Beauty Tips: ಮಲೈಕಾ ಅರೋರಾರ ಕಾಂತಿಯುಕ್ತ ತ್ವಚೆಯ ರಹಸ್ಯ ಇದಂತೆ..!

ಮಲೈಕಾ ಅರೋರಾ ಇನ್‍ಸ್ಟಾಗ್ರಾಂನಲ್ಲಿ ಚಿತ್ರೀಕರಣಕ್ಕೂ ಮೊದಲಿನ ತಮ್ಮ ಸಿದ್ಧತೆಗಳ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಲೈಕಾ ಅವರ ಚರ್ಮದ ಆರೈಕೆಯ ದಿನಚರಿ ಮತ್ತು ಆಕೆ ಚಿತ್ರೀಕರಣಕ್ಕೆ ಹೇಗೆ ತಯಾರಾಗುತ್ತಾರೆ ಎಂಬುದರ ಕುರಿತು ಮಾಹಿತಿ ಇದೆ.

ನಟಿ ಮಲೈಕಾ ಅರೋರಾ

ನಟಿ ಮಲೈಕಾ ಅರೋರಾ

  • Share this:
ಮಲೈಕಾ ಅರೋರಾ (Malaika Arora) ಈಗಿನ ಅತ್ಯಂತ ಫಿಟ್ ಆಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ತಮ್ಮ ಫ್ಯಾಷನ್ ಸೆನ್ಸ್, ಫಿಟ್‍ನೆಸ್ ಮತ್ತು ಸುಂದರ ತ್ವಚೆಯ (Skin Care) ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿರುವ ಸುಂದರಿ ಆಕೆ. ಅಷ್ಟೇ ಅಲ್ಲ, ಬಹಳಷ್ಟು ಫಿಟ್‍ನೆಸ್ ಮತ್ತು ಫ್ಯಾಷನ್‍ ಪ್ರಿಯರಿಗೆ ಮಲೈಕಾ ಸ್ಪೂರ್ತಿ ಕೂಡ. ಅವರ ಕುರಿತ ಇನ್ನೊಂದು ಒಳ್ಳೆಯ ವಿಷಯವೆಂದರೆ, ಆಕೆ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಬ್ಯೂಟಿ ಟಿಪ್ಸ್‌ಗಳನ್ನು (Beauty Tips) ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ, ಮಲೈಕಾ ಅರೋರಾ ಇನ್‍ಸ್ಟಾಗ್ರಾಂನಲ್ಲಿ ಚಿತ್ರೀಕರಣಕ್ಕೂ ಮೊದಲಿನ ತಮ್ಮ ಸಿದ್ಧತೆಗಳ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಲೈಕಾ ಅವರ ಚರ್ಮದ ಆರೈಕೆಯ ದಿನಚರಿ ಮತ್ತು ಆಕೆ ಚಿತ್ರೀಕರಣಕ್ಕೆ ಹೇಗೆ ತಯಾರಾಗುತ್ತಾರೆ ಎಂಬುದರ ಕುರಿತು ಮಾಹಿತಿ ಇದೆ.






ಮಲೈಕಾ ಚಿತ್ರೀಕರಣ ಪೂರ್ವ ಸಿದ್ಧತೆಯ ಹಂತಗಳು ಈ ಕೆಳಗಿನಂತಿವೆ:

ಹಂತ 1 : ನಿಮ್ಮ ಕಣ್ಣಿನ ಕೆಳಗೆ ಮಾಯಿಶ್ಚರೈಸರ್ ಹಚ್ಚಿ ಮತ್ತು ಅದನ್ನು ನಿಧಾನ ಮತ್ತು ಮೃದುವಾಗಿ ತಟ್ಟಿರಿ.
ಹಂತ 2 : ಜೇಡ್ ರೋಲರನ್ನು ಬಳಸಿ, ನಿಮ್ಮ ಕಣ್ಣಿನ ಕೆಳಗೆ ಮೃದುವಾಗಿ ಮತ್ತು ದೃಢವಾದ ರೀತಿಯಲ್ಲಿ ಮಸಾಜ್ ಮಾಡಿ.
ಹಂತ 3 : ನಿಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಕತ್ತಿಗೂ ಹಚ್ಚಲು ಮರೆಯಬೇಡಿ.
ಹಂತ 4 : ಜೇಡ್ ರೋಲರ್ ಬಳಸಿ, ನಿಮ್ಮ ಮುಖಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿ.
ಹಂತ 5 : ಚರ್ಮದ ಒಂದು ಬದಿಯನ್ನು ಹಿಡಿದು ಮಸಾಜ್ ಮಾಡಿ.
ಹಂತ 6 : ಲಿಪ್ ಬಾಮ್ ಹಚ್ಚಿರಿ.

ಇದನ್ನೂ ಓದಿ: Preity Zintaಗಿಂತ ಮೊದಲು ಐವಿಎಫ್​- ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದ ಸ್ಟಾರ್​ಗಳು ಇವರೆ..!

ಈ ಮೊದಲು ಮಲೈಕಾ ಕಾಂತಿಯುಕ್ತ ತ್ವಚೆಯ ಕುರಿತ ಟಿಪ್ಸ್‌ಗಳನ್ನು ಹಂಚಿಕೊಂಡಿದ್ದರು. ಆದರೆ ಈ ಬಾರಿ ಯಾವುದೇ ಸೌಂದರ್ಯ ಉತ್ಪನ್ನಗಳ ಬಳಕೆಯ ಬಗ್ಗೆ ಹೇಳಿಲ್ಲ. ಬದಲಿಗೆ, ಯೋಗ ತನ್ನ ಚರ್ಮದ ಆರೋಗ್ಯ ಕಾಪಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು, ಸರ್ವಾಂಗಾಸನ, ಹಲಾಸನ ಮತ್ತು ತ್ರಿಕೋನಾಸನ ಸೇರಿದಂತೆ ಮೂರು ಯೋಗಾಸನಗಳ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ.

ಮಲೈಕಾ ಪ್ರಕಾರ, ಸರ್ವಾಂಗಾಸನಲ್ಲಿ ನೀವು ತಲೆ ಕೆಳಗೆ ಮಾಡಿರುವುದರಿಂದ ಮುಖದ ಕಡೆಗೆ ರಕ್ತದ ಹರಿವು ನಿಯಂತ್ರಿಸುತ್ತದೆ. ಅದು ಚರ್ಮದ ಗುಣಮಟ್ಟ ಮತ್ತು ವಿನ್ಯಾಸ ಸುಧಾರಿಸುತ್ತದೆ ಹಾಗೂ ಭುಜ ಮತ್ತು ಬೆನ್ನಿನ ಸುತ್ತಲೂ ಬಲ ಹೆಚ್ಚಿಸುತ್ತದೆ.

ಇದನ್ನೂ ಓದಿ: ತನ್ನ ವಿಡಿಯೋ ಮಾಡುತ್ತಿದ್ದವರ ಮೊಬೈಲ್​ ಕಿತ್ತುಕೊಂಡ ನಟ John Abraham: ಮುಂದೇನಾಯ್ತು ಗೊತ್ತಾ..?

ಹಾಲಾಸನದಿಂದ ಒತ್ತಡ ಕಡಿಮೆ ಆಗುತ್ತದೆ, ಮನಸ್ಸನ್ನು ಶಾಂತವಾಗಿಡಬಹುದು ಮತ್ತು ಜೀರ್ಣ ಕ್ರಿಯೆ ಸುಧಾರಿಸುತ್ತದೆ. ಇವೆಲ್ಲವು ನಿಮ್ಮ ಚರ್ಮದ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ತ್ರಿಕೋನಾಸನ ಎದೆ ಮತ್ತು ಭುಜಗಳನ್ನು ತೆರೆಯುತ್ತದೆ ಮತ್ತು ಈ ತೆರೆಯುವಿಕೆ ಚರ್ಮಕ್ಕೆ ತಾಜಾ ಆಮ್ಲಜನಕದ ಪೂರೈಕೆ ಆಗಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಮಲೈಕಾ.

ಒಮ್ಮೆ ಮಲೈಕಾ, ಸ್ನಾನ ಮಾಡುವಾಗ ಬಳಸಬಹುದಾದಂತಹ ಒಂದು ಬಾಡಿ ಸ್ಕ್ರಬನ್ನು ಹೇಗೆ ಮಾಡುವುದು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದರು. ಆಕೆ ಬಳಸಿ ಉಳಿದ ಕಾಫಿ ಪುಡಿಯನ್ನು ಸಕ್ಕರೆ ಮತ್ತು ತೆಂಗಿನೆಣ್ಣೆಯೊಂದಿಗೆ ರುಬ್ಬಿ ಸ್ಕ್ರಬ್ ತಯಾರಿಸಿದ್ದರು. ಸೌಂದರ್ಯ ಮತ್ತು ಆರೋಗ್ಯಕರ ಜೀವನ ಶೈಲಿ ನಿರ್ವಹಣೆಯ ಕುರಿತ ಹಂಚಿಕೊಳ್ಳುವಂತಹ ಹಲವಾರು ಟಿಪ್ಸ್‌ಗಳು ಮಲೈಕಾ ಬಳಿ ಇದೆ.
Published by:Anitha E
First published: