news18-kannada Updated:January 5, 2021, 7:21 AM IST
ಸಾಂದರ್ಭಿಕ ಚಿತ್ರ
ಚಳಿಗಾಲ ಬಂತೆಂದರೆ ಸಾಕು, ಅದರೊಂದಿಗೆ ಅನಾರೋಗ್ಯದ ಸಮಸ್ಯೆಗಳು ಕೂಡ ಕಂಡು ಬರುತ್ತವೆ. ಹೀಗಾಗಿ ಹಿರಿಯರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಚಳಿಗಾಲದಲ್ಲಿ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಆದರೆ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಇರುವ ಕೆಲ ಪದಾರ್ಥಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲೂ ಶುಂಠಿವೊಂದಿದ್ದರೆ ಹಲವು ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಏಕೆಂದರೆ ಶುಂಠಿಯು ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಳಿಗಾಲದಲ್ಲಿ ಶೀತ ಮತ್ತು ನೆಗಡಿಯಂತಹ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ ಚಳಿಗಾಲದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳಿಗೆ ಶುಂಠಿಯಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನೋಡೋಣ.
ಶೀತ ಮತ್ತು ನೆಗಡಿ: ಚಳಿಗಾಲದಲ್ಲಿ, ಶೀತ ಮತ್ತು ನೆಗಡಿ ಸಮಸ್ಯೆಗಳು ಕಾಣಿಸಿಕೊಂಡರೆ ಶುಂಠಿ ಚಹಾ ಕುಡಿಯುವುದು ಉತ್ತಮ. ಏಕೆಂದರೆ ಶುಂಠಿ ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ. ಇದರಿಂದ ಶೀತ ಮತ್ತು ನೆಗಡಿಯಂತಹ ಸಮಸ್ಯೆಯನ್ನು ದೂರವಾಗುತ್ತವೆ.
ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ: ಶುಂಠಿಯಲ್ಲಿ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ. ಇದು ಚಳಿಗಾಲದ ರೋಗಗಳಿಂದ ಪಾರಾಗಲು ದೇಹದಲ್ಲಿ ಪ್ರತಿರಕ್ಷಣಾ
ಮುಟ್ಟಿನ ಸಮಸ್ಯೆಗೂ ಪರಿಹಾರ: ಚಳಿಗಾಲದ ಕೆಮ್ಮು, ನೆಗಡಿ ಇತ್ಯಾದಿಗಳಲ್ಲಿ ಶುಂಠಿ ಚಹಾ ಪ್ರಯೋಜನಕಾರಿ. ಹಾಗೆಯೇ ಈ ಚಹಾವು ಮಹಿಳೆಯರಿಗೆ ಮುಟ್ಟಿನ ತೊಂದರೆ ಮತ್ತು ನೋವುಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಅಲರ್ಜಿ ಮತ್ತು ಸೋಂಕಿನಿಂದ ಮುಕ್ತಿ: ಶುಂಠಿ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದು ಸೋಂಕನ್ನು ಸಹ ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ದೇಹವನ್ನು ಯಾವುದೇ ರೀತಿಯ ಅಲರ್ಜಿ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
ಈ ಬಗ್ಗೆ ಎಚ್ಚರವಿರಲಿ:- ಶುಂಠಿ ಚಹಾವು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ, ಆದರೆ ಇದನ್ನು ಸಮತೋಲಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬುದು ನೆನಪಿರಲಿ. ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಗರ್ಭಿಣಿಯರು ಅದನ್ನು ಮಿತವಾಗಿ ಅಥವಾ ತಜ್ಞರ ಸಲಹೆಯ ಮೇರೆಗೆ ಸೇವಿಸಬೇಕು.
- ಶುಂಠಿ ಚಹಾವನ್ನು ಅತಿಯಾಗಿ ಸೇವಿಸುವುದರಿಂದ ನಿದ್ರಾಹೀನತೆಯನ್ನು ಉತ್ತೇಜಿಸಬಹುದು. ಹಾಗಾಗಿ ಮಲಗುವ ಮೊದಲು ಶುಂಠಿ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು.
- ಹೈಪರ್ ಆಸಿಡಿಟಿ ಇತ್ಯಾದಿ ಸಮಸ್ಯೆ ಇರುವ ಜನರು ಶುಂಠಿ ಚಹಾ ಕುಡಿಯುವುದರಿಂದ ಹೊಟ್ಟೆ ಕೆರಳಿಕೆ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸಬಹುದು.
Published by:
zahir
First published:
January 5, 2021, 7:21 AM IST