Navya Nair- ‘ದೃಶ್ಯ’ ನಟಿ ನವ್ಯಾ ನಾಯರ್ ಖರೀದಿಸಿದ್ದಾರೆ ಐಷಾರಾಮಿ Mini Countryman ಕಾರು

ನಟಿ ನವ್ಯಾ ನಾಯರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ (luxury mini countryman car)ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ.

ಹೊಸ ಕಾರಿನೊಂದಿಗೆ ನಟಿ ನವ್ಯಾ ನಾಯರ್

ಹೊಸ ಕಾರಿನೊಂದಿಗೆ ನಟಿ ನವ್ಯಾ ನಾಯರ್

  • Share this:
    ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ ಗಮನಸೆಳೆದ ಮಲಯಾಳಂ ನಟಿ (Malayalam actress Navya Nair,) ನವ್ಯಾ ನಾಯರ್‌ ಇದೀಗ ಐಷಾರಾಮಿ ಮಿನಿ ಕಂಟ್ರಿಮ್ಯಾನ್ (Mini Countryman) ಕಾರನ್ನು ಖರೀದಿಸಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ ಎಂಬುದಕ್ಕೆ ನವ್ಯಾ ಕೂಡ ಸಾಕ್ಷಿ. 2001ರಿಂದ 2014ರವರೆಗೆ ಸಾಕಷ್ಟು ಮಲಯಾಳಂ, ಕನ್ನಡ, ತಮಿಳು ಭಾಷೆಯ ಸಿನಿಮಾಗಳಲ್ಲಿ ನವ್ಯಾ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಕೆಲ ಚಿತ್ರದಲ್ಲಿ ಬಣ್ಣ ಹಚ್ಚಿರುವ ನವ್ಯಾ ವಿಷ್ಣುವರ್ಧನ್ ಜೊತೆಗೆ 'ನಮ್ಮ ಯಜಮಾನ್ರು', ರವಿಚಂದ್ರನ್ ಜೊತೆಗೆ 'ದೃಶ್ಯ', ದರ್ಶನ್ ಜೊತೆಗೆ 'ಗಜ', ವಿಜಯ್ ರಾಘವೇಂದ್ರ ಜೊತೆಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ನಟಿಸಿ ಚಂದನವನದಲ್ಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ('Namma Yajamanru',  'Gaja,  'Bhagyada Belegara'.)

    ಸದ್ಯ ನಟಿ ನವ್ಯಾ ನಾಯರ್‌ 2010ರಲ್ಲೇ ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ (businessman Santosh Menon) ಜೊತೆ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸಾಯಿಕೃಷ್ಣ ಎಂಬ ಮಗನಿದ್ದಾನೆ. ಸಿನಿಮಾದಿಂದ ದೂರ ಉಳಿದ ಮೇಲೆ ಅನೇಕ ಡಾನ್ಸ್ ರಿಯಾಲಿಟಿ ಶೋಗಳ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದ ದೃಶ್ಯ 2 ರಲ್ಲೂ ನವ್ಯಾ ಕಾಣಿಸಿಕೊಂಡಿದ್ದಾರೆ.

    ಐಷರಾಮಿ ಕಾರಿನ ಒಡತಿ(Luxury car mistress)
    ನಟಿ ತಮ್ಮ ಮಗ ಮತ್ತು ಅವರ ಸಂಬಂಧಿಕರೊಂದಿಗೆ ಹೊಸ ಕಾರಿನ ವಿತರಣೆಯನ್ನು ಪಡೆದುಕೊಳ್ಳುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದ ಕೆಳಗೆ ನಟಿಯ ಅಭಿಮಾನಿಗಳು ಮತ್ತು ಹಲವು ಸಿನಿಮಾ ಸೆಲಬ್ರಿಟಿಗಳು ಅಭಿನಂದನೆಗಳನ್ನು ತಿಳಿಸಿ ಕಾಮೆಂಟ್ ಮಾಡಿದ್ದಾರೆ, ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ನವ್ಯಾ ನಾಯರ್. ಇವರು ಮಲಯಾಳಂ ಅಲ್ಲದೇ ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಇದನ್ನು ಓದಿ: ನಮ್ಮ ಬಳಿ ದುಬಾರಿ ಕಾರು ಇಲ್ಲ, Audi A6 ಇರೋದು; ಯೂಟ್ಯೂಬರ್​ ಮದನ್​ ಪತ್ನಿ ಹೇಳಿಕೆ ವೈರಲ್​!

    ನಟಿ ನವ್ಯಾ ನಾಯರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ (luxury mini countryman car)ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ. ಈ ಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

    ಇನ್ನು ನಟಿ ನಟಿ ನವ್ಯಾ ನಾಯರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ ಐಷಾರಾಮಿ ಕಾರು ಅನೇಕ ವಿಶೇಷಗಳ ಮೂಲಕ ಗಮನ ಸೆಳೆದಿದೆ, ಈ ಕಾರು KL 07 CX 3223 ಎಂಬ ನಂಬರ್ ಅನ್ನು ಹೊಂದಿದೆ, ಮಲಯಾಳಂ ಚಿತ್ರರಂಗದ ಇತರ ನಟ, ನಟಿಯರು ಕೂಡ ಮಿನಿ ಕಾರನ್ನು ಹೊಂದಿದ್ದಾರೆ. ಇತ್ತೀಚೆಗೆ ಮಲಯಾಳಂ ನಟ ಪೃಥ್ವಿರಾಜ್ ಹೊಸ ಮಿನಿ ಕೂಪರ್ ಜೆಸಿಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ. ಇನ್ನು ಇತ್ತೀಚೆಗೆ ಕನ್ನಡದ ರಶ್ಮಿಕಾ ಮಂದಣ್ಣ ಕೂಡ ಐಷರಾಮಿ ಕಾರು ಖರೀದಿಸಿ ಸುದ್ದಿ ಮಾಡಿದ್ದರು.

    ಇದನ್ನು ಓದಿ: ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ್ದ ನಟ ಧನುಷ್‌ರನ್ನು ತರಾಟೆಗೆ ತೆಗೆದುಕೊಂಡ ಮದ್ರಾಸ್‌ ಹೈಕೋರ್ಟ್‌

    ಕಾರಿನ ಫೀಚರ್ (Feature of the car)

    2021ರ ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ. ಈ 2021ರ ಕಂಟ್ರಿಮ್ಯಾನ್‌ನಲ್ಲಿನ ಹೊಸ ಸ್ಟೈಲಿಂಗ್ ವೈಶಿಷ್ಟ್ಯಗಳು ಯೂನಿಯನ್ ಜ್ಯಾಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಹೊಸ ರೇಡಿಯೇಟರ್ ಗ್ರಿಲ್ ಮತ್ತು ವ್ಯತಿರಿಕ್ತ ರೂಫ್ ಅನ್ನು ಒಳಗೊಂಡಿವೆ. ಕಂಟ್ರಿಮ್ಯಾನ್ ಕಾರಿನಲ್ಲಿ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಇತರೆ ಫೀಚರ್ ಗಳನ್ನು ಒಳಗೊಂಡಿವೆ ಎನ್ನಲಾಗಿದೆ.
    Published by:vanithasanjevani vanithasanjevani
    First published: