Egg Green Masala: ಮೊಟ್ಟೆ ಗ್ರೀನ್ ಮಸಾಲೆ ಮಾಡೋಕೆ ತಲೆ ಕೆಡಿಸ್ಕೋಬೇಡಿ, ಹೀಗೆ ಮಾಡಿ

ಹಸಿ ಮೊಟ್ಟೆಯನ್ನು ಒಡೆದು ಮಾಡುವ ಸಾಂಬಾರ್​ ಮತ್ತಷ್ಟು ರುಚಿಕರವಾಗಿರುತ್ತದೆ. ಆದರೆ ಇಲ್ಲಿ ಮೊಟ್ಟೆಯನ್ನು ಬೇಯಿಸಿ ನಂತರ ಅದರಿಂದ ಗ್ರೀನ್​ ಮಸಾಲೆ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಮೊಟ್ಟೆ ಗ್ರೀನ್ ಮಸಾಲೆ

ಮೊಟ್ಟೆ ಗ್ರೀನ್ ಮಸಾಲೆ

  • Share this:
    ಕೋಳಿ ಮೊಟ್ಟೆ (Egg) ಬಳಸಿ ನಾನಾ ರೆಸಿಪಿ (Recipe) ಮಾಡಬಹುದಾಗಿದೆ. ಮೊಟ್ಟೆ ಬುರ್ಜಿ (Egg Bhurji), ಮೊಟ್ಟೆ ರೋಸ್ಟ್ (Egg Roast)​, ಮೊಟ್ಟೆ ಆಮ್ಲೆಟ್​ (Egg Omlet) ಹೀಗೆ ನಾನಾ ತರಹದ ಅಡುಗೆ ತಯಾರಿಸಬಹುದು. ಅಂದಹಾಗೆಯೇ ಆಮ್ಲೆಟ್​ ವೇಗ ಮತ್ತು ತಕ್ಷಣಕ್ಕೆ ಆಗುವ ರೆಸಿಪಿಗಳಲ್ಲಿ ಒಂದು. ಬಹುತೇಕರಿಗೆ ಈ ರೆಸಿಪಿ ತಿಳಿದಿದೆ. ಆದರೆ ರುಚಿಕರವಾಗಿ ಮೊಟ್ಟೆ ಗ್ರೀನ್​ ಮಸಾಲೆ (Egg Green Masale) ತಯಾರಿಸಲು ಗೊತ್ತಿದ್ಯಾ?. ಸುಲಭವಾಗಿ ಮತ್ತು ರುಚಿಕರವಾದ ಗ್ರೀನ್​ ಮಸಾಲೆಯನ್ನು ಮಾಡುವ ಪಾಕ ವಿಧಾನದ (cooking method) ಬಗ್ಗೆ ಮಾಹಿತಿ ಇಲ್ಲಿದೆ. ಮಳೆಗಾಲದ ಸಮಯದಲ್ಲಿ ಮತ್ತು ರಜಾ ದಿನಗಳಲ್ಲಿ ಕೋಳಿ ಮೊಟ್ಟೆ ಬಳಸಿ ರುಚಿಕರವಾದ ಮೊಟ್ಟೆ ಗ್ರೀನ್​ ಮಸಾಲೆಯನ್ನು ತಯಾರಿಸಬಹುದು.

    ಮೊಟ್ಟೆಯಲ್ಲಿ ಪೋಷಕಾಂಶಗಳು ಅಡಗಿವೆ. ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ನರು. ಜಿಮ್​ ಅಥವಾ ಬಲಿಷ್ಠ ದೇಹವನ್ನು ಹೊಂದಲು ದಿನಕೊಂದು ಮೊಟ್ಟೆಯನ್ನು ತಿನ್ನುವವರು ಇದ್ದಾರೆ. ಹಾಗಾಗಿ ನಾಟಿ ಕೋಳಿ ಮೊಟ್ಟೆಗೆ ಬೇಡಿಕೆ ಜಾಸ್ತಿ. ಮೊಟ್ಟೆಯಿಂದ ನಾನಾ ರೆಸಿಪಿ ತಯಾರಿಸಬಹುದಾಗಿದೆ. ಅಷ್ಟೇ ಏಕೆ ಮೊಟ್ಟೆ ಬೇಯಿಸಿ ನಂತರ ಅದನ್ನು ಸಾಂಬರ್​ ಮಾಡುವ ಅಥವಾ ನಾನಾ ರೆಸಿಪಿ ಸವಿದಿರುತ್ತೀರಿ. ಹಸಿ ಮೊಟ್ಟೆಯನ್ನು ಒಡೆದು ಮಾಡುವ ಸಾಂಬರ್​ ಮತ್ತಷ್ಟು ರುಚಿಕರವಾಗಿರುತ್ತದೆ. ಆದರೆ ಇಲ್ಲಿ ಮೊಟ್ಟೆಯನ್ನು ಬೇಯಿಸಿ ನಂತರ ಅದರಿಂದ ಗ್ರೀನ್​ ಮಸಾಲೆ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

    ಮೊದಲಿಗೆ ಬೇಯಿಸಿದ ಮೊಟ್ಟೆ, ಎಣ್ಣೆ, ಈರುಳ್ಳಿ, ಹಸಿ ಮೆಣಸು, ಒಂದು ಕಪ್ ಕೊತ್ತಂಬರಿ ಸೊಪ್ಪು,1/2 ಕಪ್ ಪುದೀನ ಸೊಪ್ಪು,ಸ್ವಲ್ಪ ಕರಿಬೇವಿನ ಎಲೆ, ಅರಶಿಣ ಪುಡಿ, 5 ಬೇಯಿಸಿದ ಮೊಟ್ಟೆ,ಗೋಡಂಬಿ, ಶುಂಠಿ, ಬೆಳ್ಳುಳ್ಳಿ, ಪುಲಾವ್ ಎಲೆ, ಚೆಕ್ಕೆ, ಸ್ಟಾರ್, ಲವಂಗ, ಕರಿಮೆಣಸು, ಸೋಂಪು, ಗರಂ ಮಸಾಲೆ, ಕೊತಂಬರಿ ಪುಡಿ, ಲಿಂಬೆ, ಉಪ್ಪು ಈ ಸಾಂಆಗ್ರಿಗಳನ್ನು ತೆಗೆದಿಟ್ಟುಕೊಳ್ಳಿ. ಪಾಕ ತಯಾರಿಸಲು ಇವು ಮುಖ್ಯವಾಗಿ ಬೇಕಾಗುತ್ತವೆ.

    ಮೊಟ್ಟೆ ಗ್ರೀನ್​ ಮಸಾಲೆ ಮಾಡುವ ವಿಧಾನ ಹೇಗೆ?:

    ಒಂದು ಬಾಣಲೆಗೆ 3 ಚಮಚದಷ್ಟು ಎಣ್ಣೆ ಹಾಕಬೇಕು. ಉರಿ ಬಿಸಿಗೆ ಕಾದ ನಂತರ ಸಣ್ಣ ತುಂಡರಿಸಿದ 2 ಈರುಳ್ಳಿ, 5 ಹಸಿ ಮೆಣಸು ಮತ್ತು 1 ಕಪ್ ಕೊತಂಬರಿ ಸೊಪ್ಪನ್ನು ಹಾಕಿ ಹದಾ ಬಿಸಿಯಲ್ಲಿ ಹುರಿದುಕೊಳ್ಳಿ. ನಂತರ 1/2 ಕಪ್ ಪುದೀನ ಸೊಪ್ಪು ,ಸ್ವಲ್ಪ ಕರಿಬೇವಿನ ಎಲೆ ಹಾಕಿ ಹುರಿದು ಕೊಳ್ಳಿ.

    ಬಳಿಕ ಒಂದು ಬಾಣಲೆಗೆ ಸಲ್ಪ ಎಣ್ಣೆ ಹಾಕಿ, ಕಾದ ನಂತರ ಅರಶಿಣ ಪುಡಿ 1 ಚಮಚ ಹಾಕಿ , ಬೇಯಿಸಿದ ಮೊಟ್ಟೆ ಹಾಕಿ ಫ್ರೈ ಮಾಡಿ. ಹುರಿದ ಮಿಶ್ರಣ ತಣ್ಣಗಾದ ಮೇಲೆ,20 ಗೋಡಂಬಿ ,ಸಲ್ಪ ಶುಂಠಿ, 12 ಬೆಳ್ಳುಳ್ಳಿ ಸೇರಿಸಿ ಮಿಕ್ಸಿ ಮಾಡಿ.

    ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಕಾದ ನಂತರ, ಪುಲಾವ್ ಎಲೆ, ಚೆಕ್ಕೆ, ಲವಂಗ,ಕರಿಮೆಣಸು,ಸೋಂಪು  ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿಯಲ್ಲಿ ರುಬ್ಬಿದ  ಮಸಾಲೆ ಹಾಕಬೇಕು. ಒಂದು ಚಮಚ ಗರಂ ಮಸಾಲೆ,ಒಂದು ಚಮಚ ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಫ್ರೈ ಮಾಡಿದ ಮೊಟ್ಟೆ ಸೇರಿಸಿ, ಕೊನೆಯಲ್ಲಿ ಲಿಂಬೆರಸ ಸೇರಿಸಿದರೆ ಮೊಟ್ಟೆ ಗ್ರೀನ್ ಮಸಾಲ ಸವಿಯಲು ಸಿದ್ದ

    ವರದಿ: ಸುಮನ ಕುಮಾರಿ
    Published by:Harshith AS
    First published: