ಬೆಳಗ್ಗೆ ಎದ್ದು ಫ್ರೆಶ್ಅಪ್(Fresh up)ಆಗಿ ತಿಂಡಿ ತಿಂದು ಕೆಲಸ(Work)ಕ್ಕೆ ಹೊಗುವುದು ಕಾಮನ್(Common)ಬೆಳಗ್ಗೆ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದಿರಲಿ ಅದರ ಬಗ್ಗೆ ಯೋಚನೆ ಮಾಡುವುದುಕ್ಕೂ ಸಮಯ(Time)ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಎದ್ದು, ಸ್ನಾನ ಮಾಡಿ, ರೆಡಿಯಾಗಿ ಆಫೀಸ್(Office)ಗೆ ಹೊರಡುವ ಟೆನ್ಶನ್(Tension)ನಲ್ಲಿ ಇರುತ್ತೆವೆ. ಬಳಿಕ ಮತ್ತೆ ರಾತ್ರಿ ಮನೆಗೆ ಬಂದು ಏನೋ ಒಂದು ತಿಂದು ಮತ್ತೆ ಮಲಗುತ್ತೇವೆ. ಮತ್ತೆ ಮರುದಿನ ಸೆಮ್ ದಿನಚರಿ ರಿಪೀಟ್ ಆಗುತ್ತಲೇ ಇರುತ್ತದೆ. ಹಾಗಿದ್ರೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಲು ಸಮಯವಿಲ್ಲ ಅಂದರೆ ವಿಪರ್ಯಾಸ. ದಿನ ಶುರುವಾಗುವ ಮುನ್ನ ವ್ಯಾಯಾಮ, ಇದಾದ ಬಳಕ ಒಳ್ಳೆಯ ಪೌಷ್ಠಿಕಾಂಶಗಳು ಇರುವ ಆಹಾರ, ದೇಹಕ್ಕೆ ಬೇಕಿರುವಷ್ಟು ನೀರು ಕೊಟ್ಟರೆ ನಾವು ಆರೋಗ್ಯವಾಗಿರುತ್ತೇವಾ? ಇಷ್ಟು ಬಿಟ್ಟು ಬೇರೆ ಏನು ಮಾದಿದ್ದರು ನಮ್ಮ ಆರೋಗ್ಯ ಉತ್ತಮವಾಗಿರುತ್ತಾ? ಈ ರೀತಿಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಬೆಳಗ್ಗೆ ಎದ್ದ ಕೂಡಲೇ ಬ್ರಶ್ ಮಾಡಿ 5 ರಿಂದ 10 ನಿಮಷಗಳ ಕಾಲ ನಾವು ಹೇಳುವುದಕ್ಕೆ ಸಮಯ ಕೊಟ್ಟು, ನಿಮ್ಮ ಆರೋಗ್ಯವನ್ನು ಉತ್ತಮಗೊಳಸಿಕೊಳ್ಳಲಿ. ಬೆಳಗ್ಗೆ ಎದ್ದ ಕೂಡಲೇ ಕೆಲವರಿಗೆ ಕಾಫಿ, ಟೀ ಕುಡಿಯುವ ಅಭ್ಯಾವಸವಿರುತ್ತೆ. ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುವುದು ತುಂಬಾ ಅಪಾಕಯಕಾರಿ. ಕುಡಿಯುವಾಗ ಆಹ್ಲಾದಕರ ಮಜಾ ನೀಡುವ ಕಾಫಿ, ಟೀ ನಿಮ್ಮ ಆರೋಗ್ಯದ ಪರಿಣಾಮ ಬೀರುತ್ತೆ. ಹಾಗಿದ್ರೆ ಬೆಳಗ್ಗೆಎದ್ದ ಕೂಡಲೇ ಏನು ಮಾಡಬೇಕು? ಅನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ
ಬ್ರಶ್ ಮಾಡಿದೆ ಮೇಲೆ ಇವುಗಳನ್ನ ಮಾಡಿ
1. ಕರಿಬೇವು, ಅರ್ಧ ಚಮಚ ಜೀರಿಗೆ
ಇದನ್ನೂ ಓದಿ: ನೀವು ಕಾಫಿ ಪ್ರಿಯರ ಹಾಗಾದ್ರೆ ಇದನ್ನು ಓದಲೇ ಬೇಕು..!
ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿದ ನಂತರ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ, ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡುತ್ತದೆ.
2. ಹೆಲ್ತಿ ಟೀ ಕುಡಿಯಿರಿ
ನಿಮಗೆ ರಾತ್ರಿಯಿಂದ ತಲೆನೋವಿದ್ದು, ಬೆಳಗ್ಗೆ ಎದ್ದಾಗಲೂ ತಲೆನೋವಿದ್ದರೆ, ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ.
3. ನೆಲ್ಲಿಕಾಯಿ ಜ್ಯೂಸ್, ಮೆಂತೆ ಪುಡಿ
ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಮಾಡಿ ಅದಕ್ಕೆ ಮೆಂತೆ ಪುಡಿ ಹಾಕಿ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ. ನೆಲ್ಲಿಕಾಯಿ ಜ್ಯೂಸ್ನಿಂದ ನಿಮ್ಮ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
4. ಕೊತ್ತಂಬರಿ ಸೊಪ್ಪನ್ನು ಅಗೆಯಿರಿ
ಎಷ್ಟೇ ಬ್ರಶ್ ಮಾಡಿದರು ನಿಮ್ಮ ಬಾಯಿಯ ದುರ್ಗಂಧ ನಿವಾರಣೆಯಾಗುತ್ತಿಲ್ಲವಾ? ಹಾಗಿದ್ರೆ ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗೆಯುವುದರಿಂದ ದಂತಕ್ಷಯ ಹಾಗೂ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
5. ದ್ರಾಕ್ಷಿ ರಸದ ಜತೆ ಜೇನುತುಪ್ಪ
ನಿಮ್ಮ ದೇಹದಲ್ಲಿ ರಕ್ತ ಕಡಿಮೆಯಾಗಿದ್ಯಾ?ರಕ್ತಹೀನತೆಯಿಂದ ಬಳಲುತ್ತಿರುವವರು ದ್ರಾಕ್ಷಾರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
6. ತಣ್ಣಗಿರುವ ಹಾಲನ್ನು ಕುಡಿಯಿರಿ
ಬೆಳ್ಳಂಬೆಳಗ್ಗೆ ಎದ್ದ ಕೂಡಲೇ ನಿಮಗೆ ಗ್ಯಾಸ್ಟ್ರಿಕ್ ನಿಂದ ಎದೆ ಉರಿ, ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತಿದೆಯಾ?ಹಾಗಿದ್ರೆ ಸಕ್ಕರೆ ಬೆರಸದೆ ತಣ್ಣಗಿರುವ ಹಾಲನ್ನು ಕುಡಿಯಿರಿ. ತಣ್ಣಗಿರುವ ಹಾಲು ದೇಹದಲ್ಲಿರುವ ಆಸಿಡ್ ಅಂಶಗಳನ್ನು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ನಿಂದಾಗುವ ಉರಿಯನ್ನು ಶಮನಗೊಳಿಸುತ್ತದೆ.
7. ಮೂಸಂಬಿ ಜ್ಯೂಸ್ ಸೇವಿಸಿ
ಇದನ್ನೂ ಓದಿ: ತ್ವಚೆಯ ಕಾಂತಿಗೆ ಮೊಸರಿನ ಮ್ಯಾಜಿಕ್ ಫೇಸ್ ಪ್ಯಾಕ್ ಬಳಸಿ
ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ವರದಿ- ವಾಸುದೇವ್. ಎಂ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ