• Home
  • »
  • News
  • »
  • lifestyle
  • »
  • Video: ಬಂಗುಡೆ ರವಾ ಫ್ರೈ ಸವಿಯಲು ಬೇರೆಲ್ಲೂ ಹೋಗಬೇಕಾಗಿಲ್ಲ! ಮನೆಯಲ್ಲಿ ನೀವೇ ತಯಾರಿಸಿ ಸವಿಯಬಹುದು

Video: ಬಂಗುಡೆ ರವಾ ಫ್ರೈ ಸವಿಯಲು ಬೇರೆಲ್ಲೂ ಹೋಗಬೇಕಾಗಿಲ್ಲ! ಮನೆಯಲ್ಲಿ ನೀವೇ ತಯಾರಿಸಿ ಸವಿಯಬಹುದು

ಬಂಗುಡೆ ಮೀನು ರವಾ ಫ್ರೈ

ಬಂಗುಡೆ ಮೀನು ರವಾ ಫ್ರೈ

Bangude Rava Fry: ಬೆಂಗಳೂರಿನ (Bengaluru) ಹಲವಾರು ಹೊಟೇಲ್​ಗಳಲ್ಲಿ (Hotel) ಬಂಗುಡೆ ರವಾ ಫ್ರೈ ಸಿಗುತ್ತದೆ. ಆದರೆ ಬಂಗುಡೆ ರವಾ ಫ್ರೈ ಇದನ್ನು ಮನೆಯಲ್ಲಿಯೇ ಮಾಡಬಹುದಾಗಿದೆ. ಮಸಾಲೆ ಬಗ್ಗೆ ತಿಳಿದುಕೊಂಡು ಅಡುಗೆ ತಯಾರಿಸಬಹುದಾಗಿದೆ.

  • Share this:

    ಬಂಗುಡೆ ಮೀನು ರವಾ ಫ್ರೈ (Bangude Fish Rava Fry) ತಿಂದಿದ್ದೀರಾ? ಅದರಲ್ಲೂ ಕರಾವಳಿ (Coast) ಭಾಗಕ್ಕೆ ಬೇಟಿ ನೀಡಿದಾಗ ಬಂಗುಡೆ ರವಾ ಫ್ರೈ ಸವಿಯಲು ಮರೆಯದಿರಿ. ಹೊಳೆಯ ಮೀನಿಗೂ ಮತ್ತು ಸಮುದ್ರ ಮೀನಿನಿಂದ ತಯಾರಿಸುವ ಆಹಾರಕ್ಕೂ (Food) ವ್ಯತ್ಯಾಸವಿದೆ. ಹೊಳೆಯ ಮೀನಿಗಿಂತ ಸಮುದ್ರ ಭಾಗದ ಮೀನು ರುಚಿಯಾಗಿರುತ್ತದೆ. ಅದರಲ್ಲೂ ಬಂಗುಡೆ ಮೀನು ಬಹಳ ರುಚಿಯಾಗಿರುತ್ತದೆ. ಸರಿಯಾದ ಮಸಾಲೆ (Spice) ಜೊತೆ ಸೇರಿದಾಗ ಸವಿಯಲು ಉತ್ತಮವಾಗಿರುತ್ತದೆ. ಮಂಗಳೂರು ಭಾಗದಲ್ಲಿ ಮಾತ್ರವಲ್ಲ, ಬೆಂಗಳೂರಿನ (Bengaluru) ಹಲವಾರು ಹೊಟೇಲ್​ಗಳಲ್ಲಿ (Hotel) ಬಂಗುಡೆ ರವಾ ಫ್ರೈ ಸಿಗುತ್ತದೆ. ಆದರೆ ಬಂಗುಡೆ ರವಾ ಫ್ರೈ ಇದನ್ನು ಮನೆಯಲ್ಲಿಯೇ ಮಾಡಬಹುದಾಗಿದೆ. ಮಸಾಲೆ ಬಗ್ಗೆ ತಿಳಿದುಕೊಂಡು ಅಡುಗೆ ತಯಾರಿಸಬಹುದಾಗಿದೆ.


    ಅಂದಹಾಗೆಯೇ ಮಂಗಳೂರು ಶೈಲಿಯಲ್ಲಿ ಬಂಗುಡೆ ರವಾ ಫ್ರೈ ಮಾಡುವ ಸುಲಭ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.


    ಮೀನನ್ನು ಸರಿಯಾಗಿ ಶುಚಿ ಮಾಡಿ ತೆಗೆದಿಟ್ಟಿರಬೇಕು. ಅದರಲ್ಲೂ ಆಗ ತಾನೆ ಸಿಕ್ಕಿದ ಬಂಗುಡೆ ಮೀನಿನ ರವಾ ಪ್ರೈ ತಿನ್ನಲು ತುಂಬಾ ರುಚಿಯಾಗಿರುತ್ತದೆ.


    ಬೇಕಾಗುವ ಸಾಮಾಗ್ರಿಗಳು


    3-4 ಚಮಚ ಖಾರದ ಪುಡಿ


    1 ಚಮಚ ಅರಿಶಿನ ಹುಡಿ


    2 ಚಮಚ ಕೊತ್ತಂಬರಿ ಹುಡಿ


    1 ಚಮಚ ಜೀರಿಗೆ ಹುಡಿ


    1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್​


    4 ಚಮಚ ಕಾನ್ಪವರ್​


    ರುಚಿಗೆ ತಕ್ಕ ಉಪ್ಪು


    ಇದನ್ನೂ ಓದಿ: Sunday Special Non-Veg: ಇಂದು ನಿಮ್ಮ ಮನೆಯಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ಬಂಗಾಳಿ ಶೈಲಿಯ ರೇಜಲ್ ಚಿಕನ್


    ಬಂಗುಡೆ ರವಾ ಫ್ರೈ ಮಾಡುವ ವಿಧಾನ:


    ಇವೆಲ್ಲವನ್ನು ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಮಿಕ್ಸ್​ ಮಾಡಬೇಕು. ಆ ಬಳಿಕ ಒಂದು ಗ್ಲಾಸ್​​ನಲ್ಲಿ ಕೊಂಚ ಹುಣಸೆ ಹಣ್ಣು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು, ಆ ಹುಣಸೆ ಹಣ್ಣಿನ ನೀರನ್ನು ಮಸಾಲೆಗೆ ಮೇಲೆ ಹಾಕಿ. ರುಚಿಗೆ ತಕ್ಕ ಹುಳಿ ಇದೆಯಾ ಎಂದು ಖಚಿತಪಡಿಸಿಕೊಳ್ಳಿ.


    ಇಷ್ಟೆಲ್ಲಾ ಆದ ಬಳಿಕ ಸ್ವಲ್ಲ ನೀರು ಹಾಕಿ ಮಸಾಲೆಯನ್ನು ಮಿಕ್ಸ್​ ಮಾಡಿ. ಹೆಚ್ಚು ನೀರು ಹಾಕಬೇಡಿ. ಮೀನಿಗೆ ಮಸಾಲೆ ಹಿಡಿಯುವ ಹಾಗೆಯೇ ದಪ್ಪವಾಗಿ ಮಸಾಲೆಯನ್ನು ತಯಾರಿಸಿ. ಮೀನಿಗೆ ಮಸಾಲೆ ಸವರಿದ ನಂತರ 15 ನಿಮಿಷ ಅಥವಾ 30 ನಿಮಿಷ ಹಾಗೆಯೇ ಇಡಬೇಕು.


    ಬಳಿಕ ಒಂದು ಪ್ಲೇಟ್​​ನಲ್ಲಿ ರವೆಯನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಕೊಂಚ ಹುಡಿ ಉಪ್ಪು ಸೇರಿಸಬೇಕು. ಇಲ್ಲದಿದ್ದರೆ ಮೀನು ರುಚಿ ಕಡಿಮೆಯಾಗುತ್ತದೆ. ಉಪ್ಪು ಇದ್ದಾಗ ಮೀನಿನ ರುಚಿ ಚೆನ್ನಾಗಿರುತ್ತದೆ.




    ಇದನ್ನೂ ಓದಿ:  Interesting Facts: ಬಿರಿಯಾನಿ ಮಡಕೆಗಳ ಸುತ್ತ ಕೆಂಪು ಬಟ್ಟೆ ಸುತ್ತುವುದು ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ


    ನಂತರ ಸರಿಯಾಗಿ ಮಸಾಲೆ ಸೇರಿಕೊಂಡ ಮೀನನ್ನು ಪ್ಲೇಟ್​ನಲ್ಲಿರುವ ರವೆಗೆ ಅದ್ದಬೇಕು. ಎರಡು ಭಾಗಕ್ಕೂ ಸರಿಯಾಗಿ ರವೆಯನ್ನು ಅಂಟುವಂತೆ ಮಾಡಬೇಕು. ಮಸಾಲೆ ದಪ್ಪವಾಗಿ ಹಚ್ಚಿದಾಗ ರವೆಯು ಮೀನಿಗೆ ಸರಿಯಾಗಿ ಅಂಟಿಕೊಳ್ಳುತ್ತದೆ. ರವೆ ಅಂಟಿಸಿದ ಮೀನನ್ನು ಬಾಳೆ ಎಲೆಯ ಮೇಲಿಡಿ


    ಗ್ಯಾಸ್​ ಉರಿಸಿ. ನಂತರ ಒಂದು ಪಾತ್ರೆ ತೆಗೆದುಕೊಂಡು ಎಣ್ಣೆಯನ್ನು ಹಾಕಿರಿ. ಎಣ್ಣೆ ಹೆಚ್ಚು ಬಿಸಿಯಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಬಳಿಕ ಬಾಳೆ ಎಲೆಯ ಮೇಲಿರುವ ಮೀನನ್ನು ಒಂದೊಂದಾಗಿ ತೆಗೆದುಕೊಂಡು ಖಾದಿರುವ ಎಣ್ಣೆಗೆ ಬಿಡಬೇಕು. ಮೀನಿನ ಒಂದು ಭಾಗವು 5 ನಿಮಿಷ ಮತ್ತು ಇನ್ನೊಂದು ಭಾಗವನ್ನು 5 ನಿಮಿಷ ಎಣ್ಣೆಯಲ್ಲಿ ಬೇಯಿಸಿ. ನಂತರ ಎಣ್ಣೆಯಿಂದ ತೆಗೆದಂತೆ ಸವಿಯಬಹುದಾಗಿದೆ.

    Published by:Harshith AS
    First published: