ತುಂಬಾ ಜನರು ಅನಾರೋಗ್ಯಕರ (Unhealthy Food) ಮತ್ತು ಎಣ್ಣೆಯುಕ್ತ ಆಹಾರವನ್ನು (Oily Food) ಬೆಳಗಿನ ತಿಂಡಿಯಾಗಿ (Breakfast), ಸಂಜೆಗೆ ಸ್ನ್ಯಾಕ್ಸ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಾಗ್ಯೂ ನೀವು ತಿಂಡಿಗಳಲ್ಲಿ ಆರೋಗ್ಯಕರ ಪದಾರ್ಥ ಸೇರಿಸಲು ಸಾಧ್ಯವಾಗಲ್ಲ. ಅಥವಾ ಅಂತಹ ಕರಿದ ಪದಾರ್ಥಗಳಲ್ಲಿ ನಾವು ಆರೋಗ್ಯಕರ ಪದಾರ್ಥಗಳನ್ನು ಸೇರಿಸಬಹುದು. ಕೆಲವೊಮ್ಮೆ ಆಹಾರ ಆರೋಗ್ಯಕರವಾಗಿಯೇ ಇರುತ್ತದೆ. ಆದರೆ ಅದನ್ನು ತಯಾರಿಸುವ ಪದ್ಧತಿಯಲ್ಲಿ ಮಾಡುವ ತಪ್ಪಿನಿಂದಾಗಿ ಸೇವಿಸುವ ಪದಾರ್ಥವು ಅನಾರೋಗ್ಯಕರವಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಅಡುಗೆ (Cooking) ಮಾಡುವಾಗ ಮತ್ತು ಪದಾರ್ಥಗಳ ರೆಸಿಪಿ (Recipe) ವೇಳೆ ಉತ್ತಮ ವಿಷಯಗಳನ್ನು ಫಾಲೋ ಮಾಡಬೇಕು. ಇದು ಅಡುಗೆಯ ರುಚಿ ಮತ್ತು ಪಾಕವಿಧಾನವನ್ನು ಆರೋಗ್ಯಕರವಾಗಿಸುತ್ತದೆ.
ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್ ಟಿಕ್ಕಿ
ನೀವು ಆರೋಗ್ಯಕರ ವಿವಿಧ ರೀತಿಯ ಟಿಕ್ಕಿಗಳನ್ನು ವಿಶಿಷ್ಟ ಪಾಕ ವಿಧಾನದ ಮೂಲಕ ಮಾಡಿ ಬೆಳಗಿನ ತಿಂಡಿಯಾಗಿ ಸೇವನೆ ಮಾಡಬಹುದು. ಆಲೂಗಡ್ಡೆ, ಜೋಳ, ಸಿಹಿ ಗೆಣಸು ಅಥವಾ ಇತರೆ ಪದಾರ್ಥಗಳಿಂದ ಮಾಡಿದ ಟಿಕ್ಕಿಗಳನ್ನು ನೀವು ಡೀಪ್ ಫ್ರೈ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.
ಹಾಗಾಗಿ ಆರೋಗ್ಯಕರವಾಗಿ ಟಿಕ್ಕಿಗಳನ್ನು ಮಾಡುವ ಪಾಕ ವಿಧಾನವನ್ನು ನಾವು ಇಂದು ಇಲ್ಲಿ ನೋಡೋಣ. ಹಾಗಾಗಿ ನಿಮ್ಮ ರುಚಿಯ ಕ್ರೇವಿಂಗ್ಸ್ ತಣಿಸಲು ಬೆಳಗಿನ ತಿಂಡಿಯಲ್ಲಿ ರುಚಿಕರ ಮತ್ತು ಆರೋಗ್ಯಕರ ಟಿಕ್ಕಿ ಸೇವನೆ ಮಾಡಬಹುದು. ಮಕ್ಕಳು ಕೂಡ ಈ ಟಿಕ್ಕಿಯನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ.
ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ
ಸಾಮಾನ್ಯವಾಗಿ ಟಿಕ್ಕಿ ಮತ್ತು ಪಕೋಡಾಗಳನ್ನು ಮನೆಯ ಹಿರಿಯರು ಸೇವನೆ ಮಾಡಬಹುದಾದ ಆರೋಗ್ಯಕರ ಆಯ್ಕೆ ಆಗಿದೆ. ಹಾಗಾಗಿ ಇಲ್ಲಿ ನಾವು ರುಚಿಕರ ಟಿಕ್ಕಿ ಪಾಕವಿಧಾನ ತಯಾರಿಸುವುದು ಹೇಗೆ ಎಂದು ನೋಡೋಣ.
ಆರೋಗ್ಯಕರ ಓಟ್ಸ್ ಟಿಕ್ಕಿ ತಯಾರಿಸಲು ಬೇಕಾದ ಸಾಮಗ್ರಿಗಳು
ಓಟ್ಸ್ 300 ಗ್ರಾಂ, ಪನೀರ್ 250 ಗ್ರಾಂ, ಸಣ್ಣಗೆ ಕೊಚ್ಚಿದ ಒಂದು ಬೀಟ್ರೂಟ್, ಸಣ್ಣಗೆ ಹೆಚ್ಚಿದ ನಾಲ್ಕು ಹಸಿರು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಕಪ್ಪು ಮೆಣಸು, ಎರಡು ಚಮಚ ಜೀರಿಗೆ ಪುಡಿ, ಒಂದು ಚಮಚ ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಬೀನ್ಸ್, ಮೂರು ಬೇಯಿಸಿದ ಆಲೂಗಡ್ಡೆ, ತುಪ್ಪ.
ಓಟ್ಸ್ ಟಿಕ್ಕಿ ಹೇಗೆ ತಯಾರಿಸುವುದು?
ಬೀನ್ಸ್, ಬೀಟ್ರೂಟ್, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಮೊದಲು ಸಣ್ಣದಾಗಿ ಹೆಚ್ಚಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಓಟ್ಸ್, ಬೇಯಿಸಿದ ಆಲೂಗಡ್ಡೆ, ಪನೀರ್, ಕೊತ್ತಂಬರಿ ಸೊಪ್ಪು, ಬೀನ್ಸ್, ಬೀಟ್ರೂಟ್ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಕರಿಮೆಣಸಿನ ಪುಡಿ, ಜೀರಿಗೆ ಪುಡಿ, ರುಚಿಗೆ ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಮತ್ತು ಪರಿಪೂರ್ಣ ಸ್ಥಿರತೆ ಕಾಪಾಡಲು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಮುಚ್ಚಿ ಮತ್ತು ಹತ್ತು ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಅಂಗೈಗಳಿಗೆ ತುಪ್ಪ ಹಚ್ಚಿಕೊಂಡು ಸಣ್ಣ ಟಿಕ್ಕಿಗಳ ಆಕಾರ ನೀಡಿ.
ಈಗ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ. ಮತ್ತು ಸಿದ್ಧಪಡಿಸಿದ ಟಿಕ್ಕಿಗಳನ್ನು ಬೇಯಿಸಲು ಹಾಕಿ. ಟಿಕ್ಕಿಗಳು ಒಂದು ಕಡೆಯಿಂದ ಚೆನ್ನಾಗಿ ಬೆಂದ ನಂತರ ಮತ್ತೊಂದು ಬದಿಯನ್ನು ಗೋಲ್ಡನ್ ಬ್ರೌನ್ ಕಲರ್ ಬರುವವರೆಗೆ ಚೆನ್ನಾಗಿ ಬೇಯಿಸಿ. ತೆಗೆದು ತಟ್ಟೆಗೆ ಹಾಕಿ.
ಈಗ ನಿಮ್ಮ ಆರೋಗ್ಯಕರ ಮತ್ತು ಟೇಸ್ಟಿ ಟಿಕ್ಕಿ ಸಿದ್ಧ ಆಗಿದೆ. ಟಿಶ್ಯೂ ಪೇಪರ್ ಮೇಲೆ ತಟ್ಟೆಯಲ್ಲಿ ತೆಗೆದು ನಂತರ ನಿಮ್ಮ ನೆಚ್ಚಿನ ಚಟ್ನಿಯ ಜೊತೆ ಓಟ್ಸ್ ಟಿಕ್ಕಿ ಸವಿಯಿರಿ.
ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?
ಸಾಮಾನ್ಯವಾಗಿ ಜನರು ಟಿಕ್ಕಿಗಳನ್ನು ಎಣ್ಣೆಯಲ್ಲಿ ಕರಿಯುತ್ತಾರೆ. ಆದರೆ ಹೀಗೆ ಮಾಡದೇ ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ