Morning Breakfast: ಬೆಳಗಿನ ತಿಂಡಿಗೆ ಸಿಂಧಿ ಕೋಕಿ ಮಾಡಿ ತಿನ್ನಿರಿ, ರೆಸಿಪಿ ಹೀಗಿದೆ!

ಸಿಂಧಿ ಕೋಕಿ ರೆಸಿಪಿ. ಇದು ಪ್ರಸಿದ್ಧ ಸಿಂಧಿ ಪಾಕವಿಧಾನವಾಗಿದೆ. ಬೆಳಗಿನ ಉಪಾಹಾರದಲ್ಲಿ ರೊಟ್ಟಿ ಪರಾಠಾ ಸೇವಿಸುವ ಬದಲು ಇದನ್ನು ಮಾಡಿ ತಿನ್ನಬಹುದು. ಕೋಕಿ ಒಂದು ರೀತಿಯ ರೊಟ್ಟಿ ಆಗಿದೆ. ಇದನ್ನು ಸಾಕಷ್ಟು ಮಸಾಲೆ ಬಳಸಿ ಹಿಟ್ಟಿನಿಂದ ತಯಾರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾವಾಗಲೂ ಬೆಳಗಿನ ತಿಂಡಿಗೆ (Morning Breakfast) ದೋಸೆ, ಇಡ್ಲಿ ತಿಂದು ಬೋರ್ (Bore) ಆಗಿದ್ರೆ ಹೊಸ ರೆಸಿಪಿ (New Recipe) ಟ್ರೈ ಮಾಡಬಹುದು. ಬೆಳಗಿನ ತಿಂಡಿ ಭಾರವೂ ಅಲ್ಲ ಲಘುವಾಗಿಯೂ ಇರದ ಹಾಗೆ ನೋಡಿಕೊಳ್ಳಬೇಕು. ಜೊತೆಗೆ ಬೆಳಗಿನ ತಿಂಡಿ ದೀರ್ಘಕಾಲ ಹೊಟ್ಟೆ ತುಂಬಿದ ಹಾಗೂ ದೇಹಕ್ಕೆ (Body) ಪೋಷಕಾಂಶ ಹಾಗೂ ಶಕ್ತಿ ನೀಡುವಂತಿರಬೇಕು. ಅದಾಗ್ಯೂ ಟೇಸ್ಟಿ ಮತ್ತು ಹಗುರವಾದ ತಿಂಡಿ ತುಂಬಾ ಜನರಿಗೆ ಇಷ್ಟವಾಗುತ್ತದೆ. ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಅಂತಹ ಖಾದ್ಯ ವಿಧಾನ ಫಾಲೋ ಮಾಡಬೇಕು. ನಾವು ಇಂದು ಹೆಲ್ದೀ ಮತ್ತು ಟೇಸ್ಟಿ ಆಗಿರುವ ಪಾಕ ವಿಧಾನದ ಬಗ್ಗೆ ಹೇಳಲಿದ್ದೇವೆ. ಇದು ಬೆಳಗಿನ ತಿಂಡಿಗೆ ಆರೋಗ್ಯಕರ ಮತ್ತು ಹಗುರ ಮತ್ತು ರುಚಿಕರವಾಗಿದೆ.

    ಬೆಳಗಿನ ತಿಂಡಿಗೆ ಸಿಂಧಿ ಕೋಕಿ ರೆಸಿಪಿ

    ಈ ತಿಂಡಿಯನ್ನು ನೀವು ನಿಮ್ಮ ಬೆಳಗಿನ ಚಹಾದ ಜೊತೆ ಸೇವಿಸಬಹುದು. ಸಿಂಧಿ ಕೋಕಿ ರೆಸಿಪಿ. ಇದು ಪ್ರಸಿದ್ಧ ಸಿಂಧಿ ಪಾಕವಿಧಾನವಾಗಿದೆ. ಬೆಳಗಿನ ಉಪಾಹಾರದಲ್ಲಿ, ರೊಟ್ಟಿ, ಪರಾಠಾ ಸೇವಿಸುವ ಬದಲು ಇದನ್ನು ಮಾಡಿ ತಿನ್ನಬಹುದು. ಕೋಕಿ ಒಂದು ರೀತಿಯ ರೊಟ್ಟಿ ಆಗಿದೆ.

    ಇದನ್ನು ಸಾಕಷ್ಟು ಮಸಾಲೆ ಬಳಸಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಎಣ್ಣೆಯುಕ್ತ ಆಗಿರಲ್ಲ. ಗರಿಗರಿಯಾಗಿರುತ್ತದೆ. ಹಾಗಾದರೆ ಸಿಂಧಿ ಕೋಕಿಯನ್ನು ಹೇಗೆ ಮಾಡುವುದು ಎಂದು ತಿಳಿಯೋಣ.

    ಇದನ್ನೂ ಓದಿ: ಮೆಕ್ಕೆಜೋಳ ತಿಂದ್ರೆ ತೂಕ ಇಳಿಸೋದು ಬಹಳ ಸುಲಭವಂತೆ

    ಸಿಂಧಿ ಕೋಕಿ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು

    ಗೋಧಿ ಹಿಟ್ಟು ಒಂದು ಕಪ್, ತುಪ್ಪ 3 ರಿಂದ 4 ಟೀ ಸ್ಪೂನ್, ಸಣ್ಣಗೆ ಕೊಚ್ಚಿದ ಹಸಿರು ಕೊತ್ತಂಬರಿ, ಸಣ್ಣಗೆ ಕೊಚ್ಚಿದ ಪುದೀನಾ ಎರಡು ಟೀಸ್ಪೂನ್, ತುರಿದ ಶುಂಠಿ ಒಂದು ಚಮಚ, ಅಜ್ವೈನ್, ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು, ಜೀರಿಗೆ ಕಾಲು ಟೀಸ್ಪೂನ್, ಒಣಗಿದ ದಾಳಿಂಬೆ ಬೀಜಗಳು ಕಾಲು ಟೀಸ್ಪೂನ್, ಕರಿಮೆಣಸು ಕಾಲು ಟೀಸ್ಪೂನ್ ಗಿಂತ ಕಡಿಮೆ, ಉಪ್ಪು.

    ಸಿಂಧಿ ಕೋಕಿ ರೆಸಿಪಿ ಮಾಡುವ ವಿಧಾನ

    ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಪುಡಿ, ಕೇರಂ ಬೀಜ, ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಮೆಣಸು, ಉಪ್ಪು, ಒಣ ದಾಳಿಂಬೆ ಬೀಜಗಳು, ಇಂಗು, ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು 1 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಪರಾಠಾ ಮಾಡಲು ಬೇಕಾದಷ್ಟು ಮೆದುವಾಗಿ ಹಿಟ್ಟನ್ನು ನಾದಿಕೊಳ್ಳಿ. ಆಮೇಲೆ ಇಪ್ಪತ್ತು ನಿಮಿಷ ಹಿಟ್ಟು ನೆನೆಯಲು ಬಿಡಿ.

    ಇಪ್ಪತ್ತು ನಿಮಿಷದ ನಂತರ ಹಿಟ್ಟು ನಯವಾಗಿರುತ್ತದೆ. ಈಗ ಮತ್ತೆ ಸ್ವಲ್ಪ ಹಿಟ್ಟನ್ನು ನಾದಿರಿ. ಆಮೇಲೆ ಪ್ಯಾನ್ ಅನ್ನು ಗ್ಯಾಸ್ ಮೇಲೆ ಬಿಸಿ ಮಾಡಿ. ಈಗ ಪರಾಠಾ ಮಾಡಲು ಬೇಕಾದಷ್ಟು ಹಿಟ್ಟಿನ ಉಂಡೆ ಮಾಡಿ ರೌಂಡ್ ಆಕಾರದಲ್ಲಿ ಲಟ್ಟಿಸಿ. ನಂತರ ತವೆ ಮೇಲೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ.

    ತವಾ ಮೇಲೆ ಸ್ವಲ್ಪ ತುಪ್ಪ ಹರಡಿ ಮತ್ತು ಅದರ ಮೇಲೆ ಕೋಕಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ಈಗ ನಿಮ್ಮ ಸಿಂಧಿ ಕೋಕಿ ರೆಡಿಯಾಗಿದೆ. ಬಿಸಿ ಬಿಸಿ ಕೋಕಿಯನ್ನು ನೀವು ಚಟ್ನಿ, ಉಪ್ಪಿನಕಾಯಿ ಅಥವಾ ಬೆಳಿಗ್ಗೆ ಚಹಾ ಜೊತೆ ಸೇವನೆ ಮಾಡಬಹುದು.

    ಇದನ್ನೂ ಓದಿ: ದಿನಕ್ಕೊಂದು ಎಸಳು ಬೆಳ್ಳುಳ್ಳಿ ತಿಂದ್ರೆ ಸಾಕು ಲಿವರ್ ಆರೋಗ್ಯ ಚೆನ್ನಾಗಿರುತ್ತೆ

    ಕೋಕಿ ರೆಸಿಪಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಈ ಪಾಕ ವಿಧಾನ ಎಣ್ಣೆಯುಕ್ತವಲ್ಲ ಮತ್ತು ಯಾವುದೇ ಕೊಲೆಸ್ಟ್ರಾಲ್ ಹೊಂದಿಲ್ಲ. ಕೊಕಿಯನ್ನು ಬಹುಧಾನ್ಯ, ಓಟ್ಸ್, ರಾಗಿ ಮುಂತಾದ ಯಾವುದೇ ಹಿಟ್ಟನ್ನು ಬಳಸಿ ತಯಾರಿಸಬಹುದು. ಕೋಕಿ ಫೈಬರ್ನಲ್ಲಿ ಸಮೃದ್ಧವಾಗಿದೆ.
    Published by:renukadariyannavar
    First published: