Relationship Tips: ಪ್ರತಿದಿನ ನಿಮ್ಮ ಸಂಗಾತಿಯಲ್ಲಿ ವಿಶೇಷ ಭಾವನೆ ಮೂಡಿಸಿ, ಈ 7 ಟಿಪ್ಸ್ ಅನುಸರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಂಪತಿಗಳು ಪ್ರತಿದಿನ ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯುವುದು ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಬಹುದು. ಪ್ರತಿದಿನ ನಿಮಗೆ ಪರಸ್ಪರರಲ್ಲಿ ವಿಶೇಷ ಭಾವನೆ, ಪ್ರೀತಿ ಮೂಡುತ್ತಲೇ ಇದ್ದರೆ, ಯಾವುದೇ ರೀತಿಯ ವ್ಯಾಲೆಂಟೈನ್ಸ್ ಡೇ, ಜನ್ಮದಿನ ಅಥವಾ ವಾರ್ಷಿಕೋತ್ಸವದಂತಹ ವಿಶೇಷ ಸಂದರ್ಭಗಳ ಅವಶ್ಯಕತೆ ಇರುವುದೇ ಇಲ್ಲ ಅಂತ ಹೇಳಬಹುದು.

ಮುಂದೆ ಓದಿ ...
  • Share this:

    ವೈವಾಹಿಕ ಜೀವನದಲ್ಲಿ (Married Life) ಪತಿ ಮತ್ತು ಪತ್ನಿ ಇಬ್ಬರೂ ಪರಸ್ಪರ ಪ್ರೀತಿ ಹೊಂದಿರಬೇಕು, ಆಗಲೇ ಸಂಸಾರ (Family) ಎಂಬ ಜೋಡೆತ್ತಿನ ಬಂಡಿ ಸುಗಮವಾಗಿ ಸಾಗುತ್ತದೆ ಅಂತ ಹೇಳಬಹುದು. ಹೀಗೆ ಪ್ರೀತಿ ಹೊಂದಿರುವುದನ್ನು ಪರಸ್ಪರರು ಬಹಿರಂಗವಾಗಿ ತೋರಿಸಿಕೊಳ್ಳುವುದು ಸಹ ತುಂಬಾನೇ ಮುಖ್ಯವಾಗಿರುತ್ತದೆ. ಪ್ರತಿದಿನ ಪರಸ್ಪರರಲ್ಲಿ ವಿಶೇಷ ಭಾವನೆ ಮೂಡಿಸಿಕೊಳ್ಳಲು ಕೆಲವು ಚಿಕ್ಕ-ಪುಟ್ಟ ಸನ್ನೆಗಳು ತುಂಬಾನೇ ಮುಖ್ಯವಾಗುತ್ತವೆ. ಎಂದರೆ ಇಬ್ಬರು ಅರ್ಥಪೂರ್ಣವಾದ ಸಂಭಾಷಣೆಗಳಲ್ಲಿ ತೊಡಗುವುದು, ಪರಸ್ಪರರು ತಮ್ಮ ಪ್ರಯತ್ನಗಳಿಗಾಗಿ ಶ್ಲಾಘಿಸುವುದು ಇವೆಲ್ಲವೂ ಸಂಬಂಧದಲ್ಲಿ ಭಾವನಾತ್ಮಕ ಅನ್ಯೋನ್ಯತೆಯನ್ನು ಬಲಪಡಿಸುವಲ್ಲಿ ತುಂಬಾನೇ ಸಹಾಯ ಮಾಡುತ್ತವೆ.


    ದಂಪತಿಗಳು ಪ್ರತಿದಿನ ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯುವುದು ತುಂಬಾನೇ ಮುಖ್ಯವಾಗಿರುತ್ತದೆ ಅಂತ ಹೇಳಬಹುದು. ಪ್ರತಿದಿನ ನಿಮಗೆ ಪರಸ್ಪರರಲ್ಲಿ ವಿಶೇಷ ಭಾವನೆ, ಪ್ರೀತಿ ಮೂಡುತ್ತಲೇ ಇದ್ದರೆ, ಯಾವುದೇ ರೀತಿಯ ವ್ಯಾಲೆಂಟೈನ್ಸ್ ಡೇ, ಜನ್ಮದಿನ ಅಥವಾ ವಾರ್ಷಿಕೋತ್ಸವದಂತಹ ವಿಶೇಷ ಸಂದರ್ಭಗಳ ಅವಶ್ಯಕತೆ ಇರುವುದೇ ಇಲ್ಲ ಅಂತ ಹೇಳಬಹುದು.


    ಸಂಗಾತಿಗಳ ನಡುವೆ ಇರಬೇಕಾದ ಪ್ರೀತಿ, ವಿಶ್ವಾಸದ ಬಗ್ಗೆ ತಜ್ಞರು ಹೇಳುವುದೇನು?


    "ವೈವಾಹಿಕ ಜೀವನವು ಕೇವಲ ನಾವು ಪರಸ್ಪರರು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಬಗ್ಗೆ ಅಲ್ಲ, ಬದಲಾಗಿ ಪ್ರತಿದಿನ ನಾವು ನಮ್ಮ ಸಂಗಾತಿಗೆ ತೋರಿಸುವ ಪ್ರೀತಿ ಮತ್ತು ಮೆಚ್ಚುಗೆಯ ಬಗ್ಗೆ ಸಹ ಇರುತ್ತದೆ" ಎಂದು ಮಾನಸಿಕ ಆರೋಗ್ಯ ತಜ್ಞ ಅರುಬಾ ಕಬೀರ್ ಅವರು ಹೇಳುತ್ತಾರೆ.




    "ಯಾವುದೇ ಸಂಬಂಧವು ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಮೆಚ್ಚುಗೆಯ ಮೇಲೆ ನಿರ್ಮಿಸಲ್ಪಟ್ಟಿವೆ. ನಿಮ್ಮ ಸಂಗಾತಿಗೆ ಪ್ರತಿದಿನ ವಿಶೇಷ ಭಾವನೆ ಮೂಡಿಸುವುದು ಬಲವಾದ, ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಮುಖ ಭಾಗವಾಗಿದೆ.


    ಇದಕ್ಕೆ ನೀವು ಯಾವುದೇ ರೀತಿಯ ಹಣವನ್ನು ಖರ್ಚು ಮಾಡಬೇಕಿಲ್ಲ ಎಂದು ಎನ್ಸೊ ವೆಲ್ನೆಸ್ ಸಂಸ್ಥಾಪಕ ಅರುಬಾ ಕಬೀರ್ ಅವರು ಹೇಳುತ್ತಾರೆ.


    ನಿಮ್ಮ ಸಂಗಾತಿಗೆ ಪ್ರತಿದಿನವೂ ವಿಶೇಷ ಭಾವನೆ ಮೂಡಿಸಲು ಈ 7 ಸಲಹೆಗಳನ್ನು ಪಾಲಿಸಿ


    1. ಅವರಿಗೆ ಅಭಿನಂದನೆ ತಿಳಿಸಿ: ಸಂಗಾತಿಯ ಒಳ್ಳೆಯ ಗುಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮತ್ತು ಅವರು ಮಾಡುವ ಒಳ್ಳೆಯ ಕೆಲಸಕ್ಕೆ ಅವರಿಗೆ ಅಭಿನಂದನೆಗಳನ್ನು ತಿಳಿಸಲು ಮರೆಯಬೇಡಿ. ಸಂಗಾತಿಯ ನೋಟದಿಂದ ಹಿಡಿದು ಅವರ ವ್ಯಕ್ತಿತ್ವದವರೆಗೆ, ಅವರ ಸಾಧನೆಗಳವರೆಗೆ ಏನು ಇಷ್ಟವಾಗುತ್ತದೆಯೋ ಅದರ ಬಗ್ಗೆ ಮಾತಾಡಿ.


    2. ದೈಹಿಕ ವಾತ್ಸಲ್ಯವನ್ನು ತೋರಿಸಿ: ಸಂಗಾತಿಗೆ ಒಂದು ಅಪ್ಪುಗೆಯನ್ನು ನೀಡುವುದು, ಚುಂಬಿಸುವುದು ಮತ್ತು ಕೈಗಳನ್ನು ಹಿಡಿಯುವಂತಹ ದೈಹಿಕ ವಾತ್ಸಲ್ಯವು ನಿಮ್ಮ ಸಂಗಾತಿಯನ್ನು ಪ್ರಶಂಸಿಸಲು ಮತ್ತು ಪ್ರೀತಿಸಲು ಸಹಾಯ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    3. ಅವರ ಮಾತನ್ನು ಕೇಳಿಸಿಕೊಳ್ಳಿ: ನಿಮ್ಮ ಸಂಗಾತಿ ಏನು ಹೇಳುತ್ತಾರೆ ಎಂಬುದನ್ನು ಗಮನವಿಟ್ಟು ಕೇಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಅವರ ಆಲೋಚನೆಗಳು ಮತ್ತು ಭಾವನೆಗಳಲ್ಲಿ ನೀವು ಆಸಕ್ತಿ ಹೊಂದಿದ್ದೀರಿ ಎಂದು ಅವರಿಗೆ ತೋರಿಸಿ.


    4. ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ: ಕೆಲಸದಿಂದ ಮನೆಗೆ ಹೋಗುವಾಗ ದಿನಸಿ ವಸ್ತುಗಳನ್ನು ತೆಗೆದುಕೊಳ್ಳುವುದು ಅಥವಾ ಊಟವನ್ನು ಬೇಯಿಸುವುದು ಆಗಿರಲಿ, ನಿಮ್ಮ ಜೀವನವನ್ನು ಸುಲಭಗೊಳಿಸಲು ನಿಮ್ಮ ಸಂಗಾತಿ ಮಾಡುವ ಸಣ್ಣ ಸನ್ನೆಗಳನ್ನು ಅಂಗೀಕರಿಸಿ ಮತ್ತು ಪ್ರಶಂಸಿಸಿ.


    5. ಅವರಿಗೆ ಸರ್ಪ್ರೈಸ್ ನೀಡಿ: ಸಂಗಾತಿಗೆ ಗೊತ್ತಿಲ್ಲದೆ ಒಳ್ಳೆಯ ಉಡುಗೊರೆ, ಪ್ರಣಯ ಡೇಟ್ ಅಥವಾ ಮೋಜಿನ ವಿಹಾರವಾಗಿರಲಿ, ನಿಮ್ಮ ಸಂಗಾತಿಗೆ ವಿಶೇಷ ಎನ್ನಿಸುವ ಸರ್ಪ್ರೈಸ್ ನೀಡಿ ಆಶ್ಚರ್ಯಗೊಳಿಸಿ.


    ಇದನ್ನೂ ಓದಿ: ಮಾನಸಿಕವಾಗಿ ನೀವೆಷ್ಟು ಸ್ಟ್ರಾಂಗ್​ ಎಂದು ಪರೀಕ್ಷಿಸಲು ಇದನ್ನು ಓದಿ


    6. ಬೆಂಬಲ ಮತ್ತು ಸಂವಹನಶೀಲರಾಗಿರಿ: ನಿಮ್ಮ ಸಂಗಾತಿಗೆ ಅಗತ್ಯವಿರುವಾಗ ಅವರಿಗಾಗಿ ಇರಿ, ಅದು ಅವರ ಮಾತನ್ನು ಕೇಳಿಸಿಕೊಳ್ಳುವುದು, ಅವರಿಗೆ ಸಲಹೆ ನೀಡುವುದು ಅಥವಾ ಅವರ ಕೈಯನ್ನು ಹಿಡಿಯುವುದು ಹೀಗೆ ಅವರ ಬೆಂಬಲಕ್ಕೆ ಇರಿ.


    7. ಅವರಿಗೆ ಧ್ವನಿಯಾಗಿರಿ: ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅವರಿಗೆ ಹೇಳಿ. ಅವರು ನಿಮಗೆ ಎಷ್ಟು ಮುಖ್ಯ ಎಂದು ನಿಯಮಿತವಾಗಿ ಹೇಳುವ ಮೂಲಕ ಅವರು ಪ್ರೀತಿಸಲ್ಪಡುತ್ತಾರೆ ಮತ್ತು ಪ್ರಶಂಸಿಸಲ್ಪಡುತ್ತಾರೆ ಎಂದು ನಿಮ್ಮ ಸಂಗಾತಿಗೆ ತೋರಿಸಿ.

    Published by:Prajwal B
    First published: