Health Tips: ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆ? ಈ ಸರಳ ಜೀವನಶೈಲಿ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

Intestinal llness: ಕರುಳು ಅನಾರೋಗ್ಯಕರವಾಗಿದ್ದರೆ ಅದು ಜೀರ್ಣಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಸರಳ ಜೀವನಶೈಲಿ ಅಭ್ಯಾಸಗಳನ್ನು ರೂಢಿಸಿಕೊಳ್ಳಿರಿ ಮತ್ತು ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ದೇಹದ ಆರೋಗ್ಯ (Health) ಸರಿಯಾಗಿರಬೇಕೆಂದರೆ ದೇಹದಲ್ಲಿರುವ ಪ್ರತಿಯೊಂದು ಅಂಗಾಂಗವು ಚೆನ್ನಾಗಿ ಕೆಲಸ ಮಾಡುತ್ತಿರಬೇಕು. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಅಥವಾ ಕರುಳನ್ನು ಕಾಪಾಡಿಕೊಳ್ಳುವುದು ಇವತ್ತಿನ ದಿನಗಳಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಏಕೆಂದರೆ ಅನೇಕರು ತಾವು ಕೆಲಸ ಮಾಡುವ ಸ್ಥಳದಲ್ಲಿ ಮನೆಯಿಂದ ದೂರವಿದ್ದು ಸಿಕ್ಕಿದ್ದೆಲ್ಲಾ ತಿಂದು ಹೊಟ್ಟೆ(Stomach) ಹಾಳು ಮಾಡಿಕೊಳ್ಳುತ್ತಿರುವ ಅನೇಕ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಅದಕ್ಕೆ ಉತ್ತಮ ಆರೋಗ್ಯಕ್ಕೆ ಜೀರ್ಣಾಂಗ (Digestive System) ವ್ಯವಸ್ಥೆ ತುಂಬಾನೇ ಮುಖ್ಯವಾಗಿದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿದ್ದಾಗ ನಮ್ಮ ಕರುಳು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ನಮ್ಮ ದೇಹದಲ್ಲಿರುವ ತ್ಯಾಜ್ಯಗಳನ್ನು ಹೊರಕ್ಕೆ ಹಾಕುತ್ತದೆ, ಮೆದುಳಿನೊಂದಿಗೆ (Brain) ಸಂವಹನ ನಡೆಸುತ್ತದೆ ಮತ್ತು ಆರೋಗ್ಯಕರ  ನರವ್ಯೂಹದ ಕಾರ್ಯವನ್ನು ಬೆಂಬಲಿಸುತ್ತದೆ.

ಕರುಳು ಅನಾರೋಗ್ಯಕರವಾಗಿದ್ದರೆ ಅದು ಜೀರ್ಣಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು, ಇದು 60 ರಿಂದ 70 ಮಿಲಿಯನ್ ಅಮೆರಿಕನ್ನರನ್ನು ಬಾಧಿಸುತ್ತದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ತಿಳಿಸಿದೆ. ಅನಾರೋಗ್ಯಕರ ಕರುಳಿನ ಲಕ್ಷಣಗಳಲ್ಲಿ ಹೊಟ್ಟೆಯುಬ್ಬರಿಕೆ, ಹಠಾತ್ ಆಗಿ ದೇಹದ ತೂಕ ಹೆಚ್ಚಾಗುವುದು ಅಥವಾ ಜೀವನಶೈಲಿಯಲ್ಲಿಯಲ್ಲಿ ಏರುಪೇರಾಗುವುದು, ನಿದ್ರೆಗೆ ಭಂಗ ಬರುವುದು ಮತ್ತು ನಿರಂತರವಾಗಿ ಆಯಾಸವಾಗುವುದು ಸೇರಿವೆ.

ಸೂಕ್ತ ಚಿಕಿತ್ಸೆಯ ಅಗತ್ಯತೆ

ಇದಕ್ಕೆಲ್ಲಾ ಸರಿಯಾದ ಸಮಯಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ನೀಡದಿದ್ದರೆ, ಅನಾರೋಗ್ಯಕರ ಕರುಳು ಕಿರಿಕಿರಿ ಉಂಟು ಮಾಡುವ ಕರುಳಿನ ಸಿಂಡ್ರೋಮ್ (IBAS) ಮತ್ತು ಗ್ಯಾಸ್ಟ್ರೋ ಎಸೋಫೇಜಿಯಲ್ ರಿಫ್ಲೆಕ್ಸ್ ಕಾಯಿಲೆ (GERD) ನಂತಹ ದೀರ್ಘಕಾಲದ ಅನಾರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಅನ್ನನಾಳ, ಜಠರ ಮತ್ತು ಕರುಳುಗಳಿಂದ ಕೂಡಿದ ಜಠರಗರುಳಿನ ನಾಳದೊಳಗಿನ ಬ್ಯಾಕ್ಟೀರಿಯಾಗಳು ಅಸೌಕರ್ಯವನ್ನು ಉಂಟು ಮಾಡದೆ ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಕರುಳಿನ ಆರೋಗ್ಯವನ್ನು ಸೂಕ್ತವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ ಅಂತ ಹೇಳಬಹುದು.

ಕರುಳಿನ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ

ಕರುಳಿನ ಆರೋಗ್ಯವು ಒಂದು ಸಂಕೀರ್ಣ ವಿಷಯವಾಗಿದ್ದು, ಇದನ್ನು ನಾವು ನಿರ್ಲಕ್ಷಿಸಿದರೆ ಅನೇಕ ರೀತಿಯ ಕಾಯಿಲೆಗಳಿಗೆ ನಾವು ತುತ್ತಾಗಬಹುದು. ಹಾಗಾದರೆ ನಾವು ನಮ್ಮ ಕರುಳನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಹೇಗೆ ಅಂತೀರಾ? ಈ ಸರಳ ಜೀವನಶೈಲಿ ಅಭ್ಯಾಸಗಳನ್ನು ರೂಢಿಸಿಕೊಳ್ಳಿರಿ ಮತ್ತು ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

ಪ್ರೋಬಯಾಟಿಕ್ ಆಹಾರಗಳನ್ನು ಸೇವಿಸಿರಿ: ಕರುಳಿನ ಬ್ಯಾಕ್ಟೀರಿಯಾಗಳ ಆರೋಗ್ಯಕರ ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡಲು ಮೊಸರಿನಂತಹ ನೈಸರ್ಗಿಕವಾಗಿ ಹುದುಗಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿರಿ. ಒಟ್ಟಿನಲ್ಲಿ ಹೇಳುವುದಾದರೆ ಪ್ರೋಬಯಾಟಿಕ್ ಆಹಾರಗಳನ್ನು ಹೆಚ್ಚಾಗಿ ಸೇವಿಸಿರಿ.

ಇದನ್ನೂ ಓದಿ: 4 ವರ್ಷದ ಕಂದಮ್ಮನನ್ನು ಕಾಡಿದ ಬ್ರೇನ್ ಕ್ಯಾನ್ಸರ್​! ಇದಕ್ಕೆ ಶಾಶ್ವತ ಪರಿಹಾರನೇ ಇಲ್ವಾ?

ಸಂಸ್ಕರಿಸಿದ ಆಹಾರ ಬಿಟ್ಟು, ಒಳ್ಳೆಯ ಆಹಾರ ಸೇವಿಸಿ: ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ ಮತ್ತು ಇದರ ಬದಲಿಗೆ ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು, ತೆಳುವಾದ ಪ್ರೋಟೀನ್ ಮತ್ತು ಸೇಬುಗಳು, ಬ್ರೊಕೋಲಿ, ಸಾಲ್ಮನ್ ಮತ್ತು ಕ್ವಿನೋವಾದಂತಹ ಫೈಬರ್ ಅಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿರಿ.

ನಿಯಮಿತವಾಗಿ ವ್ಯಾಯಾಮ ಮಾಡಿ: ಪ್ರತಿದಿನ ತಪ್ಪದೆ ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಸಮಯದವರೆಗೆ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನವಾಗುತ್ತದೆ. ವ್ಯಾಯಾಮವು ಸೂಕ್ಷ್ಮಜೀವಿ ಪ್ರಭೇದಗಳನ್ನು ಹೆಚ್ಚಿಸುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸದಾ ಹೈಡ್ರೇಟ್ ಆಗಿರಿ: ಸದಾ ಹೈಡ್ರೇಟ್ ಆಗಿರಿ ಅಂತ ಹೇಳಿದರೆ ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯಿರಿ ಅಂತ ಅರ್ಥ. ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತಡೆಗಟ್ಟಲು ಇದು ಒಂದು ಸರಳ ಮಾರ್ಗವಾಗಿದೆ. ಇದರಿಂದ ನಿಮ್ಮ ಇಡೀ ದೇಹದ ಆರೋಗ್ಯ ಚೆನ್ನಾಗಿರುತ್ತದೆ.

ಇದನ್ನೂ ಓದಿ: ಈ ಡಿಫರೆಂಟ್​ ಟೀಗಳ ಸೂಪರ್ ಆರೋಗ್ಯ ಪ್ರಯೋಜನಗಳು ಹಲವಾರು

ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿರಿ: ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ನಿಮ್ಮ ಕರುಳಿನಲ್ಲಿರುವ ಉರಿಯೂತವನ್ನು ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆ ಎದ್ದು ಸ್ವಲ್ಪ ನಡೆದಾಡಿ, ಒಂದು ಕಡೆ ಶಾಂತವಾಗಿ ಕೂತು ಧ್ಯಾನ ಮಾಡಿ ಮತ್ತು ಪ್ರೀತಿ ಪಾತ್ರರೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.
First published: