ದಿನನಿತ್ಯ ದುಡಿಯುವ ಕೈಗಳಿಗೆ ಅದಿತ್ಯವಾರ (Sunday) ಬಂತೆಂದರೆ ಎಲ್ಲಿಲ್ಲದ ಖುಷಿ (Happy). ಬಹುತೇಕರು ಆದಿತ್ಯವಾರದಂದು ಮನೆಯಲ್ಲಿಯೇ ಕುಳಿತುಕೊಂಡು ಫ್ಯಾಮಿಲಿ (Family) ಜೊತೆಗೆ ಸಮಯ ಕಳೆಯಲು ಪ್ರಯತ್ನಿಸುತ್ತಾರೆ. ಅದರಲ್ಲೂ ಬೆಂಗಳೂರಿನಂತಹ (Bengaluru) ನಗರ ಪ್ರದೇಶಿಗರು ಸಿಗುವ ವಾರದ ಸಂಡೇಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಭಾನುವಾರದ ಬಾಡೂಟ ಮಾಡಲು ಪ್ಲಾನ್ (Plan) ಹಾಕಿಕೊಂಡಿರುತ್ತಾರೆ. ಅದರಂತೆ ಇಂದು ರವಿವಾರ ಚಿಕನ್ ಗೀ ರೋಸ್ಟ್ (Chicken Ghee Roast) ಮಡುವ ಮೂಲಕ ಸಂಡೇಯ ಭೂರಿ ಭೋಜನವನ್ನು ಸವಿಯಲು ಪ್ರಯತ್ನಿಸಿ
ಬಹುತೇಕರು ಚಿಕನ್ ಸೇವಿಸುತ್ತಾರೆ. ವಾರದ ರಜೆಯ ದಿವಸ ಕೋಳಿ ಮಾಂಸದ ಅಡುಗೆ ಮಾಡುವ ಮೂಲಕ ಆಹಾರ ಸವಿಯುತ್ತಾರೆ. ಅದರಲ್ಲೂ ಕೋಳಿ ಮಾಂಸವನ್ನು ಬಳಸಿಕೊಂಡು ನಾನಾ ರೆಸಿಪಿ ಮಾಡಿ ಅಡುಗೆ ತಯಾರಿಸುತ್ತಾರೆ. ಅದರಂತೆ ಇಂದು ಮಂಗಳೂರು ಶೈಲಿಯಲ್ಲಿ ಚಿಕನ್ ಗೀ ರೋಸ್ಟ್ ಮಾಡುವ ಮೂಲಕ ಆಹಾರ ಸೇವಿಸಿ ನೋಡಿ.
ಚಿಕನ್ ಮತ್ತು ತುಪ್ಪ ಸೇರಿಸಿ ಈ ಅಡುಗೆಯನ್ನು ಮಾಡಲಾಗುತ್ತದೆ. ಕೋಳಿ ಮಾಂಸ ಮತ್ತು ತುಪ್ಪದ ಜೊತೆಗೆ ಇನ್ನಿತರ ಮಸಾಲೆಯು ಸೇರಿದಂತೆ ಚಿಕನ್ ಗೀ ರೋಸ್ಟ್ ಪಾಕವು ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. ಅಂದಹಾಗೆಯೇ ಕರಾವಳಿ ಭಾಗದ ಹೊಟೇಲ್ಗಳಲ್ಲಿ ಚಿಕನ್ ಗೀ ರೋಸ್ಟ್ ಎಂದರೆ ಭಾರೀ ಫೇಮಸ್. ಅದರೊಂದು ಒಂದು ಪ್ಲೇಟ್ ಗೀ ರೋಸ್ಟ್ ಬೆಲೆಯು ದೊಡ್ಡ ಅಂಖ್ಯೆಯಲ್ಲಿರುತ್ತದೆ.
ರವಿವಾರದಂದು ಮನೆಯಲ್ಲಿ ಕುಳಿತು ಚಿಕನ್ ಗೀ ರೋಸ್ಟ್ ಮಾಡಲು ಯೋಚಿಸುವವರಿಗಾಗಿ. ಪಾಕ ವಿಧಾನದ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಗರಿಗರಿಯಾದ Andhra Style Bhindi: ಇದನ್ನು ಮಾಡುವ ವಿಧಾನ ಇಲ್ಲಿದೆ..!
ಬೇಕಾಗುವ ಸಾಮಗ್ರಿಗಳು:
1ಕೆಜಿ ಚಿಕನ್,1/2ಲಿಂಬೆ ರಸ,ಸ್ವಲ್ಪ ಮೊಸರು,ಒಂದು ಚಮಚ ಅರಿಶಿಣ, ಮೆಣಸಿನ ಪುಡಿ, ಮೆಂತ್ಯೆ, ಕಾಳು ಮೆಣಸು, ಜೀರಿಗೆ, ಕೊತಂಬರಿ,25 ಬ್ಯಾಡಗಿ ಮೆಣಸು,ಬೆಲ್ಲ, ಹುಣಸೆ ಹುಳಿ, ಕರಿಬೇವಿನ ಸೊಪ್ಪು,ಕೊತ್ತಂಬರಿ ಸೊಪ್ಪು,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ, ಉಪ್ಪು, ತುಪ್ಪ.
ಮಾಡುವ ವಿಧಾನ:
-ಒಂದು ಪಾತ್ರೆಯಲ್ಲಿ ಉಪ್ಪು ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿನ,ಮೆಣಸಿನ ಪುಡಿ, ಮೊಸರು,ಲಿಂಬೆರಸ,ಚಿಕನ್ ಹಾಕಿ ಚೆನ್ನಾಗಿ ಕಲಸಿ ಅರ್ಧ ಗಂಟೆ ನೆನೆಯಲು ಇಡಿ.
-ಇನ್ನೊಂದು ಪಾತ್ರೆಯಲ್ಲಿ ಬೆಳ್ಳುಳ್ಳಿ,5 ಮೆಂತ್ಯೆ,ಕಾಳು ಮೆಣಸು,ಜೀರಿಗೆ, ಕೊತಂಬರಿ, ಬ್ಯಾಡಗಿ ಮೆಣಸು ಹಾಕಿ ಹುರಿಯಿರಿ,ನಂತರ ತಣ್ಣಗಾದ ಮೇಲೆ ಮಿಕ್ಸ್ ಅಲ್ಲಿ ಹಾಕಿ ರುಬ್ಬಿ,
-ನಂತರ ಹುಣಸೆ ಹಣ್ಣು,ಸ್ವಲ್ಪ ಬೆಲ್ಲ, ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ 2 ಬಗೆಯ ಸಲಾಡ್ ಮಾಡಿ ತಿನ್ನಿ
-ಒಂದು ಬಾಣಲೆ ಗೆ ತುಪ್ಪ ಹಾಕಿ ನೆನೆಯಲು ಇಟ್ಟಿರುವ ಚಿಕನ್ ಹಾಕಿ ಹದವಾಗಿ ಫ್ರೈ ಮಾಡಿದ ನಂತರ ಬೇರೆ ಪಾತ್ರೆಗೆ ಫ್ರೈ ಅದ ಚಿಕನ್ ಅನ್ನು ತೆಗೆದಿಟ್ಟುಕೊಳ್ಳಿ.
-ಅದೇ ಬಾಣಲೆಗೆ ಇನ್ನೂ ಸ್ವಲ್ಪ ತುಪ್ಪ ಸೇರಿಸಿ ಮಿಕ್ಸಿ ಮಾಡಿದ ಮಸಾಲೆ ಯನ್ನು ಉಪ್ಪು ಸೇರಿಸಿ ಕುದಿಯಲು ಬಿಡಿ .
-ಮಸಾಲೆ ಚೆನ್ನಾಗಿ ಕುದಿದ ನಂತರ ಫ್ರೈ ಮಾಡಿರುವ ಚಿಕನ್,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ .
-ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಕರಿಬೇವಿನ ಸೊಪ್ಪು ಸೇರಿಸಿದರೆ ಚಿಕನ್ ಘೀ ರೋಸ್ಟ್ ಸಿದ್ದ .
ಕೋಳಿ ಮಾಂಸ ಬಳಸಿಕೊಂಡು ನಾನಾ ಆಡುಗೆ ಮಾಡಬಹುದಾಗಿದೆ. ಆದರೆ ಮಂಗಳೂರು ಅಥವಾ ಕರಾವಳಿ ಭಾಗದಲ್ಲಿ ಮೀನಿನ ಜೊತೆಗೆ ಕೋಳಿ ಮಾಂಸದ ಅಡುಗೆಯಲ್ಲಿ ಚಿಕನ್ ಗೀ ರೋಸ್ಟ್ ಜನಪ್ರಿಯತೆ ಗಳಿಸಿದೆ. ಬಹುತೇಕರು ಮನೆಯಲ್ಲಿ ಚಿಕನ್ ಗೀ ರೋಸ್ಟ್ ಮಾಡಿ ಸವಿತಯುತ್ತಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ