ಬಿಸಿಲು, ಬೆವರು, ತೇವಾಂಶ ಮತ್ತು ಮಳೆ (Monsoon) ಇವುಗಳು ಮೇಕಪ್ ನ ಮೂರು ಹಿತ ಶತ್ರುಗಳು ಎನ್ನಬಹುದು. ಮೇಕಪ್ (Makeup) ಮಾಡಿಕೊಂಡ ಮೇಲೆ ಅದು ಸರಿಯಾಗಿ ಒಂದಿಷ್ಟು ಹೊತ್ತು ಮುಖದ (Face) ಮೇಲೆ ಇರಬೇಕು. ಅದರ ಬದಲಿಗೆ ಬಿಸಿಲಿಗೋ, ಮಳೆಗೋ ಮುಖದಲ್ಲಿನ ಮೇಕಪ್ ಹೋದರೆ ಹೊಳೆಯಲ್ಲಿ ಹುಣಸೆ ಹಣ್ಣು ಗಿವುಚಿದಂತಾಗುತ್ತದೆ. ಅದರಲ್ಲೂ ಮಳೆಯಲ್ಲಿ ಮೇಕಪ್ ಬೇಗ ಹೋಗಿ ಬಿಡುತ್ತದೆ. ಹೀಗಾಗಿ ಉತ್ತಮವಾಗಿ ಕಾಣಲು ಮಾನ್ಸೂನ್ ಮೇಕಪ್ ಸಲಹೆಗಳನ್ನು (Makeup Tips) ಅನುಸರಿಸಬೇಕು. ಈ ಕೆಳಗೆ ಕೊಟ್ಟಿರುವ ಪ್ರತಿಯೊಂದು ಟಿಪ್ಸ್ ಅನ್ನು ನೀವು ಫಾಲೋ ಮಾಡಿದ್ರೆ ನಿಮ್ಮ ಮೇಕಪ್ ಹೆಚ್ಚು ಹೊತ್ತು ಬರುವುದರೊಂದಿಗೆ ಚೆನ್ನಾಗಿ ಕಾಣುತ್ತೀರಿ.
ಮಳೆಗಾಲದಲ್ಲಿ ಮೇಕಪ್ ಹೆಚ್ಚು ಹೊತ್ತು ಮುಖದಲ್ಲಿ ಉಳಿಯಲು ಅನುಸರಿಸಬೇಕಾದ ಟಿಪ್ಸ್
ಸಲಹೆ 1 -ಪ್ರೈಮರ್, ಫೌಂಡೇಶನ್ ಮತ್ತು ಕನ್ಸೀಲರ್
ಮಳೆಗಾಲದಲ್ಲಿ ಮೇಕಪ್ ಹೋಗದಿರಲು ಸರಿಯಾದ ಮ್ಯಾಟ್ ಫಿನಿಶ್ ನೀಡುವ ಪ್ರೈಮರ್‌ನೊಂದಿಗೆ ಮೇಕಪ್ ಅನ್ನು ಆರಂಭಿಸಿ. ಸ್ಮೀಯರ್ ಪ್ರೂಫ್ ಮುಖದ ಮೇಕಪ್‌ಗಾಗಿ, ದೀರ್ಘಾವಧಿಯ ಫೌಂಡೇಶನ್ ಮತ್ತು ಕನ್ಸೀಲರ್ ಬಳಸುವುದು ಉತ್ತಮ. ಇದರಿಂದಾಗಿ ಮೇಕಪ್ ಹೆಚ್ಚು ಹೊತ್ತು ಇರುತ್ತದೆ. ಉತ್ತಮ ಮಳೆಗಾಲದ ಮೇಕಪ್ ಸಲಹೆ ಎಂದರೆ ಪ್ರೈಮರ್, ಫೌಂಡೇಶನ್ ಮತ್ತು ಕನ್ಸೀಲರ್. ಇವುಗಳನ್ನು ಸರಿಯಾದ ರೀತಿಯಲ್ಲಿ, ನಿಮ್ಮ ಚರ್ಮಕ್ಕೆ ಅನುಗುಣವಾಗಿರುವ ಶೇಡ್ ಬಳಸುವುರಿಂದ ಹೆಚ್ಚು ಹೊತ್ತು ಮೇಕಪ್ ಇರುವುದರ ಜೊತೆ ಅಂದವಾಗಿ ಕಾಣಿಸುತ್ತೀರ.
ನೀವು ಈ ಕೆಳಗಿನ ಉತ್ಪನ್ನಗಳನ್ನು ಬಳಸಬಹುದು.
1. ಫೇಸ್ ಸ್ಟುಡಿಯೋ ಮಾಸ್ಟರ್ ಪ್ರೈಮ್ ಪ್ರೈಮರ್ ಮೇಕಪ್
2. ಫಿಟ್ ಮಿ ಮ್ಯಾಟ್ + ಪೋರ್‌ಲೆಸ್ ಪ್ರೈಮರ್
3. ಸೂಪರ್‌ಸ್ಟೇ ಫುಲ್ ಕವರೇಜ್ ಫೌಂಡೇಶನ್
4. ಫಿಟ್ ಮಿ ಕನ್ಸೀಲರ್
ಇದನ್ನೂ ಓದಿ: Beauty Tips: ತ್ವಚೆ ಬಿಗಿಯಾಗಿಸಲು, ಮುಖದ ಸೌಂದರ್ಯ ಹೆಚ್ಚಿಸಲು ಈ ಯೋಗ ಸಹಕಾರಿ
ಸಲಹೆ 2 - ಸೆಟ್ಟಿಂಗ್ ಪೌಡರ್ ಅನ್ವಯಿಸಿ
ಮೇಲಿನ ಮೂರು ಮೇಕಪ್ ಉತ್ಪನ್ನಗಳ ಅನ್ವಯದ ಬಳಿಕ ಅವುಗಳು ಸರಿಯಾಗಿ ಹೊಂದಿಕೊಳ್ಳಲು ಸೆಟ್ಟಿಂಗ್ ಪೌಡರ್ ಬಳಸಿ. ಇದು ಮಾನ್ಸೂನ್ 'ಮೇಕಪ್ ಹ್ಯಾಕ್' ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ನಿಮ್ಮ ಲಿಕ್ವಿಡ್ ಫೌಂಡೇಶನ್ ಅನ್ನು ಸೆಟ್ಟಿಂಗ್ ಪೌಡರ್ ಜೊತೆ ಮಿಶ್ರಣ ಮಾಡಿ ಮತ್ತು ನಂತರ ಅದನ್ನು ಫೌಂಡೇಶನ್ ಬ್ರಷ್‌ನೊಂದಿಗೆ ಅನ್ವಯಿಸಬಹುಸು. ಈ ರೀತಿ ಮಾಡುವುದರಿಂದ ನಿಮ್ಮ ಮೇಕಪ್ ಇಡೀ ದಿನ ತಾಜಾವಾಗಿ ಕಾಣುತ್ತದೆ.
1. ಫಿಟ್ ಮಿ ಕಾಂಪ್ಯಾಕ್ಟ್ ಪೌಡರ್
2. ಫಿಟ್ ಮಿ ಮ್ಯಾಟ್ + ಪೋರ್ಲೆಸ್ ಪ್ರೆಸ್ಡ್ ಪೌಡರ್
ಸಲಹೆ 3 – ಕ್ರೀಮ್ ಕೌಂಟರ್ ಮತ್ತು ಹೈಲೈಟರ್ ಗಳು
ಮೇಕಪ್ ಸರಿಯಾಗಿ ಕುಳಿತುಕೊಳ್ಳಲು ಕೆನ್ನೆಗೆ ಗುಲಾಬಿ ಅಥವಾ ಪೀಚ್ ಬ್ಲಶ್ ಅನ್ನು ಅನ್ವಯಿಸುವುದು ಉತ್ತಮ. ಮತ್ತು ಮೇಕಪ್ ಹೆಚ್ಚು ಬೆಳಗಲು ನೀವು ಹೈಲೈಟರ್ ಕೂಡ ಬಳಸಬಹುದು.
ನೀವು ಪ್ರಯತ್ನಿಸಬಹುದಾದ ಕೌಂಟರ್ ಮತ್ತು ಹೈಲೈಟರ್ ಗಳು
1. ಫಿಟ್ ಮಿ ಮೊನೊ ಬ್ಲಶ್
2. ಫೇಸ್ ಸ್ಟುಡಿಯೋ ಮಾಸ್ಟರ್ ಕ್ರೋಮ್ ಮೆಟಾಲಿಕ್ ಹೈಲೈಟರ್
ಸಲಹೆ 4 – ವಾಟರ್ ಫ್ರೂಪ್ ಮೇಕಪ್ ಉತ್ಪನ್ನ ಬಳಸಿ
ಮೇಕಪ್ ಉತ್ಪನ್ನಗಳಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ನೀವು ವಾಟರ್ ಫ್ರೂಪ್ ಉತ್ಪನ್ನ ಬಳಸುವುದು ಯಾವಾಗಲೂ ಉತ್ತಮ. ಇದು ನೀರು, ಬೆವರಿನಿಂದ ನಿಮ್ಮ ಮೇಕಪ್ ಅನ್ನು ರಕ್ಷಿಸುತ್ತದೆ. ಅದರಲ್ಲೂ ಕಣ್ಣುಗಳಿಗೆ ಬಳಸುವ ಉತ್ಪನ್ನಗಳು ವಾಟರ್ ಫ್ರೂಪ್ ಆಗಿರಬೇಕು.
ಐಲೈನರ್, ಕಾಜಲ್, ಲ್ಯಾಶ್ ಜೆಲ್, ಮಸ್ಕರಾ ಇವುಗಳು ಆದಷ್ಟು ವಾಟರ್ ಫ್ರೂಪ್ ಆಗಿರಬೇಕು.
ನೀವು ಬಳಸಬಹುದಾದ ಕಣ್ಣಿನ ಉತ್ಪನ್ನಗಳು
1. ಬ್ಲಶ್ಡ್ ನ್ಯೂಡ್ಸ್ ಐಶಾಡೋ ಪ್ಯಾಲೆಟ್
2. ಸಿಟಿ ಮಿನಿ ಐಶಾಡೋ ಪ್ಯಾಲೆಟ್
3. ಕಾಜಲ್
4. ಸೂಪರ್ ಬ್ಲ್ಯಾಕ್ ಕಾಜಲ್
5. ಬೋಲ್ಡ್ ಲೈನರ್
6. ಟ್ಯಾಟೂ ಸ್ಟುಡಿಯೋ ಜೆಲ್ ಐಲೈನರ್ ಪೆನ್ಸಿಲ್
7. ವಾಟರ್ ಪ್ರೂಫ್ ಮಸ್ಕರಾ
8. ವಾಲ್ಯೂಮ್ ಎಕ್ಸ್‌ಪ್ರೆಸ್ ಹೈಪರ್ ಕರ್ಲ್ ಮಸ್ಕರಾ
ಸಲಹೆ 5 -. ವಾಟರ್ ಪ್ರೂಫ್ ಐಬ್ರೋ ಉತ್ಪನ್ನ
ನಿಮ್ಮ ಹುಬ್ಬುಗಳನ್ನು ಅಂದಗೊಳಿಸಲು ನೀವು ಬಳಸುವ ಐಬ್ರೋ ಪೆನ್ಸಿಲ್, ಜೆಲ್ ಗಳು ವಾಟರ್ ಪ್ರೂಫ್ ಆಗಿರಬೇಕು. ಮಳೆಗಾಲದಲ್ಲಿ ಸಮಯದಲ್ಲಿ ನೀರು ಬಿದ್ದು ಮುಖದ ಅಂದಗೆಡುವುದನ್ನು ಇದು ತಪ್ಪಿಸುತ್ತದೆ.
ನಮ್ಮ ಶಿಫಾರಸ್ಸುಗಳು
1. ಫ್ಯಾಶನ್ ಬ್ರೋ ಕ್ರೀಮ್ ಪೆನ್ಸಿಲ್
2. ಬ್ರೋ ಪೆನ್ಸಿಲ್
ಇದನ್ನೂ ಓದಿ: Hair Care: ಗುಂಗುರು ಕೂದಲು ಆರೈಕೆ ಮಾಡೋಕೆ ಪರದಾಡ್ತಿದ್ರೆ ಇಷ್ಟು ಮಾಡಿ ಸಾಕು
ಸಲಹೆ 6 - ತುಟಿಗಳಿಗೆ ಮ್ಯಾಟ್ ಲಿಪ್ ಸ್ಟಿಕ್
ಹೆಣ್ಣು ಮಕ್ಕಳ ದೊಡ್ಡ ಗೊಣಗಾಟ ಎಂದರೆ ಲಿಪ್ ಸ್ಟಿಕ್ ಹೆಚ್ಚು ಹೊತ್ತ ಬರುವುದಿಲ್ಲ ಎಂಬುವುದು. ಹೀಗಾಗಿ ಮ್ಯಾಟ್ ಲಿಪ್ ಸ್ಟಿಕ್ ಮಾನ್ಸೂನ್ ಸಮಯದ ಮೇಕ್ಅಪ್ ನ ಅತ್ಯಗತ್ಯ ಉತ್ಪನ್ನ. ಅಲ್ಟ್ರಾ-ಮ್ಯಾಟ್ ವಾಟರ್‌ಪ್ರೂಫ್ ಲಿಪ್‌ಸ್ಟಿಕ್ ಅನ್ನು ಬಳಸುವುದರಿಂದ ಇದು ಹೆಚ್ಚು ಹೊತ್ತು ನಿಮ್ಮ ತುಟಿ ಮೇಲಿರುತ್ತದೆ.
ಉತ್ತಮ ಲಿಪ್‌ಸ್ಟಿಕ್
1. ಕಲರ್ ಸೆನ್ಸೇಷನಲ್ ಶೇಪಿಂಗ್ ಲಿಪ್ ಲೈನರ್
2. ಸೂಪರ್‌ಸ್ಟೇ ಮ್ಯಾಟ್ ಇಂಕ್ ಲಿಕ್ವಿಡ್ ಲಿಪ್‌ಸ್ಟಿಕ್
ಸಲಹೆ 7 - ಸೆಟ್ಟಿಂಗ್ ಸ್ಪ್ರೇ
ಸೆಟ್ಟಿಂಗ್ ಸ್ಪ್ರೇ ಮೂಲಕ ನಿಮ್ಮ ಮೇಕ್ಅಪ್ ದಿನವಿಡೀ ತಾಜಾವಾಗಿ ಕಾಣುವಂತೆ ನೋಡಿಕೊಳ್ಳಬಹುದು. ಇದು ನಿಮ್ಮ ಮೇಕ್ಅಪ್ ಅನ್ನು ಸಂಯೋಜಿಸುತ್ತದೆ ಮತ್ತು ಇಡೀ ದಿನ ನಿಮ್ಮ ಮುಖದ ಮೇಲೆ ಇರಿಸುತ್ತದೆ.
ಶಿಫಾರಸ್ಸುಗಳು
1. ಫೇಸ್ ಸ್ಟುಡಿಯೋ ಲಾಸ್ಟಿಂಗ್ ಫಿಕ್ಸ್ ಮೇಕಪ್ ಸೆಟ್ಟಿಂಗ್ ಸ್ಪ್ರೇ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ