Makar Sankranthi 2022: ಸಕ್ಕರೆ ಅಚ್ಚು ಮನೆಯಲ್ಲಿ ಮಾಡೋ ಸುಲಭ ವಿಧಾನ

Sugar Mold: ಅಂಗಡಿಗಳಲ್ಲಿ ಸಹ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು (Sugar Mold) ಸಿಗುತ್ತದೆ. ಆದರೆ ಅದರಲ್ಲಿ ಹಾನಿಕಾರಕ. ಅದಕ್ಕೆ ಹಾಕಿರುವ ಬಣ್ಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಕರ ಸಂಕ್ರಾಂತಿ (Makar Sankranthi) ಹತ್ತಿರದಲ್ಲಿದೆ. ಕೆಲವೇ ದಿನಗಳು ಬಾಕಿ ಇದೆ. ದೊಡ್ಡವರಿಗೆ ಪೂಜೆ (Pooja) ಮತ್ತು ಆಚರಣೆಯ ಬಗ್ಗೆ ಯೋಚನೆಯ ಕಾರಣದಿಂದ ಅದರ ತಯಾರಿ ಮಾಡುತ್ತಾರೆ. ಇನ್ನೊಂದೆಡೆ ಮಕ್ಕಳಿಗೆ ಸಂಕ್ರಾಂತಿ (Sankranthi) ಕಾಳು ಮತ್ತು ಅದರಲ್ಲಿರುವ  ಸಕ್ಕರೆ (Sugar) ಅಚ್ಚು ತಿನ್ನುವ ಆಸೆ. ಈ ಸಮಯದಲ್ಲಿ ಅಂಗಡಿಗಳಲ್ಲಿ ಸಹ ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳು (Sugar Mold) ಸಿಗುತ್ತದೆ. ಆದರೆ ಅದರಲ್ಲಿ ಹಾನಿಕಾರಕ. ಅದಕ್ಕೆ ಹಾಕಿರುವ ಬಣ್ಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬಾರಿ ಆರೋಗ್ಯದ (Health) ದೃಷ್ಟಿಯಿಂದ ಮನೆಯಲ್ಲಿಯೇ ಸಕ್ಕರೆ ಅಚ್ಚು ಮಾಡಿ ಸವಿಯಿರಿ. ಮನೆಯಲ್ಲಿಯೇ ಸಕ್ಕರೆ ಅಚ್ಚು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಸಕ್ಕರೆ ಅಚ್ಚು ಮಾಡಲು ಬೇಕಾಗು ಸಾಮಾಗ್ರಿಗಳು

ಸಕ್ಕರೆ- ಅರ್ಧ ಕೆಜಿ

ಹಾಲು- ಕಾಲು ಕಪ್

ನೀರು – ಕಾಲು ಕಪ್

ಇದನ್ನೂ ಓದಿ: ಈ ಸಂಕ್ರಾಂತಿ ಹಬ್ಬಕ್ಕೆ ಹೊಸಾ ಫ್ಯಾಷನ್ ಸಾಂಪ್ರದಾಯಿಕ ಉಡುಗೆಗಳು ಬಂದಿವೆ, ನೋಡಿ

ಮೊಸರು – ಕಾಲು ಕಪ್

ಸಕ್ಕರೆ ಅಚ್ಚು ಮಾಡುವ ಮರದ ಮೌಲ್ಡ್ ಅಥವಾ ಪ್ಲಾಸ್ಟಿಕ್
ಫುಡ್ ಕಲರ್​ (  ಬೇಕಿದ್ದಲ್ಲಿ)

ಸಕ್ಕರೆ ಅಚ್ಚು ಮಾಡುವ ವಿಧಾನ
ಮೊದಲಿಗೆ ನೀವು ಸಕ್ಕರೆ ಅಚ್ಚು ಮಾಡಲು ಮರದ ಮೌಲ್ಡ್ ಬಳಸುತ್ತಿದ್ದರೆ, ಅದನ್ನು 3 – 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಕ್ಕರೆ ಪಾಕ ಮಾಡುವಾಗ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿಡಿ.

ಪ್ಲಾಸ್ಟಿಕ್ ಅಥವಾ ಫೈಬರ್ ಮೌಲ್ಡ್ ಬಳಕೆ ಮಾಡುತ್ತಿದ್ದರೆ ಅದನ್ನ ಹಾಗೆಯೇ ಬಳಕೆ ಮಾಡಬಹುದು. ಈಗ ಒಂದು ದೊಡ್ಡ ಪಾತ್ರೆ ತೆಗೆದುಕೊಳ್ಳಿ, ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ ಚನ್ನಾಗಿ ಕುದಿಸಿ.

ಸಕ್ಕರೆ ಕರಗಿದ ಮೇಲೆ ಮಂದವಾಗುತ್ತದೆ. ಅದಕ್ಕೆ ಕಾಲು ಕಪ್ ಹಾಲು ಹಾಕಿ 2-3 ನಿಮಿಷ ಚನ್ನಾಗಿ ಕುದಿಸಿ. ಅದನ್ನ ಒಮ್ಮೆ ಕಲಸಿದ ಮೇಲೆ ಆ ಮಿಶ್ರಣಕ್ಕೆ ಕಾಲು ಕಪ್ ಮೊಸರು ಹಾಕಿ 2-3 ನಿಮಿಷ ಮತ್ತೊಮ್ಮೆ ಕುದಿಸಿ. ಪಾಕ ಹಾಲು ಒಡೆದಂತೆ ಆಗುತ್ತದೆ. ಇದನ್ನ ತಯಾರಿಸಲು ಹಾಲು, ಮೊಸರು ಬಳಸುವುದರಿಂದ ಅಚ್ಚು ಮೈದುವಾಗುತ್ತದೆ.

ಈಗ ಸಕ್ಕರೆ ಪಾಕದ ಮಿಶ್ರಣವನ್ನು ಮತ್ತೊಂದು ಪಾತ್ರೆಗೆ ಸೋಸಿ. ಈಗ  ಮರದ ಮೌಲ್ಡ್​ ಗೆ ಎರಡು ಕಡೆ ರಬ್ಬರ್ ಬ್ಯಾಂಡ್ ಹಾಕಿ. ಈಗ ಸೋಸಿಕೊಂಡ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟುಚೆನ್ನಾಗಿ ಕುದಿಸಿ.

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಮನೆಯಲ್ಲಿ ಎಳ್ಳು-ಬೆಲ್ಲ ಮಾಡೋದು ಎಷ್ಟು ಸುಲಭ ನೋಡಿ

ಚೆನ್ನಾಗಿ ಗುಳ್ಳೆಗಳು ಬಂದ ಮೇಲೆ, ಪಾಕ ಗಟ್ಟಿಯಾದ ನಂತರ ಆ ಮೌಲ್ಡ್​ಗೆ ಹಾಕಿ, 10 ರಿಂದ 15 ನಿಮಿಷ ಬಿಟ್ಟು ತೆಗೆದರೆ ಆರೋಗ್ಯಕರ ಮತ್ತು ರುಚಿಕರ ಸಕ್ಕರೆ ಅಚ್ಚು ರೆಡಿ. ಅಚ್ಚು ತೆಗೆಯುವಾಗ ಮುರಿದು ಹೋದರೆ,  ಮತ್ತೆ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಿ ಅಚ್ಚು ಮಾಡಬಹುದು.
Published by:Sandhya M
First published: