• Home
 • »
 • News
 • »
 • lifestyle
 • »
 • Stroke Problem: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು

Stroke Problem: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೀರ್ಘ ಕಾಲದ ಕಾಯಿಲೆಗಳು ಪಾರ್ಶ್ವವಾಯು ದಾಳಿ ಉಂಟಾಗಲು ಪ್ರಮುಖ ಕಾರಣ ಆಗಿದೆ. ಪಾರ್ಶ್ವ ವಾಯುವಿಗೆ ಮುಖ್ಯ ಕಾರಣ ರಕ್ತನಾಳಗಳಲ್ಲಿ ತಡೆ. ಹಾಗಾಗಿ ಅಪಧಮನಿಗಳು ಮತ್ತು ನರಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ಸುಧಾರಿಸಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
 • Share this:

  ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನ (World Stroke Day) ಆಚರಣೆ ಮಾಡಲಾಗುತ್ತದೆ. ಮಾರಣಾಂತಿಕ ಪಾರ್ಶ್ವವಾಯು ಬಗ್ಗೆ ಜಾಗೃತಿ (Awareness) ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಆಗಿದೆ. ಸಾಮಾನ್ಯ ಭಾಷೆಯಲ್ಲಿ ಸ್ಟ್ರೋಕ್ ಅನ್ನು ಮೆದುಳಿನ ದಾಳಿ ಎಂದು ಕರೆಯುತ್ತಾರೆ. ರಕ್ತನಾಳಗಳಲ್ಲಿ (Blood Vessels) ತಡೆ ಉಂಟಾದಾಗ ಹೃದಯಕ್ಕೆ (Heart) ಎಷ್ಟು ಆಮ್ಲಜನಕ ಸಿಗುವುದಿಲ್ಲವೋ ಅದೇ ರೀತಿ ಮಿದುಳಿನ ನಾಳಗಳಲ್ಲಿ ತಡೆ ಉಂಟಾದರೆ ಮೆದುಳಿನ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಆಹಾರ ಮತ್ತು ಜೀವನಶೈಲಿ ಬದಲಾಯಿಸುವ ಮೂಲಕ ಪಾರ್ಶ್ವವಾಯು ದಾಳಿಯನ್ನು ತಡೆಯಬಹುದು ಎಂದು ನಂಬಲಾಗಿದೆ.


  ಪಾರ್ಶ್ವವಾಯು ದಾಳಿ ಉಂಟಾಗಲು ಪ್ರಮುಖ ಕಾರಣ


  ಇದಲ್ಲದೆ ದೀರ್ಘ ಕಾಲದ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಸ್ಥೂಲಕಾಯ ಮತ್ತು ಹೃದ್ರೋಗ ಸಮಸ್ಯೆ ಪಾರ್ಶ್ವವಾಯು ದಾಳಿ ಉಂಟಾಗಲು ಪ್ರಮುಖ ಕಾರಣ ಆಗಿದೆ. ಪಾರ್ಶ್ವವಾಯು ಸಾಧ್ಯತೆ ನಿಯಂತ್ರಣದಲ್ಲಿ ಇಟ್ಟುಕೊಂಡು ಕಡಿಮೆ ಮಾಡಬಹುದು.


  ಫ್ಯಾಟ್ ಟು ಸ್ಲಿಮ್ ಮತ್ತು ನ್ಯೂಟ್ರಿಷನಿಸ್ಟ್ ಮತ್ತು ಡಯೆಟಿಷಿಯನ್ ನಿರ್ದೇಶಕರಾದ ಶಿಖಾ ಅಗರ್ವಾಲ್ ಶರ್ಮಾ ಅವರ ಪ್ರಕಾರ, ಪಾರ್ಶ್ವ ವಾಯುವಿಗೆ ಮುಖ್ಯ ಕಾರಣ ರಕ್ತನಾಳಗಳಲ್ಲಿ ತಡೆ. ಹಾಗಾಗಿ ಅಪಧಮನಿಗಳು ಮತ್ತು ನರಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ಸುಧಾರಿಸಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


  ಇದಕ್ಕಾಗಿ ನೀವು ಮದ್ಯಪಾನ ಮಾಡದೇ ಇರುವುದು ತುಂಬಾ ಮುಖ್ಯ. ನಿಯಮಿತ ವ್ಯಾಯಾಮ, ಧೂಮಪಾನ ಮಾಡದಿರುವುದು, ತೂಕ ನಷ್ಟ, ಒತ್ತಡದಿಂದ ದೂರವಿರುವುದು ಮತ್ತು ಆರೋಗ್ಯಕರ ಆಹಾರ ಕ್ರಮ ತೆಗೆದುಕೊಳ್ಳುವುದು ಮುಂತಾದ ಕೆಲಸ ಮಾಡಬಹುದು.


  ಕಾಲೋಚಿತ ಹಣ್ಣು ಮತ್ತು ತರಕಾರಿ ಸೇವನೆ ಹೆಚ್ಚು ಮಾಡಿ


  ಕಾಲೋಚಿತ ಹಣ್ಣು ಮತ್ತು ತರಕಾರಿ ಸೇವನೆ ಮಾಡುವುದು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಾಕಂದ್ರೆ ಅವು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿ ಹೊಂದಿವೆ. ಹಣ್ಣು ಮತ್ತು ತರಕಾರಿ ಪೊಟ್ಯಾಸಿಯಮ್, ಫೈಬರ್, ಫೋಲೇಟ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಅಗತ್ಯ ಪೋಷಕಾಂಶ ಸಹ ಹೊಂದಿವೆ.


  ಬಿಳಿ ಆಲೂಗಡ್ಡೆ, ಬಾಳೆಹಣ್ಣು, ಟೊಮ್ಯಾಟೊ, ಪ್ಲಮ್, ಕಲ್ಲಂಗಡಿ ಮತ್ತು ಸೋಯಾಬೀನ್‌ ಸೇರಿದಂತೆ ಪೊಟ್ಯಾಸಿಯಮ್ ಭರಿತ ಆಹಾರ ನಿಮ್ಮ ರಕ್ತದೊತ್ತಡ ಸಾಮಾನ್ಯವಾಗಿಸುವುದು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯುವಿಗೆ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ.


  ಪಾಲಕ್‌ ನಂತಹ ಮೆಗ್ನೀಸಿಯಮ್ ಅಧಿಕ ಆಹಾರಗಳು, ಪಾರ್ಶ್ವವಾಯು ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ಮೀನು ತಿನ್ನುವುದು


  ಮೀನು ಒಮೆಗಾ 3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲ ಆಗಿದೆ. ಈ ಪೋಷಕಾಂಶ ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


  ಧಾನ್ಯಗಳು


  ಧಾನ್ಯಗಳು ಫೈಬರ್, ಬಿ ಜೀವಸತ್ವಗಳು ಫೋಲೇಟ್ ಮತ್ತು ಥಯಾಮಿನ್ ಸೇರಿ ಮೆಗ್ನೀಸಿಯಮ್ ಮತ್ತು ಕಬ್ಬಿಣದಲ್ಲಿ ಸಮೃದ್ಧ ಆಗಿವೆ. ಇದು ಪಾರ್ಶ್ವವಾಯು ಸಾಧ್ಯತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧಾನ್ಯದ ಬ್ರೆಡ್ ಮತ್ತು ಧಾನ್ಯಗಳು, ಓಟ್ಮೀಲ್ ಮತ್ತು ಕಂದು ಅಕ್ಕಿ ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ.


  ಕಡಿಮೆ ಕೊಬ್ಬಿನ ಡೈರಿ ಉತ್ಪನ್ನ ಸೇವನೆ


  ಕೊಬ್ಬು ರಹಿತ ಹಾಲು, ಮೊಸರು ಮತ್ತು ಕಾಟೇಜ್ ಚೀಸ್ ಟೈಪ್ 2 ಮಧುಮೇಹ ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ.


  ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


  ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರ ಸೇವನೆ ತಪ್ಪಿಸಿ


  ಬರ್ಗರ್, ಚೀಸ್ ಮತ್ತು ಐಸ್ ಕ್ರೀಂನಂತಹ ತ್ವರಿತ ಆಹಾರಗಳು ಪಾರ್ಶ್ವವಾಯು ಅಪಾಯ ಹೆಚ್ಚಿಸಬಹುದು. ಸ್ಟ್ರೋಕ್‌ ಅನೇಕ ಅಪಾಯಕಾರಿ ಅಂಶ ಕಡಿಮೆ ಮಾಡಲು ವ್ಯಾಯಾಮ ಮಾಡಿ.

  Published by:renukadariyannavar
  First published: