ಮಲಯಾಳಂನ ಸೂಪರ್ ಸ್ಟಾರ್ಸ್ ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ (Mohan Lal). ತಮ್ಮ ಅಮೋಘ ಅಭಿನಯದ ಮೂಲಕ ಮಾಲಿವುಡ್ನಲ್ಲಿ (Mollywood) ಮಿಂಚುತ್ತಿರುವ ಎರಡನೇ ಸೂಪರ್ ಸ್ಟಾರ್ ಆಗಿರುವ ಮೋಹನ್ ಲಾಲ್ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು ಎಪ್ಪತ್ತಾದರೂ ಹರೆಯದ ಯುವಕನಂತೆ ಕಾಣುತ್ತಾರೆ. ಅವರು ಈ ರೀತಿ ಇನ್ನು ಯುವಕನಂತೆ ಕಾಣಲು ಪ್ರಮುಖ ಕಾರಣ ಅವರ ಆಹಾರ ಪದ್ಧತಿ, ವರ್ಕೌಟ್. ಹೌದು ಹೆಚ್ಚು ಫಿಟ್ನೆಸ್ (Fitness) ಕಡೆಗೆ ಗಮನ ಹರಿಸುವ ಮೋಹನ್ ಲಾಲ್ ಪ್ರತಿ ನಿತ್ಯ ಜಿಮ್ನಲ್ಲಿ ದೇಹ ದಂಡಿಸುತ್ತಾರೆ. 70 ವಯಸ್ಸಾದರೂ ಆರೋಗ್ಯ ಮತ್ತು ಫಿಟ್ನೆಸ್ ಕಾಯ್ದುಕೊಂಡು ಎಲ್ಲರ ನೋಟ ತಮ್ಮತ್ತ ಸೆಳೆಯುವಂತೆ ಮಾಡುತ್ತಾರೆ.
ಇದೀಗ
ಮೋಹನ್ ಲಾಲ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರಿವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು ಜಿಮ್ನಲ್ಲಿ ಬಹಳ ಉತ್ಸಾಹದಿಂದ ಕಾಲಿಗೆ ಸಂಬಂಧಿಸಿದ ವ್ಯಾಯಾಮ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಈ ಕಸರತ್ತು ನೋಡಿದರೆ ಯಾವುದೇ ಯುವ ನಟನಿಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ರೀತಿಯಲ್ಲಿ ಭಾಸವಾಗುತ್ತಿದೆ.
ಭಾರ ಎತ್ತುವುದು, ಬ್ಯಾಟ್ಲಿಂಗ್ ರೋಬ್ಸ್, ಬೆಂಚ್ ಪ್ರಸ್, ಹೀಗೆ ಎಲ್ಲಾ ರೀತಿಯ ವರ್ಕೌಟ್ಗಳನ್ನು ಅನಾಯಾಸವಾಗಿ ಮಾಡಿ ಮುಗಿಸಬಹುದು. ಇವರ ಈ ಉತ್ಸಾಹ ಯುವಕರಿಗೆ ಬಹಳ ಸ್ಫೂರ್ತಿ ನೀಡುವಂತಿದೆ. 70ನೇ ವಯಸ್ಸಿನಲ್ಲೂ ಮೋಹನ್ ಲಾಲ್ ಬಹಳ ಸರಳವಾಗಿ, ಸಲೀಸಾಗಿ ಕಸರತ್ತಿನಲ್ಲಿ ತೊಡಗಿರುವುದನ್ನು ಕಂಡರೆ ಒಮ್ಮೆಯಾದರೂ ವರ್ಕೌಟ್ ಮಾಡಬೇಕು ಎಂದೆನಿಸದೆ ಇರದು. ಇವರ ಈ ಇನ್ಸ್ಟಾಗ್ರಾಮ್ನಲ್ಲಿನ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಡಂಬಲ್ಸ್ ಹಿಡಿದು ವರ್ಕೌಟ್ ಮಾಡಿರುವುದನ್ನು ಶೇರ್ ಮಾಡಿದ್ದರು.
ಇದನ್ನೂ ಓದಿ: ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದೆ, ರಾಜ್ ಏನ್ ಮಾಡುತ್ತಿದ್ರು ಅಂತ ತಿಳಿಯಲಿಲ್ಲ ಎಂದ Shilpa Shetty
'ದೃಶ್ಯಂ 2' ಸಿನಿಮಾ ಪುರೈಸಿದ ಮೋಹನ್ ಲಾಲ್ ಇದೀಗ 'ಬರೋಜ್- ಗಾರ್ಡಿಯನ್ ಆಫ್ ಗಾಮಾಸ್ ಟ್ರೆಷರ್' ಸಿನಿಮಾದ ತಯಾರಿಯಲ್ಲಿದ್ದಾರೆ. ಇನ್ನಿ ಬಿ. ಉನ್ನಿಕೃಷ್ಣನ್ ನಿರ್ದೇಶನದ ಸಂಜೀಶ್ ಮಂಜರಿ ಆರ್ ಡಿ ಇಲ್ಯೂಮಿನೇಶನ್ ನಿರ್ಮಾಣದ ಅರಟ್ಟು ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇದನ್ನು ಎದುರು ನೋಡುತ್ತಿದ್ದಾರೆ. ನಾಯಕಿ ನಟಿಯಾಗಿ ಶ್ರದ್ಧಾ ಕಪೂರ್ ಬಣ್ಣ ಹಚ್ಚಿದ್ದಾರೆ.
![drishyam, grandmaster, Kanupapa, Lucifer, Malayalam superstar, mohanlal, Mohanlal Birthday Special, movies, ಲೂಸಿಫರ್, ದೃಶ್ಯಂ 2, ಮೋಹನ್ ಲಾಲ್, ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹನ್ ಲಾಲ್, Happy Birthday Mohanlal here are the must watch movies of the actor ae]()
ನಟ ಮೋಹನ್ ಲಾಲ್
ಇನ್ನು ಕೆಲವು ದಿನಗಳ ಹಿಂದೆ ನಟ ಮತ್ತು ಹಿರಿಯ ಚಿತ್ರ ನಿರ್ಮಾಪಕ ಪ್ರಿಯದರ್ಶನ್ ಮಗಳು, ಕಲ್ಯಾಣಿ ಇನ್ಸ್ಟಾಗ್ರಾಮ್ನಲ್ಲಿ ಮೋಹನ್ ಲಾಲ್ ಜೊತೆಗಿನ ಪೋಸ್ಟ್ ವರ್ಕೌಟ್ ಸೆಶನ್ ಫೋಟೋ ಹಂಚಿಕೊಂಡಿದ್ದಾರೆ ಮತ್ತು ಇದು ಸಾಕಷ್ಟು ಮಂದಿಯ ಮನಸ್ಸು ಗೆದ್ದಿದೆ.
ಕಲ್ಯಾಣಿ, "ಅವನ ಅಭ್ಯಾಸ (ವಾರ್ಮ್ ಅಪ್) ನನ್ನ ಸಂಪೂರ್ಣ ತಾಲೀಮು (ವರ್ಕೌಟ್)" ಎಂಬ ಶೀರ್ಷಿಕೆಯಡಿ ಅವರ ಜೊತೆಗಿನ ಬೈಸಿಪ್ಸ್ ತೋರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ವಯಸ್ಸು 61 ಆಗಿದ್ದರೂ ಅವರ ಫಿಟ್ನೆಸ್ ಪ್ರಯಾಣವು ಖಂಡಿತವಾಗಿಯೂ ನಿಮಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದರು.
12 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ ಶಾಜಿ ಕೈಲಾಸ್-ಮೋಹನ್ಲಾಲ್ ಜೋಡಿ
ಲಾಸ್ ಅವರ ಮೆಗಾ ಹಿಟ್ 'ಆರಾಮ್ ತಂಪುರನ್' (1997) ಸಿನಿಮಾ ಮೋಹನ್ ಲಾಲ್ಗೆ ಮಮ್ಮುಟಿ ನಂತರ ಮಾಲಿವುಡ್ನಲ್ಲಿ ಎರಡನೇ ಸೂಪರ್ ಸ್ಟಾರ್ ಎಂಬ ಪಟ್ಟ ತಂದುಕೊಟ್ಟಿತು. ಆ ಮೆಗಾ ಹಿಟ್ ನಂತರ, ಲಾಲ್ ಅಂದರೆ ಮೋಹನ್ ಲಾಲ್ ನಂತರದ ವರ್ಷಗಳಲ್ಲಿ ವೃತ್ತಿಜೀವನದಲ್ಲಿ ಉತ್ತುಂಗ ಮಟ್ಟಕ್ಕೆ ಏರತೊಡಗಿದರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. 'ಆರಾಮ್ ತಂಪುರನ್' ನಂತರ ಲಾಲ್ ಕೈಲಾಸ್ ಅವರ ಜೊತೆ ಹಲವಾರು ಚಿತ್ರಗಳನ್ನು ಮಾಡಿದರು.ಅದರಲ್ಲಿ ಕೊನೆಯದು - 'ರೆಡ್ ಚಿಲ್ಲೀಸ್' - 2009 ರಲ್ಲಿ ಬಿಡುಗಡೆಯಾಯಿತು. ನಂತರ ತಮಿಳು ಚಿತ್ರಗಳಲ್ಲೂ ಅಭಿನಯಿಸಲು ಪ್ರಾರಂಭಿಸಿದರು. ಇದಿಗ ಮೋಹನ್ ಲಾಲ್ ಕೈಲಾಸ್ ಜೊತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಎಲ್ಲರ ಕಣ್ಣು ಮೋಹನ್ಲಾಲ್ ಹಾಗೂ ಕೈಲಾಸ್ ಅವರ ಮೇಲೆ ಇದೆ.
ಇದನ್ನೂ ಓದಿ: Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!
ಅಕ್ಟೋಬರ್ 2021ರಲ್ಲಿ ಶಾಜಿ ಕೈಲಾಸ್ ಅವರೊಂದಿಗೆ ಆರಂಭವಾಗಲಿರುವ ನನ್ನ ಮುಂದಿನ ಯೋಜನೆಯನ್ನು ನಾನು ಬಹಳ ಉತ್ಸಾಹ ಮತ್ತು ಸಂತೋಷದಿಂದ ಘೋಷಿಸುತ್ತಿದ್ದೇನೆ. ರಾಜೇಶ್ ಜಯರಾಮ್ ಚಿತ್ರಕಥೆ ಮತ್ತು ಆಂಟನಿ ಪೆರುಂಬವೂರ್ ನಿರ್ಮಾಣದ ಆಶೀರ್ವಾದ್ ಸಿನಿಮಾಸ್ನ ಬ್ಯಾನರ್ನಲ್ಲಿ ನಾನು ಮತ್ತು ಶಾಜಿ 12 ವರ್ಷಗಳ ನಂತರ ಮತ್ತೆ ಒಟ್ಟಿಗೆ ಸೇರುತ್ತಿದ್ದೇವೆ. 12 ವರ್ಷಗಳ ನಂತರ ಈ ಜೊತೆಗೂಡುವಿಕೆ ನಿಮಗೆ ನಿರಾಸೆ ತರುವುದಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ" ಎಂದು ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. 1989ರಲ್ಲಿ ವೃತ್ತಿ ಜೀವನ ಆರಂಭಿಸಿದ 56 ವರ್ಷದ ಕೈಲಾಸ್ ಅವರದ್ದು ಇದು 42ನೇ ಸಿನಿಮಾವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ