Chicken Lababdar: ಚಿಕನ್ ಲಬಬ್ದರ್ ತಿಂದಿದ್ದೀರಾ? ಮನೆಯಲ್ಲಿ ಟ್ರೈ ಮಾಡಿ ನೋಡಿ

Chicken Lababdar: ಸಂಡೆ ಮನೆಯಿಂದ ಹೊರಹೋಗದೆ ಮನೆಯಲ್ಲಿಯೇ ಕುಳಿತು ಅಡುಗೆ ಮಾಡುವ ಪ್ಲಾನ್​ ಹಾಕಿಕೊಂಡವರು ಈ ಚಿಕನ್ ಲಬಬ್ದರ್ ತಯಾರಿಸಬಹುದು. ಆದ್ರೆ ಇದನ್ನು ತಯಾರಿಸುವುದು ಹೇಗೆ? ಏನೆಲ್ಲಾ ಸಾಮಾಗ್ರಿ ಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಾರದ ರಜಾ ದಿನ (Holiday) ಅದಿತ್ಯವಾರದಂದು (Sunday) ಏನು ಸ್ಪೆಷಲ್​ (Special) ಮಾಡೋದು ಎಂದು ಯೋಚಿಸುತ್ತಿದ್ದೀರಾ? ಅಂತವರಿಗಾಗಿ ಒಂದು ಸ್ಪೆಷಲ್​ ಮಾಂಸದಡುಗೆ ರೆಸಿಪಿ (Non veg recipe) ಇಲ್ಲಿದೆ. ಅದೇನೆಂದರೆ ಚಿಕನ್ ಲಬಬ್ದರ್ (Chicken Lababdar). ಅಂದಹಾಗೆಯೇ ಈ ರೆಸಿಪಿಯ ಹೆಸರು ಕೊಂಚ ವಿಭಿನ್ನವಾದ್ರು ಟೇಸ್ಟ್ (Taste)​ ಮಾತ್ರ ಸಖತ್​ ಆಗಿರುತ್ತೆ.  ಸಂಡೆ ಮನೆಯಿಂದ ಹೊರಹೋಗದೆ ಮನೆಯಲ್ಲಿಯೇ ಕುಳಿತು ಅಡುಗೆ (Cooking) ಮಾಡುವ ಪ್ಲಾನ್​ (Plan) ಹಾಕಿಕೊಂಡವರು ಈ ಚಿಕನ್ ಲಬಬ್ದರ್ ತಯಾರಿಸಬಹುದು. ಆದ್ರೆ ಇದನ್ನು ತಯಾರಿಸುವುದು ಹೇಗೆ? ಏನೆಲ್ಲಾ ಸಾಮಾಗ್ರಿ ಬೇಕು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು-1/2 ಕೆಜಿ  ಚಿಕನ್, ಎಣ್ಣೆ, ಏಲಕ್ಕಿ, ದಾಲ್ಚಿನ್ನಿ, ಜಾಯಿಕಾಯಿ, ಈರುಳ್ಳಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಚಮಚ ಅರಿಶಿಣ ಪುಡಿ, ಮೆಣಸಿನ ಪುಡಿ,ಕೊತಂಬರಿ ಪುಡಿ, ಜೀರಿಗೆ ಪುಡಿ , ಟೊಮೆಟೊ ಪೇಸ್ಟ್, ಚಿಟಿಕೆ ಸಕ್ಕರೆ, ಉಪ್ಪು, ಹಸಿ ಮೆಣಸು, ಗರಂ ಮಸಾಲ, ಗೋಡಂಬಿ ಪೇಸ್ಟ್, ಕಸೂರಿ ಮೇತಿ, ಬೆಣ್ಣೆ, ಕೊತ್ತಂಬರಿ ಸೊಪ್ಪು .

    ಮಾಡುವ ವಿಧಾನ: ಒಂದು ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಆದ ನಂತರ ಏಲಕ್ಕಿ, ದಾಲ್ಚಿನ್ನಿ, ಜಾಯಿಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

    ನಂತರ ಸಣ್ಣ ಗಾತ್ರದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ ನಂತರ ಒಂದು ಚಮಚ ಅರಿಶಿಣ ಪುಡಿ, ಮೆಣಸಿನ ಪುಡಿ,ಕೊತಂಬರಿ ಪುಡಿ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಟೊಮೆಟೊ ಪೇಸ್ಟ್, ಚಿಟಿಕೆ ಸಕ್ಕರೆ ಹಾಕಿ  5-7 ನಿಮಿಷ ಕುದಿಯಲು ಬಿಡಿ .ನಂತರ ಚಿಕನ್ ,ಉಪ್ಪು, ಹಸಿ ಮೆಣಸು, ಸ್ವಲ್ಪ ನೀರು ಹಾಕಿ ದೊಡ್ಡ ಉರಿಯಲ್ಲಿ 15 ನಿಮಿಷಗಳ ಕಾಲ ಬೇಯಲು ಬಿಡಿ.

    ಇದನ್ನೂ ಓದಿ: BreakFast Recipe: ಚಪಾತಿ, ದೋಸೆಗೆ ಮಾಡಿ ಸ್ಪೈಸಿ ಎಗ್ ಮಸಾಲ

    ನಂತರ ಚಿಕನ್ ತುಂಡುಗಳನ್ನು ಮಸಾಲೆ ಇಂದ ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ. ಮಸಾಲೆ ಬಿಸಿ ಆರಿದ ನಂತರ ಮಿಕ್ಸಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಎಣ್ಣೆ , ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಾದ ನಂತರ , ಮಿಕ್ಸಿ ಮಾಡಿದ ಮಸಾಲೆ , ಮೆಣಸಿನ ಪುಡಿ , ಉಪ್ಪು,1/2 ಚಮಚ.



    ಇದನ್ನೂ ಓದಿ: Green Coffee: ಗ್ರೀನ್ ಕಾಫಿ ಆರೋಗ್ಯಕ್ಕೆ ಎಷ್ಟು ಉತ್ತಮ? ಇದರಿಂದ ದೇಹಕ್ಕೆ ಯಾವೆಲ್ಲಾ ಪ್ರಯೋಜನ ಸಿಗುತ್ತೆ?

    ಗರಂ ಮಸಾಲ, ಗೋಡಂಬಿ ಪೇಸ್ಟ್, ಕಸೂರಿ ಮೇತಿ,ಬೆಣ್ಣೆ ,ಕೊತ್ತಂಬರಿ ಸೊಪ್ಪು  , ತೆಗೆದಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ,ಹಾಕಿ ಚೆನ್ನಾಗಿ ಮಿಶ್ರ ಮಾಡಿ  2 ನಿಮಿಷ ಕುದಿಯಲು ಬಿಡಿ. ಕಸೂರಿ ಮೆತಿ ಇಂದ ಅಲಂಕರಿಸಿದರೆ ರುಚಿಕರವಾದ ಚಿಕನ್  ಲಬಬ್ದರ್ ಸಿದ್ದ.

    ಸಾಮಾನ್ಯವಾಗಿ ಚಿಕನ್​ ಎಂದಾಗ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ಹೊಸ ರೆಸಿಪಿ ತಯಾರಿಸಿ ಆಹಾರ ಸೇವಿಸುವಾಗ ಅದರ ಮಜವೇ ಬೇರೆ.  ಚಿಕನ್​ ಮೂಲಕ ನಾನಾ ರೆಸಿಪಿ ಮಾಡಬಹುದು ಮತ್ತು ಸವಿಯಬಹುದಾಗಿದೆ. ಆದರೆ ಕೆಲವೊಂದು ರೆಸಿಪಿಗಳು ಅದ್ಭುತವಾದ ರುಚಿಯನ್ನು ನೀಡುತ್ತದೆ.

    ಬಹುತೇಕರು ರಜಾ ದಿನವಾದ ಆದಿತ್ಯವಾರದಂದು ಮನೆಯಲ್ಲಿಯೇ ಇರಲು ಪ್ಲಾನ್​ ಹಾಕಿಕೊಂಡಿರುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಇದ್ದರು ಹೊರಗಿನ ಆಹಾರವನ್ನು ಸವಿಯಲು ಮುಂದಾಗುತ್ತಾರೆ. ಹಾಗಾಘಿ ಹೊಟೇಲ್​ಗಳ ಮೊರೆ ಹೋಗುತ್ತಾರೆ. ಆದರೆ ಹೊಟೇಲ್​ ಆಹಾರ ಸವಿದು ಹೊಟ್ಟೆ ಹಾಳು ಮಾಡುವ ಬದಲು ಮನೆಯಲ್ಲಿಯೇ ಚಿಕನ್​ ಲಬಬ್ದರ್​ ಸಯಾರಿಸಿ ಸವಿಯಬಹುದಾಗಿದೆ.

    ವರದಿ: ಸುಮನ ಕುಮಾರಿ
    Published by:Harshith AS
    First published: