• Home
  • »
  • News
  • »
  • lifestyle
  • »
  • Food Recipe: ಬರೀ 30 ನಿಮಿಷಗಳಲ್ಲಿ ರೆಡಿ ಆಗುತ್ತೆ ಈ ಸ್ಯಾಂಡ್‍ವಿಚ್‍ಗಳು, ನೀವೂ ಟ್ರೈ ಮಾಡಿ

Food Recipe: ಬರೀ 30 ನಿಮಿಷಗಳಲ್ಲಿ ರೆಡಿ ಆಗುತ್ತೆ ಈ ಸ್ಯಾಂಡ್‍ವಿಚ್‍ಗಳು, ನೀವೂ ಟ್ರೈ ಮಾಡಿ

ಸ್ಯಾಂಡ್‍ವಿಚ್‍

ಸ್ಯಾಂಡ್‍ವಿಚ್‍

ಬೆಳಗ್ಗಿನ ಉಪಹಾರಕ್ಕೆ ವಿಭಿನ್ನ ರೀತಿಯ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಿ ತಿನ್ನುವುದು ಅತ್ಯುತ್ತಮ ಆಯ್ಕೆ. ಅವಸರದಲ್ಲಿ ಅಷ್ಟೆಲ್ಲಾ ಮಾಡುವುದು ಸಾಧ್ಯವಿಲ್ಲ ಎನ್ನುತ್ತೀರಾ? ಚಿಂತಿಸಬೇಡಿ, ಕೇವಲ ಮೂವತ್ತು ನಿಮಿಷಗಳ ಒಳಗೆ ತಯಾರಿಸಬಹುದಾದ 5 ಸ್ಯಾಂಡ್‍ವಿಚ್ ರೆಸಿಪಿಗಳ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ನಾವು ಬೆಳಗ್ಗಿನ ಉಪಹಾರಕ್ಕೆ (Morning Breakfast) ಸರಳವಾದ ಮತ್ತು ಅಷ್ಟೇ ಆರೋಗ್ಯಕರವಾದ ತಿನಿಸನ್ನು, ಕಡಿಮೆ ಅವಧಿಯಲ್ಲಿ ತಯಾರಿಸುವ ಅನಿವಾರ್ಯತೆ ಎದುರಾದಾಗ ನಮಗೆ ಥಟ್ಟನೆ ನೆನಪಾಗುವುದು ಸ್ಯಾಂಡ್‍ವಿಚ್ (Sandwich). ಆದರೆ, ಬಹಳಷ್ಟು ಮಂದಿಗೆ ಯಾವಾಗಲೂ ಅದೇ ಟೊಮ್ಯಾಟೋ, ಈರುಳ್ಳಿ ಮತ್ತು ಕೆಚಪ್ ಹಾಕಿ ತಯಾರಿಸಿದ ಸ್ಯಾಂಡ್‍ವಿಚ್ ತಿಂದು ಬೋರ್ ಆಗಿರುತ್ತದೆ. ಬೆಳಗ್ಗಿನ ಉಪಹಾರ ಚೆನ್ನಾಗಿದ್ದರೆ, ನೀವು ದಿನವಿಡೀ ಉತ್ಸಾಹದಿಂದ ಇರಬಹುದು. ಹಾಗಾಗಿ, ಬೆಳಗ್ಗಿನ ಉಪಹಾರಕ್ಕೆ ವಿಭಿನ್ನ ರೀತಿಯ ಸ್ಯಾಂಡ್‍ವಿಚ್‍ಗಳನ್ನು ತಯಾರಿಸಿ ತಿನ್ನುವುದು ಅತ್ಯುತ್ತಮ ಆಯ್ಕೆ. ಅವಸರದಲ್ಲಿ ಅಷ್ಟೆಲ್ಲಾ ಮಾಡುವುದು ಸಾಧ್ಯವಿಲ್ಲ ಎನ್ನುತ್ತೀರಾ? ಚಿಂತಿಸಬೇಡಿ, ಕೇವಲ ಮೂವತ್ತು ನಿಮಿಷಗಳ ಒಳಗೆ ತಯಾರಿಸಬಹುದಾದ 5 ಸ್ಯಾಂಡ್‍ವಿಚ್ ರೆಸಿಪಿಗಳ (Recipe) ಮಾಹಿತಿ ಇಲ್ಲಿದೆ.


ಮೂವತ್ತು ನಿಮಿಷಗಳಲ್ಲಿ ಸಿದ್ಧವಾಗುವ 5 ವೆಜ್ ಸ್ಯಾಂಡ್‍ವಿಚ್‍ಗಳ ಮಾಹಿತಿ ಇಲ್ಲಿದೆ


1. ಚೀಸ್ ಸ್ಯಾಂಡ್‍ವಿಚ್
ಯಥೇಚ್ಛವಾಗಿ ಮಯೋನೀಸ್, ಲೆಟ್ಟಸ್, ಮಸ್ಟರ್ಡ್ ಮತ್ತು ಚೀಸ್ ಹಾಕಿ ತಯಾರಿಸುವ ಈ ಸ್ಯಾಂಡ್‍ವಿಚ್ ತಿನ್ನುವಾಗ, ನೀವು ಪ್ರತೀ ತುತ್ತನ್ನೂ ಆಸ್ವಾದಿಸುವುದು ಖಂಡಿತಾ. ಕೇವಲ 20 ನಿಮಿಷದಲ್ಲಿ ಸಿದ್ಧ ಮಾಡಬಹುದಾದ ಚೀಸ್ ಸ್ಯಾಂಡ್‍ವಿಚ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಈ ಸ್ಯಾಂಡ್‍ವಿಚ್‍ಗೆ ಮೇಲೆ ತಿಳಿಸಿದ ಸಾಮಾಗ್ರಿಗಳ ಜೊತೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬ್ಲಾಕ್ ಪೆಪ್ಪರ್ ಪುಡಿಯನ್ನು ಸೇರಿಸಲು ಮರೆಯದಿರಿ.


ಇದನ್ನೂ ಓದಿ: Recipe: ರೋಟಿ, ಚಪಾತಿಗೆ ರುಚಿಕರ ಮಿಕ್ಸ್ ವೆಜಿಟೇಬಲ್ ಕರಿ ಮಾಡಿ


2. ಮೊಸರಿನ ಸ್ಯಾಂಡ್‍ವಿಚ್
ಮೊಸರನ್ನು ಹಾಕಿ ಸ್ಯಾಂಡ್‍ವಿಚ್ ತಯಾರಿಸುವುದೇ? ಎಂದು ಮೂಗು ಮುರಿಯಬೇಡಿ. ನೀವು ಒಮ್ಮೆ ಇದನ್ನು ತಯಾರಿಸಿ ತಿಂದರೆ, ಇದರ ರುಚಿಗೆ ಮಾರುಹೋಗುವುದು ಖಚಿತ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ನಿಮ್ಮಿಷ್ಟದ ತರಕಾರಿಗಳನ್ನು ಹೆಚ್ಚಿಕೊಳ್ಳಿ. ಬಳಿಕ ಅವನ್ನು ಮೊಸರು ಮತ್ತು ಬೇಕಿರುವ ಮಸಾಲೆಗಳ ಜೊತೆ ಕಲಸಿಕೊಳ್ಳಿ. ಆ ಮಿಶ್ರಣದವನ್ನು ಸ್ಯಾಂಡ್‍ವಿಚ್ ಬ್ರೆಡ್‍ನ ಒಳಗೆ ಸೇರಿಸಿ, ತವಾದ ಮೇಲೆ ಕಾಯಿಸಿ. ದಿಢೀರ್ ಮೊಸರು ಸ್ಯಾಂಡ್‍ವಿಚ್ ಸಿದ್ಧವಾಗುತ್ತದೆ.


3. ಪನೀರ್ ಬುರ್ಜಿ ಸ್ಯಾಂಡ್‍ವಿಚ್
ಪನೀರ್ ಬುರ್ಜಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು ಅದರ ಸ್ಯಾಂಡ್‍ವಿಚ್ ತಯಾರಿಸಿ ತಿಂದರಂತೂ ಇನ್ನೂ ರುಚಿಕರ. ಅಚ್ಚಖಾರದ ಪುಡಿ, ಅರಶಿನ, ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಪನೀರ್ ಮತ್ತು ಅಮ್‍ಚೂರ್ ಪೌಡರ್ ಇತ್ಯಾದಿಗಳನ್ನು ಸೇರಿಸಿ ಪನೀರ್ ಬುರ್ಜಿ ತಯಾರಿಸಿ. ಬೆಣ್ಣೆ ಸವರಿದ ಎರಡು ಬ್ರೆಡ್ ತುಂಡುಗಳ ಮೇಲೆ ಕತ್ತರಿಸಿದ ಈರುಳ್ಳಿ ಮತ್ತು ಟೊಮ್ಯಾಟೋ ಇಟ್ಟು, ನಡುವೆ ಬ್ರೆಡ್ ಬುರ್ಜಿ ಸೇರಿಸಿ, ಸ್ಯಾಂಡ್‍ವಿಚ್ ಅನ್ನು ಗ್ರಿಲ್ ಮಾಡಿ. ಈ ಸ್ಯಾಂಡ್‍ವಿಚ್ ನಾಲಗೆಗೆ ರುಚಿ ನೀಡುವುದು ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸುತ್ತದೆ.


4. ಗ್ರಿಲ್ ಮಾಡಿದ ಚೀಸ್ ಸ್ಯಾಂಡ್‍ವಿಚ್
ಗ್ರಿಲ್ ಮಾಡಿದ, ಗರಿಗರಿಯಾದ ಚೀಸ್ ಸ್ಯಾಂಡ್‍ವಿಚ್ ಚಪ್ಪರಿಸುವ ಖುಷಿಯೇ ಬೇರೆ. ಕಡಿಮೆ ಸಾಮಾಗ್ರಿಗಳಿಂದ ಅತ್ಯಂತ ಸರಳವಾಗಿ ತಯಾರಿಸಬಹುದಾದ ಸ್ಯಾಂಡ್‍ವಿಚ್ ಇದು. ಕರಿಮೆಣಸಿನ ಪುಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ, ತುರಿದ ಚೀಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ. ಎರಡು ಬ್ರೆಡ್ ತುಂಡುಗಳಿಗೆ ಬೆಣ್ಣೆ ಸವರಿ, ಬೆಣ್ಣೆ ಸವರದ ಭಾಗಗಳ ಮಧ್ಯೆ ಆ ಮಿಶ್ರಣವನ್ನು ಇಟ್ಟು ಮುಚ್ಚಿ, ಗ್ರಿಲ್ ಮಾಡಿ. ಗರಿಗರಿಯಾದ ಗ್ರಿಲ್ ಚೀಸ್ ಸ್ಯಾಂಡ್‍ವಿಚ್ ಸಿದ್ಧವಾಗುತ್ತದೆ.


ಇದನ್ನೂ ಓದಿ: Breakfast Recipe: ದಿನ ಬೆಳಗಾದ್ರೆ ಏನು ತಿಂಡಿ ಮಾಡೋದು ಅಂತ ಚಿಂತೆನಾ; ಇಲ್ಲಿದೆ ನೋಡಿ ಸಿಂಪಲ್​ ಟೆಸ್ಟಿ ಆಹಾರಗಳು


5. ಬಾಂಬೆ ಟೋಸ್ಟಿ
ಮುಂಬೈನ ಈ ಸ್ಟ್ರೀಟ್ -ಸ್ಟೈಲ್ ಸ್ಯಾಂಡ್‍ವಿಚ್, ಸ್ಪೈಸಿ ತಿನಿಸುಗಳನ್ನು ಇಷ್ಟಪಡುವವರಿಗೆ ಬಹಳ ಇಷ್ಟವಾಗುತ್ತದೆ. ಚಾಟ್ ಮಸಾಲ, ಪುದೀನ ಚಟ್ನಿ, ಈರುಳ್ಳಿ, ಕ್ಯಾಪ್ಸಿಕಮ್, ಆಲೂಗಡ್ಡೆ ಮತ್ತು ಸೌತೆಕಾಯಿ ಇತ್ಯಾದಿಗಳನ್ನು ಹಾಕಿ ತಯಾರಿಸುವ ಬಾಂಬೆ ಟೋಸ್ಟಿ ಮಾಡಲು 20 ನಿಮಿಷ ಸಾಕು.

Published by:Ashwini Prabhu
First published: