44 ವರ್ಷಗಳ ಬಳಿಕ ದಂಡ ಕಟ್ಟಿ ಸುದ್ದಿಯಾದ 'ಡೇವ್'

news18
Updated:July 5, 2018, 5:34 PM IST
44 ವರ್ಷಗಳ ಬಳಿಕ ದಂಡ ಕಟ್ಟಿ ಸುದ್ದಿಯಾದ 'ಡೇವ್'
news18
Updated: July 5, 2018, 5:34 PM IST
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ನಗರಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೆ ಅಲ್ಲಿ-ಇಲ್ಲಿ ಗಾಡಿ ನಿಲ್ಲಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದು ವಾಡಿಕೆ. ಇಂತಹ ಸಮಯದಲ್ಲಿ ನೋ ಪಾರ್ಕಿಂಗ್ ಜಾಗದಲ್ಲೂ ವಾಹನಗಳನ್ನು ನಿಲ್ಲಿಸಿ ಬೇಗ ಬಂದು ಬಿಡಬಹುದು ಎಂದು ಹೊರಟು ಬಿಡುತ್ತೇವೆ. ಇದರಿಂದ ಕೆಲ ಬಾರಿ ಸಂಚಾರಿ ಪೊಲೀಸರಿಂದ ದಂಡ ಕಟ್ಟಿಸಿಕೊಳ್ಳಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಆದರೆ ಎಷ್ಟೋ ಬಾರಿ ಪೊಲೀಸರನ್ನು ಯಾಮಾರಿಸಿ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ 44 ವರ್ಷಗಳ ಬಳಿಕ ದಂಡ ಪಾವತಿಸಿ ಸುದ್ದಿಯಾಗಿದ್ದಾರೆ.

1974 ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾ ನಗರದಲ್ಲಿ ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದಕ್ಕಾಗಿ ಡೇವ್ ಎಂಬವರಿಗೆ 2 ಡಾಲರ್ ದಂಡ ವಿಧಿಸಲಾಗಿತ್ತು. ಈ ಸಮಯದಲ್ಲಿ ದಂಡ ಪಾವತಿಸದೇ ಫೈನ್ ಟಿಕೆಟ್​ ಅನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ದಂಡ ಕಟ್ಟದೇ ಇರುವ ಬಗ್ಗೆ ಡೇವ್ ಅವರಿಗೆ ಪಶ್ಚಾತಾಪ ಮೂಡಿದೆ.


Loading...

ಇದರಿಂದ ತಮ್ಮ ಹಳೆಯ ಪಾರ್ಕಿಂಗ್ ಫೈನ್​ ಟಿಕೆಟ್​ ಜೊತೆ 2 ಡಾಲರ್ ಬದಲಾಗಿ 5 ಡಾಲರ್ ಮೊತ್ತವನ್ನು ಪೆನ್ಸಿಲ್ವೇನಿಯಾ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. 1974 ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ 2 ಡಾಲರ್ ದಂಡ ವಿಧಿಸಲಾಗುತಿತ್ತು.  ಈಗ 3 ಡಾಲರ್ ಹೆಚ್ಚುವರಿ ಬಡ್ಡಿ ಸೇರಿಸಿ 5 ಡಾಲರ್ ದಂಡ ಕಟ್ಟುತ್ತಿದ್ದೇನೆ ಎಂದು ಪತ್ರದ ಮೂಲಕ ಡೇವ್ ತಿಳಿಸಿದ್ದಾರೆ.

'ಆತ್ಮೀಯ ಡಿಪಿ, ನಾನು ಈ ಟಿಕೆಟ್​ ಅನ್ನು ಸುಮಾರು 40 ವರ್ಷಗಳಿಂದ ನನ್ನಲ್ಲೇ ಉಳಿಸಿಕೊಂಡಿದ್ದೇನೆ. ಪ್ರತಿಬಾರಿಯೂ ಫೈನ್ ಕಟ್ಟಲು ಇಚ್ಛಿಸುತ್ತೇನೆ, ಆದರೆ ಅದು ಸಾಧ್ಯವಾಗಿರಲಿಲ್ಲ. ನಾನು ಯಾರು ಎಂಬ ಮಾಹಿತಿ ನೀಡದಿರುವುದಕ್ಕೆ ಕ್ಷಮೆಯಿರಲಿ' ಎಂದು ಡೇವ್ ದಂಡದ ಮೊತ್ತದೊಂದಿಗೆ ಕೈ ಬರಹವನ್ನು ಕಳುಹಿಸಿದ್ದಾರೆ.


ತಮ್ಮ ಗುರುತನ್ನು ತಿಳಿಯ ಬಾರದೆಂಬ ಉದ್ದೇಶದಿಂದ ಡೇವ್ ಪತ್ರದ ವಿಳಾಸವನ್ನು 'ಪಶ್ಚಾತಾಪದಿಂದ, ವೇವಾರ್ಡ್ ರೋಡ್, ಎನಿಟೌನ್ ಎಂದು ಬರೆದಿದ್ದು ವಿಶೇಷವಾಗಿತ್ತು.

ಇಷ್ಟೊಂದು ವರ್ಷಗಳ ಬಳಿಕ ದಂಡ ಪಾವತಿಸಿರುವ ಡೇವ್ ಅವರ ಪ್ರಮಾಣಿಕತೆಯನ್ನು ನಾವು ಗೌರವಿಸುತ್ತೇವೆ ಎಂದು ಪೆನ್ಸಿಲ್ವೇನಿಯಾದ ಪೊಲೀಸ್ ಮುಖ್ಯಸ್ಥ ಮೈಕೆಲ್ ಕೊಂಬ್ಸ್ ತಿಳಿಸಿದ್ದಾರೆ.

ಈ ಅಪರೂಪದ ಫೈನ್ ಫೋಟೋಗಳು ಸಾಮಾಜಿ ತಾಣದಲ್ಲಿ ವೈರಲ್ ಆಗಿದ್ದು, 44 ವರ್ಷಗಳ ಬಳಿಕ ದಂಡ ಕಟ್ಟಿದ ಡೇವ್ ಅವರ ಪ್ರಮಾಣಿಕತೆಗೆ ಭರಪೂರ ಅಭಿನಂದನೆಗಳು ಹರಿದು ಬರುತ್ತಿವೆ.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...