Mango Pickle Recipe: ಸ್ಪೈಸಿ, ಟೇಸ್ಟಿ ಮಾವಿನಕಾಯಿ ಉಪ್ಪಿನಕಾಯಿಯನ್ನು ಮನೆಯಲ್ಲೇ ಮಾಡುವ ಸುಲಭ ವಿಧಾನ

ಭಾರತೀಯರಿಗೆ ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಅದಕ್ಕೆ ಅಂತಾನೆ ಅವರು ಮಾರುಕಟ್ಟೆಯಿಂದ ಹಲವು ರೀತಿಯ ಉಪ್ಪಿನಕಾಯಿ (Pickle) ತಂದು ಶೇಖರಿಸಿಕೊಳ್ಳುತ್ತಾರೆ. ಪ್ರಸ್ತುತ ಮಾವಿನ ಕಾಯಿ ಹೇರಳವಾಗಿ ಸಿಗುವುದರಿಂದ ನೀವು ಮನೆಯಲ್ಲಿಯೇ ಉಪ್ಪಿನ ಕಾಯಿ ತಯಾರಿಸಿಕೊಳ್ಳಬಹುದು.

ಮಾವಿನಕಾಯಿ ಉಪ್ಪಿನಕಾಯಿ

ಮಾವಿನಕಾಯಿ ಉಪ್ಪಿನಕಾಯಿ

  • Share this:
ಈಗ ಎಲ್ಲಾ ಕಡೆ ಮಾವಿನಕಾಯಿ, ಮಾವಿನ ಹಣ್ಣುಗಳ (Mango) ಸೀಸನ್ ಆರಂಭವಾಗಿದೆ. ಈ ಋತುವಿನಲ್ಲಿ ಸಿಗುವ ಅನೇಕ ಹಣ್ಣುಗಳಲ್ಲಿ ಮಾವು ಬಹಳ ಪ್ರಸಿದ್ಧವಾಗಿದೆ. ರುಚಿ ಜೊತೆಗೆ ಆರೋಗ್ಯಕರವಾಗಿರುವ ಮಾವಿನಿಂದ ಹಲವು ಅಡುಗೆ, ತಿಂಡಿಗಳನ್ನು ಮಾಡಲಾಗುತ್ತದೆ. ಮಾವಿನಕಾಯಿಯ ಉಪ್ಪಿನಕಾಯಿ, ಪಲ್ಯ, ಗೊಜ್ಜು, ಚಟ್ನಿ ಹೀಗೆ ಎಲ್ಲವೂ ಸಹ ನಮ್ಮ ದಕ್ಷಿಣ ಭಾರತದಲ್ಲಿ (South India) ಪ್ರಸಿದ್ಧಿ ಪಡೆದಿವೆ ಮತ್ತು ಜನರಿಗೆ ಇಷ್ಟವಾಗಿದೆ ಕೂಡ. ಮಾವಿನಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನಾವು ಹೊಂದಿದೆ. ಇದು ಕಾಯಿ ಆಗಿದ್ದಾಗ ಒಂದು ರೀತಿಯ ಪ್ರಯೋಜನಗಳನ್ನು ನೀಡಿದರೆ, ಹಣ್ಣಾದ ಮೇಲೆ ಮತ್ತಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಮಾವಿನ ಹಣ್ಣಿನ ನಂತರ ಹೆಚ್ಚು ಹೆಸರುವಾಸಿ ಅದರ ಉಪ್ಪಿನಕಾಯಿ. ಭಾರತೀಯರಿಗೆ ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು. ಅದಕ್ಕೆ ಅಂತಾನೆ ಅವರು ಮಾರುಕಟ್ಟೆಯಿಂದ ಹಲವು ರೀತಿಯ ಉಪ್ಪಿನಕಾಯಿ (Pickle) ತಂದು ಶೇಖರಿಸಿಕೊಳ್ಳುತ್ತಾರೆ. ಪ್ರಸ್ತುತ ಮಾವಿನ ಕಾಯಿ ಹೇರಳವಾಗಿ ಸಿಗುವುದರಿಂದ ನೀವು ಮನೆಯಲ್ಲಿಯೇ ಉಪ್ಪಿನ ಕಾಯಿ ತಯಾರಿಸಿಕೊಳ್ಳಬಹುದು.

ಹಾಗಾದರೆ ಸಾಂಪ್ರದಾಯಿಕ ಮಾವಿನ ಉಪ್ಪಿನಕಾಯಿ ರೆಸಿಪಿ ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಪೌಷ್ಟಿಕತಜ್ಞ ರುಜುತಾ ದಿವೇಕರ್ ಅವರ ತಾಯಿ ರೇಖಾ ದಿವೇಕರ್ ತಿಳಿಸಿಕೊಟ್ಟಿದ್ದಾರೆ.

ಮಾವಿನಕಾಯಿ ಉಪ್ಪಿನಕಾಯಿ ರೆಸಿಪಿ

ಬೇಕಾಗಿರುವ ಪದಾರ್ಥಗಳು:

1 ಕೆಜಿ - ಮಾವು (ಪಕ್ವವಾಗದ ಮಾವು)
100 ಗ್ರಾಂ - ಸಾಸಿವೆ
10 ಗ್ರಾಂ - ಮೆಂತ್ಯೆ ಬೀಜಗಳು ( ಕಹಿ ರುಚಿಯನ್ನು ಇಷ್ಟಪಡದಿದ್ದರೆ ಕಡಿಮೆ ಸೇರಿಸಬಹುದು)
100 ಗ್ರಾಂ - ಉಪ್ಪು
3 - 4 ಟೀಸ್ಪೂನ್ - ಮೆಣಸಿನ ಪುಡಿ
1 1/2 ಟೀಸ್ಪೂನ್ - ಅರಿಶಿನ ಪುಡಿ
1 ಟೀಚಮಚ - ಹಿಂಗು (ಅಸಾಫೋಟಿಡಾ)
250 ಗ್ರಾಂ - ಎಣ್ಣೆ

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಾಡಿ ರುಚಿಕರವಾದ ಮಶ್ರೂಮ್ ಪರೋಟ

ಉಪ್ಪಿನಕಾಯಿ ಮಾಡುವ ವಿಧಾನ:

ದಿನ 1
* ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆಯಿರಿ. ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ. ಮತ್ತು ಚಿಕ್ಕ, ಚಿಕ್ಕ ತುಂಡುಗಳಾಗಿ ಕತ್ತರಿಸಿ.
* ದೊಡ್ಡ ಸ್ಟೀಲ್/ಗಾಜಿನ ಪಾತ್ರೆಯಲ್ಲಿ ಇಡಿ. ಒಂದು ಟೀ ಚಮಚ ಅರಿಶಿನ ಪುಡಿ ಮತ್ತು ಉಪ್ಪನ್ನು ಸೇರಿಸಿ (ಸಮುದ್ರದ ಉಪ್ಪು ತೆಗೆದುಕೊಳ್ಳಿ). ಉಪ್ಪನ್ನು ಸೇರಿಸುವ ಮೊದಲು ಬಾಣಲೆಯಲ್ಲಿ ಬಿಸಿ ಮಾಡಿ ಬಳಿಕ ಸೇರಿಸಿ. ಇದರಿಂದ ಅದರಲ್ಲಿ ತೇವಾಂಶ ಉಳಿಯುವುದಿಲ್ಲ.
* ಹೀಗೆ ಉಪ್ಪು, ಅರಿಶಿನ, ಮಾವು ಮಿಶ್ರಣ ಮಾಡಿ ಒಂದು ರಾತ್ರಿ ಇಡಿ.

ದಿನ 2

* ಸಾಸಿವೆ ಕಾಳುಗಳನ್ನು ನುಣ್ಣಗೆ ಪುಡಿ ಮಾಡಿ
* ಮೆಂತ್ಯ ಕಾಳುಗಳನ್ನು ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಅವುಗಳನ್ನು ಸಹ ಪುಡಿಮಾಡಿ.
* ಮಾವಿನ ಕಾಯಿಗೆ ಸಾಸಿವೆ ಪುಡಿ, ಮೆಣಸಿನ ಪುಡಿ, ಮೆಂತ್ಯೆ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಗಾಳಿಯಾಡದಂತೆ ಇಟ್ಟಿರಿ

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಮಾಡಿ ಕುಂಬಳಕಾಯಿ ದೋಸೆ

ದಿನ 3

* ಮೂರನೇ ದಿನ ಮಿಶ್ರಣಕ್ಕೆ ಉಗ್ಗರಣೆ ಬೆರೆಸಿ, ಒಗ್ಗರಣೆ ತಯಾರಿಸಿಕೊಳ್ಳಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸಾಸಿವೆ ಹಾಕಿ. ಸಾಸಿವೆ ಸಿಡಿಯಲು ಪ್ರಾರಂಭಿಸಿದಾಗ, 1 ಟೀ ಸ್ಪೂನ್ ಹಿಂಗು ಮತ್ತು ಅರ್ಧ ಟೀ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ.
* ನಂತರ ಕೋಣೆಯ ಉಷ್ಣಾಂಶಕ್ಕೆ ತಣ್ಣಗಾಗಲು ಬಿಡಿ.
* ಒಗ್ಗರಣೆ ತಣ್ಣಗಾದ ನಂತರ ಎಲ್ಲಾ ಮಸಾಲೆಗಳೊಂದಿಗೆ ಬೆರೆಸಿದ ಮಾವಿನಕಾಯಿಗೆ ಒಗ್ಗರಣೆಯನ್ನು ಸುರಿಯಿರಿ.
* ಈಗ ಖಾರವಾದ, ಹುಳಿಯಾದ ರುಚಿಯಾದ ಉಪ್ಪಿನಕಾಯಿ ಸಿದ್ಧ.
* ಈ ಮಾವಿನ ಕಾಯಿ ಉಪ್ಪಿನಕಾಯಿಗೆ ಜಾಸ್ತಿ ಎಣ್ಣೆಯನ್ನು ಹಾಕುವುದು ಉತ್ತಮ. ಮತ್ತು ಬಣ್ಣಕ್ಕಾಗಿ ನೀವು ಕಾಶ್ಮೀರಿ ಕೆಂಪು ಮೆಣಸನ್ನು ಸಹ ಉಪಯೋಗಿಸಬಹುದು.

ಈ ಸೀಸನ್‌ನಲ್ಲಿ ಹೇರಳವಾಗಿ ಸಿಗುವ ಮಾವಿನಕಾಯಿಂದ ನೀವು ವರ್ಷವಿಡೀ ಸಂಗ್ರಹಿಸಿಕೊಳ್ಳಲು ಜಾಸ್ತಿ ಪ್ರಮಾಣದ ಉಪ್ಪಿನಕಾಯಿ ಸಹ ತಯಾರಿಸಿಕೊಳ್ಳಬಹುದು. ಇದು ಅನ್ನದ ಊಟಕ್ಕೆ ತುಂಬಾ ರುಚಿಯಾಗಿರುತ್ತದೆ. ಈ ರೀತಿಯಾಗಿ ತಯಾರಿಸಿಕೊಂಡ ಉಪ್ಪಿನಕಾಯಿಯಿಂದ ಒಂದು ತುತ್ತು ಜಾಸ್ತಿನೇ ಊಟ ಮಾಡೋದ್ರಲ್ಲಿ ಸಂಶಯವಿಲ್ಲ.
Published by:shrikrishna bhat
First published: