News18 India World Cup 2019

ನಟಿ ಮಲೈಕಾ ಮಸ್ತ್ ವರ್ಕೌಟ್: 'ಮುನ್ನಿ'ಯ ಫಿಟ್ನೆಸ್ ವಿಡಿಯೋ ವೈರಲ್

news18
Updated:July 28, 2018, 9:51 PM IST
ನಟಿ ಮಲೈಕಾ ಮಸ್ತ್ ವರ್ಕೌಟ್: 'ಮುನ್ನಿ'ಯ ಫಿಟ್ನೆಸ್ ವಿಡಿಯೋ ವೈರಲ್
news18
Updated: July 28, 2018, 9:51 PM IST
-ನ್ಯೂಸ್ 18 ಕನ್ನಡ

'ದಬಂಗ್' ಚಿತ್ರದಲ್ಲಿ ಮುನ್ನಿ ಬದ್ನಾಮ್ ಹೂಯಿ... ಗೀತೆಗೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿ ಸೈ ಎನಿಸಿಕೊಂಡಿದ್ದ ನಟಿ ಮಲೈಕಾ ಅರೋರಾ ಫಿಟ್ನೆಸ್​ ಕಾಪಾಡುವಲ್ಲಿ ಒಂದು ಹೆಜ್ಜೆ ಮುಂದೆ ಎನ್ನಬಹುದು. ಕಠಿಣ ವರ್ಕೌಟ್​ ಮೂಲಕ 44ನೇ ಹರೆಯದಲ್ಲೂ ಯಂಗ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸುವ ಮಲೈಕಾ ಇತ್ತೀಚೆಗೆ ಬಿಕಿನಿ ತೊಟ್ಟು ಬಾಲಿವುಡ್​ನ ಇತರೆ ತಾರೆಯರು ಹುಬ್ಬೇರುವಂತೆ ಮಾಡಿದ್ದರು. ಬಾಲಿವುಡ್ ಚಿತ್ರಗಳಲ್ಲಿ ಐಟಂ ಡ್ಯಾನ್ಸರ್​ ಆಗಿ ಕಾಣಿಸಿಕೊಳ್ಳುವ ಮಲೈಕಾ ತನ್ನ ದೇಹ ಸೌಂದರ್ಯದ ಕೆಲ ರಹಸ್ಯಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ತನ್ನ ದಿನನಿತ್ಯದ ವ್ಯಾಯಾಮಗಳ ವಿಡಿಯೋ ತುಣುಕುಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಕಠಿಣ ತಾಲೀಮು ಮತ್ತು ಆಹಾರದ ಮೇಲಿನ ನಿಯಂತ್ರಣದಿಂದ ಉತ್ತಮ ಫಿಟ್ನೆಸ್ ಹೊಂದಬಹುದು ಎನ್ನುತ್ತಾರೆ ಮಲೈಕಾ. ವ್ಯಾಯಾಮದ​ ವಿಷಯದಲ್ಲಿ ಬಾಲಿವುಡ್​ನಲ್ಲಿ 'ವಂಡರ್ ವುಮೆನ್' ಎಂದು ಕರೆಸಿಕೊಳ್ಳುವ ಮಲೈಕಾ ಅರೋರಾ ಅವರ ವರ್ಕೌಟ್​ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
Loading...

A post shared by Malaika Arora Khan (@malaikaarorakhanofficial) on
ಫಿಟ್ನೆಸ್ ಅನ್ನು ಜೀವನಕ್ರಮ ಎಂದು ತಿಳಿದಿರುವ ಮಲೈಕಾ ಅರೋರಾ, ನಮ್ರತಾ ಪುರೋಹಿತ್ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ.


ನಟಿ ಮಲೈಕಾ ಬರೀ ಜಿಮ್​ನಲ್ಲಿ ದೇಹ ದಂಡಿಸುವುದು ಮಾತ್ರವಲ್ಲದೆ ಯೋಗ ಮಾಡುವುದರಲ್ಲಿಯೂ ಎತ್ತಿದ ಕೈ. ಪದ್ಮಾಸನ ಮತ್ತು ಸೂರ್ಯನಮಸ್ಕಾರ ಯೋಗಾಸನಗಳನ್ನು​ ಈ ನಟಿ ಜೀವನಶೈಲಿಯ ಭಾಗವಾಗಿಸಿಕೊಂಡಿದ್ದಾರೆ.


ಯೋಗದಲ್ಲಿರುವ ಕಠಿಣ ಅಭ್ಯಾಸಗಳನ್ನೂ ಮಾಡುವ ಮಲೈಕಾ ಅರೋರಾ ಖಾನ್ ಬಿಡುವಿನ ವೇಳೆ ನೃತ್ಯ ಅಭ್ಯಸಿಸುತ್ತಾರೆ. ಇದು ಕೂಡ ಮುನ್ನಿಯ ಸೌಂದರ್ಯದ ರಹಸ್ಯವಾಗಿದೆ. 'ದಿಲ್​ಸೆ' ಚಿತ್ರದ ಚಯ್ಯಾ ಚಯ್ಯಾ... ಗೀತೆಯಲ್ಲಿ ಬಳಕುವ ಬಳ್ಳಿಯಂತಿದ್ದ ಮಲೈಕಾ ಅರೋರಾ 20 ವರ್ಷಗಳ ಬಳಿಕವು ಸೌಂದರ್ವವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಪ್ಲಾಂಕಿಂಗ್​ ವ್ಯಾಯಾಮವನ್ನು ಹೆಚ್ಚಾಗಿ ಮಾಡುವ ಮಲೈಕಾ ಅವರ ಕಸರತ್ತಿನ ವಿಡಿಯೋ ನೋಡಿದರೆ  ದೇಹ ಸೌಂದರ್ಯ ಕಾಪಾಡಲು ಅವರು ವಹಿಸುತ್ತಿರುವ ಶ್ರಮ ತಿಳಿಯುತ್ತದೆ.


ಜಿಮ್​ನಲ್ಲಿ ಕಠಿಣ ಅಭ್ಯಾಸದ ಮೂಲಕ ಬೆವರಿಳಿಸುವ ಮಲೈಕಾ ಅರೋರಾ ಇತ್ತೀಚೆಗೆ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿದ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.


ತಮ್ಮ ಜೀವನಶೈಲಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾಜಿ ಮಾಡೆಲ್ ಮತ್ತು ವಿಡಿಯೋ ಜಾಕಿ ಮಲೈಕಾ ಫ್ಯಾಷನ್ ವಿಷಯದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಉತ್ತಮ ಆರೋಗ್ಯ ಕಾಪಾಡಲು ರಾತ್ರಿ 8ರ ಬಳಿಕ ಯಾವುದೇ ಆಹಾರ ಸೇವಿಸುವುದಿಲ್ಲ. ಹಾಗೆಯೇ 10.30 ಒಳಗಾಗಿ ನಿದ್ದೆ ಮಾಡುವ ಅಭ್ಯಾಸವನ್ನು ಅವರು ರೂಢಿಸಿಕೊಂಡಿದ್ದಾರೆ. ಇಂತಹದೊಂದು ಫಿಟ್ನೆಸ್ ಮತ್ತು ಜೀವನಶೈಲಿಯು ಮಲೈಕಾ ಎಂಬ ನಟಿಯನ್ನು 20 ವರ್ಷಗಳ ಬಳಿಕ ಸಹ ಬಾಲಿವುಡ್​ನ ಟಾಪ್ ಐಟಂ ಡ್ಯಾನ್ಸರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...