HOME » NEWS » Lifestyle » MAKE BREAD AT HOME WITHOUT OVEN AND YEAST STG LG

Kitchen Tips: ಓವನ್‌, ಯೀಸ್ಟ್‌ ಇಲ್ಲದೆ ಮನೆಯಲ್ಲೇ ಬ್ರೆಡ್ ತಯಾರಿಸುವುದು ಹೇಗೆ ನೋಡಿ...!

ನೀವು ಬಹಳ ದಿನಗಳಿಂದ ಮನೆಯಲ್ಲಿ ತಾಜಾ ಬ್ರೆಡ್ ತಯಾರಿಸಲು ಯೋಚಿಸುತ್ತಿದ್ದರೆ ನಿಮಗೆ ಓವನ್‌ನ ಅವಶ್ಯಕತೆ ಇಲ್ಲ. ಹಾಗೆಯೇ ಯೀಸ್ಟ್ ಬೇಕೆಂದೆನೂ ಇಲ್ಲ. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿ ಸುಲಭವಾಗಿ ಬ್ರೆಡ್ ತಯಾರಿಸಬಹುದು. ತಾಜಾವಾಗಿಯೂ ಇರುತ್ತದೆ, ರುಚಿಯಲ್ಲೂ ವ್ಯತ್ಯಾಸ ಕಾಣುವುದಿಲ್ಲ.

news18-kannada
Updated:March 31, 2021, 9:56 PM IST
Kitchen Tips: ಓವನ್‌, ಯೀಸ್ಟ್‌ ಇಲ್ಲದೆ ಮನೆಯಲ್ಲೇ ಬ್ರೆಡ್ ತಯಾರಿಸುವುದು ಹೇಗೆ ನೋಡಿ...!
ಬ್ರೆಡ್
  • Share this:
ಆಧುನಿಕ ದಿನಮಾನಗಳಲ್ಲಿ ಬೇಕರಿ ಪದಾರ್ಥಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಸಣ್ಣ ಬಿಸ್ಕೆಟ್‌ ಪ್ಯಾಕೆಟ್‌ನಿಂದ ಹಿಡಿದು ಬ್ರೆಡ್‌, ಸ್ವೀಟ್, ಸ್ನ್ಯಾಕ್ಸ್‌, ಕೇಕ್ ಹೀಗೆ ಬಾಯಿ ಚಪ್ಪರಿಸುವ, ನಾಲಗೆಗೆ ಹಿತ ಎನಿಸುವ ರುಚಿರುಚಿಯಾದ ತಿನಿಸುಗಳು ದೊರೆಯುತ್ತದೆ. ಇವುಗಳಲ್ಲಿ ಸಮೋಸ, ಕೆಲವೊಂದು ಸ್ವೀಟ್ಸ್ ಮನೆಯಲ್ಲೇ ತಯಾರಿಸಬಹುದು. ಇಂತಹ ಪದಾರ್ಥಗಳಲ್ಲಿ ರುಚಿ ಹಾಗೂ ಸ್ವಚ್ಛತೆ ಒಂದು ಕೈ ಮೇಲೆಯೇ ಇರುತ್ತದೆ.

ಬೇಕರಿ ಪದಾರ್ಥಗಳ ತಯಾರಿಕೆಯಲ್ಲಿ ಓವನ್, ಮೈಕ್ರೋವೇವ್ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ಕಡ್ಡಾಯವಾಗಿರುತ್ತದೆ. ಅದರಲ್ಲೂ ಓವೆನ್ ಇಲ್ಲದೆ ಬ್ರೆಡ್ ತಯಾರಿಸುವುದು ಕಷ್ಟ ಎಂದು ಹಲವರು ತಿಳಿದಿದ್ದಾರೆ. ಆದರೆ ನೀವು ಬಹಳ ದಿನಗಳಿಂದ ಮನೆಯಲ್ಲಿ ತಾಜಾ ಬ್ರೆಡ್ ತಯಾರಿಸಲು ಯೋಚಿಸುತ್ತಿದ್ದರೆ ನಿಮಗೆ ಓವನ್‌ನ ಅವಶ್ಯಕತೆ ಇಲ್ಲ. ಹಾಗೆಯೇ ಯೀಸ್ಟ್ ಬೇಕೆಂದೆನೂ ಇಲ್ಲ. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿ ಸುಲಭವಾಗಿ ಬ್ರೆಡ್ ತಯಾರಿಸಬಹುದು. ತಾಜಾವಾಗಿಯೂ ಇರುತ್ತದೆ, ರುಚಿಯಲ್ಲೂ ವ್ಯತ್ಯಾಸ ಕಾಣುವುದಿಲ್ಲ.

ಬ್ರೆಡ್ ತಯಾರಿಸಲು ಬೇಕಾಗುವ ಪದಾರ್ಥಗಳು:

-ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು,
-ಬೇಕಿಂಗ್ ಪೌಡರ್
-ವೆನಿಲಾ ಎಸೆನ್ಸ್ ಬಾಟಲ್
-ಒಂದು ಮೊಟ್ಟೆ-ಹಾಲು

ನಿಖಿಲ್ ರಾಮನಗರಕ್ಕೆ ಬಂದರೆ ಕಾಂಗ್ರೆಸ್​​ನವರಿಗೆ ಭಯ; ಅನಿತಾ ಕುಮಾರಸ್ವಾಮಿ

ಬ್ರೆಡ್ ತಯಾರಿಸುವುದು ಹೇಗೆ?

ಈ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ದೊಡ್ಡ ಬೌಲ್‌ನಲ್ಲಿ ಹಾಕಿ, ನಂತರ ಇದಕ್ಕೆ ನೀರನ್ನು ಹಾಕಿ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಲು ಎಣ್ಣೆಯನ್ನು ಬಳಸಬಹುದು. ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ, ಇನ್ನಿತರೆ ಯಾವುದೇ ಅಡುಗೆ ಎಣ್ಣೆ ಬಳಸಬಹುದು. ಎಣ್ಣೆ ಹಾಕಿದ ಬಳಿಕವೂ ಗುಳ್ಳೆಗಳು ಬಾರದಂತೆ ಚೆನ್ನಾಗಿ ಕಲೆಸಬೇಕು. ನಂತರ ನಿಮ್ಮ ಕೈಗಳಿಂದ ಹಿಟ್ಟು ಹದಕ್ಕೆ ಬರುವವರೆಗೂ ಮಿಕ್ಸ್ ಮಾಡಿ ಅದೇ ಬೌಲ್‌ನಲ್ಲಿ ಬಿಡಬೇಕು. ನಂತರ ಬೌಲ್‌ನಲ್ಲಿರುವ ಮಿಶ್ರಣದ ಮೇಲೆ ಎಕ್ಸ್ ಆಕಾರ ಮಾಡಿ. ಆ ಮಿಶ್ರಣ ಮೈಕ್ರೋವೇವ್‌ನಲ್ಲಿಟ್ಟಾಗ ಬೌಲ್‌ನಿಂದ ಆಚೆ ಬಾರದಂತೆ ನೋಡಿಕೊಳ್ಳಬೇಕು. ಸುಮಾರು ಐದು ನಿಮಿಷಗಳ ಕಾಲ ತುಂಬಾ ಹೈ ಹೀಟಲ್ಲಿ ಮಿಶ್ರಣವನ್ನು ಇರಿಸಬೇಕು. ಐದು ನಿಮಿಷದ ಬಳಿಕ ಬ್ರೆಡ್ ಅನ್ನು ಮೈಕ್ರೋವೇವ್‌ನಿಂದ ಹೊರತೆಗೆದು ಕತ್ತರಿಸಬೇಕು.

ಹೀಗೆ ಸುಲಭವಾಗಿ ಓವನ್ ಇಲ್ಲದೆಯೂ ಬ್ರೆಡ್‌ ಅನ್ನು ಮನೆಯಲ್ಲಿ ತಯಾರಿಸಬಹುದು.

ಯೀಸ್ಟ್ ಬಳಸದೆ ವೈಟ್ ಬ್ರೆಡ್ ತಯಾರಿಸುವ ವಿಧಾನ
ಬ್ರೆಡ್ ಮಾಡಲು ಬೇಕಾದ ಸಮಯ: 35 ನಿಮಿಷಗಳು
ಪೂರ್ವಸಿದ್ಧತೆಗೆ ತೆಗೆದುಕೊಳ್ಳುವ ಸಮಯ: 30 ನಿಮಿಷಗಳು
ಅಡುಗೆಯ ಸಮಯ: 5 ನಿಮಿಷ

ಬೇಕಾದ ಪದಾರ್ಥಗಳು

- ಅಲ್‌ ಪರ್ಪೋಸ್‌ ಹಿಟ್ಟು ಅಥವಾ ಮೈದಾ ಹಿಟ್ಟು- ಐದು ಟೇಬಲ್ ಚಮಚ
- ಎಣ್ಣೆ- 2 ರಿಂದ 3 ಚಮಚ
- ಮೊಟ್ಟೆ – 1
- ವೆನಿಲಾ ಎಕ್ಸ್‌ಟ್ರಾಕ್ಟ್‌ - 1 ಟೇಬಲ್ ಚಮಚ
- ನೀರು – 2 ಟೇಬಲ್ ಚಮಚ
- ಬೇಕಿಂಗ್ ಪೌಡರ್- 1 ಟೇಬಲ್ ಚಮಚ
- ಹಾಲು – 2-3 ಟೇಬಲ್ ಚಮಚ

ಮಾಡುವ ವಿಧಾನ:

ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೌಲ್‌ನಲ್ಲಿ ಹಾಕಿ ಕಲಸಿ. ಇದರ ಜೊತೆಗೆ ಮೊಟ್ಟೆ, ಹಾಲು, ನೀರನ್ನು ಸೇರಿಸಿ ಗುಳ್ಳೆಗಳು ಎದ್ದೇಳದಂತೆ ಚೆನ್ನಾಗಿ ಎರಡು ಕೈಗಳಿಂದ ನಾದು ಹಿಟ್ಟನ್ನು ಕಲಸಿ ಹಿಟ್ಟಿನ ಮೇಲೆ ಎಕ್ಸ್ ಆಕಾರದ ಮಾರ್ಕ್ ಮಾಡಿ ಮೈಕ್ರೋವೇವ್‌ನಲ್ಲಿ ಸುಮಾರು ಐದು ನಿಮಿಷಗಳ ಕಾಲ ಓವರ್ ಹೀಟ್‌ನಲ್ಲಿಡಬೇಕು. ನಂತರ ಹೊರಗೆ ತೆಗೆದು ಕೂಲ್ ಆದ ಬಳಿಕ ಕತ್ತರಿಸಿಡಬೇಕು.
Published by: Latha CG
First published: March 31, 2021, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories