• Home
  • »
  • News
  • »
  • lifestyle
  • »
  • Energy Drinks: ನವರಾತ್ರಿ ಉಪವಾಸದಲ್ಲಿದ್ದೀರಾ? ಹಾಗಾದ್ರೆ ಆಯಾಸ ದೂರ ಮಾಡಲು ಈ ಎನರ್ಜಿ ಡ್ರಿಂಕ್ಸ್ ಕುಡಿಯಿರಿ

Energy Drinks: ನವರಾತ್ರಿ ಉಪವಾಸದಲ್ಲಿದ್ದೀರಾ? ಹಾಗಾದ್ರೆ ಆಯಾಸ ದೂರ ಮಾಡಲು ಈ ಎನರ್ಜಿ ಡ್ರಿಂಕ್ಸ್ ಕುಡಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀರ್ಘಕಾಲದ ಉಪವಾಸದ ವೇಳೆ ದುರ್ಬಲ ಮತ್ತು ಶಕ್ತಿಯ ಕೊರತೆ ಅನುಭವಿಸುವುದು ತುಂಬಾ ಸಾಮಾನ್ಯ. ಕೆಲವರು ಕಚೇರಿ ಮತ್ತು ಮನೆ ಎರಡನ್ನೂ ನಿಭಾಯಿಸುತ್ತಾರೆ. ಹೀಗಾಗಿ ಅವರಲ್ಲಿ ದಣಿವು ಉಂಟಾಗುತ್ತದೆ. ಅಂತವರಿಗೆ ಈ ಪಾನೀಯಗಳಲ್ಲಿರುವ ಪೋಷಕಾಂಶಗಳು ನಿಮಗೆ ಒಳಗಿನಿಂದ ಶಕ್ತಿ ನೀಡುತ್ತದೆ.

  • Share this:

    ನವರಾತ್ರಿಯ (Navaratri) 9 ದಿನಗಳು (Nine Days) ನೀವು ಉಪವಾಸವಿದ್ದರೆ (Fasting), ಸಂಜೆಯ (Evening) ಹೊತ್ತಿಗೆ ಶಕ್ತಿ (Energy) ಕಡಿಮೆಯಾಗುತ್ತಿದೆ ಎನ್ನಿಸಲು ಶುರುವಾದರೆ, ಬಳಲಿಕೆ, ದಣಿವು, ಆಯಾಸ ಉಂಟಾದರೆ ಕೆಲವು ಜ್ಯೂಸ್ (Juice) ಗಳ ಸೇವನೆ ನಿಮಗೆ ತ್ವರಿತ ಶಕ್ತಿ ನೀಡುತ್ತದೆ. ಅಂತಹ ತ್ವರಿತ ಶಕ್ತಿ ನೀಡುವ ಕೆಲ ಪಾನೀಯಗಳನ್ನು ತಯಾರಿಸುವುದು ಹೇಗೆ ಎಂದು ನಾವು ಇಲ್ಲಿ ನೋಡೋಣ. ದೀರ್ಘಕಾಲದ ಉಪವಾಸದ ವೇಳೆ ದುರ್ಬಲ ಮತ್ತು ಶಕ್ತಿಯ ಕೊರತೆ ಅನುಭವಿಸುವುದು ತುಂಬಾ ಸಾಮಾನ್ಯ. ಕೆಲವರು ಕಚೇರಿ ಮತ್ತು ಮನೆ ಎರಡನ್ನೂ ನಿಭಾಯಿಸುತ್ತಾರೆ. ಹೀಗಾಗಿ ಅವರಲ್ಲಿ ದಣಿವು ಉಂಟಾಗುತ್ತದೆ. ತ್ವರಿತ ಶಕ್ತಿ ನೀಡುವ ಕೆಲವು ಪಾನೀಯಗಳು ಹೀಗಿವೆ.


    ಎನರ್ಜಿ ಡ್ರಿಂಕ್ಸ್


    ಈ ಪಾನೀಯಗಳಲ್ಲಿರುವ ಪೋಷಕಾಂಶಗಳು ನಿಮಗೆ ಒಳಗಿನಿಂದ ಶಕ್ತಿ ನೀಡುತ್ತದೆ. ನೀವು ಯಾವುದೇ ಚಿಂತೆಯಿಲ್ಲದೆ ನಿಮ್ಮ ಆಹಾರದಲ್ಲಿ ಈ ಪಾನೀಯ ಸೇರಿಸಬಹುದು. ಅವುಗಳು ನಿಮ್ಮ ಉಪವಾಸ ವ್ರತಕ್ಕೆ ಅಡ್ಡಿ ಮಾಡಲ್ಲ. ಎನರ್ಜಿ ಬೂಸ್ಟರ್ ಪಾನೀಯಗಳು ಆರೋಗ್ಯಕರವಾಗಿವೆ.


    ತೆಂಗಿನಕಾಯಿ ಪಾನೀಯ


    ತೆಂಗಿನ ನೀರು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳಂತಹ ಅನೇಕ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ ಹೊಂದಿದೆ. ತ್ವರಿತ ಶಕ್ತಿ ನೀಡುತ್ತದೆ. ಉಪವಾಸದ ಸಮಯದಲ್ಲಿ ಆಯಾಸ ಮತ್ತು ನಿರ್ಜಲೀಕರಣ ತಡೆಯುತ್ತದೆ.


    ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


    ತೆಂಗಿನ ನೀರು, ತೆಂಗಿನಕಾಯಿ ಸಣ್ಣ ತುಂಡುಗಳಾಗಿ ಕತ್ತರಿಸಿ, ಪುದೀನ ಎಲೆ, ಅನಾನಸ್, ಕಲ್ಲು ಉಪ್ಪು, ನಿಂಬೆ ರಸ ಮತ್ತು ಐಸ್ ತುಂಡು ಬೇಕು. ತೆಂಗಿನ ತುಂಡುಗಳು, ಅನಾನಸ್ ಪುದೀನಾ ಎಲೆಗಳನ್ನು ಬ್ಲೆಂಡರ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ತಯಾರಿಸಿ.


    ಈಗ ಒಂದು ಲೋಟ ತೆಗೆದುಕೊಂಡು ಅದರಲ್ಲಿ ಐಸ್ ತುಂಡು ಹಾಕಿ ನಿಂಬೆ ರಸ ಹಿಂಡಿ. ನಂತರ ರುಚಿಗೆ ತಕ್ಕಂತೆ ಕಲ್ಲು ಉಪ್ಪು ಮತ್ತು ಸಿದ್ಧಪಡಿಸಿದ ಪೇಸ್ಟ್ ಸೇರಿಸಿ. ಈಗ ತೆಂಗಿನ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪುದೀನಾ ಎಲೆ ಸೇರಿಸಿ ಸೇವಿಸಿ.


    ಎಬಿಸಿ ಸ್ಮೂಥಿ


    ಎಬಿಸಿ ಸ್ಮೂಥಿಗಳು ತ್ವರಿತ ಶಕ್ತಿಯ ವರ್ಧಕಕ್ಕೆ ಪರಿಣಾಮಕಾರಿ ಪಾನೀಯ. A ಅಂದ್ರೆ ಆಮ್ಲಾ ನೆಲ್ಲಿಕಾಯಿ, B ಅಂದ್ರೆ ಬೀಟ್ರೂಟ್ ಮತ್ತು C ಅಂದ್ರೆ ಕ್ಯಾರೆಟ್. ಅಂದರೆ ಆಮ್ಲಾ, ಕ್ಯಾರೆಟ್ ಮತ್ತು ಬೀಟ್ಗೆಡ್ಡೆಗಳಿಂದ ತಯಾರಿಸಿದ ಈ ರಸವು ಉಪವಾಸದ ಸಮಯದಲ್ಲಿ ನಿಮಗೆ ಶಕ್ತಿ ನೀಡುತ್ತದೆ.


    ಕ್ಯಾರೆಟ್‌ನಲ್ಲಿರುವ ವಿಟಮಿನ್‌, ಫೈಬರ್ ಮತ್ತು ಪ್ರೋಟೀನ್ ನಿಮ್ಮ ಆಂತರಿಕ ಅಗತ್ಯಗಳನ್ನು ಪೂರೈಸುತ್ತದೆ. ಬೀಟ್ರೂಟ್ ನೈಸರ್ಗಿಕ ರಾಸಾಯನಿಕ ನೈಟ್ರೇಟ್ನ ಉತ್ತಮ ಮೂಲ. ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ ಮತ್ತು ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಉಪವಾಸದಲ್ಲಿ ರಕ್ತದೊತ್ತಡ ಸಮಸ್ಯೆಯಿರಲ್ಲ.


    ಆಮ್ಲಾ ರಸ ದಿನವಿಡೀ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಆಮ್ಲಾ, ಬೀಟ್ರೂಟ್ ಮತ್ತು ಕ್ಯಾರೆಟ್. ಈ ಮೂರು ವಸ್ತುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಿಂಬೆ ರಸ, ಐಸ್ ಕ್ಯೂಬ್ಸ್, ಕಲ್ಲು ಉಪ್ಪು ಮತ್ತು ತಾಜಾ ಪುದೀನ ಎಲೆಗಳು ಬೇಕು.


    ಮೊದಲು ಆಮ್ಲಾ, ಬೀಟ್ಗೆಡ್ಡೆ, ಕ್ಯಾರೆಟ್ ತುಂಡು ಮತ್ತು ಪುದೀನ ಎಲೆಗಳನ್ನು ಬ್ಲೆಂಡರ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೃದುವಾದ ಪೇಸ್ಟ್ ತಯಾರಿಸಿ. ಈಗ ಒಂದು ಲೋಟದಲ್ಲಿ ಐಸ್ ಕ್ಯೂಬ್ಸ್, ರುಚಿಗೆ ತಕ್ಕಂತೆ ಕಲ್ಲು ಉಪ್ಪು ಹಾಕಿ ನಿಂಬೆ ರಸ ಹಿಂಡಿ. ನಯವಾದ ಪೇಸ್ಟ್ ಸೇರಿಸಿ. ಸ್ಥಿರತೆಗೆ ನೀರನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ.


    ಒಣ ಹಣ್ಣು ಪಾನೀಯ


    ಒಣ ಹಣ್ಣುಗಳು ಮತ್ತು ಖರ್ಜೂರಗಳು ಪೌಷ್ಟಿಕಾಂಶದ ಕೊರತೆಯನ್ನು ಪೂರೈಸುತ್ತದೆ. ಕಾರ್ಬೋಹೈಡ್ರೇಟ್‌ಗಳು ಮತ್ತು ನೈಸರ್ಗಿಕ ಸಕ್ಕರೆಗಳು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತವೆ. ಫೈಬರ್ನಲ್ಲಿ ಸಮೃದ್ಧವಾಗಿವೆ. ಉಪವಾಸದ ಸಮಯದಲ್ಲಿ ಜೀರ್ಣಕಾರಿ ಆರೋಗ್ಯ ಸಮತೋಲನಗೊಳಿಸುತ್ತವೆ.


    ಆರೋಗ್ಯಕರ ಮತ್ತು ಸಮತೋಲಿತ ಜೀರ್ಣಾಂಗ ವ್ಯವಸ್ಥೆಯು ದಿನವಿಡೀ ತಾಜಾವಾಗಿರಲು ಅವಶ್ಯಕ. ಬಾದಾಮಿ, ವಾಲ್‌ನಟ್ಸ್, ಪಿಸ್ತಾ, ಗೋಡಂಬಿ ಮತ್ತು ಖರ್ಜೂರ. ನೆಚ್ಚಿನ ಬೀಜ ಸೇರಿಸಿ. ಬಾದಾಮಿ ಹಾಲು ಮತ್ತು ಐಸ್ ತುಂಡು ಹಾಕಿ.


    ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


    ಎಲ್ಲಾ ಬೀಜಗಳನ್ನು ಬ್ಲೆಂಡರ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಪೇಸ್ಟ್ ತಯಾರಿಸಿ. ನಂತರ ಒಂದು ಲೋಟದಲ್ಲಿ ಐಸ್ ತುಂಡು ಹಾಕಿ ಮತ್ತು ಅದರಲ್ಲಿ ತಯಾರಿಸಿದ ಪೇಸ್ಟ್ ಹಾಕಿ. ಮೇಲೆ ಹಾಲು ಹಾಕಿ ಮಿಶ್ರಣ ಮಾಡಿ ಸೇವಿಸಿ.

    Published by:renukadariyannavar
    First published: