ಸಂಕ್ರಾಂತಿ ಹಬ್ಬ (Sankranti Festival) ಹತ್ತಿರ ಬರುತ್ತಿದೆ. ಇನ್ನೆನು ಕೆಲವು ದಿನಗಳಲ್ಲಿ ವರ್ಷದ ಮೊದಲ ಹಬ್ಬವನ್ನು ಆಚರಣೆ (Celebration) ಮಾಡಲಾಗುತ್ತದೆ. ಸಂಕ್ರಾಂತಿ ಎಂದರೆ ಮೊದಲು ನೆನಪಾಗುವುದು ಎಳ್ಳು- ಬೆಲ್ಲ. ಇದಿಲ್ಲದೆ ಹಬ್ಬವೇ ಇಲ್ಲ ಎಂದರೆ ತಪ್ಪಾಗಲಾರದು. ಈ ದಿನ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ ಎಂದು ಹಾರೈಸಲಾಗುತ್ತದೆ. ಈ ಎಳ್ಳು ಬೆಲ್ಲ ತಿನ್ನುವುದರ ಹಿಂದೆ ವೈಜ್ಞಾನಿಕ ಕಾರಣ ಸಹ ಇದೆ. ಈ ಚಳಿಗಾಲದಲ್ಲಿ (Winter) ದೇಹದಲ್ಲಿ ತೈಲಾಂಶ ಹೆಚ್ಚಾಗುತ್ತದೆ. ಇನ್ನು ಈ ಹಬ್ಬದ ಸಮಯದಲ್ಲಿ ಹಲವಾರು ವಿಧದಲ್ಲಿ ಎಳ್ಳು ಬೆಲ್ಲವನ್ನು ತಯಾರಿಸಲಾಗುತ್ತದೆ. ಬಣ್ಣ ಹಾಕಿದ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ ಅದು ಆರೋಗ್ಯಕ್ಕೆ (Health) ಹಾನಿಕಾರಕ. ಹಾಗಾಗಿ ನೀವೇ ಮನೆಯಲ್ಲಿಯೇ ಎಳ್ಳು ಬೆಲ್ಲ ತಯಾರಿಸಿ ಸಂತೋಷದಿಂದ ಆಚರಿಸಿ. ಹಾಗಾದ್ರೆ ಮನೆಯಲ್ಲಿ ಎಳ್ಳು ಬೆಲ್ಲ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಬಿಳಿ ಎಳ್ಳು – 200 ಗ್ರಾಂ
2. ಅಚ್ಚು ಬೆಲ್ಲ – 2
3. ಕೊಬ್ಬರಿ – 2 ಓಳು
4. ಹುರಿಗಡಲೆ – 1 ಕಪ್
5. ಕಡ್ಲೆಕಾಯಿಬೀಜ – 1 ಕಪ್ (ಶೇಂಗಾ)
6. ಜೀರಿಗೆ ಪೆಪ್ಪರ್ ಮೆಂಟ್ – 100 ಗ್ರಾಂ
7. ಬಿಳಿ ಬತಾಸು – 100 ಗ್ರಾಂ
ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಹೀಗೆ ಪೂಜೆ ಮಾಡುವುದರಿಂದ ಸಂಪತ್ತು ಲಭಿಸುತ್ತದೆ
ಎಳ್ಳು ಬೆಲ್ಲ ಮಾಡುವ ವಿಧಾನ
ಮೊದಲು ಕಡ್ಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದುಕೊಳ್ಳಿ, ಅದರ ಸಿಪ್ಪೆ ತೆಗೆದು ಬಿಡಿ ಬಿಡಿ ಮಾಡಿಕೊಳ್ಳಿ. ಅದು ಎರೆಡು ಹೋಳಾಗುತ್ತದೆ. ನಂತರ ಮತ್ತೆ ಎಳ್ಳನ್ನು ಸ್ವಲ್ಪ ಹುರಿದುಕೊಳ್ಳಿ.
ಇದರ ಮಧ್ಯೆ ಅಚ್ಚು ಬೆಲ್ಲವನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕಟ್ ಮಾಡಿಕೊಳ್ಳಿ, ನಿಮಗೆ ಯಾವ ಆಕಾರದಲ್ಲಿ ಬೇಕು ಎಂಬುದನ್ನ ನಿರ್ಧರಿಸಿ ಕತ್ತರಿಸಿಕೊಳ್ಳಿ. ಈಗ ಕೊಬ್ಬರಿಯನ್ನು ತೆಗೆದುಕೊಂಡು ಕಪ್ಪು ಭಾಗವನ್ನು ತೆಗೆದು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಕೊಬ್ಬರಿ ಖರೀದಿ ಮಾಡುವಾಗ ನೋಡಿ ಖರೀದಿಸಿ, ಒಮ್ಮೊಮ್ಮೆ ಕೊಬ್ಬರಿಯ ರುಚಿ ಹಾಳಾಗಿರುತ್ತದೆ.
ಇದನ್ನೂ ಓದಿ:ಸಂಕ್ರಾಂತಿ ಹಬ್ಬದ ದಿನ ಯಾವ ರಾಶಿಯವರು ಏನು ದಾನ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
ಈಗ ಹುರಿಗಡಲೆಯನ್ನು ಅಂದರೆ ಪುಟಾಣಿಯನ್ನು ಬೆಚ್ಚಗಾಗುವಷ್ಟು ಹುರಿದುಕೊಳ್ಳಿ. ಈಗ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಎಳ್ಳು, ಕಡ್ಲೆಕಾಯಿಬೀಜ, ಹುರಿಗಡಲೆ, ಸಣ್ಣಗೆ ತುಂಡರಿಸಿದ ಬೆಲ್ಲ, ಕೊಬ್ಬರಿ, ಜೀರಿಗೆ ಪೆಪ್ಪರ್ ಮೆಂಟ್, ಬಿಳಿ ಬತಾಸು ಸೇರಿಸಿ ಮಿಕ್ಸ್ ಮಾಡಿ. ಇದನ್ನ ಒಂದು ಏರ್ ಟೈಟ್ ಜಾರ್ನಲ್ಲಿ ಶೇಖರಿಸಿಟ್ಟರೆ ತಿಂಗಳುಗಳ ಕಾಲ ನಿಮಗೆ ಸಂಜೆ ಸ್ನ್ಯಾಕ್ಸ್ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ