ಪಪ್ಪಾಯಿ ಫೇಸ್​ಪ್ಯಾಕ್ ಬಳಸಿ ತ್ವಚೆಯ ಸೌಂದರ್ಯ ಹೆಚ್ಚಿಸಿ

news18
Updated:July 14, 2018, 3:25 PM IST
ಪಪ್ಪಾಯಿ ಫೇಸ್​ಪ್ಯಾಕ್ ಬಳಸಿ ತ್ವಚೆಯ ಸೌಂದರ್ಯ ಹೆಚ್ಚಿಸಿ
news18
Updated: July 14, 2018, 3:25 PM IST
-ನ್ಯೂಸ್ 18 ಕನ್ನಡ

ಪಪ್ಪಾಯಿ ಹಣ್ಣು ಅಥವಾ ಪರಂಗಿ ಹಣ್ಣಿನಿಂದ ಹಲವಾರು ಪ್ರಯೋಜನಗಳಿರುವುದು ಗೊತ್ತಿದೆ. ಪಪ್ಪಾಯಿಯನ್ನು ಬೇಯಿಸಿ ಅಥವಾ ಹಣ್ಣಾಗಿಸಿ ತಿನ್ನುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ತ್ವಚೆಯನ್ನು ಕಾಂತಿಯುತ ಮತ್ತು ಮೃದು ಮಾಡುವಲ್ಲಿ ಈ ಹಣ್ಣು ತುಂಬಾ ಪ್ರಯೋಜನಕಾರಿ.

ಪಪ್ಪಾಯಿಯಲ್ಲಿರುವ ಪೇಪೆನ್ ಕಿಣ್ವವು ತ್ವಚೆಯ ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ದೊರೆಯುವ ಹಲವಾರು ರಾಸಾಯನಿಕ ಸೌಂದರ್ಯ  ಉತ್ಪನ್ನಗಳ ಬದಲಾಗಿ ಪಪ್ಪಾಯಿ ಬಳಸಿ ಅತ್ಯುತ್ತಮ ಫೇಸ್​ಪ್ಯಾಕ್​ಗಳನ್ನು ತಯಾರಿಸಬಹುದು. ಇಂತಹ 6 ಪಪ್ಪಾಯಿ ಫೇಸ್​​ಪ್ಯಾಕ್ ಬಗ್ಗೆಗಳ ಇಲ್ಲಿ ತಿಳಿಸಲಾಗಿದೆ.

1. ಪಪ್ಪಾಯಿ ಮತ್ತು ಜೇನು : ಮೊದಲಿಗೆ ಪಪ್ಪಾಯಿ ತುಂಡುಗಳನ್ನು ಚೆನ್ನಾಗಿ ರುಬ್ಬಿ ಕ್ರೀಮ್ ರೀತಿಯನ್ನಾಗಿಸಿ. ಬಳಿಕ ಇದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 15 ರಿಂದ 20 ನಿಮಿಷಗಳವರೆಗೆ ಬಿಡಿ. ಈ ಕ್ರೀಮ್  ಒಣಗಿದ ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯು ಕಾಂತಿಯುತವಾಗುತ್ತದೆ.

2. ಪಪ್ಪಾಯಿ ಮತ್ತು ನಿಂಬೆ ರಸ : ಚೆನ್ನಾಗಿ ರುಬ್ಬಿದ ಪಪ್ಪಾಯಿಗೆ 10-12 ಹನಿ ನಿಂಬೆ ರಸವನ್ನು ಮಿಶ್ರ ಮಾಡಿ.ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಆದರೆ ಇದನ್ನು ಹಚ್ಚುವಾಗ ಕಣ್ಣಿನ ಭಾಗಕ್ಕೆ ತಲುಗದಂತೆ ಎಚ್ಚರವಹಿಸಬೇಕು. ಬಳಿಕ ತಣ್ಣೀರಿಂದ ಮುಖವನ್ನು ತೊಳೆಯುವುದರಿಂದ ತ್ವಚೆಯು ಸುಂದರವಾಗುತ್ತದೆ.

3. ಪಪ್ಪಾಯಿ ಮತ್ತು ಟೊಮ್ಯಾಟೊ : ಈ ಫೇಸ್​ಪ್ಯಾಕ್​ ತಯಾರಿಸಲು ಸಣ್ಣ ಟೊಮ್ಯಾಟೊ ತಿರುಳನ್ನು ಪಪ್ಪಾಯಿಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಈ ಕ್ರೀಮ್​ ಅನ್ನು ಮುಖಕ್ಕೆ ಹಚ್ಚಿದ ಬಳಿಕ 15 ರಿಂದ 20 ನಿಮಿಷಗಳವರೆಗೆ ಬಿಟ್ಟು , ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ.

4. ಪಪ್ಪಾಯಿ ಮತ್ತು ಮುಲ್ತಾನಿ ಮಣ್ಣು : ಎಣ್ಣೆಯುಕ್ತ ಚರ್ಮಕ್ಕಾಗಿ ಪಪ್ಪಾಯಿ ಮತ್ತು ಮುಲ್ತಾನಿ ಮಣ್ಣಿನ ಪ್ಯಾಕ್ ಪ್ರಯೋಜನಕಾರಿ. ಇದು ತ್ವಚೆಯ ಮೇಲಿನ ಎಣ್ಣೆಯನ್ನು ಕಡಿಮೆಗೊಳಿಸಿ, ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ. ಒಂದು ಚಮಚ ಮುಲ್ತಾನಿ ಮಣ್ಣಿನ ಪುಡಿಗೆ ಒಂದು ತುಂಡು ಪಪ್ಪಾಯಿಯನ್ನು ಚೆನ್ನಾಗಿ ಬೆರಸಿ. ಇದು ಪೇಸ್ಟ್​ ರೂಪಕ್ಕೆ ತಿರುಗಿದ ಬಳಿಕ ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷಗಳವರೆಗೆ ಬಿಟ್ಟುಬಿಡಿ. ಇದು ಒಣಗಿದ ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ ಪರಿಹಾರ ಕಾಣಬಹುದು.
Loading...

5. ಪಪ್ಪಾಯಿ ಮತ್ತು ಬಾಳೆಹಣ್ಣು : ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಸಮಾನ ಪ್ರಯಾಣದಲ್ಲಿ ಬೆರೆಸಿ ಪೇಸ್ಟ್​ ಆಗಿಸಿ. ಬಳಿಕ ಕಣ್ಣು ಮತ್ತು ರಪ್ಪೆಗಳನ್ನು ಹೊರತು ಪಡಿಸಿ ಮುಖದ ಭಾಗಕ್ಕೆ ಹಚ್ಚಿಕೊಳ್ಳಿ. 15 ರಿಂದ 20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

6. ಪಪ್ಪಾಯಿ ಮತ್ತು ಗಂಧದ ಪುಡಿ : ಈ ಪ್ಯಾಕ್ ಮೂಲಕ ತ್ವಚೆಯನ್ನು ತುಂಬಾ ಯೌವ್ವನದಿಂದ ಕೂಡಿರುವಂತೆ ಮಾಡಬಹುದು. ಇದನ್ನು ತಯಾರಿಸುವ ವಿಧಾನವೆಂದರೆ, ಪಪ್ಪಾಯಿ ಮತ್ತು ಒಂದು ಚಮಚ ಶ್ರೀಗಂಧದ ಪುಡಿಯನ್ನು ಚೆನ್ನಾಗಿ ಮಿಶ್ರಣಗೊಳಿಸಿ. ಬಳಿಕ ಇದನ್ನು ಮುಖಕ್ಕೆ ಹಚ್ಚಿ, 15 ರಿಂದ 20 ನಿಮಿಷಗಳವರೆ ಒಣಗಲು ಬಿಡಿ. ಅನಂತರ ತಣ್ಣೀರಿನಿಂದ ಮುಖ ತೊಳೆದರೆ ಚರ್ಮವು ಕಾಂತಿಯುತವಾಗಿರುತ್ತದೆ. ಆದರೆ ಈ ಫೇಸ್​ಪ್ಯಾಕ್ ಹಚ್ಚುವಾಗ ಕಣ್ಣು ಮತ್ತು ರೆಪ್ಪೆಗಳ ಭಾಗಕ್ಕೆ ತಾಗದಂತೆ ಹೆಚ್ಚರವಹಿಸಬೇಕಾಗುತ್ತದೆ.
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...