ಬಾಲಿವುಡ್ ನಲ್ಲಿ (Bollywood) ಅನೇಕ ನಟ ಮತ್ತು ನಟಿಯರು ಫಿಟ್ ಆಗಿರಲು ಯೋಗ (Yoga) ಮತ್ತು ಜಿಮ್ಗೆ (Gym) ಹೋಗಿ ಗಂಟೆಗಟ್ಟಲೆ ಕಠಿಣವಾದ ವ್ಯಾಯಾಮ (Exercise) ಮಾಡುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ಕೆಲವು ನಟಿಯರು ಫಿಟ್ (Fitness) ಆಗಿ ಕಾಣಲು ಪ್ರತಿದಿನ ತಪ್ಪದೇ ಯೋಗಾಸನಗಳನ್ನು ಮಾಡುತ್ತಾರೆ. ನಟಿಯರಾದ ಕರೀನಾ ಕಪೂರ್ (Kareena Kapoor) ಮತ್ತು ಮಲೈಕಾ ಅರೋರಾ (Malaika Arora) ಅವರು ಯೋಗಾಸನಗಳನ್ನು ಮಾಡಿ ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಂಡಿದ್ದಾರೆ. ಮಲೈಕಾ ಅರೋರಾ ಮತ್ತು ಕರೀನಾ ಕಪೂರ್ ಇಬ್ಬರು ತಾವು ಮಾಡುವ ಯೋಗಾಸನಗಳ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಳ್ಳುತ್ತಾರೆ. ಬರೀ ಯೋಗಾಸನಗಳಲ್ಲದೇ, ಈ ನಟಿಯರು ಹೆಚ್ಚಿನ ಕಠಿಣವಾದ ವ್ಯಾಯಾಮಗಳನ್ನು ಮಾಡುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಯೋಗಾಸನದಲ್ಲಿ ವಿಶೇಷ ಒಲವು ಹೊಂದಿರುವ ಬಾಲಿವುಡ್ ನಟಿಯರು
ಇವರಿಬ್ಬರು ನಟಿಯರು ಯೋಗ ಮತ್ತು ಅದು ಒದಗಿಸುವ ವಿವಿಧ ಪ್ರಯೋಜನಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಅಂತ ಹೇಳಬಹುದು ಮತ್ತು ಇದು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಹ ಫೀಡ್ಗಳಿಂದಲೂ ಗೊತ್ತಾಗುತ್ತದೆ.
View this post on Instagram
ಈಗ ಇನ್‌ಸ್ಟಾಗ್ರಾಮ್ ನಲ್ಲಿ ಮಲೈಕಾ ಆರೋರಾ ಅವರು ಯೋಗಾಸನವೊಂದನ್ನು ಹೇಗೆ ಮಾಡುವುದು ಅಂತ ಹಂಚಿಕೊಂಡಿದ್ದಾರೆ. ಈ ಯೋಗಾಸನ ದೇಹದಲ್ಲಿರುವ ಎಲ್ಲಾ ಮೂಳೆಗಳನ್ನು ಬಲಪಡಿಸುತ್ತದೆ ಅಂತೆ, ವಿಶೇಷವಾಗಿ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
ದೇಹದಲ್ಲಿನ ಸ್ನಾಯುಗಳನ್ನು ಬಲಪಡಿಸುವ ಯೋಗಾಸನದ ವೀಡಿಯೋ ಹಂಚಿಕೊಂಡ ಮಲೈಕಾ
"ನನಗೆ, ಯೋಗವು ಯಾವಾಗಲೂ ನನ್ನ ದೇಹದಲ್ಲಿನ ಪ್ರಮುಖ ಸ್ನಾಯುಗಳನ್ನು ಬಲಪಡಿಸಲು ಸೂಕ್ತವಾದ ತಾಲೀಮು" ಎಂದು ವಿಡಿಯೋ ಜೊತೆಗೆ ಕ್ಯಾಪ್ಷನ್ನಲ್ಲಿ ಮಲೈಕಾ ಅವರು ಹಂಚಿಕೊಂಡಿದ್ದಾರೆ. ನಟಿ ಮಲೈಕಾ ಅವರು ಬೆಕ್ಕು-ಹಸುವಿನಂತಹ ಭಂಗಿಯ ರೂಪಾದಲ್ಲಿ ಯೋಗಾಸನ ಮಾಡಿದ್ದಾರೆ. ನೆಲದ ಮೇಲೆ ಕೈ, ಕಾಲುನ್ನು ಊರಿಕೊಂಡು ತಮ್ಮ ಬೆನ್ನು ಮತ್ತು ತಲೆಯನ್ನು ಸ್ವಲ್ಪ ಬಗ್ಗಿಸಿಕೊಂಡು ತಮ್ಮ ಎಡ ಮೊಣಕಾಲನ್ನು ಒಳಕ್ಕೆ ತರುತ್ತಾರೆ. ನಂತರ ಮತ್ತೆ ತಲೆಯನ್ನು ಮೇಲಕ್ಕೆತ್ತಿ, ತಮ್ಮ ಕಾಲನ್ನು ಹೊರಕ್ಕೆ ಚಾಚುತ್ತಾರೆ. ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುವಾಗ ಕುತ್ತಿಗೆಯನ್ನು ನಿಧಾನವಾಗಿ ಹಿಗ್ಗಿಸುತ್ತಾರೆ.
ಈ ಯೋಗಾಸನದ ಬಗ್ಗೆ ಏನ್ ಹೇಳ್ತಾರೆ ಮಲೈಕಾ?
"ಬಲವಾದ ಕೋರ್, ನಿಮ್ಮ ಸ್ನಾಯುಗಳನ್ನು ಟೋನಿಂಗ್ ಮಾಡಲು ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಶಕ್ತಿಯನ್ನು ಸೇರಿಸುತ್ತದೆ ಮತ್ತು ನಿಮ್ಮ ದೈನಂದಿನ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ" ಎಂದು ಅವರು ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.
ಈ ಆಸನವು "ಬೆನ್ನುಮೂಳೆಯ ಆರೋಗ್ಯ, ಉತ್ತಮ ಭಂಗಿ, ಸಮತೋಲನ ಮತ್ತು ದೇಹದ ಸ್ಥಿರತೆಯನ್ನು" ಉತ್ತೇಜಿಸಲು ಸಹಾಯ ಮಾಡುತ್ತದೆ. "ಹೆಚ್ಚಿನ ಬೆವರು ಹರಿಸಲು ಎರಡೂ ಬದಿಗಳಲ್ಲಿ 10 ಬಾರಿ ಹೀಗೆ ಪುನರಾವರ್ತಿಸಬೇಕು" ಎಂದು ಮಲೈಕಾ ಸಲಹೆ ನೀಡಿದರು. ಇದಕ್ಕೂ ಮುನ್ನ, ಮಲೈಕಾ ಅವರು ಮೂರು ಯೋಗಾಸನಗಳನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
1. ಚಲನೆ ಭಾಗ: ಈ ಭಾಗವು ಯೋಗ, ಜಿಮ್ಮಿಂಗ್ ಮತ್ತು ಪಿಲೇಟ್ಸ್ ನಂತಹ ದೈಹಿಕ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದನ್ನು ಒಳಗೊಂಡಿದೆ. ಅವು ದೇಹವನ್ನು ಸಕ್ರಿಯವಾಗಿಡಲು ಮತ್ತು ಚುರುಕಾಗಿರಿಸಲು ಸಹಾಯ ಮಾಡುತ್ತವೆ.
2. ಪ್ರಾಣಯಾಮ: ಮನಸ್ಸನ್ನು ಶಾಂತಗೊಳಿಸಲು ಮತ್ತು ಅವರ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಪ್ರಾಣಯಾಮ ಮಾಡುತ್ತಾರೆ. ಇದು ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಸಹ ಸುಧಾರಿಸಲು ಸಹಾಯ ಮಾಡುತ್ತದೆ.
3. ಧ್ಯಾನ: ಮಲೈಕಾ ತಮ್ಮ ದಿನಚರಿಯನ್ನು ಧ್ಯಾನದೊಂದಿಗೆ ಕೊನೆಗೊಳಿಸಲು ಬಯಸುತ್ತಾರೆ. ಪ್ರತಿದಿನ ಇವರು ಕನಿಷ್ಠ ಪಕ್ಷ ಐದು ನಿಮಿಷಗಳಾದರೂ ಧ್ಯಾನವನ್ನು ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ