• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Diabetes Super Foods: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕೆ? ಈ ಫೈಬರ್ ಭರಿತ ಆಹಾರಗಳನ್ನು ಸೇವಿಸಿ

Diabetes Super Foods: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕೆ? ಈ ಫೈಬರ್ ಭರಿತ ಆಹಾರಗಳನ್ನು ಸೇವಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರತಿ ಮನೆಯಲ್ಲಿ ಹೋಗಿ ವಿಚಾರಿಸಿದರೆ ಒಬ್ಬ ಸಕ್ಕರೆ ಕಾಯಿಲೆಯಿಂದ ಬಳಲುವಂತಹ ವ್ಯಕ್ತಿ ಇದ್ದೇ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಜೀವನಶೈಲಿಗಳು ಹಾದಿ ತಪ್ಪುತ್ತಿವೆ ಮತ್ತು ಸಕ್ಕರೆ ಕಾಯಿಲೆಯಂತಹ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಏನು ಪರಿಹಾರವೇ ಇಲ್ಲವೇ ಅಂತ ನೀವು ನಮ್ಮನ್ನು ಕೇಳಬಹುದು. ನಿಮ್ಮ ಸಕ್ಕರೆ ಕಾಯಿಲೆಯಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವಿಸಬೇಕು ಮತ್ತು ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು.

ಮುಂದೆ ಓದಿ ...
  • Share this:

ಒತ್ತಡದ (Stress) ಜೀವನ ಮತ್ತು ಜಡತ್ವದ ಜೀವನಶೈಲಿ ಅನೇಕ ರೋಗಗಳನ್ನು ತಂದೊಡ್ಡಬಹುದು ಎಂಬುದನ್ನು ಈಗಂತೂ ಯಾರು ಮರೆಯುವಂತಿಲ್ಲ. ಹೌದು.. ಜೀವನಶೈಲಿ ಮತ್ತು ಆಹಾರ Food) ಪದ್ದತಿ ಚೆನ್ನಾಗಿದ್ದರೆ, ಆರೋಗ್ಯವು ಚೆನ್ನಾಗಿರುತ್ತದೆ. ಈಗಂತೂ ಪ್ರತಿ ಮನೆಯಲ್ಲಿ ಹೋಗಿ ವಿಚಾರಿಸಿದರೆ ಒಬ್ಬ ಸಕ್ಕರೆ (Sugar) ಕಾಯಿಲೆಯಿಂದ ಬಳಲುವಂತಹ ವ್ಯಕ್ತಿ ಇದ್ದೇ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಜೀವನಶೈಲಿಗಳು (Lifestyle) ಹಾದಿ ತಪ್ಪುತ್ತಿವೆ ಮತ್ತು ಸಕ್ಕರೆ ಕಾಯಿಲೆಯಂತಹ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಏನು ಪರಿಹಾರವೇ ಇಲ್ಲವೇ ಅಂತ ನೀವು ನಮ್ಮನ್ನು ಕೇಳಬಹುದು. ನಿಮ್ಮ ಸಕ್ಕರೆ ಕಾಯಿಲೆಯಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ (Health) ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವಿಸಬೇಕು ಮತ್ತು ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು.


ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ನಿಯಂತ್ರಿಸಿಕೊಳ್ಳುವುದು ಹೇಗೆ? 
ನೀವು ಮಧುಮೇಹವನ್ನು ಹೊಂದಿದ್ದರೆ, ಸಕ್ಕರೆ ಮಟ್ಟವನ್ನು ಆರೋಗ್ಯಕರವಾಗಿ ನಿಯಂತ್ರಿಸಿಕೊಳ್ಳಲು ನೀವು ಸಾಕಷ್ಟು ತರಕಾರಿಗಳು, ಸಂಪೂರ್ಣ ಧಾನ್ಯಗಳು, ಹಣ್ಣುಗಳು, ಪ್ರೋಟೀನ್ ಗಳು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಕರಗುವ ನಾರಿನಂಶದಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಕರಗುವ ನಾರು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ನಾರಿನಂಶವಿರುವ ಆಹಾರಗಳು ದೇಹದಲ್ಲಿ ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹದ ಅಪಾಯವನ್ನು ನಿರ್ವಹಿಸಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ನಾರಿನಂಶ ಇರುವ ತರಕಾರಿಗಳ ಸೇವನೆ 
"ನೀವು ಮಧುಮೇಹ ಅಥವಾ ಪ್ರಿಡಯಾಬಿಟೀಸ್ ಹಂತದಲ್ಲಿ ಇದ್ದರೆ, ನಾರಿನಂಶ ಇರುವ ತರಕಾರಿಗಳು ನಿಮ್ಮ ಸ್ನೇಹಿತರು ಅಂತ ಅಂದುಕೊಳ್ಳಿರಿ, ಏಕೆಂದರೆ ಕರಗುವ ನಾರು ರಕ್ತದಲ್ಲಿನ ಗ್ಲುಕೋಸ್ ಏರಿಕೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ" ಎಂದು ಪೌಷ್ಟಿಕ ತಜ್ಞರಾದ ಲವ್ನೀತ್ ಬಾತ್ರಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳುತ್ತಾರೆ.


ಬಾತ್ರಾ ಅವರು ಸೂಚಿಸಿದ ಕರಗುವ ನಾರಿನಂಶ ಹೆಚ್ಚಿರುವ ಆರೋಗ್ಯಕರ ಆಹಾರಗಳು ಮಧುಮೇಹಕ್ಕೆ ಒಳ್ಳೆಯದು.


1. ಓಟ್ಸ್ ಸೇವಿಸಿರಿ
ಓಟ್ಸ್ ಕರಗದ ಮತ್ತು ಕರಗುವ ನಾರು ಎರಡನ್ನೂ ಹೊಂದಿರುತ್ತದೆ, ಆದರೆ ಕರಗುವ ನಾರು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ನಮ್ಮ ದೇಹವು ಕರಗುವ ನಾರನ್ನು ವಿಭಜಿಸಲು ಸಾಧ್ಯವಿಲ್ಲದ ಕಾರಣ, ಅದು ನಿಮ್ಮ ರಕ್ತದಿಂದ ಹೀರಲ್ಪಡದೆ ನಿಮ್ಮ ಹೊಟ್ಟೆಯಲ್ಲಿ ಜಾಗವನ್ನು ತೆಗೆದುಕೊಳ್ಳುತ್ತದೆ, ನಿಮ್ಮ ಸಕ್ಕರೆ ಮಟ್ಟವನ್ನು ಏರಿಸದೆ ನಿಮ್ಮನ್ನು ಪೂರ್ಣವಾಗಿಡುತ್ತದೆ. ಇದು ಕರುಳಿನ ಬ್ಯಾಕ್ಟೀರಿಯಾಗಳಿಗೆ ಪ್ರೀಬಯಾಟಿಕ್ ಸಹಾಯಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.


ಇದನ್ನೂ ಓದಿ: Shravana Masa: ಶ್ರಾವಣ ಮಾಸದಲ್ಲಿ ಜನರು ಏಕೆ ನಾನ್ ವೆಜ್ ತಿನ್ನೋದಿಲ್ಲ? ಇದರ ಹಿಂದಿನ ಕಾರಣಗಳೇನು?


2. ಬಾರ್ಲಿ
ಬಾರ್ಲಿಯ 6 ಗ್ರಾಂ ಫೈಬರ್ ಹೆಚ್ಚಾಗಿ ಕರಗುವ ನಾರು, ಕಡಿಮೆ ಕೊಲೆಸ್ಟ್ರಾಲ್, ಕಡಿಮೆ ರಕ್ತದಲ್ಲಿನ ಸಕ್ಕರೆ ಮತ್ತು ಹೊಟ್ಟೆ ತುಂಬಿಸುವ ಆಹಾರ ಪದಾರ್ಥವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವಂತಹ ಪ್ರಯೋಜನಗಳನ್ನು ಸಹ ಹೊಂದಿದೆ ಎಂದು ಹೇಳಬಹುದು.


3. ಕಡಲೆಕಾಳು
ಕಡಲೆಕಾಳುಗಳಲ್ಲಿ ಆಹಾರದ ನಾರಿನಂಶವು ಅಧಿಕವಾಗಿದೆ, ವಿಶೇಷವಾಗಿ ರಾಫಿನೋಸ್ ಎಂದು ಕರೆಯಲ್ಪಡುವ ಕರಗುವ ನಾರು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.


4. ಸೇಬು
"ದಿನಕ್ಕೆ ಒಂದು ಸೇಬು ತಿನ್ನಿರಿ ಮತ್ತು ಅದು ವೈದ್ಯರನ್ನು ದೂರವಿಡುತ್ತದೆ" ಎಂಬುದು ಹಳೆಯ ಗಾದೆಯಾಗಿದ್ದು, ಇದು ಅನೇಕ ದೀರ್ಘಕಾಲದ ಕಾಯಿಲೆಗಳ ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ. ಸೇಬುಗಳು ಕರಗುವ ಫೈಬರ್ ಪೆಕ್ಟಿನ್ ನ ಉತ್ತಮ ಮೂಲವಾಗಿದೆ, ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರದಂತೆ ತಡೆಯುತ್ತದೆ.


ಇದನ್ನೂ ಓದಿ:  Vitamin B6 Food: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ


5. ಸಬ್ಜಾ ಬೀಜಗಳು
ಹೆಚ್ಚಿನ ನಾರಿನಂಶವು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುವುದನ್ನು ನಿಯಂತ್ರಿಸುತ್ತದೆ. ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುವ ಸೂಪರ್ ಫುಡ್ ಎಂದು ಇದನ್ನು ಹೇಳಲಾಗುತ್ತದೆ.

First published: