ಮಕರ ಸಂಕ್ರಾಂತಿ (Makara Sankranti) ವರ್ಷದ ಮೊದಲ ಹಬ್ಬ. ಈ ಹಬ್ಬದ ಸಮಯದಲ್ಲಿ ಸೂರ್ಯ (Sun) ಮುಳುಗಿ ಚಳಿಗಾಲ ಆರಂಭವಾಗುವುದರ ಜೊತೆಗೆ ಋತುವು ಬದಲಾಗುತ್ತದೆ. ಮಕರ ಸಂಕ್ರಾಂತಿಯು ದೇವತೆಗಳ ದಿನದ ಆರಂಭವನ್ನು ಸೂಚಿಸುತ್ತದೆ, ಇದು ಆರು ತಿಂಗಳವರೆಗೆ ಇರುತ್ತದೆ. ಮಕರ ಸಂಕ್ರಾಂತಿಯ ದಿನದಂದು, ಸೂರ್ಯ ದೇವ ತನ್ನ ಮಗ ಶನಿ (Shani) ದೇವನನ್ನು ಭೇಟಿಯಾಗುತ್ತಾನೆ. ಈ ಸಮಯದಲ್ಲಿ ಸೂರ್ಯದೇವನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಮಕರ ರಾಶಿಯ ಅಧಿಪತಿ ಶನಿ. ಧಾರ್ಮಿಕ ಆಚರಣೆಗಳ ಪ್ರಕಾರ, ಮಕರ ಸಂಕ್ರಾಂತಿಯಂದು, ಸೂರ್ಯ ದೇವ ತನ್ನ ಮಗ ಶನಿ ದೇವನನ್ನು ಭೇಟಿಯಾಗಲು ಅವನ ಮನೆಗೆ ಹೋಗುತ್ತಾನೆ. ಮಕರ ಸಂಕ್ರಾಂತಿಯ ದಿನ ಸೂರ್ಯ ದೇವರನ್ನು ಪೂಜಿಸುವವರಿಗೆ ಶನಿಯ ದೋಷ ದೂರವಾಗುತ್ತದೆ ಎನ್ನಲಾಗುತ್ತದೆ. ಸೂರ್ಯನ ಪ್ರಖರತೆಯೊಂದಿಗೆ ಶನಿಯ ಪ್ರಖರತೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಶನಿ ಮತ್ತು ಸೂರ್ಯನ ಸಂಯೋಗದ ಕಥೆಯನ್ನು ಪುರಾಣಗಳಲ್ಲಿ ಹೇಳಲಾಗಿದೆ.
ಶನಿ ಮತ್ತು ಸೂರ್ಯನ ಸಂಯೋಗದ ಕಥೆ
ಪುರಾಣಗಳಲ್ಲಿ ಸೂರ್ಯದೇವನು ತನ್ನ ಮಗ ಶನಿದೇವನನ್ನು ಭೇಟಿ ಮಾಡಿದಾಗ, ಅವನು ಕಪ್ಪು ಎಳ್ಳನ್ನು ಉಡುಗೊರೆಯಾಗಿ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಶನಿಗೆ ಎಳ್ಳನ್ನು ನೀಡಿ ಪೂಜಿಸಲಾಗುತ್ತದೆ. ಹಾಗೆಯೇ ಶನಿ ದೇವ ಎಳ್ಳನ್ನು ನೀಡಿದ್ದರಿಂದ ಸೂರ್ಯದೇವನಿಗೆ ತುಂಬಾ ಸಂತೋಷವಾಯಿತು. ಇದರ ಫಲವಾಗಿ ಶನಿಯು ಮಕರ ರಾಶಿಯಲ್ಲಿ ತನ್ನ ಮನೆಗೆ ಬಂದಾಗ ಅವನ ಮನೆ ಸಂಪತ್ತಿನಿಂದ ತುಂಬುತ್ತದೆ ಎಂದು ಆಶೀರ್ವಾದ ಮಾಡುತ್ತಾನೆ.
ಇದನ್ನೂ ಓದಿ: ಕಟಕ ರಾಶಿಯವರನ್ನು ಹುಡುಕಿ ಬರಲಿದೆ ಅದೃಷ್ಟ; ಹೇಗಿರಲಿದೆ ಉಳಿದ ರಾಶಿಗಳ ದಿನಭವಿಷ್ಯ
ಮಕರ ಸಂಕ್ರಾಂತಿಯಂದು ಹೀಗೆ ಮಾಡಿದರೆ ಸಂಪತ್ತು ಲಭಿಸುತ್ತದೆ
ಮಕರ ಸಂಕ್ರಾಂತಿಯ ದಿನದಂದು, ಸೂರ್ಯ ದೇವ ಮತ್ತು ಶನಿ ದೇವರನ್ನು ಕಪ್ಪು ಎಳ್ಳಿನಿಂದ ಪೂಜಿಸಿದರೆ ಸಂತುಷ್ಟರಾಗುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮೇಲಿರುವ ಶನಿಯ ದೋಷಗಳು ಕಡಿಮೆಯಾಗಿ ಶನಿಯ ದುಷ್ಟ ಪ್ರಭಾವ ಕಡಿಮೆಯಾಗಿ ಸುಖ-ಸಮೃದ್ಧಿ ಹೆಚ್ಚುತ್ತದೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಕಪ್ಪು ಎಳ್ಳಿನಿಂದ ಪೂಜಿಸುವುದರಿಂದ ನಿಮ್ಮ ಮನೆ ಸಂಪತ್ತು ಮತ್ತು ಧಾನ್ಯದಿಂದ ತುಂಬುತ್ತದೆ. ಈ ದಿನ ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.
ನಂತರ ತಾಮ್ರದ ಪಾತ್ರೆಗೆ ನೀರು, ಕಪ್ಪು ಎಳ್ಳು, ಅಕ್ಷತೆ, ಹೂವುಗಳು ಮತ್ತು ಕೆಂಪು ಚಂದನವನ್ನು ಸೇರಿಸಿ. ನಂತರ ಸೂರ್ಯ ಮಂತ್ರವನ್ನು ಪಠಿಸುತ್ತಾ ಆ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ. ಹಾಗೆ ಮಾಡುವುದರಿಂದ ಸೂರ್ಯ ದೇವ ಸಂತೋಷಗೊಂಡು ನಿಮಗೆ ಸಂಪತ್ತು ಮತ್ತು ಅದೃಷ್ಟ ನೀಡುತ್ತಾನೆ.
ಇದನ್ನೂ ಓದಿ:ಹಬ್ಬ ಒಂದು, ಆಚರಣೆ ಹಲವು; ಮಕರ ಸಂಕ್ರಾಂತಿಯ ವಿಶೇಷತೆ ಇದು!
ಈ ದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಪುಣ್ಯ ಸಿಗುತ್ತದೆ. ಯಾವುದೇ ಕಾರಣಕ್ಕೂ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎನ್ನಲಾಗುತ್ತದೆ. ಈ ದಿನ ಎಳ್ಳು-ಬೆಲ್ಲ ದಾನ ಮಾಡಿ. ಈ ದಿನ ಎಳ್ಳುದಾನ ಮಾಡಿದರೆ ನೂರು ಪಟ್ಟು ಪ್ರತಿಫಲ ಸಿಗುತ್ತದೆ, ಇದರಿಂದ ಗ್ರಹದೋಷ ನಿವಾರಣೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ