Health Tips: ದೀರ್ಘಾಯುಷ್ಯಕ್ಕಾಗಿ ಈ ಡಯೆಟ್ ಫಾಲೋ ಮಾಡಿ, ಇಲ್ಲಿದೆ ಆಯಸ್ಸು ಹೆಚ್ಚಿಸುವ ಆರೋಗ್ಯ ಕ್ರಮ

ಯಾರಾದರೂ ಜಂಕ್ ಫುಡ್ ಅನ್ನು ದಿನನಿತ್ಯ ಅತಿಯಾಗಿ ಸೇವನೆ ಮಾಡುತ್ತಿದ್ದರೆ ಅವರ ದೇಹದಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಅನೇಕ ರೋಗಗಳ ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬರೂ (Everyone) ದೀರ್ಘಾಯುಷಿಗಳಾಗಿ (Longevity) ಇರಲು ಬಯಸುತ್ತಾರೆ. ಇದಕ್ಕಾಗಿ, ಅವರು ತಮ್ಮ ಜೀವನಶೈಲಿಯನ್ನು (Lifestyle) ಸರಿಯಾಗಿ ಇರಿಸಿಕೊಳ್ಳಲು ಸದಾ ಪ್ರಯತ್ನ (Try) ಮಾಡುತ್ತಲೇ ಇರುತ್ತಾರೆ.  ದೀರ್ಘಾಯುಷ್ಯ ಬಯಸುವವರು ನಿಮ್ಮ ಆಹಾರ (Food) ಕ್ರಮದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಜೊತೆಗೆ ನಿಮ್ಮ ಜೀವನಶೈಲಿ ಸುಧಾರಣೆ ಮಾಡಿಕೊಳ್ಳಬೇಕು. ಏಕೆಂದರೆ ನಿಮ್ಮ ದೇಹವು ನೀವು ಏನನ್ನು ತಿನ್ನುತ್ತೀರೋ ಅದಕ್ಕೆ ಪ್ರತಿಕ್ರಿಯಿಸುತ್ತದೆ.

  ಯಾರಾದರೂ ಜಂಕ್ ಫುಡ್ ಅನ್ನು ದಿನನಿತ್ಯ ಅತಿಯಾಗಿ ಸೇವನೆ ಮಾಡುತ್ತಿದ್ದರೆ ಅವರ ದೇಹದಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಅನೇಕ ರೋಗಗಳ ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

  ದೀರ್ಘಾಯುಷ್ಯಕ್ಕಾಗಿ ಲಾಂಗ್ವಿಟಿ ಡಯಟ್

  ಇತ್ತೀಚಿಗೆ ಕೆಲವು ಸಂಶೋಧಕರು ದೀರ್ಘಾಯುಷ್ಯ ನೀಡುವ ಕೆಲವು ಆಹಾರ ಪದ್ಧತಿಯ ಬಗ್ಗೆ ತಿಳಿಸಿದ್ದಾರೆ. ಸಂಶೋಧಕರು ದೀರ್ಘಾಯುಷ್ಯ ನೀಡುವ ಆಹಾರಗಳನ್ನು ಕಂಡು ಹಿಡಿದಿದ್ದಾರೆ. ಈ ಆಹಾರ ಕ್ರಮಕ್ಕೆ ‘ಲಾಂಗ್ವಿಟಿ ಡಯಟ್’ಎಂದು ಕರೆಯುತ್ತಾರೆ.

  ಲಾಂಗ್ವಿಟಿ ಡಯಟ್ ಆಹಾರದಲ್ಲಿ ಯಾವ ಆಹಾರ ಸೇವನೆ ಮಾಡಬೇಕು ಎಂಬುದನ್ನು ಅವರು ಹೇಳಿದ್ದಾರೆ. ಇದು ದೀರ್ಘಾಯುಷ್ಯಕ್ಕೆ ಸಹಾಯ ಮಾಡುತ್ತದೆ. ಹಾಗಾದರೆ ಸಂಶೋಧನೆ ಏನು ಹೇಳಿದೆ ಎಂದು ನೋಡೋಣ.

  ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

  ಈ ಆಹಾರ ಪದಾರ್ಥಗಳ ಸೇವನೆ ಮಾಡಿ

  ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತಜ್ಞರು, ದೀರ್ಘಾಯುಷ್ಯಕ್ಕಾಗಿ ಆಹಾರಗಳ ಬಗ್ಗೆ ತಿಳಿದುಕೊಳ್ಳಲು ಕಳೆದ 100 ವರ್ಷಗಳಲ್ಲಿ ಆಹಾರದ ಕುರಿತು ವಿವಿಧ ಸಂಶೋಧನೆ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಶೋಧನೆಯಲ್ಲಿ ಯಾವ ಆಹಾರಗಳು ದೀರ್ಘ ಕಾಲ ಬದುಕಲು ಮತ್ತು ಆರೋಗ್ಯಕವಾಗಿ ಬದುಕಲು ಉತ್ತಮ ಮಾರ್ಗವೆಂದು ಹೇಳಲಾಗಿದೆ.

  - ದ್ವಿದಳ ಧಾನ್ಯಗಳು

  - ತರಕಾರಿಗಳು

  - ಧಾನ್ಯಗಳು

  - ಬೀಜಗಳು ಮತ್ತು ಆಲಿವ್ ಎಣ್ಣೆ ಸೇವನೆ ಮಾಡಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

  - ಮೀನು ತಿನ್ನಬೇಕು

  - ಚಿಕನ್ ಕಡಿಮೆ ತಿನ್ನಬೇಕು

  - ಕೆಂಪು ಸಂಸ್ಕರಿಸಿದ ಮಾಂಸ ತಿನ್ನಬಾರದು.

  - ಬಿಳಿ ಪಾಸ್ತಾ ಸೇವಿಸಬಾರದು.

  - ಡಾರ್ಕ್ ಚಾಕೊಲೇಟ್ ತಿನ್ನಬಹುದು. ಆದರೆ ಈ ಆಹಾರಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ಈ ಅಧ್ಯಯನದಲ್ಲಿ ಹೇಳಿಲ್ಲ.

  12 ಗಂಟೆಗಳ ಕಾಲ ಉಪವಾಸ ಮಾಡಬೇಕು

  ಯಾವುದೇ ಕಾಯಿಲೆಯ ಅಪಾಯ ಇರುವವರು ದಿನಕ್ಕೆ ಕನಿಷ್ಠ 12 ಗಂಟೆಗಳ ಕಾಲ ಮತ್ತು ಕೆಲವು ತಿಂಗಳಿಗೊಮ್ಮೆ 5 ದಿನ ಉಪವಾಸ ಮಾಡಬೇಕೆಂದು ಸಂಶೋಧಕರು ಶಿಫಾರಸು ಮಾಡುತ್ತಾರೆ. ಯಾರಾದರೂ ಅಂತಹ ಆಹಾರ ತೆಗೆದುಕೊಂಡರೆ, ಅವರು ಬೇಗನೆ ವಯಸ್ಸಾಗುವುದಿಲ್ಲ. ಈ ಆಹಾರವು ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ವಯಸ್ಸಾದ ಸಂಬಂಧಿತ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.

  ವಯಸ್ಸಾಗುವಿಕೆಯ ವೇಗವನ್ನು ನಿಧಾನಗೊಳಿಸುತ್ತದೆ

  ಈ ಸಂಶೋಧನೆಯ ಪ್ರಮುಖ ಲೇಖಕ ಮತ್ತು ಏಜಿಂಗ್-ಬಯೋಲಾಜಿಕಲ್ ಸೈನ್ಸ್‌ ತಜ್ಞ ಡಾ. ವಾಲ್ಟರ್ ಲಾಂಗೊ ಪ್ರಕಾರ, ಈ ಆಹಾರವು ಕೇವಲ ತೂಕವನ್ನು ಕಳೆದುಕೊಳ್ಳಲು ಮಾತ್ರವಲ್ಲ. ವಯಸ್ಸಾಗುವಿಕೆಯ ವೇಗ ನಿಧಾನಗೊಳ್ಳುತ್ತದೆ. ಮತ್ತು ದೇಹವನ್ನು ದೀರ್ಘ ಕಾಲದವರೆಗೆ ಆರೋಗ್ಯವಾಗಿರಿಸುವುದು ಇದರ ಗುರಿಯಾಗಿದೆ.

  ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ತಜ್ಞ ಡಾ. ಲಾಂಗೊ ಮತ್ತು ಪ್ರೊಫೆಸರ್ ರೊಜಲಿನ್ ಆಂಡರ್ಸನ್ ಅವರ ಸಂಶೋಧನೆ, ಜರ್ನಲ್ ಸೆಲ್ನಲ್ಲಿ ಪ್ರಕಟವಾಗಿವೆ. ಅದರ ಪ್ರಕಾರ, ಈ ಆಹಾರದ ವಿಧಾನಗಳು ಬೊಜ್ಜು, ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ತೆಗೆದು ಹಾಕುತ್ತವೆ.

  ಸಮತೋಲನ ಆಹಾರ ಕಾಪಾಡಬೇಕು

  ದಿನಕ್ಕೆ ಕನಿಷ್ಠ 5 ಬಾರಿ ಆಹಾರ ಸೇವನೆ ಮಾಡಬೇಕು. ಆದರೆ ಲಿಮಿಟ್ ನಲ್ಲಿ ಸೇವನೆ ಮಾಡಬೇಕು. ಹಣ್ಣುಗಳು ಮತ್ತು ತರಕಾರಿ ಸೇರಿಸಿ. ಆಲೂಗಡ್ಡೆ, ಬ್ರೆಡ್, ಅಕ್ಕಿ, ಪಾಸ್ಟಾ ಅಥವಾ ಇತರ ಪಿಷ್ಟ ಕಾರ್ಬೋಹೈಡ್ರೇಟ್‌ ಸೇವಿಸಬೇಡಿ.

  ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

  ದಿನಕ್ಕೆ 30 ಗ್ರಾಂ ಫೈಬರ್ ಸೇವನೆ ಮಾಡಿ. ಫೈಬರ್ಗಾಗಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಸಿಪ್ಪೆ ಸುಲಿದ ಆಲೂಗಡ್ಡೆ ತಿನ್ನಿರಿ. ಕೆಲವು ಡೈರಿ ಉತ್ಪನ್ನಗಳನ್ನು ಸೇವಿಸಿ. ಬೀನ್ಸ್, ಕಾಳುಗಳು, ಮೀನು, ಮೊಟ್ಟೆ, ಮಾಂಸ ಮತ್ತು ಇತರ ಪ್ರೋಟೀನ್ ತಿನ್ನಿರಿ. ಸ್ಯಾಚುರೇಟೆಡ್ ಎಣ್ಣೆ ಸೇವಿಸಿ.
  Published by:renukadariyannavar
  First published: