನು(Plants) ನೆಡುತ್ತಿದ್ದಾರೆ. ಹೌದು.. ದೊಡ್ಡ ದೊಡ್ಡ ರಸ್ತೆಗಳನ್ನು(Roads) ಮತ್ತು ಮನೆಗಳನ್ನು ಮತ್ತು ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲು ಅನೇಕ ವರ್ಷಗಳಿಂದ ಬೆಳೆದು ನಿಂತಂತಹ ದೊಡ್ಡ ಮರಗಳನ್ನು(Trees) ಕಡಿದು ಹಾಕುವುದನ್ನು ಇನ್ನೊಂದು ಕಡೆ ನಾವು ನೋಡುತ್ತಿದ್ದೇವೆ. ಗಿಡ ಮರಗಳ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಅಂತ ಹವಾಮಾನ(Weather) ಹದೆಗೆಡುತ್ತಿರುವ ಸಮಯದಲ್ಲಿ ಜನರಿಗೆ ಅರ್ಥವಾದಂತಿದೆ ಅಂತ ಹೇಳಬಹುದು.


ಆದರೆ ಹೆಚ್ಚಿನ ನಗರ ಕುಟುಂಬಗಳು ತಮ್ಮ ಮನೆಯ ಸುತ್ತಲೂ ಉದ್ಯಾನವನ್ನು ನಿರ್ವಹಿಸಲು ಸ್ಥಳಾವಕಾಶ ಇಲ್ಲದೆ ತಮ್ಮದೇ ಆದ ಬಾಲ್ಕನಿಯಲ್ಲಿ ಅಥವಾ ಮನೆಯ ಮೇಲೆ ಕೆಲವು ಸಸ್ಯಗಳನ್ನು ಮತ್ತು ಸಣ್ಣ ಪುಟ್ಟ ಗಿಡಗಳನ್ನು ನೆಡುವುದನ್ನು ನಾವು ನೋಡಬಹುದು. ಇನ್ನೂ ಕೆಲವರು ಮನೆಯ ಮೇಲೆ ಚಿಕ್ಕ ಗಾರ್ಡನ್ ಗಳನ್ನು ಮಾಡಿಕೊಂಡಿರುತ್ತಾರೆ.


ಆದರೆ ಮನೆಯಲ್ಲಿ ಇದ್ದಾಗ ಈ ಉದ್ಯಾನವನವನ್ನು ಚೆನ್ನಾಗಿ ಸಮಯಕ್ಕೆ ಸರಿಯಾಗಿ ನೀರುಣಿಸುವ ಮೂಲಕ ಚೆನ್ನಾಗಿ ಕಾಪಾಡಿಕೊಳ್ಳಬಹುದು. ಆದರೆ ಮನೆಯಲ್ಲಿರುವವರು ಯಾವುದಾದರೂ ಊರಿಗೆ ಹೋದರೆ ಅಲ್ಲಿಗೆ ಗಿಡಗಳಿಗೆ ನೀರುಣಿಸುವವರು ಯಾರೂ ಇಲ್ಲದ ಹಾಗೆ ಆಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಮಂಗಳೂರಿನ ದಂಪತಿಗಳು ಮನೆಯಲ್ಲಿ ಯಾರೂ ಇಲ್ಲದೆ ಇದ್ದರೂ ಸಹ ಗಿಡಗಳಿಗೆ ನೀರುಣಿಸುವ ವಿನೂತನವಾದ ಸ್ಮಾರ್ಟ್ ಪರಿಹಾರವನ್ನು ಕಂಡು ಹಿಡಿದಿದ್ದಾರೆ.


ತಮ್ಮ ವಿನೂತನ ಆವಿಷ್ಕಾರದ ಬಗ್ಗೆ ಏನ್ ಹೇಳ್ತಾರೆ ದಂಪತಿಗಳು?


"ನಾವು ಕೆಲಸ ಮಾಡುವಾಗ ಅಥವಾ ದೂರದ ಊರುಗಳಿಗೆ ಪ್ರಯಾಣಿಸುವಾಗ ನಾವು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದೇವೆ ಮತ್ತು ಆರೋಗ್ಯಕರ ಬಾಲ್ಕನಿ ಉದ್ಯಾನವನ್ನು ನಿರ್ವಹಿಸಲು ತುಂಬಾನೇ ಕಷ್ಟಪಟ್ಟಿದ್ದೇವೆ. ಆದ್ದರಿಂದ ತಮ್ಮ ಸಸ್ಯಗಳಿಗೆ ನಿಯಮಿತವಾಗಿ ನೀರುಣಿಸಲು ಸಮಯವಿಲ್ಲದ ಜನರಿಗೆ ನಾವು ಸ್ಮಾರ್ಟ್ ಪರಿಹಾರವನ್ನು ಹುಡುಕಲು ಪ್ರಾರಂಭಿಸಿದೆವು" ಎಂದು ಸಂತೋಷ್ ಸೇಠ್ ಹೇಳುತ್ತಾರೆ.


ಇದನ್ನೂ ಓದಿ: Cooking Hacks: ಎಲೆಕೋಸಿನ ಎಲೆ ಉಳಿದರೆ ಹೊರಗೆಸೆಯಬೇಡಿ, ಈ ರೀತಿಯೂ ಬಳಕೆ ಮಾಡ್ಬಹುದು


ಅವರು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಲು ಇಷ್ಟಪಡುತ್ತಿದ್ದರು ಮತ್ತು ಎಲೆಕ್ಟ್ರಾನಿಕ್ಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅನೇಕ ವರ್ಷಗಳಿಂದ ಸಾಫ್ಟ್‌ವೇರ್ ಡೆವಲಪರ್ ಆಗಿ ಹಲವಾರು ಟೆಕ್ ದೈತ್ಯರೊಂದಿಗೆ ಕೆಲಸ ಮಾಡಿದ್ದರೂ, ಸಂತೋಷ್ ಅಂತಿಮವಾಗಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ತಮ್ಮ ಉದ್ಯೋಗವನ್ನು ತ್ಯಜಿಸಲು ನಿರ್ಧರಿಸಿದರು.


ಅವರು ಮತ್ತು ಅವರ ಪತ್ನಿ ದೀಪಿಕಾ ತಮ್ಮದೇ ಆದ ರೀತಿಯಲ್ಲಿ ಏನನ್ನಾದರೂ ವಿನೂತನವಾಗಿ ಮಾಡುವ ಬಗ್ಗೆ ಆಶಾವಾದಿಗಳಾಗಿದ್ದರು. ಸಾಕಷ್ಟು ಚಿಂತನ ಮಂಥನದ ನಂತರ, ನಗರ ಉದ್ಯಾನಗಳಿಗೆ ನೀರುಣಿಸುವ ಪರಿಹಾರಗಳನ್ನು ಒದಗಿಸಲು ಸ್ವಯಂಚಾಲಿತ ಹನಿ ನೀರಾವರಿ ವ್ಯವಸ್ಥೆಯನ್ನು ನಿರ್ಮಿಸುವ ವಿಶಿಷ್ಟ ಕಲ್ಪನೆಯನ್ನು ಅವರು ಕಲ್ಪಿಸಿದರು.


ನೀರುಣಿಸುವ ಸ್ವಯಂ-ಚಾಲಿತ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ ದಂಪತಿಗಳು


ಸುಮಾರು ಒಂದು ವರ್ಷ ಕೆಲಸ ಮಾಡಿದ ನಂತರ, ದಂಪತಿಗಳು ನೀರುಣಿಸುವ ಸ್ವಯಂ-ಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಇದು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಪ್ಲಾಟ್ಫಾರ್ಮ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ, ಇದನ್ನು ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿ ಎಲ್ಲಿಂದಲಾದರೂ, ಯಾವಾಗ ಬೇಕಾದರೂ ನಿರ್ವಹಿಸಬಹುದು.


ಆವಿಷ್ಕಾರದ ಬಗ್ಗೆ ದಂಪತಿಗಳಿಗೆ ತುಂಬಾನೇ ಒಲವಿತ್ತು


"ಐಟಿ ಕೆಲಸವು ನನಗೆ ಸಾಕಷ್ಟು ಉತ್ತಮ ಅವಕಾಶಗಳನ್ನು ನೀಡಿತು, ಆದರೆ ಕೆಲವು ವರ್ಷಗಳ ಹಿಂದೆ ನಾನು ನನ್ನ ವೃತ್ತಿಜೀವನವನ್ನು ಬದಲಾಯಿಸುವ ಸಮಯ ಬಂದಿದೆ ಎಂದು ನಾನು ಅರಿತುಕೊಂಡೆ" ಎಂದು ಸಂತೋಷ್ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ನಾನು ತುಂಬಾನೇ ಕಠಿಣ ಸಮಯವನ್ನು ಹೊಂದಿದ್ದೆ, ಏಕೆಂದರೆ ನಾನು ಐರ್ಲೆಂಡ್ ನಲ್ಲಿದ್ದೆ ಮತ್ತು ನನ್ನ ಹೆಂಡತಿ ಮತ್ತು ಮೂರು ವರ್ಷದ ಮಗಳು ಭಾರತದಲ್ಲಿದ್ದರು. ನಾನು ಅಂತಿಮವಾಗಿ ನನ್ನ ಕೆಲಸವನ್ನು ತೊರೆದು ಭಾರತಕ್ಕೆ ಬಂದೆ" ಎಂದು ಹೇಳಿದರು.


2022 ರ ಆರಂಭದಲ್ಲಿ ತನ್ನ ಕೆಲಸವನ್ನು ತೊರೆದ ನಂತರ, ಸಂತೋಷ್ ಮತ್ತು ದೀಪಿಕಾ ಒಂದು ವಿನೂತನವಾದ ಮತ್ತು ಕಾರ್ಯಸಾಧ್ಯವಾದ ಕಲ್ಪನೆಯೊಂದಿಗೆ ತಿಂಗಳುಗಳನ್ನು ಕಳೆದರು. ಆದರೆ ಈ ಆಲೋಚನೆ ಅವರಿಗೆ ತಕ್ಷಣಕ್ಕೆ ತಟ್ಟಲಿಲ್ಲ ಎಂದು ಮಾಜಿ ಐಟಿ ಉದ್ಯೋಗಿಯೂ ಆಗಿರುವ ದೀಪಿಕಾ ಹೇಳುತ್ತಾರೆ, ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ಕೆಲಸದಿಂದ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡರು.


ಮನೆಯ ಬಾಲ್ಕನಿಯಲ್ಲಿದ್ದ ಸಸ್ಯಗಳು ಬಾಡಿ ಹೋಗಿದ್ದವು


"ಸುಮಾರು ಐದು ವರ್ಷಗಳ ಹಿಂದೆ, ನಾನು ಗರ್ಭಿಣಿಯಾಗಿದ್ದಾಗ ಮತ್ತು ಉಡುಪಿಯ ನನ್ನ ಹೆತ್ತವರ ಮನೆಯಲ್ಲಿದ್ದೆ, ಸಂತೋಷ್ ಒಬ್ಬರೇ ಇಲ್ಲಿದ್ದರು. ನನ್ನ ಬಾಲ್ಕನಿಯಲ್ಲಿ ನಾನು ಸಾಕಷ್ಟು ಸಸ್ಯಗಳನ್ನು ಬೆಳೆಸಿದ್ದೆ ಮತ್ತು ಅವುಗಳಿಗೆ ನಿಯಮಿತವಾಗಿ ನೀರು ಹಾಕುವಂತೆ ನಾನು ಅವರಿಗೆ ಹೇಳಿದ್ದೆ. ಆದರೆ ಸಂತೋಷ್ ತನ್ನ ಕೆಲಸದಲ್ಲಿ ತುಂಬಾನೇ ಬ್ಯುಸಿ ಆಗಿದ್ದರು ಮತ್ತು ಆಗಾಗ್ಗೆ ಅವುಗಳಿಗೆ ನೀರು ಹಾಕಲು ಮರೆತಿದ್ದರು. ನಾನು ಮನೆಗೆ ಹೋದಾಗ ಅಲ್ಲಿದ್ದ ಸಸ್ಯಗಳೆಲ್ಲವೂ ಬಾಡಿ ಹೋಗಿದ್ದವು. ನಾವು ಮೊದಲ ಬಾರಿಗೆ ಈ ಸಮಸ್ಯೆಯನ್ನು ಎದುರಿಸಿದ್ದೆವು” ಎಂದು ದೀಪಿಕಾ ಅವರು ಹೇಳುತ್ತಾರೆ.


ಏಪ್ರಿಲ್ 2022 ರಲ್ಲಿ ದಂಪತಿಗಳು ಈ ಕಲ್ಪನೆಯನ್ನು ಜಾರಿಗೆ ತರಲು ಮತ್ತು ಕಾರ್ಯಗತಗೊಳಿಸಲು ಕೆಲಸವನ್ನು ಶುರು ಮಾಡಿದರು. "ಮೊದಲಿನಿಂದ ಶುರು ಮಾಡುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ದೀಪಿಕಾ ಮತ್ತು ನಾನು ಒಟ್ಟಿಗೆ ಆ ಕೆಲಸದಲ್ಲಿ ತೊಡಗಿದೆವು ಮತ್ತು ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಯಿತು" ಎಂದು ಸಂತೋಷ್ ಹೇಳುತ್ತಾರೆ.


ದೀಪಿಕಾ ಅವರು "ನಾವು ಅಂತಿಮವಾಗಿ ಸೆಪ್ಟೆಂಬರ್ 2022 ರ ವೇಳೆಗೆ ಕೆಲಸದ ಮೂಲಮಾದರಿಯೊಂದಿಗೆ ಬರಲು ಸಾಧ್ಯವಾಯಿತು ಮತ್ತು ಮುಂದಿನ ತಿಂಗಳುಗಳಲ್ಲಿ ನಮ್ಮ ಉತ್ಪನ್ನವನ್ನು ಪರೀಕ್ಷಿಸಿದ್ದೇವೆ. ಪ್ರಸ್ತುತ, ನಾವು ಅಂತಿಮ ಉತ್ಪನ್ನವನ್ನು ಹೊಂದಿದ್ದೇವೆ, ಅದು ಸ್ಥಾಪಿಸಲು ಸಿದ್ಧವಾಗಿತ್ತು" ಎಂದು ಹೇಳಿದರು.


ದೂರದಿಂದಲೇ ಸಸ್ಯಗಳಿಗೆ ನೀರುಣಿಸಲು ಆ್ಯಪ್ ಆಧಾರಿತ ಸಾಧನ


'ಉಕ್ಷತಿ ಆಟೋಮೇಷನ್ ಸಿಸ್ಟಮ್' ಎಂದು ಹೆಸರಿಸಲಾದ ಸಂತೋಷ್ ಮತ್ತು ದೀಪಿಕಾ ಅವರ ಸ್ಟಾರ್ಟ್ಅಪ್ ಖಾಸಗಿ ಲಿಮಿಟೆಡ್ ಕಂಪನಿಯಾಗಿ ನೋಂದಾಯಿಸಲು ಸಜ್ಜಾಗಿದೆ. ಅವರು ತಮ್ಮ ಉತ್ಪನ್ನಕ್ಕೆ ಶೀಘ್ರದಲ್ಲಿಯೇ ಪೇಟೆಂಟ್ ಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಅವರ "ಒಂದು ರೀತಿಯ" ಸಾಧನವು ಟೆರೇಸ್ ಮತ್ತು ಬಾಲ್ಕನಿ ಉದ್ಯಾನಗಳು ಸೇರಿದಂತೆ ದೊಡ್ಡ ಮತ್ತು ಸಣ್ಣ ತೋಟಗಳಿಗೆ ನೀರುಣಿಸುವ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ.


ಇದನ್ನೂ ಓದಿ: Air Pollution: ತಂಬಾಕು ಹೊಗೆಗಿಂತ ಸಖತ್​ ಡೇಂಜರಸ್‌ ಈ ವಾಯುಮಾಲಿನ್ಯ! ಎಚ್ಚರದಿಂದಿರಿ


ಸಂತೋಷ್ ಅವರ ಪ್ರಕಾರ, ಈ ಸಾಧನವನ್ನು ಅಭಿವೃದ್ಧಿಪಡಿಸುವ ಹಿಂದಿನ ಅವರ ಪ್ರಮುಖ ಗುರಿ ಜನರಿಗೆ ಈ ಸಸ್ಯಗಳಿಗೆ ನೀರು ಹರಿಸುವುದನ್ನು ಸುಲಭಗೊಳಿಸುವುದು ಮತ್ತು ವ್ಯರ್ಥವಾಗುವುದನ್ನು ಕಡಿಮೆ ಮಾಡುವುದು ಆಗಿದೆ. "ಈ ಸಾಧನವು ವೈ-ಫೈ ಡ್ರಿಪ್ ಕಂಟ್ರೋಲರ್ ಆಗಿದೆ. ಸಾಮಾನ್ಯ ಜನರ ಪರಿಭಾಷೆಯಲ್ಲಿ, ಇದನ್ನು ಇಂಟರ್ನೆಟ್-ಸಂಪರ್ಕಿತವಾದ ಸಾಧನ ಎಂದು ವ್ಯಾಖ್ಯಾನಿಸಬಹುದು, ಇದು ಜನರಿಗೆ ತಮ್ಮ ಸಸ್ಯಗಳಿಗೆ ನಿಗದಿತ ಆಧಾರದ ಮೇಲೆ ನೀರುಣಿಸಲು ಅನುವು ಮಾಡಿಕೊಡುತ್ತದೆ" ಎಂದು ಅವರು ವಿವರಿಸುತ್ತಾರೆ.


"ಇದು ಬಳಕೆದಾರರಿಗೆ ಸಸ್ಯಗಳಿಗೆ ನೀರುಣಿಸಲು ಸಮಯವನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಸಸ್ಯಕ್ಕೆ ನೀರುಣಿಸಬೇಕಾದ ಅವಧಿಯನ್ನು ಸಹ ಅವರು ನಿಗದಿಪಡಿಸಬಹುದು. ಈ ಸಾಧನವು ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ವೆಬ್‌ಸೈಟ್ ಮೂಲಕ ಅಥವಾ ನಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದು, ಇದು ಬಳಕೆದಾರರಿಗೆ ಎಲ್ಲಾ ಸಂಬಂಧಿತ ಅಪ್ಡೇಟ್ ಗಳ ಬಗ್ಗೆ ತಿಳಿಸುತ್ತದೆ" ಎಂದು ಸಂತೋಷ್ ವಿವರಿಸುತ್ತಾರೆ.


"ಬಳಕೆದಾರರು ತಮ್ಮ ಮನೆಯಲ್ಲಿನ ಸಸ್ಯಗಳಿಗೆ ನೀರುಣಿಸುವ ಸಮಯವನ್ನು ವೆಬ್‌ಸೈಟ್ ನಲ್ಲಿ ಸಂಗ್ರಹಿಸಬಹುದು ಮತ್ತು ಸಾಧನವನ್ನು ಆನ್ ಅಥವಾ ಆಫ್ ಮಾಡಬಹುದು" ಎಂದು ಅವರು ಹೇಳುತ್ತಾರೆ.


"ಬಾಲ್ಕನಿಗಳು ಮತ್ತು ತಾರಸಿ ತೋಟಗಳ ವಿಷಯಕ್ಕೆ ಬಂದಾಗ, ನೀರಿನ ಮೂಲವನ್ನು ಕಂಡು ಹಿಡಿಯುವ ಸಮಸ್ಯೆ ಇದೆ. ಅಂತಹ ಸಮಸ್ಯೆಗಳನ್ನು ನಿಭಾಯಿಸಲು, ನಾವು ನೀರಿನ ಟ್ಯಾಂಕ್ ಆಧಾರಿತ ನೀರಿನ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ, ಅಲ್ಲಿ ಬಳಕೆದಾರರು ನೀರನ್ನು ಸಂಗ್ರಹಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಬಳಸಬಹುದು. ಟ್ಯಾಂಕ್ ಖಾಲಿಯಾದಾಗ ಸಾಧನವು ಬಳಕೆದಾರರಿಗೆ ತಿಳಿಸುತ್ತದೆ" ಎಂದು ಸಂತೋಷ್ ಹೇಳುತ್ತಾರೆ.


ನೀರಿನ ವ್ಯರ್ಥವನ್ನು ಕಡಿಮೆ ಮಾಡುವತ್ತ ಪ್ರಜ್ಞಾಪೂರ್ವಕ ಹೆಜ್ಜೆಯಾಗಿ, ಅವರು ಷಡ್ಭುಜಾಕೃತಿಯ ಮರದ ಪೆಟ್ಟಿಗೆಯೊಳಗೆ ಇರಿಸಲಾದ ಟ್ಯಾಂಕ್ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದ್ದಾರೆ. "ಆರ್‌ಒ ಶುದ್ಧೀಕರಣ ಘಟಕಗಳು ಮತ್ತು ಎಸಿ ಕಂಪ್ರೆಸರ್ ಗಳಿಂದ ನೀರು ಆಗಾಗ್ಗೆ ವ್ಯರ್ಥವಾಗುತ್ತದೆ. ಆದ್ದರಿಂದ, ನಾವು ಟ್ಯಾಂಕ್ ಅನ್ನು ದೊಡ್ಡ ಟ್ಯಾಂಕ್ ನಲ್ಲಿ ಸಂಗ್ರಹಿಸುವ ರೀತಿಯಲ್ಲಿ ಚಿಕ್ಕ ಟ್ಯಾಂಕ್ ಅನ್ನು ಹೊಂದಿಸುತ್ತೇವೆ. ನಂತರ ಈ ನೀರನ್ನು ಸಸ್ಯಗಳಿಗೆ ನೀರುಣಿಸಲು ಬಳಸಲಾಗುತ್ತದೆ, ಆ ಮೂಲಕ ಅದನ್ನು ಉತ್ತಮವಾಗಿ ಬಳಸಲಾಗುವುದು" ಎಂದು ಅವರು ವಿವರಿಸುತ್ತಾರೆ.


ಇದನ್ನು ಬಳಸಿದವರು ಏನ್ ಹೇಳ್ತಾರೆ ನೋಡಿ


ಮಂಗಳೂರು ಮೂಲದ ಉದ್ಯಮಿ ಮಿಥುನ್ ಭಟ್ ಕಾಕುಂಜೆ ಅವರು ಸ್ವಯಂಚಾಲಿತ ನೀರಿನ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. "ಇದು ಉನ್ನತ ಗುಣಮಟ್ಟದ ಸಾಧನವಾಗಿದ್ದು, ಅದು ನನ್ನ ಸಸ್ಯಗಳ ಜೀವಿತಾವಧಿಯನ್ನು ಹೆಚ್ಚಿಸಲು ನನಗೆ ಸಹಾಯ ಮಾಡಿದೆ. ಇದು ಸಸ್ಯಗಳಿಗೆ ಸಲೀಸಾಗಿ ನೀರುಣಿಸಲು ನನಗೆ ಸಹಾಯ ಮಾಡುತ್ತದೆ, ವಿಶೇಷವಾಗಿ ನಾನು ಪ್ರಯಾಣಿಸುವಾಗ. ಅಪ್ಲಿಕೇಶನ್ ನಿರಂತರವಾಗಿ ನೀರಿನ ಮಟ್ಟ ಮತ್ತು ಬ್ಯಾಟರಿ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ನನ್ನ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ ಎಂದು ನಾನು ಹೇಳಲೇಬೇಕು" ಎಂದು ಹೇಳಿದರು. ಪ್ರಸ್ತುತವಾಗಿ ಈ ದಂಪತಿಗಳು ಮಂಗಳೂರಿನಲ್ಲಿ ಅಂತಹ ಐದು ಸಾಧನಗಳನ್ನು ಸ್ಥಾಪಿಸಿದ್ದಾರೆ.

Published by:Latha CG
First published: